ನೆಲಮಂಗಲ, ಡಿಸೆಂಬರ್ 15: ತಮ್ಮನ ಮದುವೆಗೆ ಅಣ್ಣ ಮಾಡಿಸಿದ್ದ 6 ಲಕ್ಷ ರೂ ಮೌಲ್ಯದ ಚಿನ್ನಾಭರಣಗಳನ್ನು ಖತರ್ನಾಕ್ ಕಳ್ಳ ದೋಚಿರುವಂತಹ (ದರೋಡೆ) ಬೆಂಗಳೂರು ಉತ್ತರ ಕೆಜಿ ಲಕ್ಕೇನಹಳ್ಳಿಯಲ್ಲಿ ಘಟನೆ ನಡೆದಿದೆ. ಮೂರು ದಿನಗಳ ಹಿಂದೆ ಕಳ್ಳತನ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮನೆಯಿಂದ ಹೊರಗೆ ಹೋಗಿ ಬರುವಷ್ಟರಲ್ಲಿ ಕಳ್ಳ ತನ್ನ ಕೈಚಳಕ ತೋರಿಸಿದ್ದಾನೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
55 ಗ್ರಾಂ ನಷ್ಟು ಚಿನ್ನಾಭರಣ ಕಳ್ಳತನ
ಯೋಗೀಶ್ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದೆ. ಯೋಗೀಶ್ ಹಾಸನ ಜಿಲ್ಲೆಯವರು. ಕಳೆದ 8 ವರ್ಷಗಳ ಹಿಂದೆ ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಆಗಮಿಸಿದ್ದರು. ಬೆಂಗಳೂರು ಉತ್ತರ ತಾಲೂಕಿನ ಕೆಜಿ ಲಕ್ಕೆನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ಪತ್ನಿ ಹಾಗೂ ತಮ್ಮನ ವಾಸವಿದ್ದರು. ಡ್ರೈವರ್ ಕೆಲಸ ಮಾಡಿಕೊಂಡಿದ್ದ ಯೋಗೀಶ್, ತಮ್ಮನ ಮದುವೆಗೆ 55 ಗ್ರಾಂ ನಷ್ಟು ಚಿನ್ನಾಭರಣ ಖರೀದಿಸಿದ್ದರು. ಆದರೆ ಖತರ್ನಾಕ್ ಕಳ್ಳ ತನ್ನ ಕೈಚಳಕ ತೋರಿಸಿದ್ದಾನೆ.
ಇದನ್ನೂ ಓದಿ: ಭರ್ಜರಿ ಕಾರ್ಯಚರಣೆ: 4 ಕಳ್ಳತನ ಪ್ರಕರಣ ಭೇದಿಸಿದ ಕಲಬುರಗಿ ಪೊಲೀಸ್; 6 ಖದೀಮರ ಬಂಧನ
ಮನೆಯ ಬೀರುವಿನಲ್ಲಿ ಭದ್ರವಾಗಿ ಚಿನ್ನಾಭರಣ ಇಡಲಾಗಿದೆ. ಆದರೆ ಕಳೆದ ಎರಡು ದಿನದ ಹಿಂದೆ ಬೀರು ನೋಡಿದಾಗ ಯೋಗೀಶ್ ಶಾಕ್ ಆಗಿದ್ದಾರೆ. ಏಕೆಂದರೆ ಬೀರುವಿನಲ್ಲಿದ್ದ ಚಿನ್ನಾಭರಣ ಕಳ್ಳತನವಾಗಿತ್ತು. ನಂತರ ಸಿಸಿಟಿವಿ ಪರಿಶೀಲನೆ ಕಪ್ಪು ಬಣ್ಣದ ಶರ್ಟ್ ಧರಿಸಿ ಕಳ್ಳತನ ಮಾಡಿರುವುದು ಗೊತ್ತಾಗಿದೆ.
ಇದನ್ನೂ ಓದಿ: ಮತ್ತೊಮ್ಮೆ ಸುದ್ದಿಯಾದ ಕಾರವಾರ ಕಾರಾಗೃಹ; ಕೈದಿಗಳ ಬಳಿ ಏಳು ಮೊಬೈಲ್ ಪತ್ತೆ
ಇನ್ನು ಇದೆ ಮನೆಯ ಬೀಗ ಮುರಿಯದೆ ಕಳ್ಳತನವಾಗಿದ್ದರೂ ನಕಲಿ ಕೀ ಕಳ್ಳತನ ಮಾಡಬಹುದೆಂದು ಶಂಕಿಸಲಾಗಿದೆ. ಸದ್ಯ ಘಟನೆ ಸಂಬಂಧ 6 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣ ಕಳ್ಳತನವಾಗಿದ್ದು, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರಲ್ಲಿ ಮನವಿ ಮಾಡಿದ ಯೋಗೀಶ್
ಇನ್ನು ಘಟನೆ ಸಂಬಂಧ ಅಣ್ಣ ಯೋಗೀಶ್ ಮಾತನಾಡಿದ್ದು, ಸರ್ ನಾನು ಕಷ್ಟಪಟ್ಟು ದುಡಿದ ಹಣ. ದಯ ಮಾಡಿ ನಮಗೆ ಕಳುವಾದ ಚಿನ್ನಾಭರಣ ಕೊಡಿಸಿ ಎಂದು ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ.
ವರದಿ: ಮಂಜುನಾಥ್ ಟಿವಿನೈನ್ ನೆಲಮಂಗಲ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 10:35 pm, ಸೋಮ, 15 ಡಿಸೆಂಬರ್ 25