ಯಾವುದೇ ಸಿನಿಮಾ ಇರಲಿ, ವಾರದ ಮೊದಲ ದಿನ ಸೋಮವಾರ ಎಷ್ಟು ಗಳಿಕೆ ಮಾಡಿದರೆ ಅದು ತುಂಬಾನೇ ಮುಖ್ಯವಾಗುತ್ತದೆ. ಅದರ ಆಧಾರದ ಮೇಲೆ ಸಿನಿಮಾದ ಭವಿಷ್ಯ ನಿರ್ಧಾರವಾಗುತ್ತದೆ. ಈಗ ‘ಡೆವಿಲ್’ (ದೆವ್ವದ ಚಲನಚಿತ್ರ), ‘ಅಖಂಡ 2’ ಹಾಗೂ ‘ಧುರಂಧರ’ ಸಿನಿಮಾಗಳು ಸೋಮವಾರದ (ಡಿಸೆಂಬರ್ 15) ಗಳಿಕೆ ಲೆಕ್ಕ ಸಿಕ್ಕಿದೆ. ಈ ಚಿತ್ರಗಳು ಮೇಲಕ್ಕೆ ಧುರಂಧರ ಸಿನಿಮಾದ್ದು ಭಾರೀ ಗಳಿಕೆ. ‘ಅಖಂಡ 2’ ಚಿತ್ರ ಕೂಡ ಉತ್ತಮ ಕಲೆಕ್ಷನ್ ಮಾಡಿದೆ. ‘ಡೆವಿಲ್’ ಗಳಿಕೆ ಪಾತಾಳ ಕಂಡಿದೆ.
‘ಡೆವಿಲ್’ ಸಿನಿಮಾ ಮೊದಲ ದಿನ 13 ಕೋಟಿ ರೂಪಾಯಿ ಗಳಿಸಿತ್ತು. ಆ ಬಳಿಕ ಸಿನಿಮಾ ಗಳಿಗೆ ದಿನ ಕಳೆದಂತೆ ಕುಸಿತ ಕಂಡಿತ್ತು. ಭಾನುವಾರ ಈ ಚಿತ್ರ 4 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಶನಿವಾರಕ್ಕೆ ಕಲೆಕ್ಷನ್ ಕೊಂಚ ಹೆಚ್ಚಿತ್ತು. ಈಗ ಸೋಮವಾರದ ಗಳಿಕೆಯಲ್ಲಿ ದಿಢೀರ್ ಕುಸಿತ ಕಂಡಿದೆ. ಈ ಚಿತ್ರ ಮೊದಲ ಸೋಮವಾರ 1.40 ಕೋಟಿ ರೂಪಾಯಿ ಗಳಿಕೆಯಾಗಿದೆ ಎಂದು sacnilk ವರದಿ ಮಾಡಿದೆ.
ಇಂದಿನಿಂದ ಸಿನಿಮಾದ ಕಲೆಕ್ಷನ್ ಮತ್ತಷ್ಟು ಕುಸಿಯಬಹುದು. ಹಾಗಾಗ ಸಿನಿಮಾಗೆ ಅದು ದೊಡ್ಡ ಹೊಡೆತ. 25ರಂದು ’45’ ಹಾಗೂ ‘ಮಾರ್ಕ್’ ಸಿನಿಮಾಗಳು ರಿಲೀಸ್ ಆಗುತ್ತಿವೆ. ಈ ವೇಳೆ ‘ಡೆವಿಲ್’ಗೆ ಸಿಕ್ಕ ಶೋ ಸಂಖ್ಯೆ ಕಡಿಮೆ ಆಗಬಹುದು. ಇದು ತಂಡದ ಆತಂಕಕ್ಕೆ ಕಾರಣವಾಗಿದೆ. ಸಿನಿಮಾದ ಒಟ್ಟು 25 ಕೋಟಿ ರೂಪಾಯಿ ಆಸುಪಾಸಿನಲ್ಲಿದೆ.
ಇನ್ನು, ‘ಅಖಂಡ 2’ ಮೊದಲ ಸೋಮವಾರದ ಪರೀಕ್ಷೆಯಲ್ಲೇ ಪಾಸ್ ಆಗಿದೆ. ಈ ಚಿತ್ರಕ್ಕೆ ನೆಗೆಟಿವ್ ವಿಮರ್ಶೆ ಸಿಕ್ಕಿದೆ. ಸೋಮವಾರ ಈ ಸಿನಿಮಾ ಐದುವರೆ ಕೋಟಿ ಗಳಿಸಿದ್ದು, ನಾಲ್ಕು ದಿನಕ್ಕೆ ಈ ಚಿತ್ರ 66.45 ಕೋಟಿ ರೂಪಾಯಿ ಬಾಚಿಕೊಂಡಿದೆ.
ಇದನ್ನೂ ಓದಿ: ಸಿಕ್ಕಿದ್ದು ಕೆಟ್ಟ ವಿಮರ್ಶೆ ಭಾನುವಾರ ಡೆವಿಲ್‌ಗಿಂತ ನಾಲ್ಕುಪಟ್ಟು ಹೆಚ್ಚು ಗಳಿಸಿದ ‘ಅಖಂಡ 2’
ಇನ್ನು, ‘ಧುರಂಧರ’ ಕಲೆಕ್ಷನ್ ವಿಚಾರದಲ್ಲಿ ಗೆದ್ದು ಬೀಗಿದೆ. ಈ ಸಿನಿಮಾ ಎರಡನೇ ಸೋಮವಾರ 29 ಕೋಟಿ ರೂಪಾಯಿ ಗಳಿಸಿದ್ದು, ಒಟ್ಟಾರೆ ಕಲೆಕ್ಷನ್ 379 ಕೋಟಿ ರೂಪಾಯಿ ಆಗಿದೆ. ಈ ಚಿತ್ರ ಶೀಘ್ರವೇ 500 ಕೋಟಿ ರೂಪಾಯಿ ಕ್ಲಬ್ ಸೇರಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 7:33 am, ಮಂಗಳವಾರ, 16 ಡಿಸೆಂಬರ್ 25