ಸಿಡ್ನಿ, ಡಿಸೆಂಬರ್ 14: ಸಿಡ್ನಿಯ ಜನಪ್ರಿಯ ಬಾಂಡಿ ಬೀಚ್ನಲ್ಲಿ (ಬೋಂಡಿ ಬೀಚ್) ಭಾನುವಾರ ಸಂಜೆ ಮೂವರು ಉಗ್ರರು ಸಾರ್ವಜನಿಕರ ಮೇಲೆ ಗುಂಡಿನ ದಾಳಿ ಎಸಗಿದ ಘಟನೆ ನಡೆದಿದೆ. ಈ ದಾಳಿ ಘಟನೆಯಲ್ಲಿ ಹತ್ತು ಮಂದಿ ಬಲಿಯಾಗಿದ್ದಾರೆ. ಇದೇ ವೇಳೆ, ರೈಫಲ್ ಹಿಡಿದು ಆರ್ಭಟಿಸುತ್ತಿದ್ದ ಒಬ್ಬನ ಮೇಲೆ ವ್ಯಕ್ತಿಯೊಬ್ಬರು ಮಿಂಚಿನಂತೆ ದಾಳಿ ಮಾಡಿ ರೈಫಲ್ ಕಿತ್ತುಕೊಂಡು ಅಟ್ಟಾಡಿಸಿದ ಘಟನೆಯ ದೃಶ್ಯವೊಂದು ವೈರಲ್ ಆಗುತ್ತಿದೆ. ಶಸ್ತ್ರವಿಲ್ಲದೆ ಬರಿಗೈಲಿದ್ದರೂ ಉಗ್ರನ ಮೇಲೆ ಎರಗಿ ಹೋಗುವ ಸಾಹಸ ಮಾಡಿದ ವ್ಯಕ್ತಿಯ ಧೈರ್ಯವನ್ನು ಸೋಷಿಯಲ್ ಮೀಡಿಯಾದಲ್ಲಿ ಜನರು ಪ್ರಶಂಸಿಸುತ್ತಿದ್ದಾರೆ.
ಬಾಂಡಿ ಬೀಚ್ನಲ್ಲಿ ಮೂವರು ಉಗ್ರಗಾಮಿಗಳು ನುಗ್ಗಿ ಗುಂಡಿನ ದಾಳಿ ಎಸಗಿದ್ದಾರೆ. ಇದರಲ್ಲಿ ಒಬ್ಬ ಉಗ್ರನು ಮರವೊಂದರ ಹಿಂದೆ ಅಡಗಿ ನಿಂತು ಜನರ ಮೇಲೆ ದಾಳಿ ಮಾಡಲು ಹೊಂಚು ಹಾಕುತ್ತಿರುತ್ತಾನೆ. ಅಲ್ಲೇ ಸಮೀಪ ಕಾರುಗಳ ಹಿಂದೆ ಅಡಗಿದ್ದ ಸಾರ್ವಜನಿಕ ವ್ಯಕ್ತಿಯೊಬ್ಬರು ಹಿಂದಿನಿಂದ ಸದ್ದಿಲ್ಲದೇ ಹೋಗಿ ಉಗ್ರನ ಗುತ್ತಿಗೆ ಹಿಡಿದು ರೈಫಲ್ ಕಿತ್ತುಕೊಳ್ಳುತ್ತಾರೆ. ಈ ರಭಸಕ್ಕೆ ಉಗ್ರನು ಕೆಳಗೆ ಬಿದ್ದು ಓಡಲು ಯತ್ನಿಸಿದ್ದಾನೆ.
ಉಗ್ರನ ಮೇಲೆ ದಾಳಿ ಮಾಡಿದ ವಿಡಿಯೋ
ಬೋಂಡಿ ಬೀಚ್ನಲ್ಲಿ ಒಬ್ಬ ವ್ಯಕ್ತಿ ಅಕ್ಷರಶಃ ಭಯೋತ್ಪಾದಕನ ಬಂದೂಕನ್ನು ತನ್ನ ಕೈಗಳಿಂದ ಹಿಡಿದು ಅಸಂಖ್ಯಾತ ಜೀವಗಳನ್ನು ಉಳಿಸಿದ.
ಆತ ಉಗ್ರರನ್ನು ಹೊಡೆದುರುಳಿಸಿದ. ಗೌರವಿಸಿ 🫡 #ಬಾಂಡಿಬೀಚ್ pic.twitter.com/opweVNTgJT
– ರಿಚರ್ಡ್ ಕೆಟಲ್ಬರೋ (@RichKettle07) ಡಿಸೆಂಬರ್ 14, 2025
ಇದನ್ನೂ ಓದಿ: ಸಿಡ್ನಿಯ ಬೊಂಡಿ ಬೀಚ್ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
10 ಮಂದಿ ಸಾವು, 11 ಮಂದಿಗೆ ಗಾಯ
ಬಾಂಡಿ ಬೀಚ್ನಲ್ಲಿ ಸಂಜೆ (ಸ್ಥಳೀಯ ಕಾಲಮಾನ) 6:30ಕ್ಕೆ ಈ ಶೂಟಿಂಗ್ ನಡೆದಿದೆ. ಮೂವರು ಉಗ್ರರ ದಾಳಿಯಲ್ಲಿ ಒಂಬತ್ತು ಮಂದಿ ಸಾರ್ವಜನಿಕರು ಬಲಿಯಾಗಿದ್ದಾರೆ. ಉಗ್ರನ ಹತ್ಯೆಯಾಗಿದೆ. ಪೊಲೀಸರ ಮಾಹಿತಿ ಪ್ರಕಾರ 11 ಮಂದಿಗೆ ಗಾಯವೂ ಆಗಿದೆ. ರೋಗಿಗಳಲ್ಲಿ ಇಬ್ಬರು ಪೊಲೀಸರು ಇದ್ದಾರೆ.
ಯಹೂದಿಗಳನ್ನು ಗುರಿ ಮಾಡಿದ್ದರಾ ಉಗ್ರರು?
ಉಗ್ರಗಾಮಿಗಳು ಯಾರು, ಯಾವ ಸಂಘಟನೆಯವರು ಎಂಬ ಮಾಹಿತಿ ಇಲ್ಲ. ಆದರೆ, ಸಿಡ್ನಿಯಲ್ಲಿನ ಈ ಜನಪ್ರಿಯ ಬೀಚ್ನಲ್ಲಿ ಯಹೂದಿಗಳ ಹನುಕ್ಕಾ ಸಂಜೆ 5 ಗಂಟೆಯಿಂದಲೇ ಆಚರಣೆ ನಡೆಯುತ್ತಿದೆ. ಮೂರು ದಿನಗಳ ಹಬ್ಬದಲ್ಲಿ ಇವತ್ತಿನದು ಮೊದಲ ದಿನವಾಗಿತ್ತು.
ಇದನ್ನೂ ಓದಿ: ಇಂಡಿಗೋ ಕುಸಿಯಲು ಏನು ಕಾರಣ? ಎರಡು ಸಂಸ್ಥಾಪಕರ ನಡುವಿನ ಭಿನ್ನಾಭಿಪ್ರಾಯವೇ ಏರ್ಲೈನ್ಸ್ಗೆ ಮುಳುವಾಯಿತಾ?
ಬಾಂಡಿ ಬೀಚ್ನಲ್ಲಿ ಉಗ್ರರ ದಾಳಿ ಘಟನೆಯನ್ನು ಇಸ್ರೇಲ್ ಅಧ್ಯಕ್ಷ ಐಸಾಕ್ ಹರ್ಜಾಗ್ ಬಲವಾಗಿ ಖಂಡಿಸಿದ್ದಾರೆ, ಇದು ಯಹೂದಿಗಳನ್ನು ಗುರಿಯಾಗಿಸಿ ಎಸಗಿದ ದಾಳಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೆಚ್ಚಿನ ವಿದೇಶ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 5:07 pm, ಭಾನುವಾರ, 14 ಡಿಸೆಂಬರ್ 25