Headlines

Gold Rate Today Bangalore: ಬೆಳ್ಳಿ ಬೆಲೆ ಹೊಸ ದಾಖಲೆ; ಚಿನ್ನವೂ ದುಬಾರಿ

Gold Rate Today Bangalore: ಬೆಳ್ಳಿ ಬೆಲೆ ಹೊಸ ದಾಖಲೆ; ಚಿನ್ನವೂ ದುಬಾರಿ


ಬೆಂಗಳೂರು, ಡಿಸೆಂಬರ್ 17: ಬೆಳ್ಳಿ ಬೆಲೆ ಬುಧವಾರ ಸಿಕ್ಕಾಪಟ್ಟೆ ಮೇಲೇರಿದೆ. ನಿನ್ನೆ 3 ರೂ ಕಡಿಮೆಯಾಗಿದೆ ಈ ಬಿಳಿ ಲೋಹ ಇವತ್ತು 9 ರೂಗಳಷ್ಟು ಹೈಜಂಪ್ ಮಾಡಿದೆ. ಬೆಂಗಳೂರಿನಲ್ಲಿ ಇದರ ಬೆಲೆ (ಬೆಳ್ಳಿ ದರಗಳು) ಗ್ರಾಮಕ್ಕೆ 208 ರೂ ಮುಟ್ಟಿದೆ. ಇದು ಸಾರ್ವಕಾಲಿಕ ದಾಖಲೆಯಾಗಿದೆ. ತಮಿಳುನಾಡು, ಕೇರಳ ಇತ್ಯಾದಿ ಕಡೆ ಬೆಲೆ ಬರೋಬ್ಬರಿ 222 ರೂ ಆಗಿದೆ. ಚಿನ್ನದ ಬೆಲೆಯು ಬುಧವಾರ 60 ರೂಗಳಷ್ಟು ಅಲ್ಪ ಏರಿಕೆ ಕಂಡಿದೆ. ವಿದೇಶಗಳಲ್ಲಿ ಕೆಲವೆಡೆ ಮಾತ್ರ ಸ್ವರ್ಣ ದರ ಹೆಚ್ಚಿರುವುದು. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,23,300 ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,34,510 ರೂಪಾಯಿ ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 20,800 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್‌ಗೆ 1,23,300 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್‌ಗೆ 20,800 ರೂಪಾಯಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 22,200 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಡಿಸೆಂಬರ್ 17ಕ್ಕೆ)

  • 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,451 ರೂ
  • 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,330 ರೂ
  • 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 10,088 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 208 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,451 ರೂ
  • 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,330 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 208 ರೂ

ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)

  • ಬೆಂಗಳೂರು: 12,330 ರೂ
  • ಬೆಲೆ: 12,400 ರೂ
  • ಮುಂಬೈ: 12,330 ರೂ
  • ದೆಹಲಿ: 12,345 ರೂ
  • ಕೋಲ್ಕತಾ: 12,330 ರೂ
  • ಕೇರಳ: 12,330 ರೂ
  • ಅಹ್ಮದಾಬಾದ್: 12,335 ರೂ
  • ಜೈಪುರ: 12,345 ರೂ
  • ಲಕ್ನೋ: 12,345 ರೂ
  • ಭುವನೇಶ್ವರ್: 12,330 ರೂ

ಇದನ್ನೂ ಓದಿ: ಪೋಸ್ಟ್ ಆಫೀಸ್ ಟಿಡಿ ಸ್ಕೀಮ್‌ನಲ್ಲಿ 1 ಲಕ್ಷ ರೂ ಹೂಡಿಕೆಗೆ 5 ವರ್ಷ ಸಿಗುವ ರಿಟರ್ನ್ಸ್ ಇಷ್ಟು…

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)

  • ಮಲೇಷ್ಯಾ: 553 ರಿಂಗಿಟ್ (12,190 ರೂಪಾಯಿ)
  • ದುಬೈ: 481.25 ಡಿರಾಮ್ (11,817 ರೂಪಾಯಿ)
  • ಅಮೆರಿಕ: 134 ಡಾಲರ್ (12,068 ರೂಪಾಯಿ)
  • ಸಿಂಗಾಪುರ: 173.80 ಸಿಂಗಾಪುರ ಡಾಲರ್ (12,121 ರೂಪಾಯಿ)
  • ಕತಾರ್: 481 ಕತಾರಿ ರಿಯಾಲ್ (11,884 ರೂ)
  • ಸೌದಿ ಅರೇಬಿಯಾ: 490 ಸೌದಿ ರಿಯಾಲ್ (11,766 ರುಪಾಯಿ)
  • ಓಮನ್: 51.20 ಒಮಾನಿ ರಿಯಾಲ್ (11,977 ರೂಪಾಯಿ)
  • ಕುವೇತ್: 39.14 ಕುವೇತಿ ದಿನಾರ್ (11,491 ರೂಪಾಯಿ)

ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (1 ಗ್ರಾಮ್)

  • ಬೆಂಗಳೂರು: 208 ರೂ
  • ಬೆಲೆ: 222 ರೂ
  • ಮುಂಬೈ: 208 ರೂ
  • ದೆಹಲಿ: 208 ರೂ
  • ಕೋಲ್ಕತಾ: 208 ರೂ
  • ಕೇರಳ: 222 ರೂ
  • ಅಹ್ಮದಾಬಾದ್: 208 ರೂ
  • ಜೈಪುರ: 208 ರೂ
  • ಲಕ್ನೋ: 208 ರೂ
  • ಭುವನೇಶ್ವರ್: 222 ರೂ
  • ಪುಣೆ: 208

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರವಾಗಿದೆ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಸಂಗ್ರಹಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *