ಮೇಷ ರಾಶಿ:
ನಿಮ್ಮ ಸ್ವಪ್ನ ಮತ್ತು ವಾಸ್ತವಿಕತೆ ಇಂದು ಒಂದೇ ದಿಕ್ಕಿನಲ್ಲಿ ಸಾಗುತ್ತವೆ. ಮನಸ್ಸು ದೊಡ್ಡ ಸಮುದ್ರದಂತಾಗುತ್ತದೆ. ಚಿಕ್ಕ ಅಲೆಗಳು ನಿಮ್ಮ ಯೋಚನೆಗಳನ್ನು ಅಡ್ಡಿಪಡಿಸಲಾರವು. ನಿಮಗೆ ನಂಬಿಕೆಯ ಮೇಲೆ ಆದ ಪ್ರಹಾರವನ್ನು ಸಹಿಸಲಾಗದು. ಅಲ್ಪಾವಧಿಯಲ್ಲಿ ಹೆಚ್ಚು ಪಡೆಯಬೇಕು ಎಂಬ ಅತಿಯಾದ ಆಸೆ ಬೇಡ. ಸಂಗಾತಿಯ ಜೊತೆ ಕಲಹವಾಡಿ ಯಾವ ಕಾರ್ಯವನ್ನೂ ಮಾಡಲು ಹೋಗುವುದು ಬೇಡ. ಹಣದ ಮೇಲೆ ಸ್ವಲ್ಪ ನಿಯಂತ್ರಣ ಇಂದು ಅವಶ್ಯಕ. ವೈವಾಹಿಕ ಜೀವನದಲ್ಲಿ ಸಂತೋಷದ ಕ್ಷಣಗಳು ಬರಲಿವೆ. ಅನಿರೀಕ್ಷಿತವಾಗಿ ಕೆಲವು ವ್ಯಕ್ತಿಗಳ ಸಹಕಾರ ಸಿಕ್ಕಿ ಸಂತೋಷವಾಗುವುದು. ಬೇಡದ ವಿಚಾರಗಳನ್ನು ಮಾತನಾಡುತ್ತ ಇರುವುದನ್ನು ಬಿಟ್ಟು ನಿಮ್ಮ ಕೆಲಸದಲ್ಲಿ ತೊಡಗಿ. ಪ್ರೀತಿಯಿಂದ ಹೇಳಿದರೆ ನಿಮ್ಮ ಕೆಲಸ ಸಲೀಸಾಗಿ ಆಗುವುದು. ಅನ್ಯಾನ್ಯ ಆಲೋಚನೆಯನ್ನು ಮಾಡುವ ಮನಸ್ಸಿಗೆ ಸರಿಯಾದ ಕೆಲಸವನ್ನು ಕೊಡಿ. ಅನುರೂಪವಾದ ಸಂಗಾತಿಯ ಅನ್ವೇಷಣೆಯನ್ನು ಮಾಡುವಿರಿ. ವಿದ್ಯೆಯು ನಿಮ್ಮ ಬಳಕೆಗೆ ಬರಲಿದೆ.
ವೃಷಭ ರಾಶಿ:
ಇಂದು, ಕಲ್ಪನೆ, ಹೊಸ ಯೋಚನೆ ಯಾವ ದಿಕ್ಕಿಗೂ ಹೋಗಬಹುದು. ಸಣ್ಣ ಸಮಸ್ಯೆಗಳಿಗೆ ದೊಡ್ಡ ಪರಿಹಾರಗಳನ್ನು ಕಂಡುಹಿಡಿಯುವ ಸಾಮರ್ಥ್ಯ. ಎಲ್ಲರ ಒತ್ತಾಯಕ್ಕೆ ನೂತನ ವಾಹನದ ಖರೀದಿಗೆ ಮನಸ್ಸು ಮಾಡುವಿರಿ. ಬಾಗುವಿಕೆಯಿಂದ ಏನಾದರೂ ನಿಮ್ಮ ಒಳಗೆ ಸೇರಬಹುದು. ಔದಾರ್ಯವು ದುರ್ಬಳಕೆ ಆಗುವುದು. ಸಂತಾನದ ಬಗ್ಗೆ ಸಂಗಾತಿಯ ಜೊತೆ ಮಾತನಾಡುವಿರಿ. ನಿಮ್ಮ ಭಾವನೆಗಳಿಗೆ ಬೆಲೆ ಇಲ್ಲದೇ ಹೋಗಬಹುದು. ಅಪೂರ್ಣ ಮಾಡಿಕೊಂಡ ಕಛೇರಿಯ ಕೆಲಸಗಳನ್ನು ಇಂದು ಪೂರ್ಣ ಮಾಡುವಿರಿ. ವಿವಾಹಿತರಿಗೆ ಬಂಧುಗಳಲ್ಲಿ ಉತ್ತಮ ಸಂಬಂಧವು ಪ್ರಾಪ್ತವಾಗುವುದು. ಆಸ್ತಿಯ ವಿಚಾರವಾಗಿ ವ್ಯರ್ಥ ವಾಗ್ವಾದಗಳನ್ನು ಮಾಡುವ ಬದಲು ಕಾನೂನಾತ್ಮಕ ಕ್ರಮಗಳಿಂದ ಅವುಗಳನ್ನು ಸರಿ ಮಾಡಿಕೊಳ್ಳಿ. ಗಡಿಗಳ ಹೊರಗೆ, ರೋಗಿಗಳ ಹೊರಗೆ ನೀವು ಯೋಚಿಸುವಿರಿ. ನಿಮ್ಮ ವಿಶ್ರಾಂತ ಸ್ಥಿತಿಯನ್ನು ಹಾಸ್ಯ ಮಾಡಬಹುದು. ಸಂಗಾತಿಯ ಮೇಲೆ ಪ್ರೀತಿಯು ಹೆಚ್ಚಾಗಬಹುದು.
ಮಿಥುನ ರಾಶಿ:
ದೀರ್ಘಕಾಲೀನ ಯೋಜನೆಗಳಿಗೆ ವಿಚಾರಶಕ್ತಿಯಿಂಸ ಪುನರ್ಜನ್ಮ ಸಿಗಲಿದೆ. ನಿಮ್ಮ ಮೌನವು ಶಕ್ತಿಯಾಗಿ ಪ್ರಕಟವಾದ ಪ್ರದರ್ಶನ. ನಿಮ್ಮದೇ ಸರಿ ಎನ್ನುವ ಅಹಂಭಾವ ಬಿಟ್ಟರೆ ನೆಮ್ಮದಿಯೂ ನಿಮ್ಮದೇ. ನಕಾರಾತ್ಮಕ ಯೋಚನೆಗಳು ನಿಮ್ಮನ್ನು ಸುಮ್ಮನಿರಲು ಬಿಡುವುದಿಲ್ಲ. ನಿರೀಕ್ಷಿತ ಬಂಧುಗಳ ಆಗಮನದಿಂದ ಸಂತೋಷವಾಗುವುದು. ಸಮಾರಂಭದಲ್ಲಿ ನೀವು ಭಾಗವಹಿಸಿದಿರಿ. ನಿಮ್ಮ ಮಕ್ಕಳ ಮಾತಿಗೆ ಕೊಡುವ ಬೆಲೆಯಿಂದ ಅವರಿಗೆ ಸಂತೋಷವಾಗಿ ನಿಮ್ಮನ್ನು ಹೆಚ್ಚು ಇಷ್ಟಪಡುತ್ತಾರೆ. ದೂರ ಪ್ರಯಾಣದಿಂದ ಸುಖ ಪಡುವಿರಿ. ಮುಖಸ್ತುತಿಯನ್ನು ಯಾರಾದರೂ ಮಾಡಬಹುದು. ನ್ಯಾಯಾಲಯದಲ್ಲಿ ನಿಮ್ಮ ಕಾರ್ಯಗಳು ವಿಳಂಬವಾಗಿ ಭೂಮಿಯಂತ ಗಟ್ಟಿತನ ಇರುವ ಇಂದು ನೀವು ಗಗನದಂತ ಚಿಂತಿಸುತ್ತೀರಿ. ಜೀವನದ ಹೊಣೆಗಾರಿಕೆಗಳಾಚೆಗೆ ದೊಡ್ಡ ಅರ್ಥವನ್ನು ಹುಡುಕಬೇಕಾಗುವುದು. ಯಾರಿಂದಲೋ ಅಧ್ಯಾತ್ಮದ ಕಡೆ ಪ್ರಭಾವಿತರಾಗುವಿರಿ.
ಕರ್ಕಾಟಕ ರಾಶಿ:
ಅಪರಿಮಿತ ನಿಮ್ಮ ಜ್ಞಾನ, ಪ್ರಯಾಣ, ಅನುಭವ, ಇವು ಇಂದು ನಿಮಗೆ ದಿಕ್ಕು ತೋರಿಸುವ ಗುರುಗಳು. ದೊಡ್ಡ ಗುರಿ, ದೊಡ್ಡ ದೃಶ್ಯ, ದೊಡ್ಡ ಶಕ್ತಿ ಎಲ್ಲವೂ ಕೈ ಸೇರುವುದು. ಸಂಗಾತಿಯ ಎಲ್ಲ ಮಾತಿಗೂ ನಿಮ್ಮ ಒಮ್ಮತ ಇರದು. ಇದು ಕಲಹಕ್ಕೆ ಕಾರಣವಾಗಿದೆ. ನೀವು ಇಂದು ಏನನ್ನು ಕೊಡುವುದಾದರೂ ಮನಪೂರ್ವಕವಾಗಿ ಕೊಡುವುದು ಉತ್ತಮ. ನಿಮಗೆ ಆಗಬೇಕಾದ ಕಾರ್ಯಕ್ಕೆ ಹಣವೂ ಓಡಾಟವೂ ಅತಿಯಾಯಿತು ಎಂದು ಅನ್ನಿಸುವುದು. ಬಾರದಿರುವ ಹಣದ ಬಗ್ಗೆ ತಲೆ ಕೆಡಿಸಿಕೊಳ್ಳದೇ ವಿಧಿಚಿತ್ತದಂತೆ ಆಗುತ್ತದೆ ಎಂದು ಕೈ ಚೆಲ್ಲಿ ಕೂರುವಿರಿ. ಕಛೇರಿಯ ಒತ್ತಡದಿಂದ ಬೇರೆ ಯೋಚನೆಯ ಕಡೆ ಮನಸ್ಸು. ಋಜುತ್ವವು ನಿಮ್ಮಿಂದ ಕಂಗೆಡಿಸುವುದು. ಹೊಸ ವಿಚಾರಗಳು ನಿಮ್ಮ ಆಸಕ್ತಿಯನ್ನು ಹೆಚ್ಚಿಸುವುದು. ಬಂಧುಗಳ ಸಹಾಯದಿಂದ ಉದ್ಯೋಗ ಪ್ರಾಪ್ತಿಯ ಸಂಭವವಿದೆ. ಪ್ರಭಾವೀ ವ್ಯಕ್ತಿಗಳನ್ನು ವೈಯಕ್ತಿಕ ಕಾರ್ಯಗಳಿಗೆ ಬಳಸಿಕೊಳ್ಳುವಿರಿ. ಕೆಟ್ಟ ಮಾರ್ಗವನ್ನು ನಿಮಗೆ ಗೊತ್ತಿಲ್ಲದೇ ಅನುಸರಿಸುವಿರಿ.
ಸಿಂಹ ರಾಶಿ:
ದಿನಕ್ಕೆ ಬೇರೂರುವ ವಿಚಾರಗಳು ದೊಡ್ಡ ಜೀವನಪಾಠಗಳನ್ನು ಕೊಡುತ್ತವೆ. ಬದಲಾವಣೆಗೆ ಬೇಕಾದ ಹೊಸ ಬೆಳಕು ಕಾಣುತ್ತದೆ. ಧಾರ್ಮಿಕ ಮುಖಂಡರ ಅಧಿಕಾರದ ವಿಚಾರದಲ್ಲಿ ಗೊಂದಲ ಉಂಟಾಗುವುದು.’ ನಿಮ್ಮ ಪ್ರತಿಷ್ಠೆಗಳಿಂದ ಯಾರಿಗೂ ತೊಂದರೆಯಾಗದು. ನೌಕರರ ವಿಚಾರಕ್ಕೆ ನೀವು ಸಿಟ್ಟುಗೊಳ್ಳುವಿರಿ. ಮತ್ತೆ ಮತ್ತೆ ನಿಮಗೆ ಅನಾರೋಗ್ಯ ಕಾಣಿಸಿಕೊಂಡಿದ್ದು ವೈದ್ಯರಿಂದ ಚಿಕಿತ್ಸೆ ಪಡೆಯಿರಿ ಮತ್ತು ದೈವಜ್ಞರನ್ನು ಸಂಪರ್ಕಿಸಿದ ದೈವಾನುಕೂಲದ ಬಗ್ಗೆಯೂ ಮಾತನಾಡಿದರು. ಔದಾರ್ಯವನ್ನು ತೆರೆದಿಡಬೇಕಾಗುವುದು. ನಿಮ್ಮ ಪೊರ್ವಯೋಜಿತ ಕಾರ್ಯಗಳನ್ನು ಕ್ರಿಯಾರೂಪಕ್ಕೆ ತರಲು ನಿಮಗೆ ಸಾಧ್ಯವಾಗಿಲ್ಲ. ಏನಾದರೂ ಅಡೆತಡೆಗಳು ಬರಬಹುದು. ನಿಮಗೆ ಯಾರೂ ಸ್ಪಂದನೆ ಕೊಡದೆ ಹೋಗಬಹುದು. ಪುಣ್ಯ ಕ್ಷೇತ್ರಗಳ ದರ್ಶನವನ್ನು ಮಾಡಲು ಪ್ರಯಾಣ ಮಾಡಿರಿ. ನಿಮ್ಮ ಉನ್ನತ ಸ್ಥಾನ ಕೊಡುವ ಬಗ್ಗೆ ಒಮ್ಮತದ ಅಭಿಪ್ರಾಯವು ಬರಲಿದೆ.
ಕನ್ಯಾ ರಾಶಿ:
ಸಣ್ಣ ವಿಷಯಗಳಲ್ಲಿ ತೂಕ ಹಾಕುವ ದೊಡ್ಡ ಸತ್ಯಗಳನ್ನು ಅರಿಯಿರಿ. ಮನಸ್ಸು ಗಾಳಿಯಂತೆ ವೇಗವಾಗಿಯೂ, ಯೋಚನೆ ನಕ್ಷತ್ರಗಳಂತೆ ಹೊಳೆಯುವುದೂ ಆಗಿದೆ. ಬೇಕಾದಷ್ಟು ವಿಶ್ರಾಂತಿ ಪಡೆದು ಕಾರ್ಯದಲ್ಲಿ ಪ್ರವೃತ್ತರಾಗಿ. ಮಹಿಳೆಯರ ಜೊತೆ ಕೆಲಸ ಮಾಡುವುದು ಕಷ್ಟವಾಗುವುದು. ನಿಮ್ಮ ವಾಹನದಿಂದ ನಿಮಗೆ ಅಲ್ಪ ಲಾಭವಾಗುವುದು. ನಕಾರಾತ್ಮಕ ಆಲೋಚನೆಯನ್ನು ಇಂದು ಹೆಚ್ಚು ಮಾಡುತ್ತದೆ. ಮಕ್ಕಳ ವಿವಾಹಕ್ಕಾಗಿ ನೀವು ಆಯಾಸಪಡುವಿರಿ. ನಿಮ್ಮ ಜವಾಬ್ದಾರಿಯ ಮನೋಭಾವಕ್ಕೆ ಹೆಚ್ಚು ಒತ್ತಡ ಬರಬಹುದು. ನಿಮ್ಮ ಇಂದಿನ ವರ್ತನೆಯಿಂದ ಬಂಧುಗಳಿಗೆ ಅಸಮಾಧಾನವಾಗುವುದು. ಸರ್ಕಾರದಿಂದ ಆಗಬೇಕಾದ ಕಾರ್ಯಗಳಲ್ಲಿ ಹಿನ್ನಡೆಯಾಗುವುದು. ನಿಮ್ಮ ಉಚಿತ ಹಣವನ್ನು ಸ್ಥಳದಲ್ಲಿ ಇರಿಸಿ. ಯಾವುದೇ ಸಾಹಸ ಕಾರ್ಯವನ್ನು ಮಾಡಲು ಹೋಗುವುದು ಬೇಡ. ಕಷ್ಟಕಾಲದಲ್ಲಿ ಸಹಾಯ ಮಾಡಿದವರನ್ನು ನೀವು ಸ್ಮರಿಸಿಕೊಳ್ಳಿರಿ. ಗೃಹೋದ್ಯಮ ನಡೆಸುವವರಿಗೆ ಲಾಭವಿದೆ.
ತುಲಾ ರಾಶಿ:
ನಿಮ್ಮ ನಾಯಕತ್ವ ಇಂದು ಒಬ್ಬರಿಗೆ, ನೂರಾರು ಮಂದಿಗೆ ಪ್ರೇರಣೆ ನೀಡುವ ಮಟ್ಟಕ್ಕೆ ವಿಸ್ತರಿಸುತ್ತದೆ. ನಿಮ್ಮ ಮರೆವಿನಿಂದ ಕೆಲವು ಮುಖ್ಯವಾದ ವಸ್ತುವನ್ನು ಕಳೆದುಕೊಳ್ಳಬಹುದು. ನಿಮ್ಮ ಇಂದಿನ ಕಾರ್ಯವು ತಾರ್ಕಿಕ ಅಂತ್ಯವನ್ನು ಕಾಣದೇ ಹೋಗಬಹುದು. ಮಿತ್ರರ ಜೊತೆ ಪ್ರವಾಸ ಹೋಗಬಹುದು. ಹಿರಿಯರಿಂದ ನಿರೀಕ್ಷಿತ ಲಾಭವು ಸಿಗಲಿದೆ ಸಂತೋಷವಾಗುವುದು. ಇಂದು ವೈಯಕ್ತಿಕ ಕಾರ್ಯಗಳನ್ನು ಮಾಡಿ ಮುಗಿಸಿಕೊಳ್ಳಿ. ವ್ಯಕ್ತಿಗತ ಅಭಿಪ್ರಾಯದಿಂದ ನಿಮಗೆ ಯಾವ ನಷ್ಟವೂ ಆಗದು. ಎಲ್ಲರನ್ನೂ ನಿಮ್ಮ ಪರವಾಗಿ ಮಾಡಿಕೊಳ್ಳಲು ಪ್ರಯತ್ನಿಸುವಿರಿ. ಕೆಲಸ, ಸಂಬಂಧ, ಹಣ, ಸಕಲವನ್ನೂ ದೂರದಿಂದ ನೋಡಿದಾಗ ಗೊಂದಲದ ಸಂಗತಿ. ಇಂದಿನ ನಿಮ್ಮ ಮೌನಕ್ಕೂ ಇಂದು ಅರ್ಥ ಕಲ್ಪನೆಯಾಗಲಿದೆ. ಉತ್ತಮ ಭೂಮಿಯ ಖರೀದಿಗೆ ಬಂಧುಗಳ ಸಲಹೆ ಪಡೆಯಿರಿ. ಇಂದು ನಿಮ್ಮ ಶ್ರಮದ ಕಾರ್ಯಗಳು ನಿರರ್ಥಕವಾಗಬಹುದು. ತೊಂದರೆಗಳನ್ನು ನೀವು ಸಕಾರಾತ್ಮಕವಾಗಿ ತೆಗೆದುಕೊಂಳ್ಳುವಿರಿ. ನೀವು ಬಿಟ್ಟ ಬಾಣವು ಗುರಿಯ ಕಡಗೆ ಇದೆಯೇ ಎಂದು ತಿಳಿಯಿರಿ.
ವೃಶ್ಚಿಕ ರಾಶಿ:
ಹೊಸ ಕಾರ್ಯಗಳಿಗೆ ನಿಮ್ಮನ್ನು ಮುಖಮಾಡಿಕೊಳ್ಳುಬಿರಿ. ಏಕಾಗ್ರತೆಯನ್ನು ನೀವು ಅಸ್ತ್ರವಾಗಿ ಬಳಸಬಹುದು. ಜವಾಬ್ದಾರಿಗಳನ್ನು ಭಾರವೆನಿಸಿ ಅದನ್ನು ಹಂಚಿಕೆ ಮಾಡುವ ಸಾಧ್ಯತೆಯಿದೆ. ಉದ್ಯೋಗದ ಸ್ಥಳದಲ್ಲಿ ಮಿತವಾದ ಮಾತುಗಳನ್ನು ಆಡಬೇಕಾದೀತು. ವಾಹನ ಚಾಲನೆಯನ್ನು ಸುರಕ್ಷಿತವಾಗಿ ಮಾಡಿ. ಆಪ್ತರಿಂದ ನಿಮಗೆ ಉಡುಗೊರೆ ಸಿಗಬಹುದು. ನಿಮಗೆ ಸಿಕ್ಕ ಜವಾಬ್ದಾರಿಯಲ್ಲಿ ಪೂರ್ಣ ತೃಪ್ತಿ ಇರದು. ಯಾರ ಜೊತೆಯಾದರೂ ಬೆರೆಯಬೇಕು ಅನ್ನಿಸುವುದು. ಸಂಗಾತಿಗೆ ಕಿರಿಕಿರಿ ಉಂಟಾಗುವಂತೆ ಮಾಡುವಿರಿ. ಎಲ್ಲ ತಪ್ಪುಗಳಿಗೂ ನಿಮ್ಮನ್ನೇ ಬೆರಳು ಮಾಡಿ ತೋರಿಸಬಹುದು. ಮಾಧ್ಯಮದ ಉದ್ಯೋಗಿಗಳಿಗೆ ಹೆಚ್ಚು ಒತ್ತಡ ಇರಲಿದೆ. ಮೇಲಧಿಕಾರಿಗಳ ವಿಶ್ವಾಸವನ್ನು ಗಳಿಸಲು ವಿಫಲರಾಗುವಿರಿ. ನಿಮ್ಮ ಮಾತು ಭಾವನೆಗಳ ಗಡಿ ಮೀರುತ್ತದೆ. ದಿಟ್ಟ ನಿರ್ಧಾರ ಮತ್ತು ದಯೆ ನಿಮ್ಮ ಶಕ್ತಿಯ ಮೂಲ. ಯಾರದೋ ಮಾತಿಗೆ ಉದ್ವೇಗಕ್ಕೆ ಒಳಗಾಗುವಿರಿ. ನಿಮ್ಮ ನಾಜೂಕಿನ ಕಾರ್ಯಗಳು ಎಲ್ಲರಿಗೂ ಇಷ್ಟವಾಗುವುದು.
ಧನು ರಾಶಿ:
ಕುಟುಂಬ, ಕರ್ಮ, ಬಾಧ್ಯತೆಗಳಾಚೆಗೆ ನಿಮ್ಮ ಸ್ವಪ್ನಗಳ ಬಗ್ಗೆ ಯೋಚಿಸುವ ದಿನ. ಭಯ ಕಡಿಮೆಯಾಗಿ ಸಾಗಬೇಕಾದ ದಾರಿ ಸ್ಪಷ್ಟ. ನಿಮ್ಮ ಅಂತರಂಗವೇ ಮಾರ್ಗದರ್ಶಿ. ನಿರುದ್ಯೋಗಿಗಳಿಗೆ ಸ್ನೇಹಿತರಿಂದ ಸಹಕಾರ ಸಿಗುವುದು. ನಿಮ್ಮ ಭಾವನೆಗಳನ್ನು ಯಾರ ಜೊತೆಯೂ ಪ್ರಕಟಿಸುವುದಿಲ್ಲ. ಅಲ್ಪ ಲಾಭಕ್ಕೆ ನೀವು ತೃಪ್ತಿ ಪಡಬೇಕಾಗುವುದು. ಸ್ತ್ರೀಯರ ವಿಚಾರದಲ್ಲಿ ನೀವು ಜಾಗರೂಕತೆಯಿಂದ ಇರಬೇಕಾಗುವುದು. ನಿಮಗೆ ಬರಬೇಕಾದ ಹಣವು ನಿಮ್ಮ ಕೈಗೆ ಸಿಗದು. ಸಂಗಾತಿಯ ಮೇಲೆ ಬೇಸರದ ಭಾವವೂ ಮೂಡುವ ಸಾಧ್ಯತೆ ಇದೆ. ನಿಮ್ಮ ಅಶಿಸ್ತಿನ ವರ್ತನೆಯಿಂದ ಸಹೋದ್ಯೋಗಿಗಳ ನಡುವೆ ಮಾತುಕತೆ ಆಗಬಹುದು. ಭಾವನೆಗಳೇ ಕಡಲಂತಿದ್ದರೂ, ಇಂದು ಅವುಗಳಿಂದ ಮೇಲೆದ್ದು ಬರಬೇಕಾಗುವುದು. ಇಂದು ನೀವು ಸೌಂದರ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯವನ್ನು ಕೊಡುವಿರಿ. ಅತಿಥಿ ಸತ್ಕಾರವನ್ನು ಮಾಡಲು ಉತ್ಸಾಹವಿರುವುದು. ಉದ್ಯಮಕ್ಕೆ ನಿಮ್ಮ ಯೋಜನೆ ಯಾರಾದರೂ ಬದಲಿಸಿದ್ದಾರೆ.
ಮಕರ ರಾಶಿ:
ಸಂಶಯಕ್ಕಿಂತ ಪ್ರಶ್ನಿಸುವ ಮನೋಭಾವ ಮುಖ್ಯ. ನಿಮ್ಮ ಬೌದ್ಧಿಕತೆಗೆ ಹೊಸ ವ್ಯಾಪ್ತಿ ಬರುತ್ತದೆ. ನಿಮ್ಮ ದೃಷ್ಟಿಯು ಬದಲಾದರೆ ಎಲ್ಲವೂ ಬದಲಾಗುವುದು. ಕೆಲಸದ ವ್ಯವಹಾರವು ನಿಮಗೆ ಚಿಂತೆಯನ್ನು ಹೆಚ್ಚು ಮಾಡಬಹುದು. ಶ್ರಮಕ್ಕೆ ಯೋಗ್ಯವಾದ ಫಲವು ದೊರೆಯುವುದು. ಅಪರೂಪದ ವಸ್ತುವು ನಿಮಗೆ ಲಾಭದಾಯಕ ವಸ್ತು. ಮಹಿಳೆಯರು ಅಲಂಕಾರಿಕ ವಸ್ತುಗಳಿಗೆ ಖರ್ಚು ಮಾಡಬೇಕಾಗುವುದು. ಮಿತ್ರರ ನಡುವೆ ವೈಮನಸ್ಯ ಬರಬಹುದು. ನಿಮ್ಮ ಯೋಜನೆ ಕಾರ್ಯರೂಪಕ್ಕೆ ತರಲು ಸಫಲರಾಗುವಿರಿ. ಸಹವಾಸದಿಂದ ನಿಮಗೆ ಅಪವಾದವು ಬರಬಹುದು. ಕುಟುಂಬದ ಜೊತೆ ಬಹಳ ದಿನಗಳ ಅನಂತರ ಸಂಯೋಷದ ಸಮಯವನ್ನು ಕಳೆಯುವಿರಿ. ಇಂದಿನ ಚಿಂತನೆ ನಿಮ್ಮ ಮುಂದಿನ ಅನೇಕ ವ್ಯವಹಾರಕ್ಕೆ ಮುನ್ನುಡಿಯಾಗಲಿದೆ. ವಿದ್ಯಾರ್ಥಿಗಳ ಪ್ರತಿಭೆ ಪುರಸ್ಕಾರವು ಲಭ್ಯವಾಗುವುದು. ಆತುರದ ತೀರ್ಮಾನವನ್ನು ತೆಗೆದುಕೊಳ್ಳಬೇಡಿ. ಪ್ರಾಮಾಣಿಕತೆಯನ್ನು ನಿಮ್ಮನ್ನು ಗೆಲ್ಲಿಸುವುದು.
ಕುಂಭ ರಾಶಿ:
ಹೊಸ ದೃಷ್ಟಿಕೋನವನ್ನು ಕಟ್ಟಿಕೊಳ್ಳುವುದು ಉತ್ತಮ. ಹಳೆಯ ಅಭಿಪ್ರಾಯಗಳು ಕರಗುತ್ತವೆ, ಹೊಸ ಅರ್ಥಗಳು ಮೂಡುತ್ತವೆ. ಹಣ, ಸಂಬಂಧ, ಆರೋಗ್ಯ, ಎಲ್ಲವನ್ನೂ ದೀರ್ಘದೃಷ್ಟಿಯಿಂದ ನೋಡುವ ದಿನ. ನಿಮಗೆ ಇಷ್ಟವಾದ ಸ್ಥಳಕ್ಕೆ ನೀವು ಅಕಸ್ಮಾತ್ ಭೇಟಿ. ನೀವು ವ್ಯರ್ಥ ಮಾಡಿಕೊಳ್ಳುವಿರಿ. ಸದುಪಯೋಗ ಮಾಡಿಕೊಳ್ಳುವತ್ತ ಗಮನವಿರಲಿ. ತಾಯಿಯ ಕಡೆಯಿಂದ ನಿಮಗೆ ಸಹಾಯ ಸಿಗಬಹುದು. ಉನ್ನತ ವ್ಯಾಸಂಗದಲ್ಲಿ ಆಸಕ್ತಿ ಕಡಿಮೆ ಆಗುವುದು. ಮನೆಯ ಕೆಲಸದಿಂದ ಆಯಾಸವಾಗಬಹುದು. ನಿಮ್ಮ ಆಸೆಗಳನ್ನು ಆಪ್ತರಲ್ಲಿ ಹೇಳಿಕೊಳ್ಳಬಹುದು. ಕಛೇರಿಯ ಕೆಲಸಗಳನ್ನು ಮುಗಿಸಲು ಹೆಚ್ಚು ಸಮಯವನ್ನು ತೆಗದುಕೊಳ್ಳುವಿರಿ. ನಿಮ್ಮ ಹಳೆಯ ವಸ್ತುಗಳನ್ನು ಯಾರಿಗಾದರೂ ನಿಶ್ಶುಲ್ಕವಾಗಿ ಕೊಡುವಿರಿ. ಸ್ಥಿರ ಚಿಂತನೆಯೊಳಗೆ ಹೊಸ ಬೆಳಕಿನ ಮಾರ್ಗ ತೆರೆಯುತ್ತದೆ. ನಿಮ್ಮ ವಿವಾಹದ ಬಗ್ಗೆ ಬಿಸಿಬಿಸಿ ಚರ್ಚೆಯು ಮನೆಯಲ್ಲಿ ನಡೆಯುವುದು. ಇಂದು ಯಾರಾದರೂ ನಿಮ್ಮ ಸಹಾಯಕ್ಕೆ ಬರಬಹುದು. ಬಂಧುಗಳ ವಿಚಾರಕ್ಕೆ ಆರ್ಥಿಕನಷ್ಟವಾಗುವುದು.
ಮೀನ ರಾಶಿ:
ದೊಡ್ಡ ಗುರಿಗಳನ್ನು ಕಾಣಲು ದಿನ ಸಹಕಾರಿ. ಒಂದು ಮಾತು, ಒಂದು ಭೇಟಿ, ಒಂದು ಕಲ್ಪನೆ, ನಿಮ್ಮ ಚಿಂತನಕ್ಕೆ ದಿಕ್ಕು ಬದಲಾವಣೆ. ಆದರೆ ಬದಲಾವಣೆಗೆ ಮನಸ್ಸು ತೆರೆದಿಡಿ. ನೀವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಅನುಕೂಲತೆಯು ಕೆಲವು ಜನರಿಗೆ ಸಿಕ್ಕಿ ಸಂತೋಷವಾಗುತ್ತದೆ. ಹಳೆಯ ಹಣಕಾಸಿನ ವ್ಯವಹಾರವನ್ನು ನೀವು ತೀರಿಸಿಕೊಳ್ಳುತ್ತೀರಿ. ಬಾಡಿಗೆ ಮನೆಯಲ್ಲಿ ವಾಸಿಸುವವರಿಗೆ ತೊಂದರೆ ಆದೀತು. ನೀವು ಸ್ಥಾನಕ್ಕಾಗಿ ಯಾರ ಮೇಲೂ ಅಪವಾದ ಹಾಕಬಹುದು. ಬೋಧಕರಿಗೆ ಉತ್ತಮ ಪ್ರಶಂಸೆಯು ಸಿಗುವುದು. ನಿಮ್ಮದಲ್ಲದ ದ್ರವ್ಯವನ್ನು ನೀವು ಇಟ್ಟುಕೊಳ್ಳಲು ಬಯಸುವುದಿಲ್ಲ. ಸಂಗಾತಿಯ ಮನೋಭಾವವನ್ನು ಅನುಭವಿಸಲು ಆಗದು. ನಿಮ್ಮ ಮನಸ್ಸು ಗಡಿಯಾಚೆ ಯೋಚಿಸಲು ಪ್ರೇರೇಪಿಸುತ್ತದೆ. ಸಣ್ಣ ವಿಷಯಗಳಲ್ಲಿ ಹಿಡಿದುಕೊಳ್ಳುವುದನ್ನು ಬಿಡಿ. ಆರ್ಥಿಕವಾಗಿ ಸಬಲರಾಗಲು ಗೌಪ್ಯ ವ್ಯಾಪಾರವನ್ನು ನಡೆಸುತ್ತಾರೆ. ಯಾರಾದರೂ ನಿಮ್ಮನ್ನು ಕೆರಳಿಸುವಂತೆ ಮಾಡಿಯಾರು. ತಂತ್ರಜ್ಞರಿಗೆ ಸಿಹಿ ಸುದ್ದಿ ಕಾದಿರುವುದು. ನಿಮ್ಮ ಹೊಸ ಪ್ರಯತ್ನಕ್ಕೆ ಕುಟುಂಬದ ಬೆಂಬಲವು ಸಿಗುವುದು.
14 ಡಿಸೆಂಬರ್ 2025 ರ ಭಾನುವಾರದ ಪಂಚಾಂಗ:
ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಕಾರ್ಯಕ್ರಮ : ಹೇಮಂತ, ಚಾಂದ್ರ ಮಾಸ : ಮಾರ್ಗಶೀರ್ಷ, ಸೌರ ಮಾಸ : ವೃಶ್ಚಿಕ, ಮಹಾನಕ್ಷತ್ರ : ಜ್ಯೇಷ್ಠಾ, ವಾರ : ಭಾನು, ಪಕ್ಷ : ಕೃಷ್ಣ, ತಿಥಿ : ದಶಮೀ, ನಿತ್ಯನಕ್ಷತ್ರ : ಉತ್ತರಾಕರಣಫಲ್ಗುಣೀ, ಯೋಗದ 6 34 am, ಸೂರ್ಯಾಸ್ತ – 05 – 54 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 16:29 – 17:54, ಯಮಗಂಡ ಕಾಲ 12:14 – 13:39, ಗುಳಿಕ ಕಾಲ 15:04 – 16:29
-ಲೋಹಿತ ಹೆಬ್ಬಾರ್ – 8762924271 (What’s app ಮಾತ್ರ)