IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಹರಾಜಿಗಾಗಿ ಕೌಂಟ್ ಡೌನ್ ಶುರುವಾಗಿದೆ. ಮಂಗಳವಾರ (ಡಿ.16) ನಡೆಯಲಿರುವ ಹರಾಜಿನಲ್ಲಿ 359 ಆಟಗಾರರ ಹೆಸರು ಕಾಣಿಸಿಕೊಂಡಿದೆ. ಈ 359 ಆಟಗಾರರಲ್ಲಿ 6 ಮಂದಿಗಾಗಿ ಮೊದಲ ಸುತ್ತಿನಲ್ಲಿ ಬಿಡ್ಡಿಂಗ್. ಅದರಂತೆ ಮೊದಲ ಸೆಟ್ನಲ್ಲಿ ಕಾಣಿಸಿಕೊಂಡಿರುವ 6 ಆಟಗಾರರ ಪಟ್ಟಿ ಈ ಕೆಳಗಿನಂತಿದೆ…
ಡೆವೊನ್ ಕಾನ್ವೆ: ನ್ಯೂಝಿಲೆಂಡ್ ತಂಡ ಎಡಗೈ ದಾಂಡಿಗ ಡೆವೊನ್ ಕಾನ್ವೆ ಕಳೆದ ಸೀಸನ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿದಿದ್ದರು. ಇದಾಗ್ಯೂ ಅವರನ್ನು ಈ ಬಾರಿ ಸಿಎಸ್ಕೆ ರಿಟೈನ್ ಮಾಡಿಕೊಂಡಿಲ್ಲ. ಅದರಂತೆ ಇದೀಗ 2 ಕೋಟಿ ರೂ. ಮೂಲ ಬೆಲೆ ಘೋಷಿರುವ ಕಾನ್ವೆ ಮೊದಲ ಸುತ್ತಿನಲ್ಲೇ ಹರಾಜಾಗಲಿದ್ದಾರೆ.
ಜೇಕ್ ಫ್ರೇಸರ್ ಮೆಕ್ಗುರ್ಕ್: ಆಸ್ಟ್ರೇಲಿಯಾದ ಯುವ ಸ್ಫೋಟಕ ದಾಂಡಿಗ ಐಪಿಎಲ್ 2025 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿದಿದ್ದರು. ಈ ಬಾರಿ ಡಿಸಿ ಬಳಗದಿಂದ ರಿಲೀಸ್ ಆಗಿರುವ ಜೆಕ್ ಫ್ರೆಸರ್ ಮೆಕ್ಗುರ್ಕ್ 2 ಕೋಟಿ ರೂ. ಮೂಲ ಬೆಲೆಯಲ್ಲಿ ಹರಾಜಿನಲ್ಲಿದ್ದು, ಮೊದಲ ಸೆಟ್ನಲ್ಲೇ ಯುವ ದಾಂಡಿಗನಿಗಾಗಿ ಬಿಡ್ಡಿಂಗ್ ಬ್ಯಾಕ್ಸಪ್ಟ್.
ಕ್ಯಾಮರಾನ್ ಗ್ರೀನ್: ಆಸ್ಟ್ರೇಲಿಯಾ ತಂಡದ ಆಲ್ ರೌಂಡರ್ ಕ್ಯಾಮರೋನ್ ಗ್ರೀನ್ 2 ಕೋಟಿ ರೂ. ಮೂಲ ಬೆಲೆಯಲ್ಲಿ ಹರಾಜಿನಲ್ಲಿ ಕಾಣಿಸಿಕೊಂಡಿದ್ದಾರೆ. ಫಿಟ್ನೆಸ್ ಸಮಸ್ಯೆಯ ಕಾರಣ ಕಳೆದ ಸೀಸನ್ ನಿಂದ ಹೊರಗುಳಿದಿದ್ದ ಗ್ರೀನ್ ಅವರ ಖರೀದಿಗೆ ಮೊದಲ ಸುತ್ತಿನಲ್ಲೇ ಭರ್ಜರಿ ಪೈಪೋಟಿ ಕಂಡು ಬರಲಿದೆ.
ಸರ್ಫರಾಝ್ ಖಾನ್: ಭಾರತದ ಬಲಗೈ ದಾಂಡಿಗ ಸರ್ಫರಾಝ್ ಖಾನ್ ಕಳೆದ ಸೀಸನ್ನಲ್ಲಿ ಅನ್ಸೋಲ್ಡ್ ಆಗಿದ್ದರು. ಆದರೆ ಈ ಬಾರಿ ಮೊದಲ ಸುತ್ತಿನಲ್ಲೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅದರಂತೆ 75 ಲಕ್ಷ ರೂ. ಮೂಲ ಬೆಲೆ ಘೋಷಿಸಿರುವ ಸರ್ಫರಾಝ್ಗಾಗಿ ಮೊದಲ ಸುತ್ತಿನಲ್ಲೇ ಬಿಡ್ಡಿಂಗ್ಗಾಗಿ.
ಡೇವಿಡ್ ಮಿಲ್ಲರ್: ಸೌತ್ ಆಫ್ರಿಕಾದ ಸ್ಫೋಟಕ ದಾಂಡಿಗ ಡೇವಿಡ್ ಮಿಲ್ಲರ್ ಐಪಿಎಲ್ 2025 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದರು. ಇದಾಗ್ಯೂ ಎಲ್ ಎಸ್ ಜಿ ಅವರನ್ನು ರಿಟೈನ್ ಮಾಡಿಕೊಂಡಿಲ್ಲ. ಹೀಗಾಗಿ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಮಿಲ್ಲರ್ ಸಹ ಮೊದಲ ಸುತ್ತಿನ ಹರಾಜು ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಪೃಥ್ವಿ ಶಾ: ಟೀಮ್ ಇಂಡಿಯಾ ದಾಂಡಿಗ ಪೃಥ್ವಿ ಶಾ ಕಳೆದ ಸೀಸನ್ನಲ್ಲಿ ಬಿಕರಿಯಾಗದೇ ಉಳಿದಿದ್ದರು. ಈ ಬಾರಿ 75 ಲಕ್ಷ ರೂ. ಮೂಲ ಬೆಲೆಯೊಂದಿಗೆ ಅದೃಷ್ಟ ಪರೀಕ್ಷೆಗೆ ಇಳಿದಿರುವ ಪೃಥ್ವಿ ಶಾ ಕೂಡ ಮೊದಲ ಸುತ್ತಿನ ಹರಾಜು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.






