ರಾಮನಗರ, (ಡಿಸೆಂಬರ್ 15): ಕೌಟುಂಬಿಕ ಕಲಹ ಹಿನ್ನೆಲೆ ಪತ್ನಿಯನ್ನ (ಹೆಂಡತಿ) ಕೊಂಡು ಪತಿ (ಗಂಡ) ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ದಕ್ಷಿಣ (ಬೆಂಗಳೂರು ದಕ್ಷಿಣ) ಜಿಲ್ಲೆ ರಾಮನಗರ (ರಾಮನಗರ) ತಾಲೂಕಿನ ಹಾಗಲಹಳ್ಳಿ ಗ್ರಾಮದಲ್ಲಿ ನಡೆದಿದೆ. ನವೀನ್ ಕುಮಾರ್ (35) ಎಂಬಾತ ತನ್ನ ಪತ್ನಿ ವತ್ಸಲನನ್ನು(30) ಕೊಂದು ಬಳಿ ತಾನು ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದರಿಂದ ತಂದೆ ತಾಯಿಯನ್ನು ಕಳೆದುಕೊಂಡ 7 ವರ್ಷದ ಹೆಣ್ಣು ಮಗು ಅನಾಥವಾಗಿದೆ.
ನವೀನ್ ಹಾಗೂ ವತ್ಸಲ ಕಳೆದ 8 ವರ್ಷಗಳ ಹಿಂದೆ ಮದುವೆಯಾಗಿದ್ದು, ಈ ದಂಪತಿಗೆ 7 ವರ್ಷದ ಹೆಣ್ಣುಮಗು ಇದೆ. ಸಣ್ಣಪುಟ್ಟ ವಿಚಾರಕ್ಕೆ ಪತಿ, ಪತ್ನಿ ಜಗಳವಾಡ. ಕಳೆದ ವಾರ ದಂಪತಿ ಗಲಾಟೆ ಮಾಡಿಕೊಂಡು ಮಹಿಳಾ ಠಾಣೆ ಮೆಟ್ಟಿಲೇರಿದ್ದರು. ಇಂದು (ಡಿಸೆಂಬರ್ 15) ಗಲಾಟೆ ವಿಕೋಪಕ್ಕೆ ತಿರುಗಿದ್ದು, ನವೀನ್ , ವಾತ್ಸಲರನ್ನು ಕತ್ತುಹಿಸುಕಿ ಕೊಂದಿದ್ದಾನೆ. ಬಳಿಕ ನವೀನ್ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ: ಡೆತ್ ನೋಟ್ ಬರೆದಿಟ್ಟು ಎಂಬಿಎ ವಿದ್ಯಾರ್ಥಿ ಆತ್ಮಹತ್ಯೆ: ಯುವಕನ ಬಲಿ ಪಡೆದ ಬೆತ್ತಲೆ ಫೋಟೊ
ಹೆಂಡ್ತಿಯನ್ನು ಮಂಚದ ಮೇಲೆಯೇ ಕೊಂಡು ಬಳಿಕ ಇದ್ದ ಫ್ಯಾನ್ ಗೆ ನೇಣುಬಿಗಿದುಕೊಂಡು ಆತ್ಯೆಹತ್ಯೆ ಮಾಡಿಕೊಂಡಿದ್ದು, ನವೀನ್ ಮೃತದೇಹ ಪತ್ನಿ ವಾತ್ಸಲ ಮೃತದೇಹದ ಮೇಲೆ ನೇತಾಡುತ್ತಿರುವ ದೃಶ್ಯ ಕರುಳು ಹಿಂಡುವಂತಿದೆ. ಇನ್ನು ಗಂಡ ಹೆಂಡತಿ ಜಗಳದಲ್ಲಿ ಪುಟ್ಟ ಮಗು ಮಾತ್ರ ಅನಾಥವಾಗಿದೆ.
ಇನ್ನು ವಿಷಯ ತಿಳಿಯದೇ ರಾಮನಗರ ಗ್ರಾಮಾಂತರ ಭೇಟಿ ನೀಡಿ ಪರಿಶೀಲನೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.