
ನಮ್ಮ ಜೀವನ ನಿರ್ವಹಣೆಗೆ ಹಣ ಅತ್ಯವಶ್ಯಕ. ಬಹಳಷ್ಟು ಜನರು ಸಾಕಷ್ಟು ಹಣ ಸಂಪಾದಿಸುತ್ತಾರೆ. ಆದರೆ, ವರ್ಷಗಳು ಕಳೆದಂತೆ ಅವರಿಗಿರುವ ಸಂಪತ್ತು (ಸಂಪತ್ತು) ನಿರೀಕ್ಷಿಸಿದಷ್ಟು ಇರುವುದಿಲ್ಲ. ನಿವೃತ್ತಿ ಸಮಯ ಬಂದಾಗ, ಸೇವಿಂಗ್ಸ್ ಇಷ್ಟೆಯಾ ಇರುವುದು ಎಂದು ಪರಿತಪಿಸುತ್ತಾರೆ. ಇನ್ನೂ ಕೆಲವು ನಿವೃತ್ತಿಯಷ್ಟರಲ್ಲಿ ಮೈತುಂಬ ಸಾಲ ಮಾಡಿಕೊಂಡು ಇದ್ದಬದ್ದ ಆಸ್ತಿ ಮಾರಿಕೊಳ್ಳುವ ಪರಿಸ್ಥಿತಿ ಬಂದಿರುತ್ತದೆ. ಹಾಗಾದರೆ, ಜನರು ಹಣಕಾಸು ವಿಚಾರವಾಗಿ ಎಲ್ಲಿ ತಪ್ಪೆಸಗುತ್ತಾರೆ? ಹಣದ ಬಗ್ಗೆ ಜನರಿಗೆ ಪೂರ್ವಗ್ರಹಪೀಡಿತವಾದ ಮತ್ತು ತಪ್ಪಾದ ಆಲೋಚನೆಗಳಿವೆ.
ಫಿಕ್ಸೆಡ್ ಡೆಪಾಸಿಟ್ ನಲ್ಲಿ ಹಣ ಇಟ್ಟರೆ ಸಾಕಾ?
ಹೆಚ್ಚಿನ ಜನರು ತಮ್ಮಲ್ಲಿರುವ ಸೇವಿಂಗ್ಸ್ ಹಣವನ್ನು ಫಿಕ್ಸೆಡ್ ಡೆಪಾಸಿಟ್‌ಗಳಲ್ಲಿ ಇಡಲು ಹೋಗುತ್ತಾರೆ. ಎಫ್ಡಿಗಳಲ್ಲಿ ಆರೇಳು ಪ್ರತಿಶತ ಬಡ್ಡಿ ಮಾತ್ರ ಸಿಗುತ್ತದೆ. ಆದರೆ, ಹಣದುಬ್ಬರವೇ ಶೇ. 5ಕ್ಕಿಂತ ಹೆಚ್ಚಿಗೆ ಹೆಚ್ಚಿನ ಎಫ್‌ಡಿಯಿಂದ ಸಿಗುವ ರಿಟರ್ನ್‌ನಲ್ಲಿ ಮೌಲ್ಯ ವರ್ಧನೆ ಆಗಿಲ್ಲ. ತಮ್ಮ ಉಳಿತಾಯ ಹಣದಲ್ಲಿ ಒಂದು ಭಾಗವನ್ನು ಮಾತ್ರ ಎಫ್‌ಡಿಗೆ ಹಾಕುವುದು ಉತ್ತಮ ಫಲಿತಾಂಶದ ಸಲಹೆ.
ಸಾಲ ಮಾಡಿ ಕೆಟ್ಟರೆ?
ಸಾಲವೆಂದರೆ ಕೆಲವು ಮರುದೂರ ಹಾರುತ್ತಾರೆ. ಆದರೆ, ಸಾಲದಲ್ಲಿ ಒಳ್ಳೆಯ ಸಾಲ, ಕೆಟ್ಟ ಸಾಲ ಎಂದು ವರ್ಗೀಕರಿಸಬಹುದು. ಬಹಳ ಕಡಿಮೆ ಬಡ್ಡಿಗೆ ಸಿಗುವ ಗೋಲ್ಡ್ ಲೋನ್, ಹೋಮ್ ಲೋನ್‌ಗಳು ಒಳ್ಳೆಯ ಸಾಲ. ಬಹಳ ಅಧಿಕ ಬಡ್ಡಿಗೆ ಸಿಗುವ ಸಾಲಗಳು ಕೆಟ್ಟ ಸಾಲ. ನೀವು ಸಾಲದಿಂದ ಯಾವುದಾದರೂ ಬ್ಯುಸಿನೆಸ್‌ಗೆ ಬಳಸುತ್ತಿದ್ದರೆ ಅದು ಉತ್ತಮ ಸಾಲವೇ. ಅನಗತ್ಯ ಮತ್ತು ಲಕ್ಷುರಿ ವಸ್ತುವಿಗೆ ಸಾಲ ಮಾಡಿದರೆ ಅದು ಕೆಟ್ಟ ಸಾಲ.
ಇದನ್ನೂ ಓದಿ: ಮ್ಯೂಚುವಲ್ ಫಂಡ್ ಶುಲ್ಕಗಳು: ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಮುನ್ನ ನೀವು ತಿಳಿಯಬೇಕಾದ ವಿವಿಧ ಶುಲ್ಕಗಳು…
ಚಿನ್ನದ ಒಡವೆ ಖರೀದಿಸುವುದು ಹೂಡಿಕೆಯಾ?
ಕೆಲವರು ತಮ್ಮ ಉಳಿತಾಯದ ಹಣದಲ್ಲಿ ಚಿನ್ನಾಭರಣದಲ್ಲಿ ಹೂಡಿಕೆ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಾರೆ. ಹೂಡಿಕೆಗೆ ಆಭರಣ ಖರೀದಿಸುವುದು ತಪ್ಪು. ಆಭರಣವನ್ನು ಇಷ್ಟಪಟ್ಟು ಧರಿಸುವಂತಿದ್ದರೆ ಮಾತ್ರ ಅದನ್ನು ಖರೀದಿಸಿ. ಹೂಡಿಕೆಗೆಂದು ಆಭರಣ ಖರೀದಿಸುವುದರಿಂದ ಫಲ ಸಿಗದು. ಮೇಕಿಂಗ್ ಚಾರ್ಜಸ್, ವೆಸ್ಟೇಜ್ ಚಾರ್ಜಸ್ ಇತ್ಯಾದಿ ಇರುತ್ತವೆ. ಮಾರುವಾಗಲೂ ಚಿನ್ನ ಆರಿಸಿಕೊಳ್ಳುವುದಿಲ್ಲ.
ಷೇರು ಮಾರುಕಟ್ಟೆ ಜೂಜಾಟವಾ?
ಷೇರು ಹೂಡಿಕೆ ಮಾಡಲು ಹಿಂಜರಿಯುತ್ತಾರೆ. ಅದರಲ್ಲಿ ಹಾಕಿದ ಹಣ ಯಾವಾಗ ಏರುತ್ತದೆ, ಯಾವಾಗ ಇಳಿಯುತ್ತದೆ ಎಂಬುದು ಗೊತ್ತಾಗುವುದಿಲ್ಲ. ಅದೊಂದು ರೀತಿ ಜೂಜಾಟ ಎಂದು ಇವರು ತಪ್ಪು ತಿಳಿದಿರುತ್ತಾರೆ. ಆದರೆ, ಹೂಡಿಕೆಗೆ ಮುನ್ನ ಒಂದಷ್ಟು ಸಾಮಾನ್ಯ ಜ್ಞಾನ ಪಡೆದರೆ ಯಾರು ಬೇಕಾದರೂ ಷೇರುಗಳಲ್ಲಿ ಹೂಡಿಕೆ ಮಾಡಬಹುದು.
ಇನ್ಷೂರೆನ್ಸ್ ಒಂದು ಹೂಡಿಕೆ ಮಾರ್ಗವಾ?
ಇನ್ಶೂರೆನ್ಸ್ ಮತ್ತು ಲೈಫ್ ಪ್ರೊಟೆಕ್ಷನ್ ಮತ್ತು ಇನ್ವೆಸ್ಟ್ಮೆಂಟ್ ಎರಡೂ ಉದ್ದೇಶಕ್ಕಾಗಿ ಬಳಸುವವರು ಇದ್ದಾರೆ. ಇದು ತಪ್ಪು. ಇನ್ಶೂರೆನ್ಸ್ ಮೂಲತಃ ನಿಮಗೆ ಲೈಫ್ ಪ್ರೊಟೆಕ್ಷನ್ ಕೊಡುವ ಉತ್ಪನ್ನ. ಟರ್ಮ್ ಲೈಫ್ ಇನ್ಷೂರೆನ್ಸ್ ಸಾಕು. ಹೂಡಿಕೆಗೆ ಬೇರೆ ಅವಲೋಕಿಸುವುದು ಜಾಣತನ. ಇನ್ಷೂರೆನ್ಸ್ ನಲ್ಲಿ ನೀವು ಹಾಕಿದ ಹಣ ವಾರ್ಷಿಕವಾಗಿ ಬೆಳೆಯುವುದು ಶೇ. 4-5 ಮಾತ್ರ. ಅದರಿಂದ ಹೆಚ್ಚೇನೂ ರಿಟರ್ನ್ ಸಿಗುವುದಿಲ್ಲ ಎಂಬುದು ತಿಳಿದಿರಲಿ.
ಇದನ್ನೂ ಓದಿ: ಅಟಲ್ ಪೆನ್ಷನ್ ಯೋಜನೆ ಪಡೆದ 8 ಕೋಟಿ ಜನರು; ಏನಿದು ಪಿಂಚಣಿ ಸ್ಕೀಮ್? ಎಷ್ಟು ಸಿಗುತ್ತೆ ಲಾಭ?
ಹಣ ಉಳಿತಾಯ ಮಾಡಿದರೆ ಸಾಕಾ?
ಶ್ರೀಮಂತರಾಗಲು ಮೂರು ಅಂಶಗಳಿವೆ. ಹಣ ಗಳಿಕೆ, ಹಣ ಉಳಿಸುವಿಕೆ ಮತ್ತು ಹಣ ಹೂಡಿಕೆ. ಈ ಮೂರೂ ಇದ್ದರೆ ಮಾತ್ರ ಶ್ರೀಮಂತಿಕೆ ಸಾಧಿಸಲು ಸಾಧ್ಯ. ಎಲ್ಲವನ್ನು ಕಡಿತ ಮಾಡಿ ಹಣ ಉಳಿಸುವುದಕ್ಕೆ ವೆಚ್ಚ ಪ್ರಾಧಾನ್ಯತೆ ಕೊಡುತ್ತಾರೆ. ಹೀಗೆ ಉಳಿಸಿಟ್ಟ ಹಣವನ್ನು ಹಾಗೆಯೇ ಬಿಟ್ಟರೆ ಹಣದುಬ್ಬರ ಸವೆತಕ್ಕೆ ಒಳಗಾಗಿ ನಿಜ ಮೌಲ್ಯ ಕಡಿಮೆ ಆಗುತ್ತಾ ಹೋಗುತ್ತದೆ. ಹೀಗಾಗಿ, ಉಳಿಸಿದ ಹಣವನ್ನು ರಿಟರ್ನ್ ತರಬಲ್ಲ ಯಾವುದಾದರೂ ಹೂಡಿಕೆ ಉತ್ಪನ್ನಗಳಿಗೆ ವಿನಿಯೋಗಿಸುವುದು ಉತ್ತಮ.
ಮುಂದೆ ಹೂಡಿಕೆ ಮಾಡಿದರಾಯ್ತು ಎನ್ನುವಿರಾ?
ಬಹಳ ಜನರು ಹಣವನ್ನು ಹೂಡಿಕೆ ಮಾಡಲು ಮೀನಮೇಷ ಎಣಿಸುತ್ತಾರೆ. ತಮ್ಮಲ್ಲಿರುವ ತಾಪತ್ರಯ ನೀಗಿಸಿಕೊಂಡರೆ ಸಾಕು, ಇನ್ನೆಲ್ಲಿ ಹೂಡಿಕೆ ಎಂದು ಪ್ರತೀ ವರ್ಷವೂ ಹೇಳುತ್ತಲೇ ಇರುತ್ತಾರೆ. ಯಾವತ್ತು ಅವರ ತಾಪತ್ರಯ ತಪ್ಪದು, ಹೂಡಿಕೆ ಆಗದು. ಹೀಗಿದ್ದಾಗ ಏನು ಮಾಡಬೇಕು? ಏನಾದರಾಗಲೀ ಸ್ವಲ್ಪವಾದರೂ ಮೊತ್ತವನ್ನು ಹೂಡಿಕೆ ಮಾಡಲು ಆರಂಭಿಸಿ. ನಂತರ, ಅದನ್ನು ಹೆಚ್ಚಿಸುತ್ತಾ ಹೋಗಬಹುದು. ನಿಮ್ಮ ಬೇರೆ ತಾಪತ್ರಯಗಳು ತನ್ನಂತೆ ಸರಿದಾರಿಗೆ ಬರುತ್ತಾ ಹೋಗುತ್ತವೆ ನೋಡುತ್ತಿರಿ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ