ಕಿಚ್ಚ ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ (ಮಾರ್ಕ್ ಮೂವಿ) ಡಿಸೆಂಬರ್ 25 ರಂದು ರಿಲೀಸ್ ಆಗಲಿದೆ. ಈ ಸಿನಿಮಾದಲ್ಲಿ ಸುದೀಪ್ ಅವರಿಗೆ ಹೀರೋಯಿನ್ ಇಲ್ಲ. ಈ ಮೊದಲು ಅವರು ನಟಿಸಿದ್ದ ‘ಮ್ಯಾಕ್ಸ್’ ಚಿತ್ರದಲ್ಲೂ ಹೀರೋಯಿನ್ ಇರಲಿಲ್ಲ. ಅದಕ್ಕೆ ಕಾರಣ ಏನು ಕಿಚ್ಚ ಸುದೀಪ್ (ಕಿಚ್ಚ ಸುದೀಪ್) ಅವರು ವಿವರಿಸಿದ್ದಾರೆ. ಕಥೆಯಲ್ಲಿ ಹೀರೋಯಿನ್ ಪಾತ್ರಕ್ಕೆ ಮಹತ್ವ ಇರಬೇಕು. ನಟಿ ಸುಮ್ಮನೆ ಒಂದು ಪ್ರಾಪರ್ಟಿ ರೀತಿ ಆಗಬಾರದು ಎಂದು ಸುದೀಪ್ ಹೇಳಿದ್ದಾರೆ. ‘ಮ್ಯಾರ್ಕ್’ ಸಿನಿಮಾದ ಕೆಲಸ ಬಹಳ ಬೇಗ ಮುಗಿಸಿದೆ. ಆ ಬಗ್ಗೆ ಕೂಡ ಸುದೀಪ್ ಮಾತನಾಡಿದ್ದಾರೆ. ಟಿವಿ9 ನಡೆಸಿದ ವಿಶೇಷ ಸಂದರ್ಶನದ (ಸುದೀಪ್ ಸಂದರ್ಶನ) ಒಂದು ತುಣುಕು ಇಲ್ಲಿದೆ ನೋಡಿ..
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.