ಚಿಕ್ಕಮಗಳೂರು, (ಡಿಸೆಂಬರ್ 14): ಮೊನ್ನೆ ಅಷ್ಟೇ ರಾಯಚೂರಿನಲ್ಲಿ ಯುವತಿಯೋರ್ವಳು, ಪ್ರಿಯಕರನ ಮದುವಿಗೆ ನುಗ್ಗಿ ಮದ್ವೆಯನ್ನೇ ತಡೆಯುವಲ್ಲಿ ಯಶಸ್ವಿಯಾಗಿದ್ದಳು. ಹುಡುಗ ತಾಳಿ ಕಟ್ಟುವ ಮುನ್ನವೇ ಬಂದು ಮದುವೆ ನಿಲ್ಲಿಸಿದ್ದಳು. ಇದೇ ಮಾದರಿಯ ಮತ್ತೊಂದು ಘಟನೆ ಚಿಕ್ಕಮಗಳೂರಿನಲ್ಲಿ ಬೆಳಕಿಗೆ ಬಂದಿದೆ. ಆದರೆ, ಪ್ರೇಯಿಸಿ ಮಂಟಪ್ಪಕ್ಕೆ ಬರುವಷ್ಟರಲ್ಲಿ ಪ್ರಿಯಕರ ಮತ್ತೋರ್ವ ಯುವತಿಯ ಕುತ್ತಿಗೆ ತಾಳಿ ಕಟ್ಟಿದ್ದ. ಹೌದು..ತಾಳಿ ಕಟ್ಟಿದ ಕೆಲವೇ ನಿಮಿಷದಲ್ಲಿ ಯುವತಿಯೊಬ್ಬಳು ಕಲ್ಯಾಣ ಮಂಟಪಕ್ಕೆ ನುಗ್ಗಿ ರಂಪಾಟ ಮಾಡಿದ್ದಾಳೆ. ಚಿಕ್ಕಮಗಳೂರು ನಗರದ ದೊಡ್ಡೇಗೌಡ ಕನ್ವೆನ್ಷನ್ ಹಾಲ್‌ನಲ್ಲಿ ಬಂದ ಪ್ರೇಯಿಸಿ, ಪ್ರೀತಿಸಿ ಮೋಸ ಮಾಡಿ ಈಗ ಮತ್ತೊಂದು ಹುಡುಗಿ ಜತೆ ಮದುವೆಯಾಗುತ್ತಿದ್ದಳು ಎಂದು ರಣಚಂಡಿ ಅವತಾರ ತಾಳಿದ್ದಾಳೆ. ಇದರಿಂದ ಮದುವೆಗೆ ಆಗಮಿಸಿದ್ದೆಲ್ಲ ಬಿಗ್ ಶಾಕ್ ಆಗಿದ್ದಾರೆ.