Headlines

ಮೊಬೈಲ್, ಬೈಕ್, ಕಾರ್, ಟಿವಿ, ಫ್ರಿಡ್ಜ್ ಮಾಲಕತ್ವದಲ್ಲಿ ಬಡವರು ಮತ್ತು ಶ್ರೀಮಂತರ ನಡುವೆ ಅಂತರ ತಗ್ಗುತ್ತಿದೆಯಾ?

ಮೊಬೈಲ್, ಬೈಕ್, ಕಾರ್, ಟಿವಿ, ಫ್ರಿಡ್ಜ್ ಮಾಲಕತ್ವದಲ್ಲಿ ಬಡವರು ಮತ್ತು ಶ್ರೀಮಂತರ ನಡುವೆ ಅಂತರ ತಗ್ಗುತ್ತಿದೆಯಾ?


ಜುಲೈ, ಡಿಸೆಂಬರ್ 14: ಭಾರತದಲ್ಲಿ ಆರ್ಥಿಕವಾಗಿ ಅತಿವೇಗವಾಗಿ ಬೆಳವಣಿಗೆ ಹೊಂದುತ್ತಿದೆ. ಆದರೆ, ತಲಾದಾಯ ಹೆಚ್ಚುತ್ತಿಲ್ಲ ಎಂಬ ದೂರು ಕೂಡ ಇದೆ. ಬಡವ ಮತ್ತಷ್ಟು ಬಡವನಾಗುತ್ತಿದ್ದಾನೆ, ಶ್ರೀಮಂತ ಶ್ರೀಮಂತನಾಗಿದ್ದಾನೆ ಎಂಬ ಟೀಕೆಗಳೂ ಕೇಳಿಬರುತ್ತವೆ. ಆದರೆ, ವಿವಿಧ ಸಮೀಕ್ಷೆಗಳ ದತ್ತಾಂಶಗಳು ಬೇರೆಯೇ ವಾಸ್ತವ ಚಿತ್ರಣ ನೀಡುತ್ತವೆ. ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ರಿಚಾ ಘೋಷ್ ಅವರು ಕೆಲವು ಕುತೂಹಲಕಾರಿ ಮಾಹಿತಿಯನ್ನು ಹೆಕ್ಕಿ ಹೇಳಿದ್ದಾರೆ. ಕಳೆದ 10 ರಲ್ಲಿ ಭಾರತದಲ್ಲಿರುವ ಒಬ್ಬ ಕಡುಬಡವನ ಜೀವನ ಮತ್ತು ಸೌಲಭ್ಯ (ಪ್ರಮುಖ ಸ್ವತ್ತುಗಳ ಮಾಲೀಕತ್ವ) ಹೇಗೆ ಬದಲಾಗಿದೆ

ಹತ್ತು ವರ್ಷದ ಹಿಂದೆ ಭಾರತದ ಗ್ರಾಮೀಣ ಭಾಗದಲ್ಲಿರುವ ಪ್ರತೀ ಹತ್ತು ಮನೆಗಳಲ್ಲಿ ಬೈಕ್ ಅಥವಾ ಕಾರ್ ಇದ್ದ ಮನೆ ಒಂದಕ್ಕಿಂತ ಕಡಿಮೆ ಇತ್ತು. ಈಗ (2023-24) ಪ್ರತೀ ಹತ್ತರಲ್ಲಿ ಐದು ಮನೆಗಳಲ್ಲಿ ಬೈಕು ಅಥವಾ ಕಾರು ಇದೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಆ ಪ್ರಕಾರ, ಕೆಲ ಪ್ರಮುಖ ಆಸ್ತಿಗಳ ವರದಿ ಮಾಲಕತ್ವದ ವಿಚಾರಕ್ಕೆ ಬಂದರೆ ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಕಡಿಮೆ ಆಗುತ್ತಿದೆ.

ಬೈಕ್ ಮಾಲಕತ್ವ ಎಷ್ಟಿದೆ ನೋಡಿ…

ಗ್ರಾಮೀಣ ಭಾಗಗಳಲ್ಲಿ 2011-12ರಲ್ಲಿ ಅಗ್ರ ಶ್ರೀಮಂತ ಶೇ. 20ರಷ್ಟು ಮನೆಗಳಲ್ಲಿ ಬೈಕ್‌ಗಳನ್ನು ಹೊಂದಿದ್ದವರು ಶೇರ್ ಮಾಡಿ. 38.2 ಇತ್ತು. ಆ ಅವಧಿಯಲ್ಲಿ ಕೆಳಗಿನ ಶೇ. 40ರಷ್ಟು ಮನೆಗಳಲ್ಲಿ ಮೋಟಾರು ವಾಹನ ಹೊಂದಿದ್ದವರ ಸಂಖ್ಯೆ ಶೇ. 6.2 ಮಾತ್ರ. ಅಂದರೆ ಹತ್ತು ವರ್ಷದ ಹಿಂದೆ ಶೇ. 38.2 ವರ್ಸಸ್ 6 ಇತ್ತು.

ಇದನ್ನೂ ಓದಿ: ಇಂಡಿಗೋ ಕುಸಿಯಲು ಏನು ಕಾರಣ? ಎರಡು ಸಂಸ್ಥಾಪಕರ ನಡುವಿನ ಭಿನ್ನಾಭಿಪ್ರಾಯವೇ ಏರ್‌ಲೈನ್ಸ್‌ಗೆ ಮುಳುವಾಯಿತಾ?

2023-24ರಲ್ಲಿ ಶೇ. 69.7 ವರ್ಸಸ್ 47.1 ಆಗಿದೆ. ಹತ್ತು ವರ್ಷದ ಈ ಅಂತರ ಸ್ಪಷ್ಟವಾಗಿ ತಗ್ಗಿರುವುದು ಗೊತ್ತಾಗುತ್ತದೆ. ಗ್ರಾಮೀಣ ಭಾಗದಲ್ಲಿ ಅತೀ ಬಡವರು 10 ವರ್ಷದಲ್ಲಿ ಅತೀಹೆಚ್ಚು ಮೋಟಾರು ವಾಹನ ಹೊಂದಿರುವ ವಿಚಾರದಲ್ಲಿ ತೆಲಂಗಾಣ, ಕರ್ನಾಟಕ ಮತ್ತು ಪಂಜಾಬ್ ರಾಜ್ಯಗಳು ಮೊದಲ ಮೂರು ಸ್ಥಾನಗಳನ್ನು ಪಡೆಯುತ್ತವೆ. ತೆಲಂಗಾಣದಲ್ಲಿ ಈ ಪ್ರಮಾಣವು 10 ವರ್ಷದ ಶೇ. 4.6 ರಿಂದ ಶೇ. 67.1ಕ್ಕೆ ಏರಿದೆ. ಕರ್ನಾಟಕದಲ್ಲಿ ಶೇ. 7.2 ರಿಂದ ಶೇ. 69.1; ಪಂಜಾಬ್‌ನಲ್ಲಿ ಶೇ. 22.1 ರಿಂದ ಶೇ. 76.6ಕ್ಕೆ ಏರಿದೆ. ನಗರ ಭಾಗಗಳಲ್ಲಿ ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಛತ್ತೀಸ್ಗಡದಲ್ಲಿ ಅತಿಹೆಚ್ಚು ಆಗಿದೆ.

ಮೊಬೈಲ್ ಫೋನ್ ಇಲ್ಲದ ಮನೆ ತುಂಬಾ ವಿರಳ

ಹಿಂದೆ ಮೊಬೈಲ್ ಫೋನ್‌ಗಳು ಉಳ್ಳವರ ಲಕ್ಷುರಿ. ಈಗ ಎಲ್ಲಾ ಮನೆಯಲ್ಲೂ ಒಬ್ಬರ ಬಳಿಯಾದರೂ ಮೊಬೈಲ್ ಫೋನ್ಗಳಿವೆ. ದತ್ತಾಂಶದ ಪ್ರಕಾರ 2011-12ರಲ್ಲಿ ಟಾಪ್-20 ಶ್ರೀಮಂತರಲ್ಲಿ ಶೇ. 87.9 ಮಂದಿಗೆ ಮೊಬೈಲ್ ಫೋನ್ ಇತ್ತು. ಕೆಳಗಿನ ಶೇ. 40 ಮನೆಗಳಲ್ಲಿ ಮೊಬೈಲ್ ಫೋನ್ ಇದ್ದದ್ದು ಶೇ. 66.5 ಮಾತ್ರ. ಇವತ್ತು (2023-24) ಈ ಪ್ರಮಾಣವು ಶೇ. 97.9 ಮತ್ತು ಶೇ 94.3 ಆಗಿದೆ.

ಫ್ರಿಡ್ಜ್ ಕೂಡ ಹೆಚ್ಚಿನ ಮನೆಗಳಲ್ಲಿ

ರೆಫ್ರಿಜರೇಟರ್ ಇತ್ತೀಚಿನವರೆಗೂ ಲಕ್ಷುರಿ ಸರಕಾಗಿತ್ತು. ಈಗ ಕೆಳಗಿನ ಶೇ. 40ರಷ್ಟು ಮನೆಗಳಲ್ಲಿ ಫ್ರಿಡ್ಜ್ ಸಾಮಾನ್ಯ ಬಳಕೆಯ ವಸ್ತುವಾಗಿದೆ. 2011-12ರಲ್ಲಿ ಗ್ರಾಮೀಣ ಭಾಗದಲ್ಲಿ ಅಗ್ರ-20 ಮತ್ತು ಕೆಳಗಿನ 40 ಪ್ರತಿಶತ ಮನೆಗಳಲ್ಲಿ ಫ್ರಿಡ್ಜ್ ಹೊಂದಿರುವ ಪ್ರಮಾಣ ಶೇ. 46.3 ಮತ್ತು ಶೇ. 22.5 ಇತ್ತು. 2023-24ರಲ್ಲಿ ಈ ಅಂತರವು ಶೇ. 46.3 ಮತ್ತು ಶೇ. 22.5ಕ್ಕೆ ಇಳಿದಿದೆ. ಇನ್ನು, ನಗರದಲ್ಲಿ ಈ ಅಂತರ ಶೇ 70.2 ಮತ್ತು ಶೇ. 57.9ಕ್ಕೆ ಇಳಿದಿದೆ.

ಇದನ್ನೂ ಓದಿ: ಶಾರುಖ್ಜ್ ಟವರ್: ಶಾರುಕ್ ಖಾನ್ ಎಂದ್ರೆ ದುಬೈನಲ್ಲಿ ಬಲು ಕ್ರೇಜ್; ಅವರ ಹೆಸರಿನ ಟವರ್‌ಗೆ 5,000 ಕೋಟಿ ರೂಗೂ ಅಧಿಕ ಬೆಲೆ

ಟಿವಿ ಮಾಲಕತ್ವ ಬಡವರಲ್ಲೇ ಹೆಚ್ಚು

ಇನ್ನೊಂದು ಇಂಟರೆಸ್ಟಿಂಗ್ ಮಾಹಿತಿ ಪ್ರಕಾರ, ನಗರ ಭಾಗದ ಟಾಪ್20 ಶ್ರೀಮಂತ ಕುಟುಂಬಗಳು ಟಿವಿ ಹೊಂದಿರುವುದು ಶೇ. 72.1 ಮಾತ್ರ. ಆದರೆ, ಕೆಳಗಿನ ಶೇ 40ರಷ್ಟು ಕುಟುಂಬಗಳು ಟಿವಿ ಹೊಂದಿರುವ ಪ್ರಮಾಣ ಶೇ. 77.4. ಅಂದರೆ, ಶ್ರೀಮಂತರಿಗಿಂತ ಬಡವರ ಬಳಿಯೇ ಟಿವಿ ಹೆಚ್ಚು ಎಂದಾಯಿತು.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *