ರಕ್ಷಿತಾ ಶೆಟ್ಟಿ ಅವರು ಬಿಗ್ ಬಾಸ್ಗೆ ಬಂದಾಗ ಸಾಕಷ್ಟು ಗಮನ ಸೆಳೆದರು. ಅವರ ಆಟದ ಶೈಲಿ ಎಲ್ಲರಿಗೂ ಇಷ್ಟವಾಗಿದೆ. ಆದರೆ, ರಕ್ಷಿತಾ ಶೆಟ್ಟಿ ಈಗ ಸಂಪೂರ್ಣವಾಗಿ ಬದಲಾಗಿದ್ದಾರೆ. ಅವರಲ್ಲಿ ಕಾನ್ಫಿಡೆನ್ಸ್ ಎದ್ದು ಕಾಣಿಸುತ್ತಿದೆ. ಧ್ರುವಂತ್ ಅವರು ರಕ್ಷಿತಾನ ತಿದ್ದುವ ಪ್ರಯತ್ನ ಮಾಡುತ್ತಿದ್ದಾರೆ. ಆದರೂ ಅದು ಕೆಲಸ ಮಾಡುತ್ತಿಲ್ಲ. ರಕ್ಷಿತಾ ಆಟ ಇದೇ ರೀತಿ ಮುಂದುವರಿದರೆ ಸಂಕಷ್ಟ ಎದುರಿಸಬೇಕಾದ ಪರಿಸ್ಥಿತಿ ಎದುರಾಗಬಹುದು.
ರಕ್ಷಿತಾ ಶೆಟ್ಟಿ ಅವರ ಆಟದ ಶೈಲಿಯ ಬಗ್ಗೆ ಅನೇಕರಿಗೆ ಮೆಚ್ಚುಗೆ ಇತ್ತು. ಅವರು ಅಶ್ವಿನಿ ಗೌಡ ಹಾಗೂ ಜಾನ್ವಿಯನ್ನು ಎದುರು ಹಾಕಿಕೊಂಡಾಗ ಅವರ ಆಟಕ್ಕೆ ಸಖತ್ ಮೈಲೇಜ್ ಸಿಕ್ಕಿತು. ಆದರೆ, ರಕ್ಷಿತಾಗಿರೋ ಬದಲಿಗೆ ಕಾನ್ಫಿಡೆನ್ಸ್ ಅವರನ್ನು ಹಾಳು ಮಾಡುತ್ತಿದೆ ಎಂಬ ಅಭಿಪ್ರಾಯವಿದೆ. ಕೆಲವರನ್ನು ಸೋಲಿಸಲು ಅವರು ಯಾವ ಹಂತಕ್ಕೆ ಬೇಕಾದರೂ ಇಳಿಯಲು ರೆಡಿ ಇದ್ದಾರೆ.
ಇದನ್ನೂ ಓದಿ: ಕಾವ್ಯ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ರಕ್ಷಿತಾ ಹಾಗೂ ಧ್ರುವಂತ್ ಸೀಕ್ರೆಟ್ ರೂಂನಲ್ಲಿ ಇದ್ದಾರೆ. ರಚಿಸಲು ಬಿಗ್ ಬಾಸ್ ಇವರಿಗೆ ತಂಡ ಅವಕಾಶ. ಕಾವ್ಯಾನ ಕಂಡರೆ ರಕ್ಷಿತಾಗೆ ಸ್ವಲ್ಪವೂ ಇಷ್ಟವಿಲ್ಲ. ಅವರನ್ನು ಟಾಸ್ಕ್ನಲ್ಲಿ ಸೋಲಿಸಲು ವೀಕ್ ಟೀಂ ರಚಿಸಲು ಮುಂದಾಗಿದ್ದರು. ಆದರೆ, ಇದಕ್ಕೆ ಧ್ರುವಂತ್ ಅವಕಾಶ ಕೊಡಲಿಲ್ಲ. ಇದರಿಂದ ಕಾವ್ಯ ಗೆದ್ದರು. ಕಾವ್ಯ ಗೆದ್ದಿದ್ದಕ್ಕೆ ರಕ್ಷಿತಾ ಮಾಡಿಕೊಂಡ ಬೇಸರ ಅಷ್ಟಿಷ್ಟಲ್ಲ.
ರಕ್ಷಿತ ಆಟ ದಿನೇ ದಿನೇ ನಿರಾಸೆ ಆಗ್ತಾ ಇದೆ. ಸ್ಪಷ್ಟತೆ ಇಲ್ಲ, ಘನ ನಿಲುವು ಇಲ್ಲ – ಕೇವಲ ಗೊಂದಲ. ಇದು ಸ್ಮಾರ್ಟ್ ಆಟ ಅಲ್ಲ, ಸ್ವಯಂ ಹಾನಿ.#BBK12 pic.twitter.com/yixXD7vOOv
— ಸಂಪತ್ (@ಸಂಪತ್19039707) ಡಿಸೆಂಬರ್ 16, 2025
ಇನ್ನು, ರಕ್ಷಿತಾ ಮಾತೆ ಅವರಿಗೆ ಮುಳ್ಳಾಗುತ್ತಿದೆ. ಅವರು ಏನು ಹೇಳುತ್ತಿದ್ದಾರೆ ಎಂಬುದು ಅವರಿಗೆ ತಿಳಿಯುತ್ತಿಲ್ಲ. ಯಾವ ಮಾತಿನಲ್ಲೂ ಸ್ಪಷ್ಟನೆ ಇಲ್ಲ. ತೆಗೆದುಕೊಳ್ಳುವ ನಿರ್ಧಾರಕ್ಕೆ ಅರ್ಥವಿಲ್ಲ. ಇದು ಅವರ ಆಟಕ್ಕೆ ಹಿನ್ನಡೆ ಆಗುವ ಸಾಧ್ಯತೆ ಇದೆ. ಅವರು ಟಾಪ್ 5 ಅಲ್ಲಿ ಇರ್ತಾರಾ ಎಂಬುದೇ ಪ್ರಶ್ನೆಯಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 8:53 am, ಬುಧ, 17 ಡಿಸೆಂಬರ್ 25