ಬೆಂಗಳೂರು, ಡಿಸೆಂಬರ್ 14: ನಗರದ ವೈದ್ಯೆಯೊಬ್ಬರು ಸೈಕೋ ಕಾಟಕ್ಕೆ ಬೇಸತ್ತು ಹೋಗಿದ್ದಾರೆ. ಮಲಗಿರುವಾಗ ಇಣುಕಿ ಹಾಕುವುದು, ಗೇಟ್ ಮುಂದೆ ಪಾಗಲ್ ಪ್ರೇಮಿ ತರ ಬಂದು ನಿಲ್ಲುವುದು. ಅಷ್ಟೇ ಅಲ್ಲದೆ ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಪ್ರತ್ಯಕ್ಷನಾಗುತ್ತಾನೆ. ಸೈಕೋ ಕಾಟದಿಂದ ಕಳೆದ ಮೂರು ತಿಂಗಳಿನಿಂದ ಮಾನಸಿಕ ಕಿರುಕುಳ ಅನುಭವಿಸಿದ್ದಾರೆ. ಪ್ರಶ್ನೆ ಮಾಡಿದರೆ ಮಾತನಾಡುವುದಿಲ್ಲ. ದಿಟ್ಟಿಸಿ ನೋಡುತ್ತಾ ನಿಲ್ಲುತ್ತಾನಂತೆ. ಸೈಕೋ ಕಾಟ ವಿಪರೀತ ಹಿನ್ನಲೆ 112ಕ್ಕೆ ದೂರು ನೀಡಿದ್ದ ವೈದ್ಯೆ, ಪೊಲೀಸರು ಬರದೇ ಪರಾರಿಯಾಗಿದ್ದಾನೆ. ಸದ್ಯ ಅಪರಿಚಿತ ವ್ಯಕ್ತಿಗಾಗಿ ಶೋಧ ನಡೆದಿದ್ದು, ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.