16.40 ಕೋಟಿ ರೂ. ಪರ್ಸ್‌ನೊಂದಿಗೆ 2026 ರ ಐಪಿಎಲ್ ಮಿನಿ ಹರಾಜಿಗೆ ಎಂಟ್ರಿಕೊಟ್ಟಿದ್ದ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ತನ್ನ ಬಳಗಕ್ಕೆ 8 ಆಟಗಾರರನ್ನು ಖರೀದಿಸುವ ಮೂಲಕ ತಂಡವನ್ನು ಮತ್ತಷ್ಟು ಬಲಪಡಿಸಿದೆ. 20 ರ ಆವೃತ್ತಿಯಲ್ಲಿ ಈ ತಂಡ ಹಾಲಿ ಚಾಂಪಿಯನ್ ಆಗಿದ್ದರೂ, ತಂಡದ ಪರ ಹೆಚ್ಚು ಪರಿಣಾಮಕಾರಿಯಾದ ಆಟಗಾರ ಕೈಬಿಟ್ಟ ಆರ್ಸಿಬಿ, ಮಿನಿ ಹರಾಜಿನಲ್ಲಿ ಯಾರನ್ನು ಖರೀದಿಸಲಿದೆ ಎಂಬುದು ಎಲ್ಲರ ಕುತೂಹಲ ಮೂಡಿಸಿತ್ತು. ಅದರಂತೆ ತಂಡಕ್ಕೆ ಅಗತ್ಯವಿರುವ ಆಟಗಾರರನ್ನು ಖರೀದಿಸಲು ಯಶಸ್ವಿಯಾಗಿರುವ ಸಿಬಿ 6 ಭಾರತೀಯ ಆಟಗಾರರು ಮತ್ತು ಇಬ್ಬರು ವಿದೇಶಿ ಆಟಗಾರರನ್ನು ತಂಡಕ್ಕೆ ಸೇರಿಸಲಾಗಿದೆ.
ಅಧಿಕ ಮೊತ್ತಕ್ಕೆ ಆರ್ಸಿಬಿ ಸೇರಿದ ವೆಂಕಟೇಶ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಐಪಿಎಲ್ ಹರಾಜಿನಲ್ಲಿ ವೆಂಕಟೇಶ್ ಅಯ್ಯರ್ ಮೇಲೆ ಅಧಿಕ ಬಂಡವಾಳ ಹಾಕಿತು. ಹಿಂದೆ ಕೆಕೆಆರ್ ಪರ ಆಡಿದ್ದ ವೆಂಕಟೇಶ್ ಅಯ್ಯರ್ ಅವರಿಗೆ ಆರ್‌ಸಿಬಿ 7 ಕೋಟಿ ರೂ.ಗೆ ಖರೀದಿಸಿದೆ. ಅಯ್ಯರ್ ಬಳಿಕ ಎರಡನೇ ಅಧಿಕ ಬೆಲೆಗೆ ಖರೀದಿಯಾದ ಮಧ್ಯಪ್ರದೇಶ ಆಲ್ ರೌಂಡರ್ ಮಂಗೇಶ್ ಯಾದವ್ ಅವರು ಆರ್ಸಿಬಿ 5.2 ಕೋಟಿಗೆ ಖರೀದಿಸಿದರು. ಜೊತೆಗೆ ನ್ಯೂಜಿಲೆಂಡ್ ವೇಗಿ ಜಾಕೋಬ್ ಡಫಿ ಅವರು 2 ಕೋಟಿ ಮೂಲ ಬೆಲೆಗೆ ಖರೀದಿಸಿದರು.
ಆರ್ಸಿಬಿ ಖರೀದಿಸಿದ 8 ಆಟಗಾರರು
ವೆಂಕಟೇಶ್ ಅಯ್ಯರ್- 7 ಕೋಟಿ ರೂ.
ಮಂಗೇಶ್ ಯಾದವ್- 5.2 ಕೋಟಿ ರೂ.
ಜಾಕೋಬ್ ಡಫಿ- 2 ಕೋಟಿ ರೂ.
ಸಾತ್ವಿಕ್ ದೇಸ್ವಾಲ್- 30 ಲಕ್ಷ ರೂ.
ಜೋರ್ಡಾನ್ ಕಾಕ್ಸ್- 75 ಲಕ್ಷ ರೂ.
ವಿಕ್ಕಿ ಒಸ್ತ್ವಾಲ್- 30 ಲಕ್ಷ ರೂ.
ಕಾನಿಷ್ಕ್ ಚೌಹಾಣ್- 30 ಲಕ್ಷ ರೂ.
ವಿಹಾನ್ ಮಲ್ಹೋತ್ರಾ- 30 ಲಕ್ಷ ರೂ.
ಆರ್ಸಿಬಿ ಪೂರ್ಣ ತಂಡ: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ವೆಂಕಟೇಶ್ ಅಯ್ಯರ್, ಕೃನಾಲ್ ಪಾಂಡ್ಯ, ಮಂಗೇಶ್ ಯಾದವ್, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಜಾಕೋಬ್ ಬೆಥೆಲ್, ಜೋಶ್ ಕುಮಾರ್ ಜಾಲ್ವುಡ್, ಜಾಕೋಬ್ ಬೆಥೆಲ್, ಜೋಶ್ ಕುಮಾರ್ ಜಾಲ್ವುಡ್, ನುವಾನ್ ತುಷಾರ, ರಸಿಕ್ ಸಲಾಂ, ಅಭಿನಂದನ್ ಸಿಂಗ್, ಸುಯಶ್ ಶರ್ಮಾ, ಜೋರ್ಡಾನ್ ಕಾಕ್ಸ್, ಸಾತ್ವಿಕ್ ದೇಸ್ವಾಲ್, ವಿಕ್ಕಿ ಒಸ್ತ್ವಾಲ್, ಕಾನಿಷ್ಕ್ ಚೌಹಾಣ್, ವಿಹಾನ್ ಮಲ್ಹೋತ್ರಾ.
ಹೆಚ್ಚಿನ ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ