COVID-19 Vaccine: ಯುವಕರ ಹೃದಯಾಘಾತಕ್ಕೆ ಕೊರೊನಾ ಲಸಿಕೆ ಕಾರಣನಾ? AIIMS ವರದಿ ಬಹಿರಂಗ | Delhi Aiims Hospital Study Report Heart Attack Cases Aged 18 To 45 Years Mrq

COVID-19 Vaccine: ಯುವಕರ ಹೃದಯಾಘಾತಕ್ಕೆ ಕೊರೊನಾ ಲಸಿಕೆ ಕಾರಣನಾ? AIIMS ವರದಿ ಬಹಿರಂಗ | Delhi Aiims Hospital Study Report Heart Attack Cases Aged 18 To 45 Years Mrq


14

ಹೃದಯಾಘಾತ

Image Credit : Asianet News

ಹೃದಯಾಘಾತ

14ರಿಂದ 45 ವರ್ಷ ವಯಸ್ಸಿನ ವ್ಯಕ್ತಿಗಳಲ್ಲಿ ಇತ್ತೀಚೆಗೆ ಹೆಚ್ಚಿರುವ ಹೃದಯಾಘಾತಕ್ಕೂ ಕೋವಿಡ್ ಲಸಿಕೆಗೂ ನಂಟಿಲ್ಲ ಎಂದು ದೆಹಲಿ ಏಮ್ಸ್ ಆಸ್ಪತ್ರೆ ಅಧ್ಯಯನ ವರದಿ ಹೇಳಿದೆ. ಕಳೆದ ಎರಡ್ಮೂರು ವರ್ಷಗಳಿಂದ ಚಿಕ್ಕ ವಯಸ್ಸಿನವರಲ್ಲಿಯೇ ಹೃದಯಾಘಾತದ ಹೆಚ್ಚಾಗುತ್ತಿರೋದು ಆತಂಕಕ್ಕೆ ಕಾರಣವಾಗಿತ್ತು.

24

ಹಲವು ಪರೀಕ್ಷೆಗಳು

Image Credit : Getty

ಹಲವು ಪರೀಕ್ಷೆಗಳು

‘ಸಂಶೋಧಕರು ಮೌಖಿಕ ಶವಪರೀಕ್ಷೆ, ಮರಣೋತ್ತರ ಪರೀಕ್ಷೆ, ಸಾಂಪ್ರದಾಯಿಕ ಶವ ಪರೀಕ್ಷೆ ಮತ್ತು ವಿವರವಾದ ಹಿಸ್ಟೋ ಪಾಥೋಲಾಜಿಕಲ್ ಪರೀಕ್ಷೆಗಳನ್ನು ಬಳಸಿಕೊಂಡು 18 ರಿಂದ 45 ವರ್ಷ ವಯಸ್ಸಿನ ಜನರ ಹಠಾತ್ ಸಾವಿನ ಪ್ರಕರಣಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ್ದಾರೆ.

34

ಕೋವಿಡ್ ಲಸಿಕೆ

Image Credit : freepik

ಕೋವಿಡ್ ಲಸಿಕೆ

ಈ ಹಿಂದೆ ಕೋವಿಡ್ ಲಸಿಕೆಗೂ, ಇವರ ಹೃದಯಾ ಘಾತಕ್ಕೂನಂಟಿಲ್ಲ, ಉಸಿರಾಟ ಅಥವಾ ಇತರ ಹೃದಯ ಸಂಬಂಧಿ ಸಮಸ್ಯೆಗಳಿಂದ ಇವರು ಸಾವನ್ನಪ್ಪಿದ್ದಾರೆ ಎಂದು ಗೊತ್ತಾಗಿದೆ’ ಎಂದು ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರೀಸರ್ಚ್‌ನಲ್ಲಿ ಪ್ರಕಟವಾದ ವರದಿ ತಿಳಿಸಿದೆ.

44

 ಕೊರೊನಾ ಮಹಾಮಾರಿ

Image Credit : stockPhoto

ಕೊರೊನಾ ಮಹಾಮಾರಿ

2020ರಲ್ಲಿ ಇಡೀ ಜಗತ್ತನ್ನು ಕೊರೊನಾ ಮಹಾಮಾರಿ ಆವರಿಸಿಕೊಂಡಿತ್ತು. ಈ ಸಂದರ್ಭದಲ್ಲಿ ಭಾರತ ಸರ್ಕಾರ ದೇಶದ ಜನತೆ ಉಚಿತ ಕೋವಿಡ್ ಲಸಿಕೆಯನ್ನು ನೀಡಿತ್ತು. ಈ ಲಸಿಕೆ ಬಳಿಕ ಹಲವು ಚರ್ಚೆಗಳು ನಡೆದಿದ್ದವು. ಇದೀಗ ಏಮ್ಸ್ ವರದಿ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆಯುವ ಕೆಲಸವನ್ನು ಮಾಡಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.



Source link

Leave a Reply

Your email address will not be published. Required fields are marked *