ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದ ಅರ್ಜುನ್ ರಾಮ್ ಪಾಲ್ ಅವರು ಈಗ ವೈಯಕ್ತಿಕ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಬಾಲಿವುಡ್ ಬ್ಲಾಕ್ ಬಸ್ಟರ್ ಚಿತ್ರ ‘ಧುರಂಧರ’ ಸಿನಿಮಾದಲ್ಲಿ ಅವರು ನಟಿಸಿದ್ದರು. ಈ ಚಿತ್ರ ಹಿಟ್ ಆದ ಬಳಿಕ ಅವರು ಒಂದು ಖುಷಿ ಸುದ್ದಿ ಹಂಚಿಕೊಂಡಿದ್ದಾರೆ. ನಟ ಸುಶಾಂತ್ ಸಿಂಗ್ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿ ಅವರ ಪಾಡ್‌ಕಾಸ್ಟ್‌ನಲ್ಲಿ ಈ ವಿಷಯವನ್ನು ಅವರು ಖಚಿತಪಡಿಸಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ಅರ್ಜುನ್ ರಾಮ್ಪಾಲ್ ಅವರು ಕಳೆದ ಆರು ವರ್ಷಗಳಿಂದ ಗೇಬ್ರಿಯೆಲಾ ಡೆಮೆಟ್ರಿಯಾಡ್ಸ್ ಜೊತೆ ಸುತ್ತಾಡಿದರು. ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರುವ ವಿಷಯವನ್ನು ಅರ್ಜುನ್ ಖಚಿತಪಡಿಸಿದ್ದಾರೆ. ಈ ಶೋನ ಟೀಸರ್ನ ರಿಯಾ ಹಂಚಿಕೊಂಡಿದ್ದಾರೆ. ಇದರಲ್ಲಿ ನಿಶ್ಚಿತಾರ್ಥದ ವಿಷ ಖಚಿಪಡಿಸಿದ್ದಾರೆ. ಆದರೆ, ಇನ್ನೂ ವಿವಾಹ ಆಗಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಗೇಬ್ರಿಯೆಲಾ ಅವರ ವೃತ್ತಿಯಲ್ಲಿ ಫ್ಯಾಷನ್ ಡಿಸೈನರ್.
ಅರ್ಜುನ್ ಅವರು 1998ರಲ್ಲಿ ಮಾಡೆಲ್ ಹಾಗೂ ನಿರ್ಮಾಪಕಿ ಮೆಹರ್ ಜೆಸಿಯಾ ಅವರನ್ನು ವಿವಾಹ ಆದರು. 2018ರಲ್ಲಿ ಇವರ ಸಂಬಂಧ ಕೊನೆಗೆ ಆಯಿತು. ವಿಚ್ಛೇದನದ ಬಳಿಕವೂ ಮಕ್ಕಳಿಗಾಗಿ ಇವರು ಆಗಾಗ ಒಟ್ಟಿಗೆ ಸೇರುತ್ತಿದ್ದರು. 2019ರಲ್ಲಿ ಅರ್ಜುನ್ ಅವರು ಗೇಬ್ರಿಯೆಲಾ ಡೆಮೆಟ್ರಿಯಾಡ್ಸ್ ಜೊತೆ ಸುತ್ತಾಡುತ್ತಿರುವ ಸುದ್ದಿ ಹೊರಬಿತ್ತು. ಈಗ ಅವರೇ ವಿಷಯವನ್ನು ಖಚಿಪಡಿಸಿದ್ದಾರೆ.
ಇನ್ನು, ಇವರ ಅಂತರವೂ ಸಾಕಷ್ಟು ಚರ್ಚೆಗೆ ವಯಸ್ಸಾಗಿದೆ. ಏಕೆಂದರೆ, ಅರ್ಜುನ್ ವಯಸ್ಸು 53, ಗೇಬ್ರಿಯೆಲಾ ಡೆಮೆಟ್ರಿಯಾಡ್ಸ್ 38. ಇವರ ಮಧ್ಯೆ ಸುಮಾರು 15 ವರ್ಷಗಳ ವಯಸ್ಸಿನ ವಯಸ್ಸು ಇದೆ. ಆದರೆ, ಇದು ಇವರ ಪ್ರೀತಿಗೆ ಅಡ್ಡಿ ಆಗಿಲ್ಲ. ಇಷ್ಟು ವರ್ಷ ಇವರ ಸಂಬಂಧದ ಬಗ್ಗೆ ಸುದ್ದಿ ಹಬ್ಬ ಇದ್ದರೂ ಅವರು ಗೌಪ್ಯತೆ ಕಾಪಾಡಿಕೊಂಡು ಬಂದಿದ್ದರು.
ಇದನ್ನೂ ಓದಿ: ಬಾಲಿವುಡ್‌ಗೆ ಎಂಟ್ರಿ ನೀಡಲಿದ್ದಾರೆ ನಟ ಅರ್ಜುನ್ ರಾಮ್‌ಪಾಲ್ ಮೈರಾ
ಅರ್ಜುನ್ ಅವರು ಚಿತ್ರರಂಗಕ್ಕೆ ಬಂದಿದ್ದು 2001ರಲ್ಲಿ. ‘ಪ್ಯಾರ್ ಇಷ್ಕ್ ಔರ್ ಮೊಹಾಬತ್’ ಅವರ ಮೊದಲ ಸಿನಿಮಾ. ವಿಲನ್ ಪಾತ್ರಗಳ ಮೂಲಕ ಅವರು ಹೆಚ್ಚು ಗಮನ ಸೆಳೆದಿದ್ದಾರೆ.’ಓಂ ಶಾಂತಿ ಓಂ’ನಲ್ಲಿ ಅವರು ಮಾಡಿದ ಪಾತ್ರ ಸಾಕಷ್ಟು ಗಮನ ಸೆಳೆದಿತ್ತು. ‘ಧುರಂಧರ’ ಸಿನಿಮಾದಲ್ಲಿ ಮೇಜರ್ ಇಕ್ಬಾಲ್ ಹೆಸರಿನ ಪಾತ್ರ ಮಾಡಿದ್ದಾರೆ.ಈ ಚಿತ್ರ 350 ಕೋಟಿ ರೂಪಾಯಿ ಬಾಚಿಕೊಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.