ಬಿಗ್ಬಾಸ್ ಕನ್ನಡ ಸೀಸನ್ 12 (ಬಿಗ್ ಬಾಸ್ ಕನ್ನಡ 12) ವೈಲ್ಡ್ ಕಾರ್ಡ್ ಮೂಲಕ ಬಂದಿರುವ ರಜತ್ ಮತ್ತು ಚೈತ್ರಾ ಅವರ ವಿರುದ್ಧ ಇಡೀ ಮನೆಯೇ ಒಂದಾದಂತಿದೆ. ಅದರಲ್ಲೂ ರಜತ್ ವಿರುದ್ಧವಂತೂ ಇಡೀ ಮನೆ ಇದೆ. ರಜತ್, ಮನೆಯ ಕೆಲ ಸ್ಪರ್ಧಿಗಳ ಮೇಲೆ ತಮ್ಮ ಎಂದಿನ ಆಕ್ರಮಣಕಾರಿ ವರ್ತನೆ ತೋರುತ್ತಾ ಆಟ ಆಡುತ್ತಿದ್ದಾರೆ. ಆದರೆ ಗಿಲ್ಲಿಯ ಜನಪ್ರಿಯತೆಯ ಬಗ್ಗೆ ಅರಿವಿದ್ದ ಅವರು, ಗಿಲ್ಲಿ ಜೊತೆಗೆ ಆತ್ಮೀಯತೆ ಬೆಳೆಸಿಕೊಂಡಿದ್ದರು, ಆದರೆ ಕಳೆದ ನಾಮನಿರ್ದೇಶನದಲ್ಲಿ ರಜತ್ ಆಡಿದ ಒಂದೇ ಒಂದು ಮಾತಿನಿಂದ ಗಿಲ್ಲಿ, ರಜತ್ಗೆ ಎದುರಾಳಿಯೇ ಆಗಿಬಿಟ್ಟಿದ್ದಾರೆ.
ರಜತ್ ಅವರು ಮನೆಯ ಕೆಲ ಸ್ಪರ್ಧಿಗಳ ವಿರೋಧ ಕಟ್ಟಿಕೊಂಡಿದ್ದಾರೆ. ರಜತ್ ಅವರ ಆಕ್ರಮಣಕಾರಿ ಮಾತಿನ ಶೈಲಿ, ಡಾಮಿನೇಟ್ ಮಾಡುವ ವ್ಯಕ್ತಿತ್ವ ಹಲವರಿಗೆ ಇಷ್ಟ ಆಗುತ್ತಿಲ್ಲ. ವಿರೋಧಿಗಳೇ ಹೆಚ್ಚಾಗಿರುವ ಕಾರಣ ರಜತ್, ಗಿಲ್ಲಿಯನ್ನು ಹತ್ತಿರ ಇರಿಸಿಕೊಂಡಿದ್ದರು. ಆದರೆ ಕಳೆದ ನಾಮನಿರ್ದೇಶನದ ಬಳಿಕ ಗಿಲ್ಲಿಯೇ, ರಜತ್ ಗೆ ಎದುರಾಳಿ ಆಗಿಬಿಟ್ಟಿದ್ದಾರೆ. ಭಾನುವಾರದ ಎಪಿಸೋಡ್ನಲ್ಲಂತೂ ಗಿಲ್ಲಿ, ನೇರವಾಗಿ ರಜತ್ಗೆ ಸವಾಲನ್ನು ಎಸೆದಿದ್ದಾರೆ.
ಭಾನುವಾಸದ ಎಪಿಸೋಡ್ ನಲ್ಲಿ ಸುದೀಪ್ ಅವರು ಆಟವಾಡಿದರು. ಮನೆಯಲ್ಲಿ ಯಾರ ಪಾಪದ ಕೊಡ ತುಂಬಿದೆ ಎಂದು ಸುದೀಪ್ ಪ್ರಶ್ನೆ ಮಾಡಿದರು. ಸ್ಪರ್ಧಿಗಳಿಗೆ ಪಾಪದ ಕೊಡ ತುಂಬಿದೆ ಎನಿಸುತ್ತದೆಯೋ ಅವರ ಮುಂದಿರುವ ಖಾಲಿ ಕೊಳದೊಳಗೆ ಕಪ್ಪು ನೀರು ಸುರಿಯಬೇಕಿತ್ತು. ಅಶ್ವಿನಿ, ಸ್ಪಂದನಾ, ಕಾವ್ಯ, ಮಾಳು, ಕೊನೆಗೆ ಗಿಲ್ಲಿ ಅವರುಗಳು ಸಹ ರಜತ್ ಅವರ ಪಾಪದ ಕೊಳ ತುಂಬಿದೆ ಎಂದು ಅವರ ಕೊಳಕ್ಕೆ ನೀರು ಸುರಿದರು.
ಇದನ್ನೂ ಓದಿ:ಬಿಗ್ ಬಾಸ್ ಕನ್ನಡ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಈ ಬಗ್ಗೆ ಮಾತನಾಡಿದ ರಜತ್, ‘ಗಿಲ್ಲಿ ನನಗೆ ಹಾಕಿದ್ದು ಬೇಜಾರಾಯ್ತು, ಕೊಟ್ಟ ಕಾರಣವೂ ಬೇಜಾರು ಎನಿಸಿತು’ ಎಂದರು. ಆದರೆ ಗಿಲ್ಲಿ, ‘ನನ್ನ ಎದುರೇ ರಜತ್ ಅವರು ನನ್ನನ್ನು, ಮನೆಯವರನ್ನು ದಡ್ಡರು ಎಂದು ಕರೆದಿದ್ದಾರೆ’ ಎಂದು ಹೇಳಿದರು. ಬಳಿಕ ರಜತ್, ‘ನನಗೆ ಯಾರು ಈ ಕಪ್ಪು ನೀರು ಹಾಕಿದ್ದಾರೋ ಅವರನ್ನೆಲ್ಲ ಮನೆಗೆ ಕಳಿಸಿಯೇ ನಾನು ಮನೆಯಿಂದ ಹೊರಗೆ ಹೋಗುತ್ತೇನೆ ಎಂದು ಸುದೀಪ್ ಅವರ ಎದುರು ಚಾಲೆಂಜ್ ಮಾಡಿದರು ರಜತ್. ಕೂಡಲೇ ಗಿಲ್ಲಿ ಸಹ, ‘ನಾನು ರಜತ್ ಅವರನ್ನು ಮನೆಗೆ ಕಳಿಸಿದ ಮೇಲೆಯೇ ಈ ಮನೆಯಿಂದ ಹೊರಗೆ ಹೋಗುವುದು’ ಎಂದು ಮರು ಸವಾಲು ಹಾಕಿದರು. ಗಿಲ್ಲಿ ಸವಾಲು ಹಾಕಿದ್ದು ನೋಡಿ ಅಶ್ವಿನಿ ಚಪ್ಪಾಳೆ ತಟ್ಟಿದರು.
ಆ ನಂತರವೂ ಸಹ ಗಿಲ್ಲಿ ಮತ್ತು ರಜತ್ ಅವರ ನಡುವೆ ಚರ್ಚೆ ನಡೆಯುತ್ತಲೇ ಇತ್ತು. ‘ಮನೆಯವರಿಗೆ ಟಾಸ್ಕ್ ಅರ್ಥವಾಗುವುದಿಲ್ಲ ಎಂದು ನಾನು ಹೇಳಿದಾಗ ಗಿಲ್ಲಿಯನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ, ಏಕೆಂದರೆ ಗಿಲ್ಲಿಗೆ ಟಾಸ್ಕ್ ಬರುವುದೇ ಇಲ್ಲ’ ಎಂದು ರಜತ್ ಹೇಳಿದರು. ಅದಕ್ಕೆ ಗಿಲ್ಲಿ, ‘ಆಡಿದ ಹತ್ತರಲ್ಲಿ ಎಂಟು ಟಾಸ್ಕ್ಗಳಲ್ಲಿ ನಾನು ಗೆದ್ದಿದ್ದೇನೆ, ರಜತ್, ಆಡಿದ ಮೊದಲ ಟಾಸ್ಕ್ನಲ್ಲಿ ಒಂದೂ ಸಹ ಬಾಲನ್ನು ಹಾಕಲು ಆಗದೆ ಹೊರಗೆ ಹೋಗಿ ಕುಳಿತುಕೊಂಡೆ ಎಂದು ಕಾಲೆಳೆದರು. ಸಾಮಾನ್ಯವಾಗಿ, ಸುದೀಪ್ ಎದುರೇ ಗಿಲ್ಲಿ, ರಜತ್ಗೆ ಸವಾಲು ಎಸೆದಿದ್ದು ಕುತೂಹಲವನ್ನು ಕೆರಳಿಸಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 10:59 pm, ಭಾನುವಾರ, 14 ಡಿಸೆಂಬರ್ 25