Children’s Mutual Fund: ಜನಪ್ರಿಯತೆ ಹೆಚ್ಚುತ್ತಿರುವ ಮಕ್ಕಳ ಮ್ಯೂಚುವಲ್ ಫಂಡ್​ಗಳು; ಹೂಡಿಕೆಯಲ್ಲಿ ಶೇ. 160 ಹೆಚ್ಚಳ

Children’s Mutual Fund: ಜನಪ್ರಿಯತೆ ಹೆಚ್ಚುತ್ತಿರುವ ಮಕ್ಕಳ ಮ್ಯೂಚುವಲ್ ಫಂಡ್​ಗಳು; ಹೂಡಿಕೆಯಲ್ಲಿ ಶೇ. 160 ಹೆಚ್ಚಳ


ಮಕ್ಕಳ ಮ್ಯೂಚುವಲ್ ಫಂಡ್ಗಳಿಂದ (ಮ್ಯೂಚುಯಲ್ ಫಂಡ್ಗಳು) ನಿರ್ವಹಿತವಾಗುತ್ತಿರುವ ಆಸ್ತಿ 25,675 ಕೋಟಿ ರೂ ಮುಟ್ಟಿದೆ. ಕಳೆದ ಐದು ವರ್ಷದ ಎಯುಎಂನಲ್ಲಿ ಗಣನೀಯ ಪ್ರಮಾಣದಲ್ಲಿ ಆಗಿದೆ. 2020ರ ನವೆಂಬರ್‌ನಲ್ಲಿ ಮಕ್ಕಳ ಮ್ಯೂಚುವಲ್ ಫಂಡ್‌ಗಳ ಎಯುಎಂ 9,866 ಕೋಟಿ ರೂ ಇತ್ತು. ಈಗ ಅದು 25,675 ಕೋಟಿ ರೂ ಮುಟ್ಟಿದೆ. ಈ ಕಲಿತ ಶೇ. 160ರಷ್ಟು ಎಯುಎಂ ಏರಿದೆ. ಭಾರತದಲ್ಲಿ ಮಕ್ಕಳ ಭವಿಷ್ಯಕ್ಕೆ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚುತ್ತಿರುವುದು ಗಮನಾರ್ಹವಾಗಿದೆ.

2020ರ ನವೆಂಬರ್‌ನಲ್ಲಿ ಮಕ್ಕಳ ಮ್ಯೂಚುವಲ್ ಫಂಡ್‌ಗಳಲ್ಲಿ 29 ಲಕ್ಷ ಫೋಲಿಯೋಗಳು ಇದ್ದವು. 2025ರ ನವೆಂಬರ್‌ನಲ್ಲಿ ಫೋಲಿಯೋಗಳ ಸಂಖ್ಯೆ 32 ಲಕ್ಷಕ್ಕೆ ಏರಿದೆ.

ಇದನ್ನೂ ಓದಿ: ಮ್ಯೂಚುವಲ್ ಫಂಡ್ ಶುಲ್ಕಗಳು: ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಮುನ್ನ ನೀವು ತಿಳಿಯಬೇಕಾದ ವಿವಿಧ ಶುಲ್ಕಗಳು…

ಮಕ್ಕಳ ಫಂಡ್‌ಗಳಿಂದ ಉತ್ತಮ ಸಾಧನೆ

ಮಕ್ಕಳ ಮ್ಯೂಚುವಲ್ ಫಂಡ್‌ಗಳು ಕಳೆದ ಐದು ವರ್ಷದ ಸರಾಸರಿ ಶೇ. 21.08 ಸಿಎಜಿಆರ್‌ನಲ್ಲಿ ಲಾಭ ತಂದಿವೆ. ಇದರೊಂದಿಗೆ, ತಮ್ಮ ಮಕ್ಕಳಿಗೆ ಮಾಡಲಾಗುತ್ತಿರುವ ಹೂಡಿಕೆಗಳು ಗುರಿ ತಲುಪುತ್ತಿವೆ. ಶೇ. 10-15ರಷ್ಟು ವೇಗದಲ್ಲಿ ಶಿಕ್ಷಣ ವೆಚ್ಚ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಮಕ್ಕಳ ಮ್ಯೂಚುವಲ್ ಫಂಡ್‌ಗಳು ಉತ್ತಮ ಲಾಭ ತರುತ್ತಿರುವುದು ಗಮನಾರ್ಹ.

ಭಾರತದಲ್ಲಿ ಸುಮಾರು 12 ಮಕ್ಕಳ ಮ್ಯೂಚುವಲ್ ಫಂಡ್‌ಗಳಿವೆ. ಅವರ ಮೇಲಿನ ಎಸ್ಬಿಐ ಮ್ಯಾಗ್ನಮ್ ಚಿಲ್ಡ್ರನ್ಸ್ ಬೆನಿಫಿಟ್ ಫಂಡ್ ಐದು ವರ್ಷದ ಶೇ. 34.35 ಸಿಎಜಿಆರ್‌ನಲ್ಲಿ ಲಾಭ ತಂದಿದೆ. ಮಕ್ಕಳ ಮ್ಯೂಚುವಲ್ ಫಂಡ್‌ಗಳಲ್ಲಿ ಟಾಪ್-5 ಫಂಡ್‌ಗಳು ಮತ್ತು ಅವುಗಳ 5 ವರ್ಷದ ರಿಟರ್ನ್ ವಿವರ ಈ ಕೆಳಕಂಡಂತಿವೆ:

  1. ಎಸ್ಬಿಐ ಮ್ಯಾಗ್ನಂ ಚಿಲ್ಡ್ರನ್ಸ್ ಬೆನಿಫಿಟ್ ಫಂಡ್: ಶೇ. 34.35 ಸಿಎಜಿಆರ್
  2. ಐಸಿಫಿಕೇಷನ್ ಪ್ರುಡೆನ್ಶಿಯಲ್ ಚಿಲ್ಡ್ರನ್ಸ್ ಫಂಡ್: ಶೇ. 19.14 ಸಿಎಜಿಆರ್
  3. ಎಚ್ಡಿಎಫ್ಸಿ ಚಿಲ್ಡ್ರನ್ಸ್ ಫಂಡ್: ಶೇ. 18.46
  4. ಟಾಟಾ ಚಿಲ್ಡ್ರನ್ಸ್ ಫಂಡ್: ಶೇ 18.09
  5. ಯುಟಿಐ ಚಿಲ್ಡ್ರನ್ಸ್ ಈಕ್ವಿಟಿ ಫಂಡ್: ಶೇ. 17.65 ಸಿಎಜಿಆರ್

ಇದನ್ನೂ ಓದಿ: ಈ ಪೋಸ್ಟ್ ಆಫೀಸ್ ಸ್ಕೀಮ್‌ನಲ್ಲಿ ತಿಂಗಳಿಗೆ 10,000 ರೂ ಹೂಡಿಕೆಯಿಂದ 7 ಲಕ್ಷ ರೂ ರಿಟರ್ನ್

ಚಿಲ್ಡ್ರನ್ಸ್ ಮ್ಯೂಚುವಲ್ ಫಂಡ್ ಹೇಗೆ?

18 ವರ್ಷ ವಯಸ್ಸಿನ ಮಕ್ಕಳ ಹೆಸರಿನಲ್ಲಿ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು. ಮಕ್ಕಳ ಹೆಸರಿನಲ್ಲಿ ಫಂಡ್ ಆರಂಭಿಸಬೇಕು. ಆದರೆ ಪಾಲಕರು ಅದನ್ನು ನಿರ್ವಹಿಸಬೇಕು. ಮಗು 18 ವರ್ಷ ವಯಸ್ಸಾದ ಬಳಿಕ ಅವರಿಗೆ ನಿರ್ವಹಣೆಯ ಅಧಿಕಾರ ಸಿಗುತ್ತದೆ. ಅಲ್ಲಿಯವರೆಗೂ ಫಂಡ್ ವಿಟ್ಡ್ರಾ ಮಾಡಲು ಅವಕಾಶ ಇರುವುದಿಲ್ಲ. ಹೂಡಿಕೆಗೆ ಮಾತ್ರ ಅವಕಾಶ ಇರುತ್ತದೆ. ಇದು ಬಿಟ್ಟರೆ ಮಕ್ಕಳ ಮ್ಯೂಚುವಲ್ ಫಂಡ್‌ಗಳಿಗೆ ರೆಗ್ಯುಲರ್ ಫಂಡ್‌ಗಳಿಗೆ ವ್ಯತ್ಯಾಸವೇನೂ ಇರುವುದಿಲ್ಲ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *