Headlines

Chanakya Niti: ಮನೆಯ ಶಾಂತಿಗೆ ಭಂಗ ತರಬಹುದು ಮಹಿಳೆಯರ ಈ ಅಭ್ಯಾಸಗಳು

Chanakya Niti: ಮನೆಯ ಶಾಂತಿಗೆ ಭಂಗ ತರಬಹುದು ಮಹಿಳೆಯರ ಈ ಅಭ್ಯಾಸಗಳು


ಹೆಣ್ಣು (ಮಹಿಳೆಯರು) ಮನೆಯ ಕಣ್ಣು, ಗಂಡ, ಮಕ್ಕಳು, ಮನೆ, ಕುಟುಂಬವನ್ನು ನಿಭಾಯಿಸುವಲ್ಲಿ ಅವಳ ಪಾತ್ರ ಮಹತ್ತರವಾದದ್ದು. ಆಕೆಯ ಜ್ಞಾನ, ತಿಳಿಯುವ, ಗುಣ ನಡವಳಿಕೆಯ ಆಧಾರದ ಮೇಲೆ ಆಕೆಯ ಇಡಿ ಕುಟುಂಬ ನಿಂತಿದೆ, ಆಕೆಯ ಗುಣ ನಡವಳಿಕೆಗಳು ಮನೆಯ ಮೇಲೆ ಸಾಕಷ್ಟು ಪರಿಣಾಮ ಬೀರಿದೆ ಎಂದು ಆಚಾರ್ಯ ಚಾಣಕ್. ಹೌದು ಗಂಡಸರು ಮಾಡುವ ಸಾಲ, ಅನೈತಿಕ ಸಂಬಂಧ, ದುಂದು ವೆಚ್ಚಗಳು ಕುಟುಂಬದ ನೆಮ್ಮದಿಯನ್ನು ಹಾಳು ಮಾಡುವಂತೆ, ಮಹಿಳೆಯರು ಈ ಕೆಲವು ಅಭ್ಯಾಸಗಳು ಸಹ ಮನೆಯ ಶಾಂತಿ, ನೆಮ್ಮದಿ ಹಾಳಾಗಲು ಮುಖ್ಯ ಕಾರಣವಂತೆ. ಮನೆಯ ಶಾಂತಿಗೆ ತರುವ ಮಹಿಳೆಯರ ಆ ಅಭ್ಯಾಸಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಮನೆಯ ನೆಮ್ಮದಿಯನ್ನು ಹಾಳು ಮಾಡುವ ಮಹಿಳೆಯರ ಈ ಅಭ್ಯಾಸ:

ಅನಗತ್ಯ ಖರ್ಚು: ಅನಗತ್ಯ ಖರ್ಚು ಶ್ರೀಮಂತ ವ್ಯಕ್ತಿಯನ್ನು ಸಹ ಬಡವನನ್ನಾಗಿ ಮಾಡಬಹುದು. ಅದೇ ರೀತಿ ಮಹಿಳೆ ಅನಗತ್ಯವಾಗಿ ಖರ್ಚು ಮಾಡುವ ಅಭ್ಯಾಸವನ್ನು, ಆಕೆಯ ಮನೆಯಲ್ಲಿ ಹಣ ಎಂದಿಗೂ ಉಳಿಯುವುದಿಲ್ಲ. ಇದರಿಂದ ಕುಟುಂಬವು ಆರ್ಥಿಕ ಸಂಕಷ್ಟದಲ್ಲಿ ಸಿಲುಕುವ ಸಾಧ್ಯತೆ ಇರುತ್ತದೆ.

ಟೀಕಿಸುವ ಮತ್ತು ತಪ್ಪುಗಳನ್ನು ಹುಡುಕುವ ಅಭ್ಯಾಸ: ಇತರರನ್ನು ಟೀಕಿಸುವ ಮತ್ತು ತಪ್ಪುಗಳನ್ನು ಹುಡುಕುವ ಅಭ್ಯಾಸ ಹೊಂದಿರುವ ಮಹಿಳೆಯಿಂದಲೂ ಕುಟುಂಬದ ನೆಮ್ಮದಿ ಹಾಳಾಗುತ್ತದೆ ಎನ್ನುತ್ತಾರೆ ಚಾಣಕ್ಯ. ಈ ಅಭ್ಯಾಸದಿಂಸ ಆಕೆಯ ಸಾಮಾಜಿಕ ಸ್ಥಾನಮಾನ ಕುಸಿಯುತ್ತದೆ, ಇದು ಕುಟುಂಬದೊಳಗೆ ಎರಡು ಬಾರಿ ಘರ್ಷಣೆಗಳು ಮತ್ತು ಕಲಹಗಳಿಗೆ ಕಾರಣವಾಯಿತು. ಸಂಬಂಧಗಳು ಹದಗೆಡುತ್ತವೆ. ಮತ್ತು ಗಂಡನ ಆದಾಯವನ್ನು ಕಡಿಮೆ ಅಂದಾಜು ಮಾಡುವ ಅಭ್ಯಾಸವು ಮನೆಯ ಶಾಂತಿ, ಸಂತೋಷ ಮತ್ತು ಸಮೃದ್ಧಿಯನ್ನು ಹಾಳು ಮಾಡುತ್ತದೆ.

ಅಹಂಕಾರ: ಅಹಂಕಾರವು ಯಾವಾಗಲೂ ಒಳ್ಳೆಯದಲ್ಲ ಎನ್ನುತ್ತಾರೆ ಆಚಾರ್ಯ ಚಾಣಕ್ಯ. ಅದರಲ್ಲೂ ಮಹಿಳೆ ಯಾವಾಗಲೂ ಹಣ, ಸೌಂದರ್ಯ, ಮನೆಯ ವಿಷಯದಲ್ಲಿ ಅಹಂಕಾರ ಪಡಬಾರದು. ಅಹಂ ಭಾವನೆ ಇಡೀ ಕುಟುಂಬದ ಮೇಲೆ ಪರಿಣಾಮ. ಜೊತೆಗೆ ಈ ಅಹಂಕಾರವು ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧವನ್ನು ಸಹ ಹಾಳುಮಾಡುತ್ತದೆ ಮತ್ತು ಈ ಕೆಟ್ಟ ಅಭ್ಯಾಸವು ದಾಂಪತ್ಯ ಜೀವನಕ್ಕೆ ತುಂಬಾ ಹಾನಿಕಾರಕವಾಗಿದೆ.

ಇದನ್ನೂ ಓದಿ: ಪುರುಷರಲ್ಲಿ ಅಭ್ಯಾಸಗಳಿದ್ದರೆ, ಮನೆ ನೆಮ್ಮದಿಯೇ ಹಾಳಾಗುತ್ತದೆ ಎನ್ನುತ್ತಾರೆ ಚಾಣಕ್ಯ

ಜಗಳವಾಡುವ ಅಭ್ಯಾಸ: ಜಗಳಗಂಟಿ ಮಹಿಳೆ ತಾನು ಸಂತೋಷವಾಗಿರುವುದಿಲ್ಲ, ಇತರರನ್ನೂ ಸಂತೋಷವಾಗಿರಲು ಬಿಡುವುದಿಲ್ಲ. ಇಂತಹ ಮಹಿಳೆಯ ಮನೆಯಲ್ಲಿ ಯಾವಾಗಲೂ ನಕಾರಾತ್ಮಕತೆ ತುಂಬಿರುತ್ತದೆ, ಕುಟುಂಬದ ನೆಮ್ಮದಿಯೇ ಹಾಳಾಗುತ್ತದೆ. ಜೊತೆಗೆ ಇಂತಹ ಮನೆಯಲ್ಲಿ ಲಕ್ಷ್ಮಿ ದೇವಿ ಎಂದಿಗೂ ವಾಸಿಸುವುದಿಲ್ಲ, ಮನೆ ಸಮೃದ್ಧಿಯೂ ಆಗುವುದಿಲ್ಲ ಎನ್ನುತ್ತಾರೆ ಆಚಾರ್ಯ ಚಾಣಕ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *