ಲಿಕ್ಕರ್ ಪ್ರಮೋಟ್ ಮಾಡುವ ರೀತಿಯಲ್ಲಿ ಸರ್ಕಾರಿ ಅಧಿಕಾರಿ ರೀಲ್ಸ್; ಇನ್ಸ್ಟಾಗ್ರಾಮ್​ನಲ್ಲಿ ವೀಡಿಯೋ ವೈರಲ್!

ಲಿಕ್ಕರ್ ಪ್ರಮೋಟ್ ಮಾಡುವ ರೀತಿಯಲ್ಲಿ ಸರ್ಕಾರಿ ಅಧಿಕಾರಿ ರೀಲ್ಸ್; ಇನ್ಸ್ಟಾಗ್ರಾಮ್​ನಲ್ಲಿ ವೀಡಿಯೋ ವೈರಲ್!


ಲಿಕ್ಕರ್ ಪ್ರಮೋಟ್ ಮಾಡುವ ರೀತಿಯಲ್ಲಿ ಸರ್ಕಾರಿ ಅಧಿಕಾರಿ ರೀಲ್ಸ್!

ಗದಗ, ಡಿಸೆಂಬರ್ 13: ಸೋಷಿಯಲ್ ಮೀಡಿಯಾದಲ್ಲಿ ಮದ್ಯಪಾನ ಪ್ರಚಾರಕ್ಕೆ ಗದಗ (ಗದಗ) ಜಿಲ್ಲೆಯ ರೋಣ ತಾಲೂಕಿನ ಆಹಾರ ಸುರಕ್ಷತಾ ಅಧಿಕಾರಿಯೊಬ್ಬರ ರೀಲ್ಸ್ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಲಕ್ಷಾಂತರ ಫಾಲೋವರ್ಸ್ ಹೊಂದಿರುವ ಇನ್‌ಪ್ಲುಯೆನ್ಸರ್ ಒಬ್ಬರ ಇನ್‌ಸ್ಟಾಗ್ರಾಮ್ ಖಾತೆಯಿಂದ ಈ ವೀಡಿಯೊ ಪೋಸ್ಟ್ ಮಾಡಲಾಗಿತ್ತು, ವೀಡಿಯೊ ವೈರಲ್ ಆಗಿದೆ.

ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಜೊತೆ ಅಧಿಕಾರಿ ರೀಲ್ಸ್

ಆಹಾರ ಸುರಕ್ಷತಾ ಅಧಿಕಾರಿ ಚೇತನ್ ಎಸ್, ಬಿಯರ್ ಹಾಗೂ ವಿಸ್ಕಿಯ ರೀಲ್ಸ್ ಮಾಡಿ ಮದ್ಯಪಾನಕ್ಕೆ ಉತ್ತೇಜನ ನೀಡುತ್ತಿರುವ ಆರೋಪ ಎದುರಿಸುತ್ತಿದ್ದಾರೆ, ಈ ರೀಲ್ಸ್‌ನ ಬಾಗಲಕೋಟೆ ಮೂಲದ ಕಾಂಟೆಂಟ್ ಕ್ರಿಯೇಟರ್ ಮತ್ತು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ನಾಗರಾಜ್ ನಿಲುಗಲ್ ಅವರನ್ನು ಸೇರಿಸಿದ್ದಾರೆ. ಕಂಪನಿ ಫಾಲೋವರ್ಸ್ ಹೊಂದಿರುವ ನಾಗರಾಜ್ ನಿಲುಗಲ್‌ನ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಈ ವೀಡಿಯೊಗಳನ್ನು ಅಪ್‌ಲೋಡ್ ಮಾಡಿ, ಖುಷಿಯಾಗಿರೋದಕ್ಕೆ ಬಿಯರ್ ಕಾರಣ ಎಂಬ ಸಂದೇಶವನ್ನು ಪರೋಕ್ಷವಾಗಿ ಬಿಂಬಿಸಲಾಗಿದೆ. ಕುಟುಂಬ ಸಮೇತ ಕುಳಿತು ಮದ್ಯಪಾನ ಮಾಡುವ ರೀತಿಯಲ್ಲಿ ಗ್ಲಾಸ್ ಮತ್ತು ಬಾಟಲ್‌ಗಳನ್ನು ಪ್ರದರ್ಶಿಸಿ ರೀಲ್ಸ್ ಮಾಡಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.

ವೈರಲ್ ಆದ ರೀಲ್ ಇಲ್ಲಿದೆ

ಇದನ್ನೂ ಓದಿ ಹಾಸ್ಟೆಲ್‌ನಲ್ಲಿ ಬಿಎಎಂಎಸ್ ವಿದ್ಯಾರ್ಥಿ ಅನುಮಾನಾಸ್ಪದ ಸಾವು: ಕಾಲೇಜ್ ವಿರುದ್ಧ ಕೊಲೆ, ಸಾಕ್ಷಿ ನಾಶ ಆರೋಪ

ಸರ್ಕಾರಿ ಅಧಿಕಾರಿ ಹುದ್ದೆಯಲ್ಲಿದ್ದುಕೊಂಡೇ ಈ ರೀತಿಯ ವರ್ತನೆ ತೋರಿರುವುದು ಕರ್ನಾಟಕ ಸಿವಿಲ್ ಸರ್ವಿಸ್ ರೂಲ್ಸ್‌ಗೆ ವಿರುದ್ಧವಾಗಿದ್ದು, ಅಧಿಕಾರಿಯ ಜವಾಬ್ದಾರಿಯ ಮೇಲಿನ ಪ್ರಶ್ನೆಗಳನ್ನು ಎತ್ತಿ ತೋರಿಸಿದೆ. ಟಿವಿ ಮತ್ತು ಸಿನಿಮಾ ಮಾಧ್ಯಮಗಳಿಗೆ ಇರುವ ಮದ್ಯಪಾನ ಜಾಹೀರಾತು ನಿಯಮಗಳು ಸೋಷಿಯಲ್ ಮೀಡಿಯಾದಲ್ಲಿ ಕಟ್ಟುನಿಟ್ಟಾಗಿ ಜಾರಿಯಾಗದಿರುವುದೇ ಇಂತಹ ರೀಲ್ಸ್‌ಗಳಿಗೆ ಅವಕಾಶ ಮಾಡಿಕೊಡುತ್ತಿದೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *