ಬೆಂಗಳೂರು, ಡಿ.17: ಬೆಂಗಳೂರಿನಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಟರ್ಮಿನಲ್ 2ರಲ್ಲಿ ಹೊಸ ಸಾರ್ವಜನಿಕ ಗ್ಯಾಲರಿ ಮತ್ತು ಉದ್ಯಾನ ಮಾಡಲಾಗಿದೆ. ಇನ್ನು ಈ ಗ್ಯಾಲರಿಯಲ್ಲಿಯೇ ವಿಮಾನ ನಿಲ್ದಾಣದ ಒಳಗೆ ಹೋಗಬಹುದು. ಇದು ಜನರಿಗೆ ಹೆಚ್ಚಿನ ಕಾಲ ವಿಶ್ರಾಂತಿ ಪಡೆಯಲು ಅವಕಾಶವನ್ನು ನೀಡುತ್ತದೆ. ಈ ಗ್ಯಾಲರಿಯನ್ನು ತುಂಬಾ ಸುಂದರವಾಗಿ ವಿನ್ಯಾಸಗೊಳಿಸಲಾಗಿದೆ. ಸಂಪೂರ್ಣ ಹಸಿರಿನಿಂದ ಇದು ಕಂಗೊಳಿಸುತ್ತಿದೆ. ಇದು ಭಾರತದ “ಉದ್ಯಾನ ನಗರ” ಎಂಬ ಖ್ಯಾತಿಯನ್ನು ಕೂಡ ಹೊಂದಿದೆ. ಬೆಂಗಳೂರಿನ ವಿಮಾನ ನಿಲ್ದಾಣದ ಎರಡು ಟರ್ಮಿನಲ್ ಅದ್ಭುತ ವಿನ್ಯಾಸಗಳನ್ನು ಹೊಂದಿದೆ.
ಸಸ್ಯಗಳು, ನೈಸರ್ಗಿಕ ವಿನ್ಯಾಸಗಳು ಮತ್ತು ಹಿತವಾದ ದೃಶ್ಯಗಳು ಪ್ರಯಾಣಿಕರನ್ನು ಆಕರ್ಷಿಸುತ್ತವೆ. ಪ್ರಯಾಣಿಕರಿಗೆ ವಿಶ್ರಾಂತಿ ಪಡೆಯಲು ಅಥವಾ ಒಂದು ವೇಳೆ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರು ಬೇಗ ಬಂದರೆ, ಇಲ್ಲಿ ಕಾಲ ಕಳೆಯಬಹುದು. ಜೊತೆಗೆ ಬೆಳಕಿನ ವಿನ್ಯಾಸವನ್ನು ಕೂಡ ಅದ್ಭುತವಾಗಿ ಮಾಡಲಾಗಿದೆ. ಜೊತೆಗೆ ವಿಮಾನ ನಿಲ್ದಾಣಗಳಾಗುವ ಗದ್ದಲಗಳನ್ನು ತಪ್ಪಿಸಲು ಇದು ಸಹಾಯಕವಾಗಿದೆ. ಗಾರ್ಡನ್ ಟ್ರಯಲ್ ಅನ್ನು ಕೂಡ ವಿನ್ಯಾಸಗೊಳಿಸಲಾಗಿದೆ. ಪ್ರಕೃತಿ ಆಧಾರಿತ ವಿನ್ಯಾಸ, ಮೃದುವಾದ ಬೆಳಕು ಮತ್ತು ವಿಶಾಲ ಕಾರಿಡಾರ್‌ಗಳನ್ನು ಕೂಡ ಮಾಡಲಾಗಿದೆ.
ಇದನ್ನೂ ಓದಿ: ಅತಿ ಹೆಚ್ಚು ಪ್ರವಾಸಿ ತಾಣಗಳನ್ನು ಹೊಂದಿರುವ ಈ ಮೂರು ಜಿಲ್ಲೆಗಳ ಗಾಳಿಯ ತೀವ್ರ ಕುಸಿತ: ಎಚ್ಚರ
ಎಕ್ಸ್ ಪೋಸ್ಟ್ ಇಲ್ಲಿದೆ ನೋಡಿ:
ಸುಂದರವಾದ ಗಾರ್ಡನ್ ಟ್ರಯಲ್ ಈಗ ತೆರೆದಿದೆ @BLRA ವಿಮಾನ ನಿಲ್ದಾಣ T2 ಅಂತರಾಷ್ಟ್ರೀಯ ✨✈️@AeroUpdatesBLR pic.twitter.com/1oL9G7xgj3
– ಈಶ್ವರ್ ವೇಮಲ (@eshwarvs) ಡಿಸೆಂಬರ್ 14, 2025
ಇದರ ವಿನ್ಯಾಸ ಹಾಗೂ ಈ ಗ್ಯಾಲರಿ ಹೇಗಿದೆ ಎಂದು ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇನ್ನು ವಿಮಾನ ನಿಲ್ದಾಣದಲ್ಲಿರುವ ಈ ವ್ಯವಸ್ಥೆಯ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟರ್ಮಿನಲ್ 2 ತನ್ನ ಪರಿಸರ ಸ್ನೇಹಿ ಕಲಾಕೃತಿ ಹಾಗೂ ಬಿದಿರಿನಿಂದ ಮಾಡಿದ ವಿನ್ಯಾಸವನ್ನು ಹೊಂದಿದೆ. ಇದೀಗ ಹೊರಾಂಗಣ ಕೂಡ ಅದ್ಭುತವಾಗಿ ಕಾಣುತ್ತಿದೆ. ಇದು ಪ್ರಯಾಣಿಕರಿಗೆ ಹೆಚ್ಚಿನ ಅನುಭವವನ್ನು ನೀಡಿದೆ ಎಂದು ಹೇಳಿದರು.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ