
ಹಾಸನ, ಡಿಸೆಂಬರ್ 15: ಪ್ರೀತಿ ಕುರುಡು ಎನ್ನುತ್ತಾರೆ. ಅದೀಗ ಮತ್ತೆ ಆಗಿದೆ. ಇಂಗ್ಲೆಂಡಿನ ಯುವಕ ಜಾಯ್ ಹಾಗೂ ಬೇಲೂರು ತಾಲೂಕಿನ ಇಬ್ಬೀಡು ಗ್ರಾಮದ ಯುವತಿ ಹೇಮಶ್ರಿ ಪರಸ್ಪರ ಪ್ರೀತಿಸಿ ವಿವಾಹ ಬಂಧನಕ್ಕೆ ಕಾಲಿಟ್ಟ ಅಪರೂಪದ ಕ್ಷಣಕ್ಕೆ ಹಾಸನ ಬೇಲೂರು ತಾಲ್ಲೂಕು ಭಾನುವಾರ ಸಾಕ್ಷಿಯಾಯಿತು. ಕಳೆದ ಕೆಲ ವರ್ಷಗಳಿಂದ ಹೇಮಶ್ರಿ ಇಂಗ್ಲೆಂಡಿನಲ್ಲಿ ಕೆಲಸ ಮಾಡುತ್ತಿದ್ದಳು, ಆಕೆ ಕೆಲಸ ಮಾಡುತ್ತಿದ್ದ ಅದೇ ಕಂಪನಿಯಲ್ಲಿ ಜಾಯ್ ಕೂಡ ಉದ್ಯೋಗದಲ್ಲಿದ್ದಳು. ಸಹೋದ್ಯೋಗಿತನದಿಂದ ಆರಂಭವಾದ ಪರಿಚಯ ಕ್ರಮೇಣ ಪ್ರೀತಿಯಾಗಿ ಬೆಳೆಯಿತು. ತಮ್ಮ ಪ್ರೀತಿಗೆ ಎರಡೂ ಕುಟುಂಬಗಳ ಒಪ್ಪಿಗೆ ಪಡೆದು, ಭಾನುವಾರ ಐತಿಹಾಸಿಕ ಬೇಲೂರಿನಲ್ಲಿ ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ನವದಂಪತಿಗಳು ಕಾಲಿಟ್ಟರು.
ವಿವಾಹ ಸಮಾರಂಭವು ಸಂಪ್ರದಾಯಬದ್ಧವಾಗಿ, ಸಂಭ್ರಮ ಹಾಗೂ ಸಂತಸದಿಂದ. ಜಾಯ್ ಹಾಗೂ ಹೇಮಶ್ರಿಯಾ ದಂಪತಿ ನವದಂಪತಿಗೆ ಆಶೀರ್ವಾದ ನೀಡಿ ಶುಭ ಹಾರೈಸಿದರು. ಈ ಅಪರೂಪದ ವಿವಾಹಕ್ಕೆ ಸಾಕ್ಷಿಯಾಗಿ ಸಂತಸ ಹೊಂದಿದರು.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ