Headlines

ಹೃತಿಕ್ ಆಯ್ತು ಈಗ ಶಾರುಖ್ ಖಾನ್ ಜೊತೆ ನಟಿಸಲಿದ್ದಾರಾ ಜೂ ಎನ್​​ಟಿಆರ್?

ಹೃತಿಕ್ ಆಯ್ತು ಈಗ ಶಾರುಖ್ ಖಾನ್ ಜೊತೆ ನಟಿಸಲಿದ್ದಾರಾ ಜೂ ಎನ್​​ಟಿಆರ್?


‘ಆರ್ ಆರ್ ಆರ್’ (ಆರ್ ಆರ್ ಆರ್) ಸಿನಿಮಾದ ಬಳಿಕ ಜೂ ಟಿಆರ್ (ಜೂನಿಯರ್ ಎನ್ ಟಿಆರ್) ಪ್ಯಾನ್ ಇಂಡಿಯಾ ಸ್ಟಾರ್ ನಟ ಎನಿಸಿಕೊಂಡಿದ್ದಾರೆ. ‘ವಾರ್ 2’ ಸಿನಿಮಾ ಮೂಲಕ ಬಾಲಿವುಡ್‌ಗೆ ಪ್ರವೇಶ ಪಡೆದಿರುವ ಜೂ ಟಿಆರ್, ಅಲ್ಲಿಯೂ ಸಹ ದೊಡ್ಡ ಅಭಿಮಾನಿ ವರ್ಗ. ಆದರೆ ಅವರು ನಟಿಸಿದ ಮೊದಲ ಬಾಲಿವುಡ್ ಸಿನಿಮಾ ‘ವಾರ್ 2’ ಫ್ಲಾಪ್ ಆಗುತ್ತಿದೆ. ಆದರೆ ಇದೀಗ ಮತ್ತೊಬ್ಬ ಸ್ಟಾರ್ ನಟನ ಜೊತೆಗೆ ನಟಿಸಲು ಜೂ ಎನ್ ಟಿಆರ್ ಮುಂದಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಶಾರುಖ್ ಖಾನ್ ಜೊತೆಗೆ ಜೂ ಎನ್ ಟಿಆರ್ ನಟಿಸಲಿದ್ದಾರೆ ಎಂಬ ಮಾತುಗಳು ಗಟ್ಟಿಯಾಗಿ ಕೇಳಿ ಬರುತ್ತಿವೆ. ‘ವಾರ್ 2’ ನಿರ್ಮಿಸಿದ್ದ ಯಶ್ ರಾಜ್ ಫಿಲಂಸ್ ನವರ ಮತ್ತೊಂದು ಸ್ಪೈ ಸಿನಿಮಾ ‘ಪಠಾಣ’ದಲ್ಲಿ ಶಾರುಖ್ ಖಾನ್ ನಟಿಸಿದ್ದು, ಇದೀಗ ‘ಪಠಾಣ್’ ಸಿನಿಮಾದ ಸೀಕ್ವೆಲ್ ಮಾಡಲು ವೈಆರ್ ಎಫ್ ಮುಂದಾಗಿದೆ. ‘ಪಠಾಣ್’ ಸಿನಿಮಾದ ಸೀಕ್ವೆಲ್ ನಲ್ಲಿ ಶಾರುಖ್ ಖಾನ್ ಜೊತೆಗೆ ಜೂ ಎನ್ ಟಿಆರ್ ಅವರು ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಇದನ್ನೂ ಓದಿ:ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ನಟ ಜೂ ಎನ್ ಟಿಆರ್: ಕಾರಣವೇನು?

‘ವಾರ್ 2’ ಸಿನಿಮಾದಲ್ಲಿ ಜೂ ಎನ್ ಟಿಆರ್ ಮೇಜರ್ ರಘು ವಿಕ್ರಂ ಚಲಪತಿ ಹೆಸರಿನ ಪಾತ್ರದಲ್ಲಿ ನಟಿಸಿದ್ದರು. ‘ವಾರ್ 2’ ಸಿನಿಮಾದಲ್ಲಿ ಹೃತಿಕ್ ರೋಷನ್ ಗೆ ಸಖತ್ ಟಕ್ಕರ್ ನೀಡಿದ್ದರು. ಸಿನಿಮಾದಲ್ಲಿ ಜೂ ಎನ್ ಟಿಆರ್ ಪಾತ್ರಕ್ಕೂ ಪ್ರಶಂಸೆಯಾಗಿತ್ತು. ಇದೀಗ ಅದೇ ಪಾತ್ರ ‘ಪಠಾಣ 2’ ಸಿನಿಮಾದಲ್ಲಿಯೂ ಇರಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ವೈಆರ್ಎಫ್ ಹಲವು ಸ್ಪೈ ಸಿನಿಮಾಗಳನ್ನು ನಿರ್ಮಿಸಿದ್ದು, ಒಂದಕ್ಕೊಂದು ಲಿಂಕ್ ಇಡುತ್ತಲೇ ಇದೆ. ‘ಪಠಾಣ್’ ಸಿನಿಮಾದಲ್ಲಿ ‘ಟೈಗರ್’ ಸಿನಿಮಾದ ಪಾತ್ರಧಾರಿ ಸಲ್ಮಾನ್ ಖಾನ್ ಅತಿಥಿ ಪಾತ್ರದಲ್ಲಿ ಬಂದು ಹೋಗಿದ್ದಾರೆ, ಈಗ ಜೂ ಎನ್ ಟಿಆರ್ ಸಹ ಎಂಟ್ರಿ ನೀಡುತ್ತಿದ್ದಾರೆ.

‘ಪಠಾಣ್’ ಸಿನಿಮಾ 2023 ರಲ್ಲಿ ಬಿಡುಗಡೆ ಆಗುತ್ತಿದೆ. ಶಾರುಖ್ ಜೊತೆಗೆ ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ ನಟಿಸಿದ್ದ ಆ ಸಿನಿಮಾ ಭರ್ಜರಿ ಹಿಟ್ ಆಗಿದೆ. ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ 1000 ಕೋಟಿ ಗಳಿಸಿತ್ತು. ಇದೀಗ ಸಿನಿಮಾದ ಸೀಕ್ವೆಲ್ ನಿರ್ಮಿಸಲು ವೇದಿಕೆ ಸಜ್ಜಾಗಿದೆ. ಆದರೆ ಜೂ ಎನ್ ಟಿಆರ್ ನಿಜವಾಗಿಯೂ ಈ ಸಿನಿಮಾ ಸೇರಿಕೊಳ್ಳುತ್ತಾರಾ ಎಂಬ ಅನುಮಾನ ಇದೆ. ‘ವಾರ್ 2’ ಸಿನಿಮಾ ನಿರೀಕ್ಷಿತ ಹಿಟ್ ಆಗಲಿಲ್ಲವಾದ್ದರಿಂದ ಜೂ.ಎನ್ ಟಿಆರ್ ಹಿಂದೇಟು ಹಾಕುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *