ಬಿಗ್ ಬಾಸ್ (ಬಿಗ್ ಬಾಸ್ ಕನ್ನಡ) ಮನೆಯೊಳಗೆ ಊಟಕ್ಕೆ ಬಹಳ ಮಹತ್ವವಿದೆ. ಕೇಳಿದ್ದೆಲ್ಲವೂ ಅಲ್ಲಿ ಸಿಗುವುದಿಲ್ಲ. ಇದ್ದಿದ್ದರಲ್ಲಿ ಹೊಂದಾಣಿಕೆ ಮಾಡಿಕೊಂಡು ಬದುಕಬೇಕು. ಈ ಮೊದಲು ಒಂದು ಆಯಪಲ್, ಸ್ವಲ್ಪ ಉಪ್ಪಿನಕಾಯಿ ಸಲುವಾಗಿಯೂ ಬಿಗ್ ಬಾಸ್ ಮನೆಯಲ್ಲಿ ಭಾರಿ ಜಗಳ ಆಗಿದ್ದುಂಟು. ಈಗ ಬಿಗ್ ಬಾಸ್ ಮನೆಯ ಒಳಗೆ ಮೊಟ್ಟೆ ಕಳ್ಳತನ ಆಗಿದೆ! ಗಿಲ್ಲಿ ನಟ (ಗಿಲ್ಲಿ ನಟ) ಅವರು ಊಟ ಮಾಡುತ್ತಿರುವಾಗ ಈ ರೀತಿ ಆಗಿದೆ. ಗಿಲ್ಲಿ ತಟ್ಟೆಯಲ್ಲಿ ಇದ್ದ ಮೊಟ್ಟೆಯನ್ನು ಪಕ್ಕದಲ್ಲೇ ಕುಳಿತಿದ್ದ ರಜತ್ (ರಜತ್ ಕಿಶನ್) ಅವರು ಕದ್ದಿದ್ದಾರೆ. ತಮ್ಮ ತಟ್ಟೆಯಲ್ಲಿ ಮೊಟ್ಟೆ ಕಾಣದೆ ನೋಡಿ ಗಿಲ್ಲಿಗೆ ಅನುಮಾನ ಬಂದಿದೆ. ಡಿಸೆಂಬರ್ 16 ರ ಸಂಚಿಕೆಯ ಪ್ರೋಮೋ ಇಲ್ಲಿದೆ ನೋಡಿ. ಕಲರ್ಸ್ ಕನ್ನಡ ವಾಹಿನಿ ಮತ್ತು ಜಿಯೋ ಹಾಟ್ಸ್ಟಾರ್ ಒಟಿಟಿ ಮೂಲಕ ಪೂರ್ತಿ ಸಂಚಿಕೆ ವೀಕ್ಷಿಸಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.