Aries Yearly Horoscope 2026: 2026 ಮೇಷ ರಾಶಿಯವರಿಗೆ ಮಹತ್ತರವಾದ ಬದಲಾವಣೆಯ ವರ್ಷ; ವಾರ್ಷಿಕ ಭವಿಷ್ಯ ಇಲ್ಲಿದೆ

Aries Yearly Horoscope 2026: 2026 ಮೇಷ ರಾಶಿಯವರಿಗೆ ಮಹತ್ತರವಾದ ಬದಲಾವಣೆಯ ವರ್ಷ; ವಾರ್ಷಿಕ ಭವಿಷ್ಯ ಇಲ್ಲಿದೆ


ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರ ಪ್ರಕಾರ, ಮೇಷ ರಾಶಿಯವರಿಗೆ 2026 ಮಹತ್ತರವಾದ ಬದಲಾವಣೆಗಳ ವರ್ಷ. ಗುರು ಗ್ರಹವು ಮೂರರಿಂದ ನಾಲ್ಕನೇ ಮನೆಗೆ, ಶನಿ 12ನೇ ಮನೆ, ರಾಹು 11ರಿಂದ 10ನೇ ಮನೆಗೆ, ಹಾಗೂ ಕೇತು ಐದರಿಂದ ನಾಲ್ಕನೇ ಮನೆಗೆ ಸಂಚರಿಸಲಿದ್ದಾರೆ. ಈ ರಾಶಿಯವರಿಗೆ ಭಾಗದ ಸಾಡೇಸಾತಿ ನಡೆಯುತ್ತಿದ್ದು, ಇದು ಶುಭಫಲಗಳನ್ನು ತರಲಿದೆ ಎಂದು ಗುರೂಜಿ ಹೇಳಿದ್ದಾರೆ.

ಆದಾಯ 11, ವ್ಯಯ 5 ಆರ್ಥಿಕವಾಗಿ ಉತ್ತಮ ವರ್ಷ ಸಾಧನೆ. ಮಹಿಳೆಯರಿಗೆ ಉದ್ಯೋಗ, ವಿವಾಹ ವಿಷಯಗಳಲ್ಲಿ ಶುಭ ಕಾರ್ಯಕ್ರಮ. ತಂದೆ-ತಾಯಿಗಳ ಆಶೀರ್ವಾದ ಸದಾ ಇರಲಿದೆ. ಆದರೂ, ಗುರು ಗ್ರಹದ ಚತುರ್ಥ ಸ್ಥಾನದ ಸಂಚಾರದಿಂದ ವ್ಯಸನ, ಬುದ್ಧಿ ಚಾಂಚಲ್ಯ, ತೇಜೋಹಾನಿ ಮತ್ತು ಕಲಹಗಳ ಸಾಧ್ಯತೆಯ ಬಗ್ಗೆ ವರಾಹಮಿಹಿರ ಗ್ರಂಥವನ್ನು ಉಲ್ಲೇಖಿಸಲಾಗಿದೆ. ಅಕ್ಟೋಬರ್ 31 ರ ನಂತರ ಗುರು ಸಿಂಹ ರಾಶಿಗೆ ಬರುವುದರಿಂದ ಮಕ್ಕಳಿಂದ ಕೀರ್ತಿ ಪ್ರತಿಷ್ಠೆ, ಉದ್ಯೋಗದಲ್ಲಿ ಬದಲಾವಣೆ ಇರಲಿದೆ. ಆರ್ಥಿಕವಾಗಿ ಉತ್ತಮವಾಗಿದ್ದರೂ, ಖರ್ಚುಗಳನ್ನು ನಿಯಂತ್ರಿಸುವುದು ಮುಖ್ಯ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *