ವೈಸ್ ಕ್ಯಾಪ್ಟನ್ ಗಿಲ್​ನನ್ನು ತಂಡದಿಂದ ಕೈ ಬಿಡಲು ಸಾಧ್ಯವೇ? ಇಲ್ಲಿದೆ ಉತ್ತರ

ವೈಸ್ ಕ್ಯಾಪ್ಟನ್ ಗಿಲ್​ನನ್ನು ತಂಡದಿಂದ ಕೈ ಬಿಡಲು ಸಾಧ್ಯವೇ? ಇಲ್ಲಿದೆ ಉತ್ತರ


ಭಾರತ ಟಿ20 ತಂಡದ ಉಪನಾಯಕ ಶುಭಮನ್ ಗಿಲ್ ಅವರನ್ನು ಆಡುವ ಬಳಗದಿಂದ ಕೈ ಬಿಡಲು ಸಾಧ್ಯವಿಲ್ಲವೇ? ಇದು ಸದ್ಯ ಎಲ್ಲರಲ್ಲೂ ಇರುವ ಪ್ರಶ್ನೆ. ಏಕೆಂದರೆ ಸತತ ವೈಫಲ್ಯ ಅನುಭವಿಸಿದರೂ ಗಿಲ್ ತಂಡದಲ್ಲಿರುವುದು ಉಪನಾಯಕನ ಪಟ್ಟದೊಂದಿಗೆ ಎಂಬುದು ಜಗಜ್ಜಾಹೀರು. ಇದಾಗ್ಯೂ ಗಿಲ್ ಅವರನ್ನು ಆಡುವ ಬಳಗದಿಂದ ಕೈ ಬಿಡಲು ಸಾಧ್ಯವಿಲ್ಲವೇ ಎಂಬ ಪ್ರಶ್ನೆ ಮೂಡುವುದು ಸಹಜ. ಇದಕ್ಕೆ ಉತ್ತರ ಈ ಕೆಳಗಿನಂತಿದೆ…

ಪಂದ್ಯ ನಡೆಯುವಾಗ ಉಪನಾಯಕನಿಗಿಂತ ನಾಯಕನ ಉಪಸ್ಥಿತಿ ಮುಖ್ಯ. ಹೀಗಾಗಿ ಶುಭಮನ್ ಗಿಲ್ ಅವರಿಗೆ ಪ್ಲೇಯಿಂಗ್ ಇಲ್ಲವೆನ್ನುವುದರಿಂದ ಕೈ ಬಿಟ್ಟರೂ ಸಮಸ್ಯೆಯಿಲ್ಲ. ಈ ಹಿಂದೆ ಭಾರತ ತಂಡದ ಉಪನಾಯಕನನ್ನು ಆಡುವ ಬಳಗದಿಂದ ಕೈ ಬಿಟ್ಟಂತಹ ಉದಾಹರಣೆಗಳಿವೆ…

  • 2002 – 2003 ರಲ್ಲಿ ಭಾರತ ತಂಡದ ಉಪನಾಯಕನಾಗಿದ್ದ ವಿವಿಎಸ್ ಲಕ್ಷ್ಮಣ್ ಅವರನ್ನು ಆಡುವ ಬಳಗದಿಂದ ಕೈ ಬಿಡಲಾಯಿತು. ಕಳಪೆ ಫಾರ್ಮ್ನಿಂದ ಬಳಲುತ್ತಿದ್ದ ಅವರನ್ನು ವೆಸ್ಟ್ ಇಂಡೀಸ್ ವಿರುದ್ಧ ಮೂರನೇ ಏಕದಿನ ಪಂದ್ಯದಿಂದ ಹೊರಗಿಡಲಾಯಿತು. ಜೊತೆಗೆ ಮೊಹಮ್ಮದ್ ಕೈಫ್‌ಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ನೀಡಲಾಯಿತು.
  • 2018- 2019 ರಲ್ಲಿ ಭಾರತ ಟೆಸ್ಟ್ ತಂಡದ ಉಪನಾಯಕನಾಗಿ ಅಜಿಂಕ್ಯ ರಹಾನೆ ಕಾಣಿಸಿಕೊಂಡಿದ್ದರು. ಆದರೆ ಕಳಪೆ ಫಾರ್ಮ್ ಕಾರಣ ಸೌತ್ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಿಂದ ಅವರನ್ನು ಹೊರಗಿಡಲಾಯಿತು. ಜೊತೆಗೆ ರೋಹಿತ್ ಶರ್ಮಾಗೆ ಆಡುವ ಬಳಗದಲ್ಲಿ ಚಾನ್ಸ್ ನೀಡಲಾಯಿತು.
  • 2023 ರಲ್ಲಿ ಕೆಎಲ್ ರಾಹುಲ್ ಭಾರತ ಟೆಸ್ಟ್ ತಂಡದ ಉಪನಾಯಕನಾಗಿ ಕಾಣಿಸಿಕೊಂಡಿದ್ದರು. ಆದರೆ ಕಳಪೆ ಫಾರ್ಮ್ ಕಾರಣ ಅವರನ್ನು ವೈಸ್ ಕ್ಯಾಪ್ಟನ್ ಸ್ಥಾನದಿಂದ ಕೆಳಗಿಳಿಸಲಾಯಿತು. ಜೊತೆಗೆ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಿಂದ ರಾಹುಲ್ ಅವರನ್ನು ಕೈ ಬಿಟ್ಟು ಶುಭಮನ್ ಗಿಲ್ಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ನೀಡಲಾಯಿತು.

ಅಂದರೆ ಶುಭಮನ್ ಗಿಲ್ ಅವರಿಗೆ ಆಡುವ ಬಳಗದಲ್ಲಿ ಅವಕಾಶ ಕಲ್ಪಿಸಲು ಈ ಹಿಂದೆ ಕೆಎಲ್ ರಾಹುಲ್ ಅವರನ್ನು ವೈಸ್ ಕ್ಯಾಪ್ಟನ್ ಪಟ್ಟದಿಂದ ಕೆಳಗಿಳಿಸಿದ ಉದಾಹರಣೆ ಇದೆ. ಹೀಗಾಗಿ ಗಿಲ್ ಅವರನ್ನು ಪ್ರಸ್ತುತ ನಡೆಯುತ್ತಿರುವ ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಿಂದ ಹೊರಗಿಡುವುದು ಟೀಮ್ ಇಂಡಿಯಾ ಪಾಲಿಗೆ ಅನಿವಾರ್ಯ.

ಏಕೆಂದರೆ 14 ಮ್ಯಾಚ್‌ಗಳಲ್ಲಿ ಶುಭಮನ್ ಗಿಲ್ ಒಂದೇ ಒಂದು ಅರ್ಧಶತಕ ಬಾರಿಸಿಲ್ಲ. 20(9), 10(7), 5(11), 47(28), 29(19), 4(3), 12(10), 37*(20), 5(10), 15(12), 46(40), 29(16), 4(2) ಮಾತ್ರ ರನ್’ಗಳು. ಅದರಲ್ಲೂ ಕಳೆದ ಮ್ಯಾಚ್ನಲ್ಲಿ ಶೂನ್ಯಕ್ಕೆ ಅಟಾಗಿದ್ದರು.

ಇದನ್ನೂ ಓದಿ: ಬರೋಬ್ಬರಿ 23 ಸಿಕ್ಸ್… ಟಿ20 ದ್ವಿಶತಕ ಸಿಡಿಸಿದ ಎಡ್ವರ್ಡ್ಸ್

ಇತ್ತ ಸತತವಾಗಿ ವಿಫಲವಾಗಿದ್ದರೂ ಶುಭಮನ್ ಗಿಲ್ ಅವರು ವೈಸ್ ಕ್ಯಾಪ್ಟನ್ ಕಾರ್ಡ್ ಅನ್ನು ಕಣಕ್ಕಿಳಿಸುತ್ತಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಇತ್ತ ಗಿಲ್ಗೆ ಅವಕಾಶ ಸಿಗುತ್ತಿಲ್ಲ ಸಂಜು ಸ್ಯಾಮ್ಸನ್ ಅವಕಾಶ ವಂಚಿತರಾಗಿ ಕೂತಿದ್ದಾರೆ. ಈ ಬಗ್ಗೆ ಮೊಹಮ್ಮದ್ ಕೈಫ್, ರಾಬಿನ್ ಉತ್ತಪ್ಪ, ಇರ್ಫಾನ್ ಪಠಾಣ್ ಸೇರಿದಂತೆ ಮಾಜಿ ಮಾಜಿ ಕ್ರಿಕೆಟಿಗರು ಧ್ವನಿಯೆತ್ತಿದ್ದು, ಹೀಗಾಗಿ ಸೌತ್ ಆಫ್ರಿಕಾ ವಿರುದ್ಧದ ಮೂರನೇ ಟಿ20 ಪಂದ್ಯದಿಂದ ಶುಭಮನ್ ಗಿಲ್ ಅವರನ್ನು ಕೈ ಬಿಡಲಿದ್ದಾರಾ ಕಾದು ನೋಡಬೇಕಿದೆ.

ರಂದು ಪ್ರಕಟಿಸಲಾಗಿದೆ – 11:53 am, ಶನಿ, 13 ಡಿಸೆಂಬರ್ 25



Source link

Leave a Reply

Your email address will not be published. Required fields are marked *