![]()
ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ 14 ವರ್ಷಗಳ ಬಳಿಕ ಕೋಲ್ಕತಾಗೆ ಆಗಮಿಸಿದ್ದಾರೆ. ಆದರೆ, ಸಾಲ್ಟ್‌ಲೇಕ್ ಸ್ಟೇಡಿಯಂನಲ್ಲಿ ಕೇವಲ 10 ನಿಮಿಷ ಮಾತ್ರ ಕಾಣಿಸಿಕೊಂಡು ನಿರ್ಗಮಿಸಿದ್ದರಿಂದ, ನಿರಾಸೆಗೊಂಡ ಸಾವಿರಾರು ಅಭಿಮಾನಿಗಳು ದಾಂಧಲೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋಲ್ಕತಾ: ಅರ್ಜೆಂಟೀನಾದ ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ಭಾರತಕ್ಕೆ ಬಂದಿಳಿದಿದ್ದಾರೆ. ಭಾರತದ ಫುಟ್ಬಾಲ್ ತವರು ಎಂದೇ ಗುರುತಿಸಿಕೊಂಡಿರುವ ಕೋಲ್ಕತಾಗೆ ಆಗಮಿಸಿರುವ ಮೆಸ್ಸಿಯನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಇಲ್ಲಿನ ಸಾಲ್ಟ್‌ಲೇಕ್ ಸ್ಟೇಡಿಯಂನಲ್ಲಿ ನೆರೆದಿದ್ದರು. ಆದರೆ ಕೇವಲ 10 ನಿಮಿಷಗಳಲ್ಲೇ ಮೆಸ್ಸಿ ಮೈದಾನದಿಂದ ನಿರ್ಗಮಿಸಿದ್ದರಿಂದ ಅವರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದು ಸ್ಟೇಡಿಯಂನಲ್ಲಿ ದಾಂಧಲೆ ನಡೆಸಿದ್ದಾರೆ.
ಲಿಯೋನೆಲ್ ಮೆಸ್ಸಿ ಶನಿವಾರ ಮಧ್ಯರಾತ್ರಿ ಕೋಲ್ಕತಾಗೆ ಬಂದಿಳಿದ್ದರು. ಬರೋಬ್ಬರಿ 14 ವರ್ಷಗಳ ಬಳಿಕ ಭಾರತಕ್ಕೆ ಬಂದ ಮೆಸ್ಸಿಯನ್ನು ಹತ್ತಿರದಿಂದ ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದರು. ಆದರೆ ಮೆಸ್ಸಿ ಕೇವಲ 10 ನಿಮಿಷಗಳೊಳಗೆ ಸಾಲ್ಟ್ ಲೇಕ್ ಸ್ಟೇಡಿಯಂನಿಂದ ನಿರ್ಗಮಿಸಿದ್ದರಿಂದ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ಸ್ಟೇಡಿಯಂನಲ್ಲಿ ನೆರೆದಿದ್ದ ಅಭಿಮಾನಿಗಳು ಮೆಸ್ಸಿ ಸ್ಟೇಡಿಯಂ ತೊರೆಯುತ್ತಿದ್ದಂತೆಯೇ ಪ್ಲಾಸ್ಟಿಕ್ ಬಾಟೆಲ್‌ಗಳನ್ನು ಸ್ಟೇಡಿಯಂಗೆ ಎಸೆದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ತಮ್ಮದೇ ಸ್ಟ್ಯಾಚು ಅನಾವರಣ ಮಾಡಲಿರುವ ಮೆಸ್ಸಿ
ಶನಿವಾರ ಕೋಲ್ಕತಾದ ವಿಐಪಿ ರಸ್ತೆಯಲ್ಲಿ ನಿರ್ಮಾಣಗೊಂಡಿರುವ ತಮ್ಮ 70 ಅಡಿಯ ಪ್ರತಿಮೆಯನ್ನು ಲಿಯೋನೆಲ್ ಮೆಸ್ಸಿ ಅನಾವರಣಗೊಳಿಸಲಿದ್ದಾರೆ.
ಇದಾದ ಬಳಿಕ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ, ದಿಗ್ಗಜ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಸೇರಿ ಇನ್ನೂ ಕೆಲವರ ಜೊತೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ನಟ ಶಾರುಖ್ ಖಾನ್ ಕೂಡಾ ಉಪಸ್ಥಿತರಲಿದ್ದಾರೆ.