
ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ತಂಡ ಮಿನಿ ಹರಾಜಿನಲ್ಲಿ ತನ್ನ ನಾಲ್ಕನೇ ಖರೀದಿಯಾಗಿ ಮಧ್ಯಪ್ರದೇಶದ ಯುವ ಆಲ್ರೌಂಡರ್ 23 ವರ್ಷದ ಮಂಗೇಶ್ ಯಾದವ್ ಅವರನ್ನು ತಂಡಕ್ಕೆ ಸೇರಿಸಿದೆ. ಮೂಲ ಬೆಲೆ 30 ಲಕ್ಷ ರೂ ಹರಾಜಿಗೆ ಬಂದ ಮಂಗೇಶ್ ಅವರ ಖರೀದಿಗೆ ಸನ್ ರೈಸರ್ಸ್ ಹೈದರಾಬಾದ್ ಹಾಗೂ ಆರ್ಸಿಬಿ ನಡುವೆ ತೀವ್ರ ಪೈಪೋಟಿ ನಡುವೆ. ಅಂತಿಮವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಂಗೇಶ್ ಯಾದವ್ ಅವರಿಗೆ 5.20 ಕೋಟಿ ರೂ.ಗೆ ಖರೀದಿಸಲಾಗಿದೆ
ಮಂಗೇಶ್ ಯಾದವ್ ಎಡಗೈ ವೇಗದ ಬೌಲರ್ ಆಗಿದ್ದು ಬ್ಯಾಟಿಂಗ್ ಕೂಡ ಮಾಡಬಲ್ಲರು. ಮಂಗೇಶ್ ಆರ್ಸಿಬಿ ತಂಡದ ನಾಯಕ ರಜತ್ ಪಾಟಿದರ್ ಪ್ರತಿನಿಧಿಸುವ ತಂಡದ ಪರ ದೇಶಿ ಕ್ರಿಕೆಟ್ ಆಡುತ್ತಾರೆ. ಹೀಗಾಗಿ ನಾಯಕನ ಕೋರಿಕೆಯ ಆರ್ಸಿಬಿ ಮಂಗೇಶ್ ಅವರನ್ನು ಖರೀದಿಸಿದೆ. ಜೊತೆಗೆ ಪ್ರಸ್ತುತ ನಡೆಯುತ್ತಿರುವ ಸೈಯದ್ ಮುಸ್ತಾಕ್ ಅಲಿ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನವಿದೆ.
2025 ರ ಎಂಪಿ ಟಿ20 ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಮಂಗೇಶ್ 14 ಪಂದ್ಯಾವಳಿಯಲ್ಲಿ ಅತಿ ಹೆಚ್ಚು ಹಣ ಪಡೆದ ಬೌಲರ್ ಆಗಿದ್ದರು. ಇದಲ್ಲದೆ, ಬುಚಿ ಬಾಬು ಟೂರ್ನಮೆಂಟ್ನಲ್ಲಿ ಪಂಜಾಬ್ ವಿರುದ್ಧ ಅವರ 75 ರನ್ಗಳ ಇನ್ನಿಂಗ್ಸ್ ಕೂಡ ಆಡಿದ್ದರು. ಪವರ್ಪ್ಲೇ ಮತ್ತು ಡೆತ್ಬೌಲಿಂಗ್ಗಳಲ್ಲಿ ಸಾಕಷ್ಟು ಬೌಲಿಂಗ್ ಮಾಡಬಲ್ಲ ಮಂಗೇಶ್ ಬೌಲಿಂಗ್ ಜೊತೆಗೆ ಅಗತ್ಯವಿದ್ದಾಗ ಬಗ್ಗೆ ಬ್ಯಾಟಿಂಗ್ ಕೂಡ ಮಾಡುತ್ತಾರೆ.