21 ವರ್ಷದ ಶಫಾಲಿ, ಥೈಲ್ಯಾಂಡ್‌ನ ತಿಪ್ಪೈಚಾ ಪುಥಾವೊಂಗ್ ಮತ್ತು ಯುಇಯ ಇಶಾ ಓಜಾ ಅವರನ್ನು ಸೋಲಿಸಿ ತಮ್ಮ ಮೊದಲ ತಿಂಗಳ ಆಟಗಾರ್ತಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಭಾಜನರಾದ ಬಳಿಕ ಸಂತಸ ವ್ಯಕ್ತಪಡಿಸಿರುವ ಶಫಾಲಿ, ನವೆಂಬರ್ ತಿಂಗಳ ಮಹಿಳಾ ಆಟಗಾರ್ತಿಗೆ ಆಯ್ಕೆಯಾಗಲು ನನಗೆ ನಿಜಕ್ಕೂ ಗೌರವ ಪ್ರಶಸ್ತಿಯಾಗಿದೆ. ಈ ಪ್ರಶಸ್ತಿಯನ್ನು ನನ್ನ ತಂಡದ ಸದಸ್ಯರು, ನನ್ನ ಎಲ್ಲಾ ತರಬೇತುದಾರರು, ಕುಟುಂಬ ಮತ್ತು ನನ್ನ ಪ್ರಯಾಣದಲ್ಲಿ ಇಲ್ಲಿಯವರೆಗೆ ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಅರ್ಪಿಸುತ್ತೇನೆ. ನಾವು ಒಂದು ತಂಡವಾಗಿ ಗೆಲ್ಲುತ್ತೇವೆ ಮತ್ತು ಸೋಲುತ್ತೇವೆ. ಈ ಪ್ರಶಸ್ತಿಗೂ ಇದು ಅನ್ವಯಿಸುತ್ತದೆ’ ಎಂದು ಶೆಫಾಲಿ ಹೇಳಿದ್ದಾರೆ.