ಧಾರವಾಡ, ಡಿಸೆಂಬರ್ 15: ಉದ್ಯೋಗಕಾಂಕ್ಷಿಗಳಿಗೆ ಟಾಪ್ 10 ಪ್ರಶಿಕ್ಷಣಾರ್ಥಿಗಳ ಮೂಲಕ ಪೊಲೀಸ್ ಇಲಾಖೆಯಿಂದಲೇ ವಿಶೇಷ ತರಬೇತಿ ನೀಡಲು ನಿರ್ಧರಿಸಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದೀಗ ಬೆಳಗಾವಿಯಲ್ಲಿ ಅಧಿವೇಶನ ನಡೆದಿದೆ. ಈ ಅಧಿವೇಶನಕ್ಕೆ ಹಲವಾರು ಕಡೆಗಳಿಂದ ಪಿಪಿಎಸ್ ಐ ಪ್ರಶಿಕ್ಷಣಾರ್ಥಿಗಳು ಬಂದಿದ್ಧಾರೆ. ಇದೇ ವೇಳೆ ಧಾರವಾಡದಲ್ಲಿ ಉದ್ಯೋಗಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಉದ್ಯೋಗಕಾಂಕ್ಷಿಗಳಿಗಾಗಿ ವಿಶೇಷ ಕೋಚಿಂಗ್ ಅನ್ನು ನಿರ್ಧರಿಸಲಾಗಿದೆ. ನಗರದ ಹತ್ತು ಕಾಲೇಜು ಹಾಗೂ ಕೋಚಿಂಗ್ ಸೆಂಟರ್ಗಳಲ್ಲಿ ಇಂದಿನಿಂದಲೇ ತರಬೇತಿ ಆರಂಭವಾಗಿದೆ. 2 ಸಾವಿರ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.