ಮೇಷ ರಾಶಿ:
ಇಂದು ಭೇಟಿಯಾಗುವವರು ಸಿಗದೇ ನಿರಾಶರಾಗುವಿರಿ. ಅಲ್ಪವನ್ನು ಕಳೆದುಕೊಂಡರೂ ಒಳ್ಳೆಯದನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ. ಉದ್ಯೋಗದ ಸ್ಥಳದಲ್ಲಿ ಇಂದು ನಿಮಗೆ ಒಳ್ಳೆಯವರಾಗುವುದೂ ಕಷ್ಟವೆನಿಸುತ್ತದೆ. ಈ ದಿನ ತಂತ್ರಜ್ಞರಿಗೆ ಒತ್ತಡದ ದಿನ ದಿನಾಂಕ. ಅನಿವಾರ್ಯವಾಗಿ ಕಾರ್ಯಗಳನ್ನು ಮಾಡಬೇಕಾಗಬಹುದು. ಆರುವ ಬೆಂಕಿಯನ್ನು ತುಪ್ಪ ಸುರಿದು ಹೆಚ್ಚಿಸುವುದು ಬೇಡ. ನಿಮ್ಮ ಆತ್ಮೀಯವಾದ ಮಾತಿನಿಂದ ಅಪರಿಚಿತರ ಸ್ನೇಹವನ್ನು ಗಳಿಸುವಿರಿ. ಆಕಸ್ಮಿಕವಾಗಿ ಅಪರೂಪದ ವಸ್ತು ಲಾಭವಾಗುವುದು. ದಾಂಪತ್ಯದಲ್ಲಿ ನಂಬಿಕೆ ಹೆಚ್ಚಾಗುವುದು. ಆದಾಯದ ಮೂಲದಲ್ಲಿ ಬದಲಾವಣೆಯಾಗಲಿದೆ. ತೆಗೆದುಕೊಂಡ ಬದಲಾವಣೆಯು ನಿಮ್ಮಿಂದ ಆಗಬಹುದು. ಕೋಪವನ್ನು ಅನ್ಯರ ಮೇಲೆ ಪ್ರದರ್ಶಿಸಿ. ಸೌಂದರ್ಯದಿಂದ ಸ್ತ್ರೀಯರು ಆಕರ್ಷಕವಾಗಿ ಕಾಣುವರು. ಒತ್ತಡದಿಂದ ಹೊರ ಬರಲು ವೃತ್ತಿಯಲ್ಲಿ ವಿರಾಮವನ್ನು ಪಡೆಯುವಿರಿ. ಉಪಕಾರದ ವಿಸ್ಮರಣೆಯಾಗಿ ಪಶ್ಚಾತ್ತಾಪ ಪಡುವಿರಿ. ನಿಮ್ಮ ಬಗ್ಗಯೇ ನೀವು ಹೇಳಿಕೊಳ್ಳುವುದು ಉಚಿತವಾಗದು.
ವೃಷಭ ರಾಶಿ:
ನಿಮ್ಮನ್ನು ಪೂರ್ಣವಾಗಿ ಒಪ್ಪಿಕೊಳ್ಳಲಾರಿರಿ. ಇರುವಂತೆ ಪ್ರೀತಿಯಿಂದ ಹೇಳಿ. ಅದಕ್ಕೆ ಕಾಲು ಬಾಲ ಸೇರಿಸಿ ಮತ್ತೇನನ್ನೋ ಮಾಡುವುದು ಬೇಡ. ನಿಮ್ಮ ಸಾಲ ಕೊಟ್ಟವರು ಪೀಡಿಸುವ ಸಾಧ್ಯತೆ ಇದೆ. ಹೊಸ ಜವಾಬ್ದಾರಿಯ ಬಗ್ಗೆ ಕಾತರರಾಗಿದ್ದಾರೆ. ಯಾರ ಮೇಲೆ ಇಡುವ ವಿಶ್ವಾಸವೂ ನಿಮಗೆ ಸಮಾಧಾನವಾಗದು. ವಿದ್ಯಾರ್ಥಿಗಳು ಓದಿನ ಬಗ್ಗೆ ಗಂಭೀರವಾದ ನಿರ್ಧಾರವನ್ನು ತೆಗೆದುಕೊಳ್ಳುವ ಅವಶ್ಯಕತೆ ಇದೆ. ಬಂಧುಗಳ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ. ನಿಮ್ಮ ಆರೋಗ್ಯದ ಸಮಸ್ಯೆಯನ್ನು ತಳ್ಳಿಹಾಕುವುದು ಬೇಡ. ಗುರಿಯ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು ವಿಫಲತೆಗೆ ಕಾರಣವಾಗುವುದು. ನಿಮ್ಮ ಧೈರ್ಯ ಪ್ರತಿಕೂಲವನ್ನು ತಂದೀತು. ಬರಬೇಕಾದ ಪೂರ್ಣವಾಗಿ ಬಾರದು. ಇಂದು ನಿಮ್ಮ ವೈಯಕ್ತಿಕ ಕಾರ್ಯಗಳನ್ನು ಮಾಡಿ ಮುಗಿಸಲು ಹೆಚ್ಚು ಗಮನಹರಿಸುವಿರಿ.
ಮಿಥುನ ರಾಶಿ:
ನಿಮ್ಮ ತಪ್ಪುಗಳನ್ನು ನಿಮಗೇ ಹೇಳುತ್ತಾರೆ. ಪ್ರತಿಕ್ರಿಯ ಮೇಲೆ ಸ್ವಭಾವ ನಿರ್ಧಾರವಾಗುತ್ತದೆ. ಇಷ್ಟವಿಲ್ಲದಿದ್ದರೂ ಕೆಲವು ಕಾರ್ಯಗಳನ್ನು ಮಾಡಲೇಬೇಕಾಗುವುದು. ದಾಂಪತ್ಯದ ಕಲಹಕ್ಕೆ ಮಾಡಿದರೂ ನಿಮ್ಮ ಮೇಲೆ ಕೆಲವು ಆರೋಪಗಳು ಬರುತ್ತವೆ. ಚರಾಸ್ತಿಯ ವಿಷಯದಲ್ಲಿ ನೀವು ಅಸ್ವತಂತ್ರರಾಗಿರುವಿರಿ. ಮನೆಯ ಕಾರ್ಯದಲ್ಲಿ ನಿಮಗೆ ಒತ್ತಡವು ಅಧಿಕವಾಗಿ ಇರಲಿದೆ. ಯಾವುದೋ ಸಂಸ್ಥೆಯಲ್ಲಿ ಹಣ ಹೂಡಿಕೆಯನ್ನು ಮಾಡಲು ಹೋಗುವಿರಿ. ಕರಕುಶಲ ವ್ಯಾಪಾರಿಗಳಿಗೆ ಅಧಿಕ ಲಾಭವಿದೆ. ಇತರರನ್ನು ನೋಡಿ ಕಲಿಯುವುದು ನಿಮಗಿರುವುದು. ನಿಮ್ಮ ಆಸ್ತಿಗೆ ಸಂಬಂಧಿಸಿದ ಕಾರ್ಯಗಳಿಗೆ ಹೆಚ್ಚು ಚಾಲನೆಯಾಗುವುದು. ಖಾಸಗಿ ವಿಚಾರಗಳನ್ನು ತಿಳಿಯದೇ ಇತರರ ಜೊತೆ ಹಂಚಿಕೊಳ್ಳುವಿರಿ. ನಿಮ್ಮ ಬಗ್ಗೆ ಪ್ರಶಂಸೆಯ ಮಾತುಗಳು ಕೇಳಿಬಂದರೂ ಅದನ್ನು ನಗಣ್ಯ ಮಾಡುತ್ತಾರೆ. ಎಲ್ಲರನ್ನೂ ಮೆಚ್ಚಿಸಿ ನಿಮಗೆ ಕಷ್ಟದ ಕೆಲಸ. ಗೌರವದ ಅಪೇಕ್ಷೆಯು ಇಲ್ಲದಿದ್ದರೂ ನಿಮಗೆ ಸುಕೃತದಿಂದ ಸಿಗುವುದು. ಸ್ನೇಹಿತರ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ.
ಕರ್ಕಾಟಕ ರಾಶಿ:
ನಿರ್ಧರಿಸಿದ ಕಾರ್ಯವನ್ನು ಪೂರ್ಣ ಮಾಡದೇ ನಿಮಗೆ ತೃಪ್ತಿ ಸಿಗದು. ಯಾವುದೋ ಆಲೋಚನೆಯಿಂದ ತಪ್ಪಿನಲ್ಲಿ ಸಿಕ್ಕಿಬೀಳುವ ಸಾಧ್ಯತೆ ಇದೆ. ಇಂದು ನಿಮ್ಮ ಉದ್ಯೋಗವನ್ನು ನಿರ್ವಹಣೆ ಮಾಡುವುದು ಕಷ್ಟವಾದೀತು. ಯಾರಾದರೂ ನಿಮ್ಮನ್ನೇ ಗುರಿ ಮಾಡಿಕೊಳ್ಳಬಹುದು. ಸಹೋದ್ಯೋಗಿಗಳ ಕಾರಣದಿಂದ ನಿಮ್ಮ ಮೇಲೆ ಒತ್ತಡ ನಿರ್ಮಾಣವಾಗಲಿದ್ದು ಎಲ್ಲರ ಜೊತೆ ಕಲಹವನ್ನು ಮಾಡಿಕೊಳ್ಳುವಿರಿ. ಆಸ್ತಿಯ ಬಿಕ್ಕಟ್ಟು ಸಡಿಲವಾಗಬಹುದು. ನಿಮ್ಮ ನಾಯಕತ್ವವನ್ನು ಒಪ್ಪಿಕೊಳ್ಳುವುದು ಕಷ್ಟ. ಹಲವು ದಿನಗಳಿಂದ ನಿರೀಕ್ಷಿಸುತ್ತಿದ್ದ ಘಟನೆಯು ಇಂದು ನಡೆಯುವುದು. ನಿಮ್ಮ ಧಾರ್ಮಿಕ ಶ್ರದ್ಧೆಗೆ ಇನ್ನಷ್ಟು ಬಲ ಬರಲಿದೆ. ನಿಮ್ಮ ನಿಮಗೆ ಸಿಕ್ಕ ಬೆಂಬಲವನ್ನು ಇತರರಿಗೂ ಕೊಡುವ ಮನಸ್ಸು ಮಾಡಿ. ದೈಹಿಕ ಕಸರತ್ತನ್ನು ಮಿತವಾಗಿ ಮಾಡಿ. ಅತಿಯಾದ ಸಲುಗೆಯಿಂದ ನಿಮಗೆ ತೊಂದರೆ ಆಗಬಹುದು. ಆರ್ಥಿಕ ತೊಂದರೆಯನ್ನು ನೀವು ಸಂಗಾತಿಯ ಬಳಿ ಹೇಳಿಕೊಳ್ಳುವುದು ಬೇಡ.
ಸಿಂಹ ರಾಶಿ:
ನೀವು ಇಂದು ಆಧಾರವಿಲ್ಲದೇ ಮಾತನಾಡುವುದು ಬೇಡ. ಅನಿರೀಕ್ಷಿತವಾಗಿ ಬರುವ ಹಣವನ್ನು ಒಪ್ಪಿಕೊಳ್ಳಲಾರಿರಿ. ನಿರಂತರ ಪ್ರಯತ್ನಕ್ಕೆ ಫಲವು ಸಿಗುವುದು. ಇಂದಿನ ತಪ್ಪು ಕಾರ್ಯಗಳಿಗೆ ಆತ್ಮ ಸಾಕ್ಷಿ ಅಡ್ಡ ಬರಬಹುದು. ಸಾಹಿತ್ಯಾಸಕ್ತರಿಗೆ ಕಲಾವಿದರಿಗೆ ಸಮ್ಮಾನಾದಿಗಳು ಸಿಗುವುದು. ಹಿತಶತ್ರುಗಳನ್ನು ನೀವು ದೂರ ಮಾಡಿಕೊಳ್ಳಲಾಗದು. ಉಗುಳಲೂ ನುಂಗಲೂ ಆಗದ ತುಪ್ಪದಂತೆ ಆಗುವುದು. ಅಪರಿಚಿತ ಕರೆಗಳು ಹೆಚ್ಚಾಗುವುದು. ನಿಮ್ಮ ಸ್ವಾಭಿಮಾನಕ್ಕೆ ತೊಂದರೆಯನ್ನು ತಂದುಕೊಳ್ಳಲಾರಿರಿ. ಹಳೆಯ ಸಂಬಂಧವು ಮತ್ತೆ ಚಿಗುರಬಹುದು. ಆಕಸ್ಮಿಕವಾಗಿ ಶುಭ ಸಮಾಚಾರವು ಬರಬಹುದು ಎಂಬ ನಿರೀಕ್ಷೆಯು ಸುಳ್ಳಾಗುವುದು. ನಿಮ್ಮ ಕೈ ನಿಲುಕುವಷ್ಟು ಪ್ರಯತ್ನವನ್ನು ಮಾಡಿ. ಪ್ರಭಾವೀ ವ್ಯಕ್ತಿಗಳ ಕಡೆಯಿಂದ ನಿಮಗೆ ಉದ್ಯೋಗ ಸಿಗುವುದು. ಹಣಕಾಸಿನ ಹರಿವಿನಲ್ಲಿ ಅಲ್ಪ ಹಿನ್ನಡೆಯಾಗಲಿದೆ. ಶ್ರಮಕ್ಕೆ ತಕ್ಕ ಫಲವು ಸಿಗದೇ ಇರುವುದು ನಿಮಗೆ ಚಿಂತೆಯಾಗುವುದು. ಕೃಷಿಯಲ್ಲಿ ಆಸಕ್ತಿ ಇರುವವರು ಹೊಸತನ್ನು ಮಾಡುತ್ತಾರೆ.
ಕನ್ಯಾ ರಾಶಿ:
ಉದ್ಯೋಗದ ಸಮಸ್ಯೆ ಮನೆಯಲ್ಲಿ ಹೇಳಿಕೊಳ್ಳಲಾರಿರಿ. ನಿಯಂತ್ರಣವನ್ನು ತಪ್ಪದೇ ಹೆಜ್ಜೆ ಇಡುವುದು ಕಷ್ಟ. ಹಣಕಾಸಿನ ವ್ಯವಹಾರದಿಂದ ನಿಮಗೆ ಶುಭದಾಯಕ. ಹೊಸ ಯೋಜನೆಗಳು ನಿಮ್ಮನ್ನು ಹಿಡಿದು ಬರಬಹುದು. ಎಂತಹ ನೈಪುಣ್ಯವಿದ್ದರೂ ವ್ಯವಹಾರದಲ್ಲಿ ಒಮ್ಮೆ ಎಚ್ಚರ ತಪ್ಪುವ ಸಾಧ್ಯತೆ ಇದೆ. ನಿಮ್ಮ ಕರ್ಮವೇ ನಿಮಗೆ ಹಿಂದಿರುಗಿ ಬರುವಂತೆ ಕಾಣಿಸುತ್ತದೆ. ನಿಮ್ಮ ಜವಾಬ್ದಾರಿಯ ಕಾರ್ಯಕ್ಕೆ ಕೆಲವು ಅಡೆತಡೆಗಳು ಬರಬಹುದು. ಮನಸ್ಸಿನ ನೋವಿಗೆ ಒಳ್ಳೆಯ ಮದ್ದನ್ನು ಮಾಡಬೇಕಾಗಿದೆ. ವ್ಯಾಪರದಿಂದ ಆದ ಲಾಭವು ನಿಮಗೆ ಹೆಚ್ಚಿನ ಉತ್ಸಾಹವನ್ನು ಹೆಚ್ಚಿಸುವುದು. ಸಹೋದರಿಯ ವಿವಾಹದ ಜವಾಬ್ದಾರಿಯು ಇರಲಿದೆ. ಅಪರಿಚಿತ ಕರೆಗಳಿಂದ ನಿಮಗೆ ಹಿಂಸೆ ಆಗಬಹುದು. ಹಣದ ವಿಚಾರಕ್ಕೆ ದಾಂಪತ್ಯದಲ್ಲಿ ಮುಸುಕಿನ ಗುದ್ದಾಟವು ಇರಲಿದೆ. ಶತ್ರುಗಳ ಜೊತೆ ವ್ಯವಹಾರವನ್ನು ಮಾಡಲು ಕಲಿಯಬೇಕಾಗುವುದು. ನಿಮ್ಮ ಒಪ್ಪಂದ ಪರಿಣಿತರ ಜೊತೆ ಇದ್ದರೆ ಚಂದ. ಇಂದು ಮಾನಸಿಕವಾಗಿ ದುರ್ಬಲರಾದಂತೆ ಕಾಣುವಿರಿ. ಹಣಕಾಸಿನ ವ್ಯವಹಾರದಲ್ಲಿ ಪಾರದರ್ಶಕತೆ ಇದ್ದಷ್ಟು ಉತ್ತಮ.
ತುಲಾ ರಾಶಿ:
ತಪ್ಪುಗಳು ಗೊತ್ತಾಗದೇ ನಡೆದರೆ ಅದನ್ನು ಸರಿಮಾಡಿಕೊಳ್ಳುವ ಪ್ರಯತ್ನವಾಗಲಿ. ತಿಳಿದು ಆಗಿದ್ದರೆ ಕ್ಷಮೆಯಿಂದ ಅಲ್ಲೇ ಮುಕ್ತಾಯ ಮಾಡುವುದು ಉತ್ತಮ. ನೀವು ಹೆಚ್ಚು ಚಲಾವಣೆಯಲ್ಲಿ ಇರಲು ಬಯಸುವಿರಿ. ಮನೆಯ ವ್ಯವಹಾರದಲ್ಲಿ ಗೊಂದಲವಾಗುವುದು. ಹತ್ತಿರದವರನ್ನು ನೀವು ಕಳೆದುಕೊಳ್ಳಬೇಕಾದೀತು. ನಿಮ್ಮ ಮನಸ್ಸಿಗೆ ತೋಚಿದ್ದನ್ನೆಲ್ಲವನ್ನೂ ಹೇಳುವಿರಿ. ತಪ್ಪುಗಳನ್ನು ಸರಿ ಮಾಡಿಯೇ ನಿಮಗೆ ಇಂದಿನ ಶ್ರಮವೆಲ್ಲ ವ್ಯರ್ಥವಾಗುವುದು. ಕಪಟವನ್ನು ನೀವು ಪರೋಕ್ಷವಾಗಿ ನಿಮ್ಮವರ ಮೇಲೆ ಮಾಡುತ್ತೀರಿ. ಸಂಗಾತಿಯ ಇಷ್ಟವನ್ನು ಕೇಳಿ ಅವರಿಗೆ ಸಂತೋಷವನ್ನು ನೀಡುವಿರಿ. ಇಂದು ಹೆಚ್ಚಿನ ಜನರ ಜೊತೆ ಒಡನಾಟ ಮಾಡುವಿರಿ. ಆಸ್ತಿಯ ಕಲಹವನ್ನು ಸರಿ ಮಾಡಿಕೊಳ್ಳಲು ಹಣವನ್ನು ಖರ್ಚು ಮಾಡುವುದು ಅನಿವಾರ್ಯವಾಗಿದೆ. ನಿಮ್ಮೊಳಗೆ ನಕಾರಾತ್ಮಕ ಆಲೋಚನೆಯ ಬೀಜ ಬಿಡಬಹುದು. ಅಸೂಯೆಯಿಂದ ನಿಮ್ಮ ಮನಸ್ಸನ್ನು ಹಾಳು ಮಾಡಿಕೊಳ್ಳುವಿರಿ. ಇಂದು ನಿಮಗೆ ಇಷ್ಟವಿಲ್ಲದವರ ಜೊತೆ ಇಡನಾಡುವಿರಿ.
ವೃಶ್ಚಿಕ ರಾಶಿ:
ಓಡಾಟವೇ ಕಷ್ಟವಾಗುವಷ್ಟು ನಿಮಗೆ ದೇಹ ಭಾರವೆನಿಸುವುದು. ಶ್ರಮದ ಕತ್ತಿಯನ್ನು ಎಲ್ಲರ ಮೇಲೆ ಪ್ರಹಾರ ಮಾಡುವಿರಿ. ನಿಮ್ಮ ವಿವಾಹಕ್ಕೆ ಮನೆಯವರಿಂದ ಒತ್ತಡ ಹೆಚ್ಚಾಗುವುದು. ಮಕ್ಕಳ ವಿಚಾರದಲ್ಲಿ ನೀವು ಅನಾದರ ತೋರುವುದು ಸರಿಯಲ್ಲ. ಇಂದು ಸಹೋದರರ ನಡುವೆ ವಾಗ್ವಾದವು ಅಗಲಿದ್ದು ಹಿರಿಯ ಮಧ್ಯಸ್ತಿಕೆಯಿಂದ ಶಾಂತವಾಗುವುದು. ಶಿಸ್ತಿನಿಂದ ಇಂದಿನ ಕಾರ್ಯವನ್ನು ಮಾಡುವಿರಿ. ನಿಮ್ಮ ಬಗ್ಗೆ ಸುಳ್ಳು ವಿಚಾರವನ್ನು ಹೇಳುತ್ತಾರೆ. ಮಕ್ಕಳ ವಿದ್ಯಾಭ್ಯಾಸದ ವಿಚಾರದಲ್ಲಿ ಅನಾದರ ತೋರುವುದು ಬೇಡ. ನಿಮ್ಮ ಬಗ್ಗೆ ನಿಮಗೇ ಪೂರ್ಣ ಪ್ರಮಾಣದ ನಂಬಿಕೆ ಸಾಲದು. ನೌಕರರಿಂದ ಕೆಟ್ಟ ಹೆಸರು ಬರಬಹುದು. ನೇರ ಮಾತು ಎಲ್ಲ ಜನರಿಗೆ ಪ್ರಯೋಜನಕ್ಕೆ ಬಾರದು. ಮನೆಯಲ್ಲಿ ಹಲವು ನಿರ್ಧಾರಗಳಿಗೆ ಅಸಮಾಧಾನವಾಗಲಿದ್ದು, ವಾಗ್ವಾದ ನಂತರ. ಪ್ರೀತಿಯಿಂದ ಹೇಳಿ ಕೆಲಸವನ್ನು ಮಾಡಿಸಿಕೊಳ್ಳಿ. ಕೈ ತುಂಬ ಕೆಲಸಗಳಿದ್ದರೂ ಯಾವುದನ್ನೂ ಮಾಡುವ ಮನಸ್ಸು ಇರದು. ನೀವು ಇಂದು ಸಣ್ಣ ಅಪಮಾನವನ್ನು ಸಲಿಸಲಾರಿರಿ.
ಧನು ರಾಶಿ:
ನೂತನ ವಿವಾಹಿತರಿಗೆ ಜೀವನ ವಿಚಿತ್ರ ಎನಿಸುವುದು. ಯಾವುದೇ ಮುಜುಗರವಿಲ್ಲದೇ ನಿಮ್ಮನ್ನು ತಡಮಾಡುವಿರಿ. ಆಳ ನೋಡಲು ಯಾರಾದರೂ ನಿಮ್ಮನ್ನೇ ಬಿಡಬಹುದು. ಬಂಧುಗಳ ಒರಟುತನ ನಿಮಗೆ ಇಷ್ಟವಾಗದು. ಉನ್ನತವಾದ ವಿದ್ಯಾಭ್ಯಾಸದ ಕನಸನ್ನು ನೀವು ನನಸು ಮಾಡಿಕೊಳ್ಳುವಿರಿ. ಕೆಲವು ಸವಾಲುಗಳನ್ನು ನೀವು ಎದುರಿಸುವುದು ಅನಿವಾರ್ಯವಾದೀತು. ಮಕ್ಕಳಿಗಾಗಿ ಹಣವನ್ನು ಖರ್ಚು ಮಾಡುವಿರಿ. ಬಂಧುಗಳಿಂದ ಮನೆಯು ತುಂಬಿರುವುದು. ಸಾಮಾಜಿಕ ಗೌರವವನ್ನು ಪಡೆಯುವ ನಿರೀಕ್ಷೆಯು ಹುಸಿಯಾಗುವುದು. ಆಲಸ್ಯದಿಂದ ಈ ದಿನವನ್ನು ಕಳೆಯಿರಿ. ಉನ್ನತಸ್ಥಾನಕ್ಕೆ ಏರಲು ನಿಮಗೆ ಎಲ್ಲ ಮಾರ್ಗಗಳೂ ಮುಚ್ಚಿದಂತೆ ಕಾಣಿಸುವುದು. ಸಣ್ಣ ವಿಚಾರಗಳನ್ನು ಸಿಟ್ಟಾಗುವುದನ್ನು ಕಡಿಮೆ ಮಾಡಿಕೊಳ್ಳಿ. ಸ್ಪರ್ಧೆಗೆ ಬೇಕಾದ ತಯಾರಿ ನಡೆಸಿರಿ. ನಿಮಗೆ ಬೇಕಾದ ಹಣವು ಸರಿಯಾದ ಸಮಯಕ್ಕೆ ಸಿಗದೆ ಆಂತಕವಾಗುವುದು. ಸಂಗಾತಿಯನ್ನು ಸಂತೋಷವಾಗಿ ಇಡಲು ಯಾವುದಾದರೂ ಉಡುಗೊರೆಯನ್ನು ನೀಡುವಿರಿ. ವ್ಯಾಪಾರದಲ್ಲಿ ನಿಮ್ಮ ಆಲೋಚನೆಯು ತಲೆಕೆಳಗಾಗುವುದು.
ಮಕರ ರಾಶಿ:
ಅಪರೂಪದ ವ್ಯಕ್ತಿಗಳ ಮುಖಾಮುಖಿಯಿಂದ ಸಂತಸ. ಇಂದು ನಿಮ್ಮ ಸನ್ನಿವೇಶಗಳು ಹೊಸ ಆಯಾಮವನ್ನು ಸೃಷ್ಟಿಸಬಹುದು. ಉದ್ಯೋಗದ ಸ್ಥಳದಲ್ಲಿ ಸಹೋದ್ಯೋಗಿಗಳಿಂದ ಉತ್ಸಾಹವನ್ನು ಪಡೆದುಕೊಳ್ಳಿ. ಅನಿರೀಕ್ಷಿತ ವಾರ್ತೆಯಿಂದ ನಿಮಗೆ ಕಷ್ಟವಾಗುವುದು. ಸಾಲವನ್ನು ಹಿಂದಿರುಗಿಸಲು ನಿಮ್ಮ ಹೂಡಿಕೆಯನ್ನು ತೆಗೆಯಬೇಕಾಗುವುದು. ಕೆಲವು ವ್ಯವಹಾರದಲ್ಲಿ ನೀವು ಹಿಂದುಳಿದಂತೆ ನಿಮಗೆ ಅರಿವಾಗುವುದು. ಕಛೇರಿಯಲ್ಲಿ ಇಂದು ಹೇಳಿದ್ದಷ್ಟನ್ನು ಮಾತ್ರ ಮಾಡಿ. ಸಾಲದ ನಿರ್ಧಾರವನ್ನು ಗೌಪ್ಯವಾಗಿ ಇಡಿರಿ. ಒಂದೇರೀತಿಯ ಕೆಲಸವು ನಿಮಗೆ ಬೇಸರ ತರಬಹುದು. ಪ್ರೀತಿಯು ಸಪ್ಪೆಯಂತೆ ನಿಮಗೆ ಕಾಣಿಸುವುದು. ಹೊಸ ವಸ್ತುಗಳನ್ನು ಖರೀದಿಸಿ. ಧಾರ್ಮಿಕ ಶ್ರದ್ಧೆಯಿಂದ ಉತ್ತಮವಾದುದನ್ನು ಸಾಧಿಸುವಿರಿ. ಪ್ರೀತಿಯಿಂದ ಹೇಳಿದರೂ ಯಾರೂ ಮಾತು ಕೇಳುವರು. ಮನೆಯ ಕಾರ್ಯದಲ್ಲಿ ನಿಮಗೆ ಒತ್ತಡವು ಅಧಿಕವಾಗಿ ಇರಲಿದೆ. ಯಾವುದೋ ಅಜ್ಞಾತ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಲು ಹೋಗುವಿರಿ.
ಕುಂಭ ರಾಶಿ:
ಹಣ ಅಥವಾ ಸಂಬಳ ಬಿಟ್ಟರೆ ಕಳೆದುಹೋಗುತ್ತದೆ ಎಂದು ಭಾವಿಸಿದ್ದು ಬಿಟ್ಟಾಗಲೇ ನಿಮ್ಮದೇ ಆಗುತ್ತದೆ. ಶಸ್ತ್ರಗಳಿಂದ ದೇಹಕ್ಕೆ ಘಾಸಿಯಾಗಬಹುದು. ಒಳ್ಳೆಯದನ್ನು ಬಿಟ್ಟು ಇರುವುದು ನಿಮಗೆ ಸರಿ ಕಾಣಿಸದು. ಸ್ನೇಹಿತರನ್ನು ದೂರ ಮಾಡಿಕೊಳ್ಳಿ ಒಂಟಿಯಾಗಿ ಇರಲು ಇಚ್ಛಿಸುವಿರಿ.’ ಯಾರ ಮೇಲೂ ಹಗುರವಾದ ಮನೋಭಾವ ಬೇಡ. ಕೆಟ್ಟ ಸನ್ನಿವೇಶವನ್ನು ನೀವು ಅನಿವಾರ್ಯವಾಗಿ ಎದುರಿಸಬೇಕಾಗಬಹುದು. ದೀರ್ಘಕಾಲ ಗೆಳೆತನವು ಮಾತಿನಿಂದ ಒಡೆದುಹೋಗಬಹುದು. ಹೂಡಿಕೆಯ ಬಗ್ಗೆ ನಿಮ್ಮ ಗಮನವು ಹೆಚ್ಚಾಗಿರಲಿದೆ. ಸ್ವಂತ ಕೆಲಸಗಳಿಗೆ ಸಮಯ ಹೊಂದಾಣಿಕೆ ಮಾಡುವುದು ಕಷ್ಟ. ಸಂಗಾತಿಯಿಂದ ನಿಮಗೆ ಯಾವ ಬೆಂಬಲವೂ ಸಿಗದು. ನೀವು ಭದ್ರತೆ ಎಂದುಕೊಂಡಿರುವ ವಿಷಯ ಇಂದು ಅಲುಗಾಡಬಹುದು, ಭಯಪಡಬೇಡಿ. ಅದೇ ನಿಮ್ಮೊಳಗಿನ ನಿಜವಾದ ಸ್ಥೈರ್ಯವನ್ನು ವ್ಯಕ್ತಪಡಿಸುತ್ತದೆ. ಸಹೋದರರು ನಿಮ್ಮ ಕಾರಣಕ್ಕೆ ಪಶ್ಚಾತ್ತಾಪ ಪಡುವರು. ಆರೋಗ್ಯದ ಸ್ಥಿತಿಯು ದೃಢವಾಗಿರಲು ಬೇಕಾದ ಕ್ರಮವನ್ನು ಮಾಡಿರಿ.
ಮೀನ ರಾಶಿ:
ಯಾರೋ ನಿರೀಕ್ಷಿಸಿದ ವ್ಯಕ್ತಿಯಿಂದ ಮಾತು ಬರುತ್ತದೆ. ಅದರಲ್ಲಿ ಉತ್ತರಕ್ಕಿಂತ ಪ್ರಶ್ನೆಯೇ ಹೆಚ್ಚು. ಅದೇ ನಿಮ್ಮ ಮುಂದಿನ ದಿಕ್ಕು. ನಿಮಗೆ ವಿದ್ಯಾಭ್ಯಾಸದಲ್ಲಿ ಆಸಕ್ತಿ ಬಂದಿರುವುದು ಕುಟುಂಬದಲ್ಲಿ ಅಚ್ಚರಿ ತರಿಸುವುದು. ಇಂದು ನಿಮಗೆ ಭೂಮಿಯ ಉತ್ಪನ್ನದಿಂದ ಆದಾಯ ಕಡಿಮೆ ಆಗುವುದು. ನಿಮ್ಮ ಮಾತಿನಿಂದ ನಿಮಗಾಗದವರು ಹುಟ್ಟಿಕೊಳ್ಳುತ್ತಾರೆ. ಮನೆಯ ಕಾರ್ಯದಲ್ಲಿ ಇಂದು ಮಗ್ನರಾಗುವಿರಿ. ನಿಮ್ಮ ಬಗ್ಗಯೇ ನೀವು ಹೇಳಿಕೊಳ್ಳುವುದು ಉಚಿತವಾಗದು. ಸಂಪತ್ತನ್ನು ಗ್ರಹಿಸಿಕೊಂಡು ಇರುವ ರೂಪಿಸಿ. ದಾಂಪತ್ಯದಲ್ಲಿ ಕೆಲವು ವಿಚಾರಗಳಿಗೆ ಮಾತನಾಡದೆ ಸುಮ್ಮನಿರುವುದ ಲೇಸು ಎಂದೆನಿಸಬಹುದು. ನಿಮ್ಮ ಬಂಧುಗಳು ಭೇಟಿ ಮಾಡಿ ಸಮಯವನ್ನು ಹಾಳುಮಾಡುವರು. ತಕ್ಷಣ ನಿರ್ಧಾರಕ್ಕೆ ಹೋಗುವ ಮುನ್ನ ಒಂದು ಕ್ಷಣ ನಿಂತರೆ, ತಪ್ಪಿಸಿಕೊಳ್ಳಬಹುದಾದ ಗೊಂದಲ ತಪ್ಪುತ್ತದೆ. ಮನಸ್ಸು ಬಹಳ ಗೊಂದಲದಲ್ಲಿ ಸಿಕ್ಕಿಕೊಳ್ಳಲಿದೆ. ಮನಸ್ಸನ್ನು ಸ್ವಲ್ಪ ಕಾಲ ಬೇರೆ ಕಾರ್ಯಕ್ಕೆ ಜೋಡಿಸಬೇಕಾಗುವುದು. ಮಿತ್ರರಿಂದ ಆರ್ಥಿಕ ಹೊರೆಯಾಗಬಹುದು.
15 ಡಿಸೆಂಬರ್ 2025 ರ ಸೋಮವಾರದ ಪಂಚಾಂಗ:
ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಕಾರ್ಯಕ್ರಮ : ಹೇಮಂತ, ಚಾಂದ್ರ ಮಾಸ : ಮಾರ್ಗಶೀರ್ಷ, ಸೌರ ಮಾಸ : ವೃಶ್ಚಿಕ, ಮಹಾನಕ್ಷತ್ರ : ಜ್ಯೇಷ್ಠಾ, ವಾರ : ಸೋಮ, ಪಕ್ಷ : ಕೃಷ್ಣ, ತಿಥಿ : ಏಕ ಸೂರ್ಯಾದಶೀ, ನಿತ್ಯನಕ್ಷತ್ರ : ಹಸ್ತಾ, ಯೋಗ : ಪ್ರೀತಿ, –50 ಜಗರ, – 5 ಕರಣ : 4 – 54 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 07:59 – 09:25, ಯಮಗಂಡ ಕಾಲ 10:50 – 12:15, ಗುಳಿಕ ಕಾಲ 13:40 – 15:05
-ಲೋಹಿತ ಹೆಬ್ಬಾರ್ -8762924271 (What’s app ಮಾತ್ರ)