ಎನ್​ಡಿಟಿವಿ ಓಪನ್ ಆಫರ್ ವೇಳೆ ಅದಾನಿ ಗ್ರೂಪ್​ನಿಂದ ರಹಸ್ಯ ಮಾಹಿತಿ ಸೋರಿಕೆ: ಸೆಬಿ ಆರೋಪ

ಎನ್​ಡಿಟಿವಿ ಓಪನ್ ಆಫರ್ ವೇಳೆ ಅದಾನಿ ಗ್ರೂಪ್​ನಿಂದ ರಹಸ್ಯ ಮಾಹಿತಿ ಸೋರಿಕೆ: ಸೆಬಿ ಆರೋಪ


ಮುಂಬೈ, ಡಿಸೆಂಬರ್ 17: ಅದಾನಿ ಗ್ರೂಪ್ (ಅದಾನಿ ಗ್ರೂಪ್) ಮೇಲೆ ಮತ್ತೊಂದು ಪ್ರಕರಣದಲ್ಲಿ ಸೆಬಿ (SEBI) ಕಣ್ಣು ಬಿದ್ದಿದೆ. ಮೂರು ವರ್ಷಗಳ ಹಿಂದೆ ಎನ್ಡಿಟಿವಿ ಷೇರುಗಳನ್ನು ಖರೀದಿಸಲು ಅದಾನಿ ಗ್ರೂಪ್ ಓಪನ್ ಆಫರ್ ಕೊಡುವ ಸಂದರ್ಭದಲ್ಲಿ ರಹಸ್ಯ ಮಾಹಿತಿ ಸೋರಿಕೆಯಾಗಿದೆ ಸೆಬಿ ಆರೋಪವಾಗಿದೆ. ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ಬಂದಿರುವ ವರದಿ ಪ್ರಕಾರ, ಗೌತಮ್ ಅದಾನಿ ಅವರ ಮಗ, ಮತ್ತು ಅದಾನಿ ಎಂಟರ್ ಪ್ರೈಸಸ್ನ ನಿರ್ದೇಶಕರಾದ ಪ್ರಣವ್ ಅದಾನಿ ಅವರು ಎನ್ಡಿಟಿವಿ ಷೇರು ಖರೀದಿಸುವ ಓಪನ್ ಆಫರ್ನ ಬೆಲೆ ಇತ್ಯಾದಿಗಳ ಮಾಹಿತಿಯನ್ನು ತಮ್ಮ ಮಾವ ಧನಪಾಲ್ ಶಾ ಹಾಗೂ ಬಾವಂದಿರಾದ ಕುನಾಲ್ ಶಾ ಮತ್ತು ನೃಪಾಲ್ ಶಾ ಅವರಿಗೆ ಹಂಚಿಕೊಂಡಿದ್ದಾರೆ ಎಂದು ಸೆಬಿ ತಿಳಿಸಿದೆ. ಏಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ

ಸೆಬಿ 2025ರ ಅಕ್ಟೋಬರ್ 15ರಂದು ಪ್ರಣವ್ ಅದಾನಿ ಅವರಿಗೆ ನೋಟೀಸ್ ಕೊಟ್ಟಿದೆ. ಈ ನೋಟೀಸ್ ನ ಪ್ರತಿಯನ್ನು ಪಡೆದ ವರದಿ ಎಕನಾಮಿಕ್ ಟೈಮ್ಸ್ ನಲ್ಲಿ ಹೇಳಿಕೊಳ್ಳಲಾಗಿದೆ. ಈ ಹಿಂದೆಯೂ ಅದಾನಿ ಗ್ರೂಪ್ ವಿರುದ್ಧ ಸೆಬಿ ಇಂಥದ್ದೇ ಇನ್ನೊಂದು ಪ್ರಕರಣದಲ್ಲಿ ಆರೋಪ ಮಾಡಿತ್ತು. ಎಸ್‌ಬಿ ಎನರ್ಜಿ ಹೋಲ್ಡಿಂಗ್ಸ್ ನ ಶೇರಗಳನ್ನು ಅದಾನಿ ಗ್ರೀನ್ ಎನರ್ಜಿ ಸಂಸ್ಥೆ ಖರೀದಿಸುವ ಮುನ್ನ ಸೂಕ್ಷ್ಮವಾದ ಬೆಲೆ ಮಾಹಿತಿ ಪ್ರಣವ್ ಅದಾನಿ ಸೋರಿಕೆ ಅವರು ಸೆಬಿ ಆರೋಪವಾಗಿತ್ತು. ಆದರೆ, ಇತ್ತೀಚೆಗಷ್ಟೇ, ಈ ಪ್ರಕರಣದಲ್ಲಿ ಸಾಕ್ಷ್ಯಾಧಾರಷ್ಟೇ ಕೊರತೆ ಇದೆ ಎಂಬ ಕಾರಣಕ್ಕೆ ಪ್ರಕರಣವನ್ನು ಕೈಬಿಟ್ಟಿತು. ಈಗ ಎನ್ಡಿಟಿವಿ ಖರೀದಿ ಪ್ರಕರಣದಲ್ಲಿ ಸೆಬಿ ಆರೋಪ ಮಾಡಲಾಗುತ್ತಿದೆ.

ಇದನ್ನೂ ಓದಿ: 32 ವರ್ಷಗಳ ನಂತರ ಸಿಕ್ಕ ಷೇರು ಸರ್ಟಿಫಿಕೇಟ್ ಬೆಲೆ ಕೇಳಿ ಹೌಹಾರುತ್ತೀರಿ; 200 ರೂಗಳು ಈ ಷೇರುಬೆಲೆ ಈಗ 2.5 ಲಕ್ಷ ರೂ

ಏನಿದು ಎಂಡಿಟಿವಿ ಪ್ರಕರಣ?

2022ರಲ್ಲಿ ಅದಾನಿ ಎಂಟರ್‌ಪ್ರೈಸಸ್ ಸಂಸ್ಥೆಯು ಎನ್‌ಡಿಟಿವಿಯ ಶೇ 26ರಷ್ಟು ಷೇರುಗಳನ್ನು ಸಾರ್ವಜನಿಕ ಷೇರುದಾರರಿಂದ ಓಪನ್ ಆಫರ್ ಮೂಲಕ ಖರೀದಿಸುತ್ತದೆ. ಓಪನ್ ಆಫರ್ ನಿರ್ವಹಣೆ ಮಾಡುವ ಹೊಣೆ ಹೊತ್ತಿದ್ದ ಜೆಎಂ ಫೈನಾಶಿಯಲ್ ಸಂಸ್ಥೆ ಆಗಸ್ಟ್ 23 ರಂದು ಟ್ರೇಡಿಂಗ್ ಅವಧಿ ಮುಗಿದ ನಂತರ ಈ ಓಪನ್ ಆಫರ್ ಬಗ್ಗೆ ಷೇರು ವಿನಿಮಯ ಕೇಂದ್ರಗಳಿಗೆ ಮಾಹಿತಿ ನೀಡಲಾಗಿದೆ.

ಓಪನ್ ಆಫರ್ ನಲ್ಲಿ ಪ್ರತೀ ಶೇರಿಗೆ 294 ರೂ ಬೆಲೆ ಇಲ್ಲ. ಈ ರೀತಿ ಓಪನ್ ಆಫರ್ ಮಾಡುವಾಗ ಷೇರು ಖರೀದಿಸುವ ಬೆಲೆ ಮತ್ತು ದಿನದ ಹಣವನ್ನು ಬಹಳ ರಹಸ್ಯವಾಗಿ ಇಡಲಾಯಿತು. ಓಪನ್ ಆಫರ್ ಮಾಡುತ್ತಿರುವ ಸಂಸ್ಥೆಯಾಗಲೀ, ಷೇರು ವಿನಿಮಯ ಕೇಂದ್ರಗಳಾಗಲೀ ಅಥವಾ ಮಾಹಿತಿ ತಿಳಿದಿರುವ ಯಾವುದೇ ಸಂಬಂಧಿತ ವ್ಯಕ್ತಿಯಾಗಲೀ ಇದನ್ನು ಅಧಿಕೃತವಾಗಿ ಘೋಷಿಸುವವರೆಗೂ ರಹಸ್ಯವಾಗಿ ಇರಿಸಲಾಗಿದೆ.

ಆಗಸ್ಟ್ 23 ರಂದು ಸಂಜೆ ಷೇರು ವಿನಿಮಯ ಕೇಂದ್ರಗಳಿಗೆ ಓಪನ್ ಆಫರ್ ಅನ್ನು ತಿಳಿಸಲಾಯಿತು. ಆಗಸ್ಟ್ 24ಕ್ಕೆ ಇದನ್ನು ಬಹಿರಂಗಪಡಿಸಲಾಯಿತು. ಸಾಮಾನ್ಯವಾಗಿ ಈ ರೀತಿ ಓಪನ್ ಆಫರ್ ಪ್ರಕರಣಗಳಲ್ಲಿ ಸೆಬಿ ಯಾವುದಾದರೂ ಇನ್ಸೈಡರ್ ಟ್ರೇಡಿಂಗ್ ನಡೆಯುತ್ತಿದೆ ಎಂದು ಪರಿಶೀಲಿಸುತ್ತದೆ. ಎನ್ಡಿಟಿವಿ ವಿಚಾರದಲ್ಲೂ ಸೆಬಿ ಪರಿಶೀಲನೆ ನಡೆಸಿದೆ. ಓಪನ್ ಆಫರ್ ಸಲ್ಲಿಕೆಯಾಗುವ ಕೆಲ ತಿಂಗಳಿಂದ ಯಾರ್ಯಾರು ಷೇರು ವಹಿವಾಟು ನಡೆಸುತ್ತಿದ್ದಾರೆ ಎಂಬಿತ್ಯಾದಿಯನ್ನು ಸೆಬಿ ಗಮನಿಸುತ್ತದೆ.

ಇದನ್ನೂ ಓದಿ: ಎಫ್‌ಡಿ, ಸಾಲ, ಷೇರು, ಚಿನ್ನ, ವಿಮೆ, ಸೇವಿಂಗ್ಸ್ ಕುರಿತು ಈ ತಪ್ಪು ಅಭಿಪ್ರಾಯ ನಿಮಗಿದೆಯಾ? ಈಗಲೇ ಸರಿಪಡಿಸಿಕೊಳ್ಳಿ

2022ರ ಮೇ 2ರಿಂದ ಸೆಪ್ಟೆಂಬರ್ 15ರವರೆಗೆ ಸೆಬಿ ತನಿಖೆ ನಡೆಸುತ್ತದೆ. ಮಾಹಿತಿ ರಹಸ್ಯವಾಗಿಡಬೇಕಾದ ಅವಧಿಯಲ್ಲಿ ಪ್ರಣವ್ ಅದಾನಿ ಅವರ ಸಂಬಂಧಿಯಾದ ಕುನಾಲ್ ಷಾ ಅವರು ಹಲವು ಬಾರಿ ಎನ್ಡಿಟಿವಿ ಷೇರುಗಳನ್ನು ಖರೀದಿಸಿರುವುದು ಸೆಬಿ ಗಮನಕ್ಕೆ ಬಂದಿದೆ. ಈ ಅವಧಿಯಲ್ಲೇ ಪ್ರಣವ್ ಅದಾನಿ ಜೊತೆ ಕುನಾಲ್, ನೃಪಾಲ್ ಮತ್ತು ಧನಪಾಲ್ ಶಾ ಅವರು ನಿರಂತರವಾಗಿ ಮೊಬೈಲ್ ನಲ್ಲಿ ಸಂಪರ್ಕದಲ್ಲಿದ್ದರು ಎಂಬ ವಿಚಾರವೂ ಸೆಬಿ ಗಮನಕ್ಕೆ ಬಂದಿದೆ.

ಈ ಕಾರಣಕ್ಕೆ 2025ರ ಅಕ್ಟೋಬರ್ 15ರಂದು ಸೆಬಿಯಿಂದ ಪ್ರಣವ್ ಅದಾನಿ ಮತ್ತು ಇತರರಿಗೆ ನೋಟೀಸ್ ಜಾರಿ ಮಾಡಲಾಗಿದೆ. ಆರೋಪಗಳಿಗೆ ಉತ್ತರ ಕೊಡಬೇಕೆಂದು ನೋಟೀಸ್ನಲ್ಲಿ ತಿಳಿಸಲಾಗಿದೆ ಎಂದು ಎಕನಾಮಿಕ್ ಟೈಮ್ಸ್ ವರದಿಯಲ್ಲಿ ಹೇಳಲಾಗಿದೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *