110

Image Credit : AI
19ರ ನಂತರ 40 ನಿಮಿಷದ ವಿಡಿಯೋ
ಕಳೆದ ಕೆಲ ದಿನಗಳ ಹಿಂದೆ ಜೋಡಿಯ 19 ನಿಮಿಷ ವಿಡಿಯೋ (19-minute viral video) ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಸಂಚಲನ ಸೃಷ್ಟಿಸಿತ್ತು. ಇದೀಗ ಮತ್ತೆ 40 ನಿಮಿಷ ಹೆಸರಿನ ವಿಡಿಯೋಗಾಗಿ (40-minute viral video) ಇಂಟರ್‌ನೆಟ್‌ನಲ್ಲಿ ಹುಡುಕಾಟ ಆರಂಭವಾಗಿದೆ.
210
Image Credit : Getty
ಸೈಬರ್ ತಜ್ಞರು
ಬೇರೆ ಬೇರೆ ಶೀರ್ಷಿಕೆಯಡಿಯಲ್ಲಿ 40 ನಿಮಿಷದ ವಿಡಿಯೋ ಟ್ರೆಂಡ್ ಆರಂಭವಾಗಿದೆ. ಈ ವಿಡಿಯೋದಲ್ಲಿರೋರು ಯಾರು? ಯಾಕೆ ಈ ಟ್ರೆಂಡ್ ಆರಂಭವಾಗಿದೆ? ಎಂಬುದಕ್ಕೆ ಸೈಬರ್ ತಜ್ಞರು ಮಾಹಿತಿಯನ್ನು ನೀಡಿದ್ದಾರೆ.
310
Image Credit : Pixabay
ಸ್ಕ್ಯಾಮ್‌ವುಳ್ಳ ಮೆಸೇಜ್‌ಗಳು
ಇದು 40 ನಿಮಿಷದ ಒಂದೇ ವಿಡಿಯೋ ಎಂದು ಯಾವುದೇ ಅಧಿಕೃತ ಲಭ್ಯವಾಗಿಲ್ಲ. 40 ನಿಮಿಷ ವಿಡಿಯೋ ಕ್ಲಿಪ್ ವದಂತಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾದಂತೆ ವಿವಿಧ ಪೋಸ್ಟ್, ಕ್ಲಿಪ್‌ಗಳು ಮುನ್ನಲೆಗೆ ಬರುತ್ತಿವೆ. ಯಾವುದು 40 ನಿಮಿಷದ ವಿಡಿಯೋ ಎಂಬುದರ ಬಗ್ಗೆಯೂ ನಿಖರತೆ ಇಲ್ಲ. ಈ ಟ್ರೆಂಡ್ ಸ್ಪ್ಯಾಮ್ ಲಿಂಕ್, ತಪ್ಪು ಮಾಹಿತಿಯುಳ್ಳ ಲಿಂಕ್ ಎಂದು ವರದಿಯಾಗಿದೆ.
410
Image Credit : Getty
full leaked videos ಅವಲೇಬಲ್ ಎಂಬ ಮೆಸೇಜ್
ವಿವಾದಾತ್ಮಕ 19 ನಿಮಿಷದ ಖಾಸಗಿ ವಿಡಿಯೋ ವೈರಲ್ ಆಗಿತ್ತು. ಇದಾದ ಬಳಿಕ ಇದಕ್ಕೆ ಸಂಬಂಧಿಸಿದ ಟ್ಯಾಗ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಅತ್ಯಧಿಕವಾಗಿ ಬಳಕೆ ಮಾಡಲಾಯ್ತು. ನಂತರ ಈ ಟ್ಯಾಗ್‌ಗಳನ್ನು ಫ್ಲ್ಯಾಗ್ ಮಾಡಲಾಗಿತ್ತು. ಈಗ ಇದಕ್ಕೆ ಪರ್ಯಾಯವಾಗಿ 40-minute viral video ಬಳಕೆ ಮಾಡಲಾಗ್ತಿದೆ ಎಂಬುದರ ಬಗ್ಗೆ ಶಂಕೆ ವ್ಯಕ್ತವಾಗಿವೆ. ಕ್ಲಿಕ್‌ಬೈಟ್ ಪೋಸ್ಟ್‌ಗಳು “full leaked videos” ಎಂಬ ಭರವಸೆಯನ್ನು ಬಳಕೆದಾರರಿಗೆ ನೀಡುತ್ತಿವೆ. ಸದ್ಯ 40 ನಿಮಿಷ ವಿಡಿಯೋ ಎಂಬ ಪದ ಡಿಜಿಟಲ್ ಭೂತದಂತೆ ಎಲ್ಲೆಡೆ ಸರ್ಚ್ ಆಗ್ತಿದೆ.
510
Image Credit : Getty
40 ನಿಮಿಷದ ವಿಡಿಯೋ ಇದೆಯಾ?
“40-minute viral video” ಎಂಬ ಸಾಲು ಗೂಗಲ್ ಹುಡುಕಾಟದ ಟ್ರೆಂಡ್‌ಗಳಲ್ಲಿ ಏರಿಕೆಯಾಗಿದೆ. ಆಂಧ್ರಪ್ರದೇಶ, ಒಡಿಶಾ, ತೆಲಂಗಾಣ, ದೆಹಲಿ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಸರ್ಚ್ ಏರಿಕೆಯಾಗುತ್ತಿದೆ. ಸರ್ಚಿಂಗ್ ಡೇಟಾ ನಂಬರ್ಸ್ ಹೆಚ್ಚಾಗಿದೆ ಎಂದು ವರದಿಯಾಗಿದೆ. ನಿಜವಾಗಿಯೂ 40 ನಿಮಿಷದ ವಿಡಿಯೋ ಇದೆಯಾ ಎಂಬುದರ ಬಗ್ಗೆ ಸೈಬರ್ ಭದ್ರತಾ ತಜ್ಞರು ಮಾಹಿತಿ ನೀಡಿದ್ದಾರೆ.
610
Image Credit : Asianet News
40 ನಿಮಿಷಗಳ ವೈರಲ್ ವಿಡಿಯೋ’ ಇದೆಯೇ?
ಇದು ಯಾವುದೇ ಒಂದು ವಿಡಿಯೋ ಸಂಬಂಧಿಸಿದ ಟ್ಯಾಗ್ ಅಲ್ಲ ಎಂದು ವರದಿಗಳು ಹೇಳುತ್ತವೆ. ದಾರಿತಪ್ಪಿಸುವ ಥಂಬ್‌ನೇಲ್‌ಗಳು ಬಳಕೆದಾರರನ್ನು ಸೆಳೆಯುತ್ತಿವೆ. ವಿಡಿಯೋದಲ್ಲಿ ಏನಿದೆ ಎಂದು ತಿಳಿಯದೇ ಬಳಕೆದಾರರು ಲಿಂಕ್ ಓಪನ್ ಮಾಡಿ ಸೈಬರ್ ವಂಚಕರ ಬಲೆಗೆ ಸಿಲುಕುವ ಸಾಧ್ಯತೆಗಳಿವೆ. ಸೈಬರ್ ವಂಚಕರು ಟ್ರೆಂಡಿಂಗ್ ಟ್ಯಾಗ್ ಬಳಸಿಯೇ ವಂಚನೆಗೆ ಇಳಿಯುತ್ತಾರೆ ಎಂದು ಸೈಬರ್ ಭದ್ರತಾ ತಜ್ಞರು ಎಚ್ಚರಿಸಿದ್ದಾರೆ.
710
Image Credit : Asianet News
ವಂಚನೆಗಳು
19 ನಿಮಿಷಗಳ ಹಿಂದಿನ ವಿವಾದದ ಸಮಯದಲ್ಲಿ ಕಂಡುಬಂದಂತೆ, ಈ ಬಾರಿ 40 ನಿಮಿಷ ವಿಡಿಯೋದಲ್ಲಿ ವಂಚನೆಗಳು ಕಂಡು ಬರುತ್ತಿವೆ. ಬಳಕೆದಾರರ ಮಾಹಿತಿಯನ್ನು ಕಳ್ಳತನ ಮಾಡಲು ಕೆಲವೊಮ್ಮೆ ಈ ರೀತಿ ಕೃತಕವಾಗಿ ಟ್ರೆಂಡ್ ಸೃಷ್ಟಿಸಲಾಗುತ್ತದೆ. ಈ ಕೃತಕ ಟ್ರೆಂಡ್‌ಗಳು malware ವೈರಸ್ ಹೊಂದಿದ್ದು, ನಿಮ್ಮ ಕಂಪ್ಯೂಟರ್/ಮೊಬೈಲ್‌ಗಳಿಗೆ ಹಾನಿಯನ್ನುಂಟು ಮಾಡುತ್ತವೆ.
810
Image Credit : Getty
pop-ups ಮೆಸೇಜ್
ಸ್ಕ್ರೀನ್ ಮೇಲೆ ಕಾಣುವ pop-ups ಆಕ್ರಮಣಕಾರಿಯಾಗಿದ್ದು, ಕೆಲವೇ ನಿಮಿಷಗಳಲ್ಲಿ ನಿಮ್ಮ ಸಿಸ್ಟಮ್‌ನಿಂದ ಖಾಸಗಿ ಮಾಹಿತಿ ಕದಿಯುತ್ತವೆ. ಈ ಮಾಹಿತಿಯ ಕೊರತೆಯಿಂದ ಬಳಕೆದಾರರು ವಂಚನೆಗೆ ಒಳಗಾಗುತ್ತಿದ್ದಾರೆ.
910
Image Credit : stockPhoto
ಕೃತಕ ಬುದ್ಧಿಮತ್ತೆ ಬಳಸಿ ರಚನೆ ಮಾಡಿರುವ ವಿಡಿಯೋ
ಈ ಕುರಿತು ಹರಿಯಾಣ ಎನ್‌ಸಿಬಿ ಸೈಬರ್ ಸೆಲ್ ಅಧಿಕಾರಿ ಅಮಿತ್ ಯಾದವ್ ಪ್ರತಿಕ್ರಿಯಿಸಿದ್ದು, ವೈರಲ್ ವಿಡಿಯೋವನ್ನು ಕೃತಕ ಬುದ್ಧಿಮತ್ತೆ ಬಳಸಿ ರಚಿಸಲಾಗಿದೆ. ಈ ರೀತಿಯ ಚಟುವಟಿಕೆಯನ್ನು ಭಾಗಿಯಾಗೋದು ಕಾನೂನಿನ ಪ್ರಕಾರ ಅಪರಾಧ.
1010
Image Credit : stockPhoto
ಏನು ಶಿಕ್ಷೆ?
ಇಂತಹ ವಿಡಿಯೋ ಸೇವ್, ಶೇರ್ ಮಾಡಿಕೊಂಡ್ರೆ ಐಪಿಸಿ ಸೆಕ್ಷನ್ 67, 67A ಮತ್ತು 66 ರ ಅಡಿಯಲ್ಲಿ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ. ₹ 2 ಲಕ್ಷದವರೆಗೆ ದಂಡ ಅಥವಾ ಮೂರು ವರ್ಷಗಳವರೆಗೆ ಜೈಲು ಶಿಕ್ಷೆಗೊಳಗಾಗಹುದು. ಹಾಗಾಗಿ ಲೀಕ್ ಆಗಿರುವ ವಿಡಿಯೋವನ್ನು ಸರ್ಚ್, ಶೇರ್ ಮಾಡೋದನ್ನು ನಿಲ್ಲಿಸಬೇಕು ಎಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ:
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ