ಆಪ್ಟಿಕಲ್ ಇಲ್ಯೂಷನ್ ಚಿತ್ರ, ಚಿತ್ರ ಕ್ರೆಡಿಟ್ ಮೂಲ: ಸಾಮಾಜಿಕ ಮಾಧ್ಯಮ
ಆಪ್ಟಿಕಲ್ ಇಲ್ಯೂಷನ್ಆಪ್ಟಿಕಲ್ ಇಲ್ಯೂಷನ್) ಚಿತ್ರಗಳು ಕಣ್ಣು ಹಾಗೂ ಮೆದುಳಿಗೆ ಸವಾಲುಗಳನ್ನು ನೀಡುತ್ತವೆ. ಈ ಒಗಟುಗಳನ್ನು ಬಿಡಿಸುವುದು ಸೇರಿದಂತೆ ಇಂತಹ ಸವಾಲಿನ ಆಟಗಳೆಂದರೆ ಎಲ್ಲರಿಗೂ ಇಷ್ಟ. ಆದರೆ ಇಂತಹ ಒಗಟನ್ನು ಬಿಡಿಸುವಾಗ ನಿಮ್ಮ ಬುದ್ಧಿ ಖರ್ಚು. ಆದರೆ ಕೆಲವು ಬಿಡಿಸುವಲ್ಲಿ ವಿಫಲರಾಗಿದ್ದಾರೆ. ಇದೀಗ ವೈರಲ್ ಆಗಿರುವ ಫೋಟೋದಲ್ಲಿ ಎರಡು ಸಂಖ್ಯೆಗಳು ಅಡಗಿದೆ, ನೀವು ಐದು ಸೆಕೆಂಡುಗಳಲ್ಲಿ ಪತ್ತೆ ಹಚ್ಚಬೇಕು. ಈ ಒಗಟು ಬಿಡಿಸಲು ಸಾಧ್ಯವೇ ಎಂದು ಒಮ್ಮೆ ಪ್ರಯತ್ನಿಸಿ ನೋಡಿ.
ಈ ಚಿತ್ರದಲ್ಲಿ ಏನಿದೆ?
ಆಪ್ಟಿಕಲ್ ಇಲ್ಯೂಷನ್ ಚಿತ್ರವು ನಿಮ್ಮ ಐಕ್ಯೂ ಪರೀಕ್ಷೆಯೊಂದಿಗೆ ದೃಷ್ಟಿ ಸಾಮರ್ಥ್ಯವನ್ನು ಪರೀಕ್ಷಿಸುತ್ತದೆ. ಚಲಿಸುತ್ತಿರುವಂತೆ ಕಾಣುವ ಈ ವೃತ್ತಾಕಾರದ ಚಿತ್ರದಲ್ಲಿ ಎರಡು ಸಂಖ್ಯೆಗಳಿವೆ. ಆದರೆ ಕೆಲವು ಜನರು ಈ ಸಂಖ್ಯೆಗಳನ್ನು ಗುರುತಿಸಲು ಸಾಧ್ಯ. ಆದರೆ ನೀವು ನಿರ್ದಿಷ್ಟ ಸಮಯದೊಳಗೆ ಈ ಸಂಖ್ಯೆಯನ್ನು ಗುರುತಿಸಿ, ನಿಮ್ಮ ದೃಷ್ಟಿ ಸಾಮರ್ಥ್ಯವನ್ನು ಪರೀಕ್ಷಿಸಲು ಒಂದೊಳ್ಳೆ ಅವಕಾಶವಿದೆ.
ಇದನ್ನೂ ಓದಿ:ಜಸ್ಟ್ 5 ಸೆಕೆಂಡುಗಳಲ್ಲಿ ಎಲೆಗಳ ನಡುವೆ ಅಡಗಿರುವ 47 ಸಂಖ್ಯೆಯನ್ನು ಗುರುತಿಸಲಾಗಿದೆ
ಈ ಚಿತ್ರದಲ್ಲಿರುವ ಸಂಖ್ಯೆಗಳು ನಿಮ್ಮ ಕಣ್ಣಿಗೆ ಕಾಣಿಸುತ್ತದೆಯೇ?
ನೀವು ಎಷ್ಟು ಹುಡುಕಿದರೂ ಐದು ಸೆಕೆಂಡಿನಲ್ಲಿ ಎರಡು ಸಂಖ್ಯೆಗಳನ್ನು ಹುಡುಕಲು ನಿಮಗೆ ಸಾಧ್ಯವಾಗುತ್ತಿಲ್ಲ. ನಿರ್ದಿಷ್ಟ ಸಮಯ ಮೀರಿ ಹೋದರೂ ನಿಮ್ಮ ಕಣ್ಣಿಗೆ ಸಂಖ್ಯೆಗಳು ಕಾಣಿಸುವುದಿಲ್ಲ. ಈ ಚಿತ್ರವನ್ನು ದೊಡ್ಡದಾಗಿಸಿ ಇಲ್ಲವಾದರೆ ಚಿಕ್ಕದಾಗಿಸಿ. ಹೀಗೆ ಮಾಡಿದರೆ ಸಂಖ್ಯೆಗಳು ನಿಮಗೆ ಕಾಣಿಸುತ್ತವೆ. ಈಗ ಈ ಚಿತ್ರದಲ್ಲಿರುವ ಸಂಖ್ಯೆಗಳನ್ನು ಗುರುತಿಸಲು ನಿಮಗೆ ಸಾಧ್ಯವಾಯಿತು ಎಂದು ನಾವು ಭಾವಿಸುತ್ತೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ