Headlines

Video: ಗೋಲ್ಗಪ್ಪಾ ಸವಿದು ಮುದ್ದಾಗಿ ರಿಯಾಕ್ಷನ್ ಕೊಟ್ಟ ವಿದೇಶಿ ಮಹಿಳೆ

Video: ಗೋಲ್ಗಪ್ಪಾ ಸವಿದು ಮುದ್ದಾಗಿ ರಿಯಾಕ್ಷನ್ ಕೊಟ್ಟ ವಿದೇಶಿ ಮಹಿಳೆ


ಚಾಟ್ಸ್ (ಚಾಟ್‌ಗಳು) ಅಂತ ಬಂದಾಗ ಪಾನಿಪುರಿ, ಮಸಾಲ್‌ಪುರಿ, ಸೇವ್‌ ಪುರಿ, ಡೈ ಪುರಿ ಹೀಗೆ ಪಟ್ಟಿ ದೊಡ್ಡದಾಗುತ್ತಾ ಹೋಗುತ್ತದೆ. ಆದರೆ ಕೂಡ ಒಂದು ನೆಚ್ಚಿನ ಬೀದಿಬದಿ ಆಹಾರಗಳಲ್ಲಿ ಗೋಲ್ಗಪ್ಪಾ. ಈ ಚಾಟ್ಸ್ ಇದೀಗ ವಿದೇಶಿಗರ ಹೃದಯ ಗೆಲ್ಲಲು ಪ್ರಾರಂಭಿಸಿದೆ. ವಿದೇಶಿ ಮಹಿಳೆಯೂ (ವಿದೇಶಿ ಮಹಿಳೆ) ಗರಿಗರಿಯಾದ, ಮಸಾಲೆಯುಕ್ತ ಗೋಲ್ಗಪ್ಪಾ ಸವಿದು, ಇದರ ರುಚಿಗೆ ಫಿದಾ ಆಗಿದ್ದಾರೆ. ವಿದೇಶಿ ಮಹಿಳೆಯೂ ಗೋಲ್ಗಪ್ಪ ಸವಿದ ಬಳಿಕ ಕೊಟ್ಟ ರಿಯಾಕ್ಷನ್ ನೆಟ್ಟಿಗರ ಗಮನ ಸೆಳೆದಿದೆ.

@vera__india ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವಿದೇಶಿ ಮಹಿಳೆ ಮದುವೆ ಅಥವಾ ಇನ್ಯಾವುದೋ ಸಮಾರಂಭದಲ್ಲಿ ಭಾಗಿಯಾದಂತೆ ಕಾಣುತ್ತಿದೆ. ನೀಲಿ ಬಣ್ಣದ ಸೀರೆ ಉಟ್ಟಿದ್ದು, ಅದಕ್ಕೆ ಸರಿಹೊಂದುವ ಜ್ಯುವೆಲ್ಲರಿ ಧರಿಸಿರುವುದು ಕಂಡುಬರುತ್ತದೆ. ಕೈಯಲ್ಲಿ ತಟ್ಟೆಯನ್ನು ಹಿಡಿದುಕೊಂಡು ಇದೇನು ಎಂದು ವಿಡಿಯೋ ಮಾಡುತ್ತಿರುವ ವ್ಯಕ್ತಿಯ ಬಳಿ ಕೇಳುತ್ತಾನೆ. ಈ ವ್ಯಕ್ತಿ ಗೋಲ್ಗಪ್ಪಾ ಎಂದು ಹೇಳುವುದನ್ನು ಕಾಣಬಹುದು. ತದನಂತರದಲ್ಲಿ ಈ ವಿದೇಶಿ ಮಹಿಳೆ ಗೋಲ್ಗಪ್ಪಾ ಸವಿದು ನೃತ್ಯ ಮಾಡುವ ಮೂಲಕ ಮುದ್ದಾಗಿ ರಿಯಾಕ್ಷನ್ ನೀಡುವುದನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:ಬಾಯಿ ಚಪ್ಪರಿಸಿಕೊಂಡು ಪಾನಿ ಪುರಿ ಸವಿದ ಕೊರಿಯನ್ ಪುಟಾಣಿಗಳು

ಈ ವಿಡಿಯೋ ಹದಿನಾಲ್ಕು ಲಕ್ಷ ವೀಕ್ಷಣೆಗಳು ಇವೆ. ಒಬ್ಬ ಬಳಕೆದಾರ ಈ ಮಹಿಳೆ ಒಂದು ಕ್ಷಣ ನಿದ್ದೆ ಮಾಡಿದ್ದಂತೆ ಕಂಡಳು. ಇತರರು, ಗೋಲ್ಗಪ್ಪಾ ರುಚಿಗೆ ವಿದೇಶಿಗರು ಫುಲ್ ಫಿದಾ ಆಗಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಈ ಹುಡುಗಿಯರು ಊಟ ಮಾಡುವಾಗ ತಲೆ ಅಲ್ಲಾಡಿಸಿದರೆ ಊಟ ಚೆನ್ನಾಗಿದೆ ಎಂದರ್ಥ ಎಂದು ಹೇಳಿದರು.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 1:27 pm, ಸೋಮ, 15 ಡಿಸೆಂಬರ್ 25





Source link

Leave a Reply

Your email address will not be published. Required fields are marked *