ಬೆಂಗಳೂರು, ಡಿ.15: ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಗಾಳಿಯ ಗುಣಮಟ್ಟದಲ್ಲಿ ವ್ಯಾತ್ಯಾಸ ಕಾಣುತ್ತಿದೆ. ಇತ್ತೀಚೆಗೆ ಅಂದರೆ ಮೂರು-ನಾಲ್ಕು ದಿನಗಳಿಂದ ಗಾಳಿಯ ಗುಣಮಟ್ಟ ಕುಸಿಯುತ್ತಿದೆ. ಬೆಂಗಳೂರಿನ ಜನ ಇಂದು ಕೂಡ ಕಳಪೆ ಗಾಳಿಯ ಗುಣಮಟ್ಟವನ್ನು ಎದುರಿಸುತ್ತಿದ್ದಾರೆ. ಇಂದು ಗಾಳಿಯ ಗುಣಮಟ್ಟ 168ಕ್ಕೆ ಇಳಿದಿದೆ. ಕಳೆದ ಶನಿವಾರ ಗಾಳಿಯ ಗುಣಮಟ್ಟ 206ಕ್ಕೆ ಇಳಿದಿತ್ತು. ಇದು ಬೆಂಗಳೂರಿನಲ್ಲಿ ಇತಿಹಾಸದಲ್ಲೇ ಮೊದಲು ಎಂದು ಹೇಳಲಾಗಿದೆ. ಆದರೆ ಇಂದು ಈ ಗಾಳಿಯ ಗುಣಮಟ್ಟಕ್ಕಿಂತ ಸ್ವಲ್ಪ ಸುಧಾರಿಸಿದೆ. ಈ ಹಿಂದೆ ತಜ್ಞರು ಕೂಡ ಹೇಳಿದ್ರು ಒಂದು ವೇಳೆ ಬೆಂಗಳೂರಿನ ಗಾಳಿಯ ಗುಣಮಟ್ಟ ಹೀಗೆ ಮುಂದುವರಿದರೆ ದೆಹಲಿಯ ಸ್ಥಿತಿ ಬರಬಹುದು. ಇದೀಗ ಇದರ ಜೊತೆಗೆ ಬಳ್ಳಾರಿಯಲ್ಲಿ ಬೆಂಗಳೂರಿಗಿಂತ ಗಾಳಿಯ ಗುಣಮಟ್ಟ 173ಕ್ಕೆ ಇಳಿದಿದೆ. ಬಳ್ಳಾರಿಯಲ್ಲಿ ವಾಯು ಮಾಲಿನ್ಯ ಹಾಗೂ ಕಳಪೆ ರಸ್ತೆಯಿಂದ ಈ ಸ್ಥಿತಿ ಕಂಡು ಬಂದಿದೆ.
ಇಂದು ವಾಯು ಗುಣಮಟ್ಟ ಸೂಚ್ಯಂಕ (AQI) ಸರಿಸುಮಾರು 138 ರಿಂದ 218 ರವರೆಗೆ ಇರುತ್ತದೆ ಎಂದು ಹೇಳಲಾಗಿದೆ. ಇದು ಮಧ್ಯಾಹ್ನದ ಹೊತ್ತಿಗೆ ಬದಲಾಗಬಹುದು. ಸಂಜೆ ಮತ್ತೆ ಅದೇ ಸ್ಥಿತಿಗೆ ಬರುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ. ಸಾಮಾನ್ಯವಾಗಿ ಇದರಿಂದ ಮಕ್ಕಳು ಮತ್ತು ವೃದ್ಧರಿಗೆ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಮನೆಗೆ ಆರೋಗ್ಯ ಮುಂಜಾಗ್ರತೆ ಕ್ರಮಗಳನ್ನು ಅನುಸರಿಸುವಂತೆ ತಜ್ರು ಸಲಹೆ ನೀಡಿ. ಪ್ರಾಥಮಿಕ ಮಾಲಿನ್ಯಕಾರಕಗಳು ಪರ್ಟಿಕ್ಯುಲೇಟ್ ಮ್ಯಾಟರ್ (PM2.5 ಮತ್ತು PM10) ಇದೆ. ಇನ್ನು ರಾಜ್ಯಗಳು WHO ಮಾರ್ಗಸೂಚಿಯನ್ನು ಪಾಲಿಸುವಂತೆ ಹೇಳಿದೆ.
ಇನ್ನು ಈ ಗಾಳಿಯ ಗುಣಮಟ್ಟದಿಂದ ಗಮನಾರ್ಹ ಆರೋಗ್ಯ ಅಪಾಯಗಳನ್ನು ಎದುರಿಸುತ್ತಿದೆ. ಮಕ್ಕಳು, ವೃದ್ಧರು, ಉಸಿರಾಟ ಅಥವಾ ಹೃದಯ ಸಂಬಂಧಿ ಕಾಯಿಲೆ ಇರುವ ಜನರು ಸ್ವಲ್ಪ ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡುತ್ತಾರೆ. ಅಷ್ಟು ಹೊರಗೆ ಹೋಗುವುದನ್ನು ತಪ್ಪಿಸಿ, ಹೊರಗೆ ಹೋಗುವಾಗ ಮಾಸ್ಕ್ ಗಳನ್ನು ಹಾಕಿಕೊಳ್ಳಬೇಕು ಎಂದು ಹೇಳಲಾಗಿದೆ.
ವೈದ್ಯರ ಈ ಸಲಹೆ ಪಾಲಿಸಿ
“ಬೆಂಗಳೂರಿನಲ್ಲಿ ಚಳಿಗಾಲದ ಮಂಜಿನ ವಾತಾವರಣದ ನಡುವೆ ವಾಯುಮಾಲಿನ್ಯವೂ ಹೆಚ್ಚಿರುವುದು ಶ್ವಾಸಕೋಶ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುತ್ತದೆ. ಅವರಿಗೆ ಹೆಚ್ಚಿನ ಅಪಾಯವಿದೆ. ಮುಂಜಾನೆ ಮತ್ತು ಮುಸ್ಸಂಜೆ ಸಮಯದಲ್ಲಿ ಮಂಜಿನ ವಾತಾವರಣದಲ್ಲಿ ಅನಗತ್ಯ ಹೊರಾಂಗಣ ಚಟುವಟಿಕೆಗಳು ಬೇಡ.
ಡಾ. ಪ್ರದೀಪ್ ಹಾರನಹಳ್ಳಿ, ಕನ್ಸಲ್ಟೆಂಟ್ ಇಂಟರ್ವೆನ್ಷನಲ್ ಕಾರ್ಡಿಯಾಲಜಿ, ಮಣಿಪಾಲ ಆಸ್ಪತ್ರೆ ವೈಟ್ ಫೀಲ್ಡ್
ಇದನ್ನೂ ಓದಿ: ಕರ್ನಾಟಕ ಹವಾಮಾನ ವರದಿ: ಬೆಂಗಳೂರಿನಲ್ಲಿ ಚಳಿಯೋ ಚಳಿ! ಬಾಗಲಕೋಟೆಗೆ ಆರೆಂಜ್ ಎಚ್ಚರಿಕೆ
ರಾಜ್ಯದ ಇತರರ ಇಂದಿನ ಗಾಳಿಯ ಗುಣಮಟ್ಟ:
ಬೆಂಗಳೂರು – 168
ಮಂಗಳೂರು – 138
ಮೈಸೂರು – 100
ಬೆಳಗಾವಿ – 168
ಕಲಬುರ್ಗಿ – 99
ಶಿವಮೊಗ್ಗ – 96
ಬಳ್ಳಾರಿ – 173
ಹುಬ್ಬಳ್ಳಿ- 96
ಉಡುಪಿ – 118
ವಿಜಯಪುರ – 115
ಗಾಳಿಯ ಗುಣಮಟ್ಟ ತಿಳಿಯುವುದು ಹೇಗೆ?
ಉತ್ತಮ- 0-50
ಮಧ್ಯಮ – 50-100
ಕಳಪೆ – 100-150
ಅನಾರೋಗ್ಯಕರ – 150-200
ಗಂಭೀರ – 200 – 300
ಅಪಾಯಕಾರಿ – 300 -500+
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ