ಬಿಗ್ ಬಾಸ್ ಮನೆಯಲ್ಲಿ ಸದ್ಯ ಸೀಕ್ರೆಟ್ ರೂಂ ಟಾಸ್ಕ್ ನಡೆಯುತ್ತಿದೆ. ಧ್ರುವಂತ್ ಹಾಗೂ ರಕ್ಷಿತಾ ಶೆಟ್ಟಿ ಅವರನ್ನು ಈ ರೂಂನಲ್ಲಿ ಇಡಲಾಗಿದೆ. ಇಬ್ಬರ ಮಧ್ಯೆ ಆಗಾಗ ಕಿರಿಕ್ ಗಳು ಆಗುತ್ತಲೇ ಇವೆ. ಈ ಮಧ್ಯೆ ಧ್ರುವಂತ್ ಅವರು ರಕ್ಷಿತಾ ಶೆಟ್ಟಿಯ ಸಣ್ಣ ಬುದ್ಧಿಯನ್ನು ಎಕ್ಸ್ ಪೋಸ್ ಮಾಡುವ ಕೆಲಸ ಮಾಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.
ಬಿಗ್ ಬಾಸ್ ಆರಂಭದಲ್ಲಿ ರಕ್ಷಿತಾ ಶೆಟ್ಟಿ ಅವರು ಇದ್ದೇ ಬೇರೆ. ಈಗ ಅವರು ಇರೋದೇ ಬೇರೆ. ಕಿಚ್ಚನ ಚಪ್ಪಾಳೆ ಸಿಕ್ಕ ಬಳಿಕ ಅವರು ಸಂಪೂರ್ಣವಾಗಿ ಬದಲಾದರು ಎಂಬ ಮಾತಿದೆ. ಎಷ್ಟರ ಮಟ್ಟಿಗೆ ಎಂದರೆ ಅವರು ಯಾರ ಮಾತನ್ನೂ ಕೇಳುವ ಪರಿಸ್ಥಿತಿಯಲ್ಲಿ ಈಗ ಇಲ್ಲ. ಈ ಬದಲಾವಣೆಯನ್ನು ಧ್ರುವಂತ್ ಅವರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಅವರು ಈ ಬಗ್ಗೆ ಮಾತನಾಡಿದ್ದಾರೆ.
ಮಾಳು ಅವರನ್ನು ಸೇವ್ ಮಾಡಿ, ಕಾವ್ಯಾ ಅವರಿಗೆ ನಾಮಿನೇಟ್ ಮಾಡಬೇಕು ಎಂಬುದು ರಕ್ಷಿತಾ ಶೆಟ್ಟಿ ವಾದ ಆಗುತ್ತಿದೆ. ಆದರೆ, ಈ ವಾದವನ್ನು ಧ್ರುವಂತ್ ಅವರು ಒಪ್ಪಿಲ್ಲ. ಮಾಳುಗೆ ಕಾವ್ಯಾ ಸಮರ್ಥ ವ್ಯಕ್ತಿ. ಅವರನ್ನು ನಾಮಿನೇಟ್ ಮಾಡೋದು ಸರಿ ಎಂದು ಧ್ರುವಂತ ವಾದ ಮಾಡಿದ್ದಾರೆ. ರಕ್ಷಿತಾ ಶೆಟ್ಟಿ ಅವರು ಈ ರೀತಿ ಹೇಳಲು ಒಂದು ಕಾರಣವಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.
ಅದು ಸತ್ಯ ಬಹಿರಂಗ ಕೋಡಂಗಿ 🤡 ರಕ್ಷಿತಾ ಜೈ ಮಹಾಕಾಲ್ 💪#BBK12 pic.twitter.com/Scug46jniD
— Dr.Hemanth.tm (@msdhonihemanth) ಡಿಸೆಂಬರ್ 15, 2025
ಧ್ರುವಂತ್ ಕುತಂತ್ರದ ಕೇಜ್ ಆಟವನ್ನು ತೆರೆದಿಟ್ಟರು.👀
‘ಸಹಾನುಭೂತಿ ರಾಣಿ’ ಎಂದು ಕರೆಯಲ್ಪಡುವ ಮುಖವಾಡವು ಅಂತಿಮವಾಗಿ ಆಫ್ ಆಗಿದೆ
ಕಾವ್ ಮೇಲೆ ಯಾಕೆ ಇಷ್ಟೊಂದು ದ್ವೇಷ?
ಕಾವ್ ಗಿಲ್ಲಿಯೊಂದಿಗೆ ಹೆಚ್ಚು ಸಮಯ ಕಳೆಯುವ ಕಾರಣವೇ?
ಕುತಂತ್ರದ ಮುಖವಿದ್ದರೆ ಅದು ರಕ್ಷಿತಾ ಹೊರತು ಬೇರಾರೂ ಆಗುತ್ತಿರಲಿಲ್ಲ.😈🧠#ಕಾವ್ಯಶೈವ #ಗಿಲ್ಲಿನಾಟಾ #BBK12 pic.twitter.com/E95LBWfTiW
— ಬಿಬಿ ಫಾಲೋವರ್ (@BBFollower_45) ಡಿಸೆಂಬರ್ 15, 2025
ಈ ವಾರ ಸೂರಜ್ ಕ್ಯಾಪ್ಟನ್ ಆಗಬೇಕಿತ್ತು, ಆದರೆ ಚೈತ್ರ ಮಾಡಿದ ತಪ್ಪುಗಳಿಂದ ನಾನು ಕ್ಯಾಪ್ಟನ್ ಆಗಿದ್ದೇನೆ ಮತ್ತು ಸೂರಜ್ ಅವರನ್ನು ನಾಮನಿರ್ದೇಶನದಿಂದ ರಕ್ಷಿಸಿದೆ ಎಂದು ಅವಳು ಅಕ್ಷರಶಃ ಹೇಳಿದಳು.
ಅದೇ ಕಾರಣಕ್ಕಾಗಿ, ರಶಿಕಾ ಮತ್ತು ಸೂರಜ್ ಜಗಳವಾಡಿದರು, ಅವಳು ತನ್ನನ್ನು ತಾನು ಸಮರ್ಥಿಸಿಕೊಂಡಳು, ನಾಯಕತ್ವಕ್ಕೆ ಅರ್ಹಳು ಎಂದು … pic.twitter.com/w2McEcsV0I
– ಮನು (@yoitzmanu) ಡಿಸೆಂಬರ್ 15, 2025
ಗಿಲ್ಲಿ ಹಾಗೂ ಕಾವ್ಯ ಒಟ್ಟಾಗಿ ಸಮಯ ಕಳೆಯುತ್ತಾರೆ. ಈ ಕಾರಣದಿಂದಲೇ ಕಾವ್ಯದ ಬಗ್ಗೆ ರಕ್ಷಿತಾ ದ್ವೇಷ ಕಾರುತ್ತಿರುವುದು ಕೆಲವರ ವಾದ. ಇನ್ನು ಎದುರಿನವರು ಏನಾದರೂ ಹೇಳುವಾಗ ರಕ್ಷಿತಾ ಶೆಟ್ಟಿ ಓಡೋಡಿ ಹೋಗುತ್ತಾರೆ. ಮಾತನ್ನು ಕೇಳಿಸಿಕೊಳ್ಳುವುದೇ ಇಲ್ಲ. ಈ ವಿಷಯವನ್ನು ಧ್ರುವಂತ್ ಅವರು ಎತ್ತಿ ಹೇಳಿದರು.
ಇದನ್ನೂ ಓದಿ: ಧ್ರುವಂತ್, ರಕ್ಷಿತಾ ಶೆಟ್ಟಿ ಇನ್ನೂ ಔಟ್ ಆಗಿಲ್ಲ ಎಂಬ ರಹಸ್ಯ ಪತ್ತೆ ಹಚ್ಚಿದ ರಘು
ರಕ್ಷಿತಾ ಶೆಟ್ಟಿ ಅವರು ನಿದ್ದೆ ಮಾಡುತ್ತಿದ್ದರು. ಆದರೆ, ಇದನ್ನು ಅವರು ಒಪ್ಪುವುದಿಲ್ಲ. ಈ ವೇಳೆ ಧ್ರುವಂತ್ ಒಂದೇ ಮಾತನ್ನು ಹೇಳಿದರು. ‘ನೀನು ಜನರನ್ನು ಮಂಗ ಮಾಡಬಹುದು ಆದರೆ, ಬಿಗ್ ಬಾಸ್ ನ ಅಲ್ಲ’. ಅವರ ಬಗ್ಗೆ ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.