ಸುದೀಪ್ ಅವರು ಬೇಡಿಕೆಯ ನಟ. ಅವರು ಸಿನಿಮಾ ರಂಗದ ಹಲವು ಕೆಲಸಗಳಲ್ಲಿ ಭಾಗಿ ಆಗುತ್ತಾರೆ. ಅವರು ಎಲ್ಲಾ ಕೆಲಸಗಳನ್ನು ದುಡ್ಡು ಚಾರ್ಜ್ ಮಾಡೋದಿಲ್ಲ. ಕೆಲವರಿಗೆ ಪ್ರೀತಿಗೋಸ್ಕರವೂ ಮಾಡುತ್ತಾರೆ. ಈ ಬಗ್ಗೆ ಅವರು ಮಾತನಾಡಿದ್ದಾರೆ. ‘ಅಶೋಕ್ ಖೇಣಿ ತುಂಬಾ ಒಳ್ಳೆಯ ವ್ಯಕ್ತಿ. ನಾವು ಅವರನ್ನು ಸಂಪಾದಿಸಿದ್ದೇವೆ. ನಾನು ದುಡ್ಡು ತೆಗೆದುಕೊಳ್ಳದೆ ಸಾಕಷ್ಟು ಸಹಾಯ ಮಾಡಿದ್ದೇನೆ. ಸಿಸಿಎಲ್ಗೋಸ್ಕರ ಎರಡು ತಿಂಗಳು ಕೊಡುತ್ತೇನೆ. ಎರಡು ತಿಂಗಳು ಅವರು ನನ್ನನ್ನು ನೋಡಿಕೊಳ್ಳಲು ಸಾಧ್ಯವಿಲ್ಲ. ನಾನು ಸಖತ್ ದುಬಾರಿ. ಹೀಗಾಗಿ, ವಿಷ್ಣುವರ್ಧನ್ ಸಮಾಧಿ ಎಂಬ ವಿಷಯ ಬಂದಾಗ ನಾನು ಅವರಿಂದ ಜಾಗ ತೆಗೆದುಕೊಂಡೆ’ ಎಂದು ಸುದೀಪ್. ಸಿಸಿಎಲ್‌ನಲ್ಲಿ ‘ಕರ್ನಾಟಕ ಬುಲ್ಡೋಜರ್ಸ್’ ತಂಡದ ಒಡೆತನ ಅಶೋಕ್ ಖೇಣಿ ಬಳಿ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.