ದರ್ಶನ್‌ ರಾತ್ರಿ 12 ಗಂಟೆಗೆ ಫೋನ್‌ ಮಾಡಿ ಮಾತಾಡಿದ್ರು: ಕ್ಯಾಮರಾ ಮುಂದೆ ಬಂದ Vijayalakshmi Darshan | Wife Vijayalakshmi On Actor Darshan Thoogudeepa The Devil Movie Release

ದರ್ಶನ್‌ ರಾತ್ರಿ 12 ಗಂಟೆಗೆ ಫೋನ್‌ ಮಾಡಿ ಮಾತಾಡಿದ್ರು: ಕ್ಯಾಮರಾ ಮುಂದೆ ಬಂದ Vijayalakshmi Darshan | Wife Vijayalakshmi On Actor Darshan Thoogudeepa The Devil Movie Release



ದರ್ಶನ್‌ ರಾತ್ರಿ 12 ಗಂಟೆಗೆ ಫೋನ್‌ ಮಾಡಿ ಮಾತಾಡಿದ್ರು: ಕ್ಯಾಮರಾ ಮುಂದೆ ಬಂದ Vijayalakshmi Darshan | Wife Vijayalakshmi On Actor Darshan Thoogudeepa The Devil Movie Release

Actor Darshan Thoogudeepa News: ನಟ ದರ್ಶನ್‌ ತೂಗುದೀಪ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಅಂದಹಾಗೆ ಇವರ ‘ದಿ ಡೆವಿಲ್’‌ ಸಿನಿಮಾ ರಿಲೀಸ್‌ ಆಗಿದೆ. ಈ ಕುರಿತಂತೆ ವಿಜಯಲಕ್ಷ್ಮೀ ಅವರು ಮೊದಲ ಬಾರಿಗೆ ಕ್ಯಾಮರಾ ಮುಂದೆ ಬಂದು ಮಾತನಾಡಿದ್ದಾರೆ. 

ನಟ ದರ್ಶನ್‌ ತೂಗುದೀಪ ( Actor Darshan Thoogudeepa ), ರಚನಾ ರೈ ನಟನೆಯ ‘ದಿ ಡೆವಿಲ್’‌ ಸಿನಿಮಾ ರಿಲೀಸ್‌ ಆಗಿದ್ದು, ಅವರ ಅಭಿಮಾನಿಗಳು ಈ ಚಿತ್ರವನ್ನು ಮೆರೆಸುತ್ತಿದ್ದಾರೆ. ದರ್ಶನ್‌ ಸದ್ಯ ಪರಪ್ಪನ ಅಗ್ರಹಾರದಲ್ಲಿದ್ದಾರೆ. ದರ್ಶನ್‌ ಜೈಲಿನಲ್ಲಿದ್ದರೂ ಕೂಡ, ಅವರ ಸಿನಿಮಾ ಪ್ರಚಾರಕ್ಕೆ ಕೊರತೆಯಿಲ್ಲ. ಈಗ ಅವರ ಪತ್ನಿ ವಿಜಯಲಕ್ಷ್ಮೀ ಅವರು ಈ ಬಗ್ಗೆ ಮಾತನಾಡಿದ್ದಾರೆ.

‘ದಿ ಡೆವಿಲ್’‌ ಸಿನಿಮಾ ಅಪ್‌ಡೇಟ್‌ ಕೊಡ್ತಾರೆ

ಈ ಸಿನಿಮಾ ನಾಯಕಿ ರಚನಾ ರೈ ಅವರು ಪ್ರಶ್ನೆಗಳನ್ನು ಕೇಳಿದ್ದು, ಅದಿಕ್ಕೆ ವಿಜಯಲಕ್ಷ್ಮೀ ಅವರು ಉತ್ತರ ಕೊಟ್ಟಿದ್ದಾರೆ. ಬಹಳ ವರ್ಷಗಳ ಬಳಿಕ ಅವರು ಈ ರೀತಿಯಾದ ಸಂವಹನದಲ್ಲಿ ಭಾಗಿಯಾಗಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಆಗಿರುವ ವಿಜಯಲಕ್ಷ್ಮೀ ಅವರು, ‘ದಿ ಡೆವಿಲ್’‌ ಸಿನಿಮಾ ಕುರಿತಂತೆ ಅಪ್‌ಡೇಟ್‌ಗಳನ್ನು ಹಂಚಿಕೊಳ್ಳುತ್ತಿದ್ದರು. ಅಂದಹಾಗೆ ದರ್ಶನ್‌ ಅವರ ಸಂದೇಶವನ್ನು ಅವರು ಅಭಿಮಾನಿಗಳಿಗೆ ತಲುಪಿಸುತ್ತಿದ್ದರು.

ದರ್ಶನ್‌ ಅವರ ‘ಡೆವಿಲ್’‌ ಸಿನಿಮಾ ಯಶಸ್ಸು ಎಷ್ಟು ಖುಷಿಯಾಗ್ತಿದೆ?

ತುಂಬ ಖುಷಿಯಾಗ್ತಿದೆ. ದರ್ಶನ್‌ ಇಲ್ಲದಿದ್ದರೂ ಅವರನ್ನು, ಅವರ ಸಿನಿಮಾವನ್ನು ತಲೆ ಮೇಲೆ ಹೊತ್ತುಕೊಂಡು ಮೆರಿತಾರೆ ಎನ್ನೋದಕ್ಕೆ ಇದು ಉದಾಹರಣೆ.

ಎಲ್ಲ ಆರಾಮಾಗಿ ನಡೆಯುವಾಗ ಸಡನ್‌ ಆಗಿ ಶಾಕಿಂಗ್‌ ನ್ಯೂಸ್‌ ಸಿಗುತ್ತದೆ

ಈ ರೀತಿ ಆಗುತ್ತದೆ ಎಂದು ಗೊತ್ತಿರಲಿಲ್ಲ. ವೃತ್ತಿಯನ್ನು ಅವರು ತುಂಬ ಗೌರವಿಸುತ್ತಾರೆ, ದೇವರಿಗಿಂತ ಜಾಸ್ತಿ ಪೂಜಿಸ್ತಾರೆ. ಈ ಋಣ ತೀರಿಸಲು ಎರಡು ಸಲ ಹುಟ್ಟಬೇಕು ಎನ್ನುತ್ತಾರೆ. ನನಗೆ ಅವರು ವಾರದಲ್ಲಿ ಎರಡ ಸಲ ಫೋನ್‌ ಮಾಡುತ್ತಾರೆ, ಆದರೆ ಅವರು 12 ಗಂಟೆಗೆ ಫೋನ್‌ ಮಾಡಿ ಸಿನಿಮಾ ಹೇಗೆ ಬಂದಿದೆ? ಸಿನಿಮಾ ಚೆನ್ನಾಗಿ ಬಂದಿದ್ಯಾ? ಜನರು ಚೆನ್ನಾಗಿ ಮಜಾ ಮಾಡುತ್ತಿದ್ದಾರಾ ಎಂದು ಕೇಳಿದರು.

ದರ್ಶನ್‌ ಅವರನ್ನು ಟಾರ್ಗೆಟ್‌ ಮಾಡುತ್ತಿದ್ದರು, ಈಗ ಅವರ ಅಭಿಮಾನಿಗಳನ್ನು ಟಾರ್ಗೆಟ್‌ ಮಾಡುತ್ತಿದ್ದಾರೆ.

ನನ್ನ ಬಗ್ಗೆ , ನನ್ನ ಮಗನ ಬಗ್ಗೆ ಮಾತಾಡಿದ್ರೂ ನನಗೆ ಎಫೆಕ್ಟ್‌ ಆಗೋದಿಲ್ಲ. 90 ಪೆರ್ಸೆಂಟ್ ಜನ ನಮಗೆ ಪ್ರೀತಿ ಕೊಡುತ್ತಾರೆ, ಅದೇ ನನಗೆ ಮ್ಯಾಟರ್‌ ಆಗುತ್ತದೆ. ನೆಗೆಟಿವ್ ವಿಚಾರಕ್ಕೆ ತಲೆಕೆಡಿಸಿಕೊಳ್ಳೋಲ್ಲ, ನಾನು ಕಾಮೆಂಟ್ಸ್‌ಗಳನ್ನು ಓದೋದಿಲ್ಲ.

ದರ್ಶನ್‌ ಅವರ ಅಭಿಮಾನಿಗಳು ಅನಕ್ಷರಸ್ಥರು ಎಂದು ಹೇಳುತ್ತಾರಲ್ಲ, ಅವರಿಂದ ಫಂಡ್‌ ಕಲೆಕ್ಟ್‌ ಮಾಡಿ ಶಾಲೆ ಆರಂಭಿಸೋಣ. ಅನಕ್ಷರಸ್ಥರು ಎಂದು ಹೇಳಿದವರಿಂದಲೇ ಅವರನ್ನು ಶಿಕ್ಷಿತರನ್ನಾಗಿ ಮಾಡೋಣ



Source link

Leave a Reply

Your email address will not be published. Required fields are marked *