ಬೆಂಗಳೂರು,ಡಿ.15: ಬೆಂಗಳೂರಿನ ನಮ್ಮ ಮೆಟ್ರೋ (ನಮ್ಮ ಮೆಟ್ರೋ) ಹಾಗೂ ಉಬರ್ ಪ್ರಯಾಣಿಕರಿಗೆ ಪ್ರಯಾಣ ಸುಲಭಗೊಳಿಸಲು ಹೊಸ ತಂತ್ರಜ್ಞಾನ ಬರಲಿದೆ. ಹೌದು ಇನ್ಮುಂದೆ ಮೆಟ್ರೋ ಟಿಕೆಟ್‌ಗಳನ್ನು ನೇರವಾಗಿ ಉಬರ್ ಅಪ್ಲಿಕೇಶನ್ ಮೂಲಕ ಖರೀದಿಸಬಹುದು. ಮೂಲಕ ಬೆಂಗಳೂರಿನಲ್ಲಿ ಕಲಿಯುವುದು ಈಗ ಸ್ವಲ್ಪ ಸುಲಭ. ಟ್ರಾಫಿಕ್‌ನಿಂದ ತಪ್ಪಿಸಿಕೊಳ್ಳಲು ಹಾಗೂ ರೈಡ್-ಹೇಲಿಂಗ್ ಪ್ಲಾಟ್‌ಫಾರ್ಮ್ ಕ್ಯಾಬ್ ಅನ್ನು ಸರಳೀಕರಿಸಲು, ದೈನಂದಿನ ಪ್ರಯಾಣದ ತೊಂದರೆಗಳನ್ನು ಕಡಿಮೆ ಮಾಡಲು ಈ ಹೆಜ್ಜೆಯನ್ನು ಇಡಲಾಗಿದೆ. ಜೊತೆಗೆ ಮೆಟ್ರೋ ಪ್ರಯಾಣಿಕರು ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಗಾಗಿ ಕಾಯುವ ಅವಶ್ಯಕತೆ ಇರುವುದಿಲ್ಲ. ಅಪ್ಲಿಕೇಶನ್ಗಳನ್ನು ಬದಲಾಯಿಸುವುದು ಬೇಡ. UPI ಪಾವತಿಗಳನ್ನು ಉಬರ್‌ನಲ್ಲಿ ಟಿಕೆಟ್ ಬುಕ್ ಮಾಡಬಹುದು ಎಂದು ಹೇಳಲಾಗಿದೆ.
ಇದು ಮೆಟ್ರೋ ಟಿಕೆಟ್ ಖರೀದಿಯನ್ನು ಇನ್ನಷ್ಟು ಸುಲಭಗೊಳಿಸುತ್ತದೆ. ಟಿಕೆಟ್‌ಗಳ ಜೊತೆಗೆ, ಈ ಅಪ್ಲಿಕೇಶನ್ ಮೆಟ್ರೋ ಬರುವ ಸಮಯವನ್ನು ಕೂಡ ಇದು ತಿಳಿಸುತ್ತದೆ. ಜೊತೆಗೆ ಪ್ರಯಾಣಿಕರ ಸೇವೆಗಳನ್ನು ಟ್ರ್ಯಾಕ್ ಮಾಡಲು ಮತ್ತು ಅವರ ಪ್ರಯಾಣವನ್ನು ಯೋಜಿಸಲು ಸಹಾಯ ಮಾಡುತ್ತದೆ. ಇನ್ನು ಉಬರ್ ಬೆಂಗಳೂರಿನಲ್ಲಿ ಉಬರ್ ಡೈರೆಕ್ಟ್ ಅನ್ನು ಪ್ರಾರಂಭಿಸಿದೆ. ಇದು ವ್ಯವಹಾರ ನಡೆಸಬಹುದಾದ ಸ್ಥಳಗಳನ್ನು ತಿಳಿಸುತ್ತದೆ. ಓಪನ್ ನೆಟ್ ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ONDC) ಜೊತೆಗೆ ಇದನ್ನು ಅಳವಡಿಸಲಾಗಿದೆ. ಈ ಮೂಲಕ ದಿನಸಿ ಖರೀದಿ ಅಥವಾ ಉತ್ತಮ ಮಾರುಕಟ್ಟೆಗಳ ಬಗ್ಗೆಯೂ ಇದು ತಿಳಿಸುತ್ತದೆ.
ಉಬರ್ ಆಪ್ ನಲ್ಲಿ ನಮ್ಮ ಮೆಟ್ರೋ ಟಿಕೆಟ್ ಬುಕ್ ಮಾಡುವುದು ಹೇಗೆ?
ಬೆಂಗಳೂರಿನ ಪ್ರಯಾಣಿಕರು ಉಬರ್ ಅಪ್ಲಿಕೇಶನ್ ಮೂಲಕ ಮೆಟ್ರೋ ಟಿಕೆಟ್‌ಗಳನ್ನು ಸುಲಭವಾಗಿ ಖರೀದಿಸಬಹುದು, ಈಗ ಉಬರ್ ಆಯಪ್‌ಗೆ ಹೋಗಿ, ಅಲ್ಲಿ ಪಟ್ಟಿ ಮಾಡಿರುವ ಚಿಹ್ನೆಯಲ್ಲಿ ಮೆಟ್ರೋ ಆಯ್ಕೆ ಮಾಡಿಕೊಳ್ಳಬೇಕು. ನಂತರ ಸ್ಥಳವನ್ನು ಕೇಳುತ್ತದೆ ಎಲ್ಲಿಂದ ಎಲ್ಲಿಗೆ ಪ್ರಯಾಣ ಮಾಡುತ್ತಿರುತ್ತದೆ ಎಂದು ನಮೂದಿಸಿದ ನಂತರ ಹಣ ಪೇ ಮಾಡಲು ಕೇಳುತ್ತದೆ. ನಂತರ UPI ಆಯ್ಕೆ ಮಾಡಿಕೊಂಡು ಪೇ ಮಾಡಿದ್ರೆ ಟಿಕೆಟ್ ಬುಕ್ ಆಗುತ್ತದೆ. ಈ ಪ್ರಯಾಣಿಕರು ಬೇರೆ ಮೆಟ್ರೋ ಆಯಪ್ಗಳನ್ನು ಓಪನ್ ಮಾಡುವ ಅವಶ್ಯಕತೆಯಿಲ್ಲ. ಹಾಗೂ ನಿಲ್ದಾಣದಲ್ಲಿ ಹೋಗಿಟಿಕೆಟ್ ಗಾಗಿ ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಕೂಡ ಬರುವುದಿಲ್ಲ.

ಉಬರ್ ಅಪ್ಲಿಕೇಶನ್ ಮೂಲಕ ಸರಕು ವಿತರಣಾ ಸೇವೆಗಳು ಆರಂಭ
ಉಬರ್ ಇಂಡಿಯಾದ ಪ್ರಕಾರ, ಉಬರ್ ಡೈರೆಕ್ಟ್ ಅಂದರೆ “ಪ್ಲ್ಯಾಗ್-ಅಂಡ್-ಪ್ಲೇ” ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ಮೂಲಕ ಉಬರ್ ಸರಕು ವಿತರಣಾ ಸೇವೆಯನ್ನು ಕೂಡ ಆರಂಭಿಸಲಿದೆ. ಇನ್ನು ಉಬರ್ ಪ್ಲಾಟ್‌ಫಾರ್ಮ್‌ನಲ್ಲಿರುವ ಚಾಲಕರು ನೀವು ಆರ್ಡರ್ ಮಾಡಿದ ಸರಕುಗಳನ್ನು ನಿಮ್ಮ ಮನೆಗೆ ತಂದುಕೊಡುತ್ತಾರೆ. ಇದು ಉಬರ್ ಚಾಲಕರಿಗೆ ಹೆಚ್ಚಿನ ದುಡಿಮೆಯನ್ನು ನೀಡಿದೆ. ಮುಂದಿನ ದಿನಗಳಲ್ಲಿ ಉಬರ್ ಬೆಂಗಳೂರಿನಲ್ಲಿ ಉಬರ್ ಶಟಲ್ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ದೆಹಲಿ ಮತ್ತು ಕೋಲ್ಕತ್ತಾದಂತಹ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದನ್ನು ಬೆಂಗಳೂರಿನಲ್ಲಿ ಪ್ರಯತ್ನಿಸಿದರೆ ಕಚೇರಿಗೆ ಹೋಗುವವರಿಗೆ ಸುಲಭ.
ಇದನ್ನೂ ಓದಿ: ಅಯ್ಯೋ ಬೆಂಗಳೂರಿನಲ್ಲಿ ಇಷ್ಟೊಂದು ಗುಂಡಿಗಳಾ! ಜನೋ ದಾದಾದ್ರೂ ಹೇಗೆ ಎಂದ ಯುರೋಪ್ ದಂಪತಿ
ಸಾರ್ವಜನಿಕ ಸಾರಿಗೆ ಕ್ಷೇತ್ರದಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಕೂಡ ದೊಡ್ಡ ಪಾತ್ರವನ್ನು ವಹಿಸಿದೆ. ಈ ಮೂಲಕ ಯುಬರ್ ತನ್ನ ಅಪ್ಲಿಕೇಶನ್ ಅನ್ನು ಬಳಸುವ ಯೋಜನೆ ಹಾಕಿಕೊಂಡಿದೆ. ಮುಂದಿನ ಎರಡು ವರ್ಷಗಳಲ್ಲಿ, ಎಲ್ಲಾ ಮೆಟ್ರೋ ಕಾರಿಡಾರ್‌ಗಳಲ್ಲಿ ಪ್ರತಿ ನಾಲ್ಕು ನಿಮಿಷಗಳಿಗೊಮ್ಮೆ ಮೆಟ್ರೋ ರೈಲುಗಳು ಪ್ರಾರಂಭವಾಗುವ ನಿರೀಕ್ಷೆಯಿದೆ, ಇದು ಕಾಯುವ ಸಮಯವನ್ನು ಕಡಿಮೆ ಮಾಡುವುದು, ಜನದಟ್ಟಣೆಯನ್ನು ಕಡಿಮೆ ಮಾಡುವುದು ಮತ್ತು ಹೆಚ್ಚಿನ ಪ್ರಯಾಣಿಕರನ್ನು ಆಕರ್ಷಿಸುವ ಗುರಿಯನ್ನು ಹೊಂದಿದೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 3:20 pm, ಸೋಮ, 15 ಡಿಸೆಂಬರ್ 25