ಇತ್ತೀಚೆಗಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಬ್ರೈನ್ ಟೀಸರ್ಬ್ರೇನ್ ಟೀಸರ್) ಚಿತ್ರಗಳು ಅನೇಕ ಕಣ್ಣಿಗೆ ಬೀಳುತ್ತವೆ. ಒಂದಕ್ಕಿಂತ ಒಂದು ಒಗಟಿನ ಚಿತ್ರಗಳು ಟ್ರಿಕ್ ಹೊಂದಿದ್ದು, ಬಿಡಿಸುವುದು ಕಷ್ಟಕರ. ಇದೀಗ ವೈರಲ್ ಬ್ರೈನ್ ಟೀಸರ್ ವೈರಲ್ ಆಗಿದೆ. ಇದೊಂದು ಗಣಿತದ ಪಜಲ್ ಆಗಿದ್ದು, ಉತ್ತರ ಕಂಡುಹಿಡಿಯಬೇಕು. ಈ ಲೆಕ್ಕ ಬಿಡಿಸಿ ಜಾಣರು ಎನಿಸಿಕೊಳ್ಳಿ.
ಒಗಟಿನ ಪ್ರಶ್ನೆ ಹೀಗಿದೆ ನೋಡಿ
break the silos ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ಬ್ರೈನ್ ಟೀಸರ್ ಒಗಟಿನ ಪ್ರಶ್ನೆ ತಲೆಗೆ ಹುಳ ಬಿಟ್ಟಂತಿದೆ. 1 + 4 = 5, 2 + 5 = 12, 3 + 6 = 21, 8 + 11 = ಎಷ್ಟು ಎಂದು ಕಂಡು ಹಿಡಿಯುವುದೇ ಇಲ್ಲಿರುವ ಸವಾಲು. ಈ ಪ್ರಶ್ನೆಗೆ ಉತ್ತರ ಹೇಳುವುದು ಅಷ್ಟು ಸುಲಭವಲ್ಲ. ಆದರೆ ನೀವು ಬುದ್ಧಿ ಉಪಯೋಗಿಸಿ ಹತ್ತೇ ಹತ್ತು ಸೆಕೆಂಡುಗಳೊಳಗೆ ಉತ್ತರ ಹೇಳಲು ಪ್ರಯತ್ನಿಸಿ.
ಇದನ್ನೂ ಓದಿ:ಲೆಕ್ಕ ಬಿಡಿಸೋದ್ರಲ್ಲಿ ನೀವು ಪಂಟರೇ, ಈ ಮ್ಯಾಥ್ಸ್ ಪಝಲ್ ಬಿಡಿಸಿ ನಿಖರ ಉತ್ತರ ಹೇಳಿ
ಲೆಕ್ಕ ಬಿಡಿಸಿ ಉತ್ತರ ಕಂಡು ಕೊಳ್ಳಲು ಸಾಧ್ಯವಾಯಿತೇ?
ಟ್ರಿಕ್ಕಿ ಲೆಕ್ಕವನ್ನು ಬಿಡಿಸಿ ಉತ್ತರ ಹೇಳಲು ಸಾಧ್ಯವಾಗಿಲ್ಲವೇ, ಹೆಚ್ಚು ಚಿಂತಿಸಬೇಡಿ. 1 + 4 = 5, 2 + 5 = 12, 3 + 6 = 21, 8 + 11 = ಎಷ್ಟು ಎಂಬ ಪ್ರಶ್ನೆಗೆ ನಾವೇ ಉತ್ತರ ಹೇಳುತ್ತೇವೆ. 8 + 11 ಈ ಲೆಕ್ಕವನ್ನು ಬಿಡಿಸಿದಾಗ ಉತ್ತರವು 96 ಬರುತ್ತದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ