Headlines

ಜೀವನದಲ್ಲಿ ಮರೆಯಲಾರದ ಫೆವರೆಟ್​ ದಿನದ ಗುಟ್ಟು ರಿವೀಲ್​ ಮಾಡಿದ ಸುದೀಪ್​: ಯಾರೂ ಊಹಿಸದೇ ಇರುವ ದಿನವಿದು! | Kichcha Sudeep Says Sept 2 Is His Unforgettable Day Because Of His Birth Suc

ಜೀವನದಲ್ಲಿ ಮರೆಯಲಾರದ ಫೆವರೆಟ್​ ದಿನದ ಗುಟ್ಟು ರಿವೀಲ್​ ಮಾಡಿದ ಸುದೀಪ್​: ಯಾರೂ ಊಹಿಸದೇ ಇರುವ ದಿನವಿದು! | Kichcha Sudeep Says Sept 2 Is His Unforgettable Day Because Of His Birth Suc


17

ಮಾರ್ಕ್​ ಚಿತ್ರ

Image Credit : Instagram

ಮಾರ್ಕ್​ ಚಿತ್ರ

ಸದ್ಯ ಕಿಚ್ಚ ಸುದೀಪ್​ ಅಭಿನಯದ ಮಾರ್ಕ್​ ಚಿತ್ರ ಸದ್ದು ಮಾಡುತ್ತಿದೆ. ಈಚೆಗಷ್ಟೇ ಇದರ ಟ್ರೈಲರ್​ ಬಿಡುಗಡೆಯಾಗಿದೆ. ಚಿತ್ರವು ಇದೇ 25ರಿಂದ ವಿವಿಧ ಥಿಯೇಟರ್​ಗಳಲ್ಲಿ ಬಿಡುಗಡೆಯಾಗಲಿದೆ.

27

ಮಾರ್ಕಂಡೆಯ ಅವತಾರದಲ್ಲಿ

Image Credit : Asianet News

ಮಾರ್ಕಂಡೆಯ ಅವತಾರದಲ್ಲಿ

ಸತ್ಯಜ್ಯೋತಿ ಫಿಲ್ಮ್ಸ್ ಹಾಗೂ ಕಿಚ್ಚ ಕ್ರಿಯೇಷನ್ಸ್ ಜಂಟಿಯಾಗಿ ‘ಮಾರ್ಕ್’ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ಚಿತ್ರ ವಿತರಣೆಗೆ ಮಾಡುತ್ತಿದೆ. ಖಡಕ್ ಪೊಲೀಸ್ ಆಫೀಸರ್ ಅಜಯ್ ಮಾರ್ಕಂಡೆಯ ಅವತಾರದಲ್ಲಿ ಸುದೀಪ್ ಕಾಣಿಸಿಕೊಂಡಿದ್ದಾರೆ.ಅಜನೀಶ್ ಲೋಕನಾಥ್ ಅವರು ‘ಮಾರ್ಕ್’ ಸಿನಿಮಾಗೆ ಸಂಗೀತ ನೀಡಿದ್ದಾರೆ.

37

ದಾಖಲೆ ಬರೆದ ಟ್ರೈಲರ್​

Image Credit : Asianet News

ದಾಖಲೆ ಬರೆದ ಟ್ರೈಲರ್​

ಇದಾಗಲೇ ಈ ಚಿತ್ರ ಭಾರಿ ಸದ್ದು ಮಾಡುತ್ತಿದೆ. ಒಂದೇ ದಿನದಲ್ಲಿ ದಾಖಲೆಯನ್ನು ಬರೆದಿದೆ ಮಾರ್ಕ್​ ಟ್ರೈಲರ್​ (Kichcha Sudeeps’ Mark Trailer). ಮಾರ್ಕ್’ ಟ್ರೈಲರ್ ಬಿಡುಗಡೆಯಾದ ಮೊದಲ 7 ಗಂಟೆಗಳಲ್ಲಿ ಸುಮಾರು 1 ಕೋಟಿ 30 ಲಕ್ಷ views ಆಗಿತ್ತು. ಬಳಿಕ ಮೊದಲ 24 ಗಂಟೆಗಳಲ್ಲಿ 1 ಕೋಟಿ 40 ಲಕ್ಷ ವೀಕ್ಷಣೆ ಗಳಿಸಿದೆ. ಈ ಮೂಲಕ ದಾಖಲೆ ಮಾಡಿದೆ.

47

ಬದುಕಿನ ಮಹತ್ವದ ದಿನ

Image Credit : Social Media

ಬದುಕಿನ ಮಹತ್ವದ ದಿನ

ಇದೀಗ ಸುದೀಪ್​ ಅವರು ತಮ್ಮ ಬದುಕಿನ ಹಲವು ವಿಷಯಗಳನ್ನು ಮಾಧ್ಯಮಗಳ ಮುಂದೆ ತೆರೆದಿಟ್ಟಿದ್ದಾರೆ. ಅದರಲ್ಲಿ ಒಂದು ತಮ್ಮ ಜೀವನದ ಅತಿ ಮುಖ್ಯವಾಗಿರುವ ಆ ಒಂದು ದಿನದ ಬಗ್ಗೆ ಅವರು ಮಾತನಾಡಿದ್ದಾರೆ.

57

ಒಬ್ಬೊಬ್ಬರು ಒಂದೊಂದು ದಿನ

Image Credit : Social Media

ಒಬ್ಬೊಬ್ಬರು ಒಂದೊಂದು ದಿನ

ಸಾಮಾನ್ಯವಾಗಿ ಜನರು ಅದರಲ್ಲಿಯೂ ಸೆಲೆಬ್ರಿಟಿಗಳು ಮರೆಯಲಾಗದ ದಿನ ಅಥವಾ ಮುಖ್ಯವಾದ ದಿನದ ಬಗ್ಗೆ ಹೇಳಿ ಎಂದಾಗ ತಾವು ಸಕ್ಸಸ್​ ಕಂಡ ದಿನದ ಬಗ್ಗೆ ಹೇಳುತ್ತಾರೆ ಇಲ್ಲವೇ ಮದುವೆಯಾದ ದಿನದ ಬಗ್ಗೆ ಹೇಳುತ್ತಾರೆ. ಇನ್ನು ಸಿನಿಮಾ ತಾರೆಯರಾದರೆ ತಮಗೆ ಸಿನಿಮಾದಲ್ಲಿ ಎಂಟ್ರಿ ಸಿಕ್ಕ ದಿನ ಇಲ್ಲವೇ ಮೊದಲ ಸಿನಿಮಾ ಹಿಟ್​ ಆದ ದಿನದ ಬಗ್ಗೆ ಮಾತನಾಡಬಹುದು.

67

ಕುತೂಹಲದ ದಿನ

Image Credit : Colors Kannada

ಕುತೂಹಲದ ದಿನ

ಆದರೆ ಕಿಚ್ಚ ಸುದೀಪ್​ ಅವರು ಇದ್ಯಾವುದೂ ಅಲ್ಲದೇ ಕುತೂಹಲದ ದಿನದ ಬಗ್ಗೆ ಮಾತನಾಡಿದ್ದಾರೆ. ಆ ದಿನವೇ ಸೆಪ್ಟೆಂಬರ್​ 2. ಇದಕ್ಕೆ ಕಾರಣವೂ ಇದೆ. ಅದೇನೆಂದರೆ ಸುದೀಪ್​ ಫ್ಯಾನ್ಸ್​ಗೆ ತಿಳಿದಿರುವಂತೆ ಸೆಪ್ಟೆಂಬರ್​ 2 ಸುದೀಪ್​ ಅವರ ಜನುಮದಿನ.

77

ಏನಾಗಿತ್ತೋ ಗೊತ್ತಿಲ್ಲ

Image Credit : Colors Kannada

ಏನಾಗಿತ್ತೋ ಗೊತ್ತಿಲ್ಲ

ತಮ್ಮ ಬದುಕಿನ ಅತ್ಯಂತ ಮಹತ್ವದ ದಿನ ಜನ್ಮದಿನ. ಆ ದಿನದ ಹಿಂದೆ ಏನಾಗಿತ್ತೋ ನನಗೆ ಗೊತ್ತಿಲ್ಲ, ಆ ದಿನದಿಂದಲೇ ಈ ಜರ್ನಿ ಶುರುವಾಗಿದ್ದು, ಇಲ್ಲಿಯವರೆಗೆ ಬೆಳೆದು ಬಂದಿದ್ದು. ಆದ್ದರಿಂದ ಆ ದಿನ ನನ್ನ ಬಾಳಿನಲ್ಲಿ ಅತ್ಯಂತ ಮಹತ್ವದ ದಿನ ಎಂದು ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.



Source link

Leave a Reply

Your email address will not be published. Required fields are marked *