Headlines

ನಾಳೆಯಿಂದ ಬೆಂಗಳೂರಿನಲ್ಲಿ ವರ್ಲ್ಡ್ ಟೆನಿಸ್ ಲೀಗ್: 100ಕ್ಕೂ ಹೆಚ್ಚು ದೇಶಗಳಲ್ಲಿ ಪ್ರಸಾರ

ನಾಳೆಯಿಂದ ಬೆಂಗಳೂರಿನಲ್ಲಿ ವರ್ಲ್ಡ್ ಟೆನಿಸ್ ಲೀಗ್: 100ಕ್ಕೂ ಹೆಚ್ಚು ದೇಶಗಳಲ್ಲಿ ಪ್ರಸಾರ


ಬೆಂಗಳೂರು, ಡಿಸೆಂಬರ್ 16: ನಾಳೆಯಿಂದ ಬೆಂಗಳೂರಿನಲ್ಲಿ ವರ್ಲ್ಡ್ ಟೆನಿಸ್ ಆರಂಭವಾಗಲಿದೆ. ಐಕಾನಿಕ್ ಸ್ಪೋರ್ಟ್ಸ್ ಮತ್ತು ಇವೆಂಟ್ಸ್ ಪ್ರಸ್ತುತಪಡಿಸುವ, ಸ್ಪೈಸ್‌ಜೆಟ್‌ನಿಂದ ಪವರ್‌ಡ್ ಆಗಿರುವ ವರ್ಲ್ಡ್ ಟೆನಿಸ್ ಸಂಸ್ಥೆ (WTL) ಭಾರತ ಸೇರಿದಂತೆ ವಿಶ್ವದ 100ಕ್ಕೂ ಹೆಚ್ಚು ದೇಶಗಳಲ್ಲಿ ಪ್ರಸಾರ. ಡಿಸೆಂಬರ್ 17 ರಿಂದ 20 ರವರೆಗೆ ಬೆಂಗಳೂರಿನ ಎಸ್.ಎಂ. ಕೃಷ್ಣ ಟೆನಿಸ್ ಸ್ಟೇಡಿಯಂನಲ್ಲಿ ನಡೆಯಲಿರುವ WTLನ ಮೊದಲ ಭಾರತ ಆವೃತ್ತಿಯನ್ನು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ನೇರ ಪ್ರಸಾರ ಮಾಡಲಿದೆ.

ವರ್ಲ್ಡ್ ಟೆನಿಸ್ ಒಕ್ಕೂಟ ಅಮೆರಿಕಾ, ಯುರೋಪ್, ಏಷ್ಯಾ, ಭಾರತೀಯ ಉಪಖಂಡ, ಮಿಡಲ್ ಈಸ್ಟ್ ಮತ್ತು ಉತ್ತರ ಆಫ್ರಿಕಾ (MENA), ಸಬ್-ಸಹಾರಾ ಆಫ್ರಿಕಾ, ರಷ್ಯಾ ಮತ್ತು ವಿಶ್ವದ ಇತರ ಭಾಗಗಳಲ್ಲಿ ಜಾಗತಿಕವಾಗಿ ಪ್ರಸಾರ. ಟೆನಿಸ್ ಚಾನೆಲ್, ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್, ಬೋಲ್ಶೆ, ಫ್ಯಾನ್‌ಕೋಡ್, ಕ್ಯಾನಲ್+, ಸೂಪರ್‌ಟೆನಿಸ್ ಇಟಲಿ, ಆನ್‌ಟೈಮ್ ಸ್ಪೋರ್ಟ್ಸ್, ಸ್ಟಾರ್‌ಟೈಮ್ಸ್, ಸ್ಟೈಕ್ಸ್ ಸ್ಪೋರ್ಟ್ಸ್ ಸೇರಿದಂತೆ ಹಲವು ಪ್ರಸಾರಕರ ಮೂಲಕ ಈ ವಿಶ್ವದಾದ್ಯಂತ ಅಭಿಮಾನಿಗಳನ್ನು ತಲುಪಲಿದೆ.

ಇದನ್ನೂ ಓದಿ: ಕೊಲ್ಕತ್ತಾದ ಮೆಸ್ಸಿ ಕಾರ್ಯಕ್ರಮದಲ್ಲಿ ನಡೆದ ಗಲಭೆಗೆ ಬಂಗಾಳದ ಕ್ರೀಡಾ ಸಚಿವರು ರಾಜೀನಾಮೆ

ಭಾರತದಲ್ಲಿ ಮೊದಲ ಬಾರಿಗೆ ವರ್ಲ್ಡ್ ಟೆನಿಸ್ ಲೀಗ್ (WTL), ನಾಲ್ಕು ದಿನಗಳ ಕಾಲ. ಭಾರತದ ಮೊದಲ ಆವೃತ್ತಿಯಲ್ಲಿ ಗೇಮ್ ಚೇಂಜರ್ಸ್ ಫಾಲ್ಕನ್ಸ್, ವಿಬಿ ರಿಯಾಲ್ಟಿ ಹ್ಯಾಕ್ಸ್, ಆಸಿ ಮ್ಯಾವೆರಿಕ್ಸ್ ಕೈಟ್ಸ್ ಮತ್ತು AOS ಲ್ಸ್ ತಂಡಗಳು ಭಾಗವಹಿಸಿದ್ದವು, ಪ್ರತಿ ತಂಡವೂ ಅಗ್ರ ಅಂತಾರಾಷ್ಟ್ರೀಯ ಮತ್ತು ಭಾರತೀಯ ಟೆನಿಸ್ ಆಟಗಾರರನ್ನು ಒಳಗೊಂಡಿದೆ. ಡೇನಿಯಲ್ ಮೆಡ್ವೆಡೆವ್, ನಿಕ್ ಕಿರ್ಗಿಯೊಸ್, ಗೇಲ್ ಮಾನ್ಫಿಲ್ಸ್, ಡೆನಿಸ್ ಶಪೋವಾಲೊವ್ ಮತ್ತು ಎಲಿನಾ ಸ್ವಿಟೋಲಿನಾ ಅವರಂತಹ ವಿಶ್ವದ ಖ್ಯಾತ ಆಟಗಾರರು, ಜೊತೆಗೆ ಭಾರತದ ಶ್ರೇಷ್ಠ ಟೆನಿಸ್ ತಾರೆಗಳಾದ ರೋಹನ್ ಬೋಪಣ್ಣ, ಸುಮಿತ್ ನಾಗಲ್, ಯೂಕಿ ಭಾಂಬ್ರಿ, ಸಹಜ ಯಮಲಪಲ್ಲಿ ಹಾಗೂ ಇತರ ಉದಯೋನ್ಮುಖ ಆಟಗಾರರು ಭಾಗವಹಿಸಲಿದ್ದಾರೆ.

ಈ ಕುರಿತು ಮಾತನಾಡಿದ ವರ್ಲ್ಡ್ ಟೆನಿಸ್ ಲೀಗ್‌ನ ಸಹ-ಸ್ಥಾಪಕಿ ಹೇಮಾಲಿ ಶರ್ಮಾ, ಭಾರತದಲ್ಲಿ ನಮ್ಮ ಮೊದಲ ಆವೃತ್ತಿಗೆ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಫ್ಯಾನ್‌ಕೋಡ್ ಅವರ ಅಧಿಕೃತ ಪ್ರಸಾರ ಮತ್ತು ಡಿಜಿಟಲ್ ಸ್ಟ್ರೀಮಿಂಗ್ ಪಾಲುದಾರರಾಗಿ ನಮಗೆ ಸಂತೋಷ ತಂದಿದೆ. ವರ್ಲ್ಡ್ ಟೆನಿಸ್ ಲೀಗ್‌ಗಳ ರೋಚಕ ಪಂದ್ಯಗಳು 100 ದೇಶಕ್ಕೂ ಹೆಚ್ಚು ಅಭಿಮಾನಿಗಳಿಗೆ ತಲುಪಲಿವೆ.

ಫ್ಯಾನ್‌ಕೋಡ್‌ನ ಸಹ-ಸ್ಥಾಪಕರಾದ ಪ್ರಸಾನ ಕೃಷ್ಣನ್ ಮಾತನಾಡಿ, ವರ್ಲ್ಡ್ ಟೆನಿಸ್ ಕಾರ್ಯಕ್ರಮವನ್ನು ಭಾರತೀಯರಿಗೆ ತಲುಪಿಸಲು ನಾವು ಉತ್ಸುಕರಾಗಿದ್ದೇವೆ. ಈ ಆವೃತ್ತಿಯು ಮೆಡ್ವೆಡೆವ್, ಕಿರ್ಗಿಯೋಸ್, ಮಾನ್ಫಿಲ್ಸ್, ಬಡೋಸಾ, ಸ್ವಿಟೋಲಿನಾ ಅವರಂತಹ ಜಾಗತಿಕ ತಾರೆಗಳನ್ನು ಹತ್ತಿರದಿಂದ ನೋಡುವ ಅಪೂರ್ವ ಅವಕಾಶವನ್ನು ಭಾರತೀಯ ಅಭಿಮಾನಿಗಳಿಗೆ ಒದಗಿಸುತ್ತಿದೆ ಎಂದು ಪ್ರಕಟಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *