Headlines

ಹಳೆ ವಾಹನ ಹೊಂದಿರುವವರಿಗೆ ಶಾಕ್​​ ಕೊಟ್ಟ ಸಾರಿಗೆ ಸಚಿವರು: 15 ವರ್ಷ ಮೀರಿದ ವಾಹನಗಳ ಜಪ್ತಿ

ಹಳೆ ವಾಹನ ಹೊಂದಿರುವವರಿಗೆ ಶಾಕ್​​ ಕೊಟ್ಟ ಸಾರಿಗೆ ಸಚಿವರು: 15 ವರ್ಷ ಮೀರಿದ ವಾಹನಗಳ ಜಪ್ತಿ


ಬೆಂಗಳೂರು, ಡಿಸೆಂಬರ್ 17: ರಾಜ್ಯದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಏರಿಕೆಯಾಗುತ್ತಲೇ ಇದ್ದರೂ, ಹಳೆಯ ವಾಹನಗಳು ಮಾತ್ರ ಸಂಚಾರ ನಿಲ್ಲಿಸಿಲ್ಲ. ಇವುಗಳಿಂದಲೇ ವಾಯುಮಾಲಿನ್ಯ ಆಗ್ತಿದೆ ಎಂಬ ಆರೋಪದ ನಡುವೆಯೂ ಕೋಟ್ಯಾಂತರ ವಾಹನಗಳು ರಸ್ತೆಯಲ್ಲಿ ಸಂಚರಿಸುತ್ತಲೇ ಇವೆ. ಇಂತಹ ವಾಹನಗಳ ಮಾಲಿಕರಿಗೆ ರಾಜ್ಯ ಸಾರಿಗೆ ಸಚಿವರು ಶಾಕ್ ಕೊಟ್ಟಿದ್ದಾರೆ. 15 ವರ್ಷ ಮೀರಿದ ವಾಹನಗಳ ಜಪ್ತಿಗೆ ಸರ್ಕಾರ ಮುಂದಾಗಲಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ವಿಧಾನ ಪರಿಷತ್ತಿನಲ್ಲಿ.

ವಾಹನದಿಂದ 15 ವರ್ಷಗಳವರೆಗೆ ಸುಸ್ಥಿತಿಯಲ್ಲಿ ಇರಿಸಬಹುದು. ಕೇಂದ್ರ ನೀತಿಯ ಪ್ರಕಾರ ಕಮರ್ಷಿಯಲ್ ವಾಹನಗಳಿಗೆ 5 ವರ್ಷ ವಿನಾಯಿತಿ ನೀಡಲಾಗುತ್ತದೆ. ಆದರೆ ಸರ್ಕಾರಿ ವಾಹನಗಳನ್ನು ಬಳಸಲಾಗಿದೆ. ಆಯಸ್ಸು’ ಮೀರಿದ 1.38 ಕೋಟಿ’ ವಾಹನಗಳನ್ನು ಗುಜರಿಗೆ ಹಾಕಬೇಕೆಂಬ ಒತ್ತಾಯ ಕೇಳಿಬಂದಿದೆ. ತಮಿಳುನಾಡಿನಲ್ಲಿ ವಾಹನಗಳಿಗೆ ವಿನಾಯ್ತಿಕೇಳಿದ್ದಾರೆ. ಅದೇ ರೀತಿ ಅಗ್ನಿಶಾಮಕ ಇಲಾಖೆಯಲ್ಲಿ ಕಡಿಮೆ ಬಳಕೆಯಾದ ವಾಹನಗಳಿವೆ. ಅಂತಹ ವಾಹನಗಳಿಗೆ ವಿನಾಯಿತಿ ಕೋರಿ ನಾವು ಕೂಡ ಪತ್ರ ಬರೆದಿದ್ದೇವೆ. 15 ವರ್ಷ ಮೀರಿದ ಬಸ್‌ಗಳು ನಿಗಮದಲ್ಲಿ ಇಲ್ಲ ಎಂದಿರಬೇಕು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಹಳೆ ವಾಹನಗಳ ಸಂಖ್ಯೆ; ಗುಜರಿಗೆ ಹಾಕಲು ಹಿಂದೇಟು

ಕೇಂದ್ರ ಸರ್ಕಾರದ ವಾಹನ ಗುಜರಿ ನೀತಿ ಏನು?

ಹಳೆಯ, ಹೆಚ್ಚು ಮಾಲಿನ್ಯ ಮಾಡುವ ವಾಹನಗಳನ್ನು ಹಂತ ಹಂತವಾಗಿ ತೆಗೆದುಹಾಕಲು, ಪರಿಸರವನ್ನು ಸುಧಾರಿಸಲು ಮತ್ತು ವಾಹನ ಉದ್ಯಮವನ್ನು ಉತ್ತೇಜಿಸುವ ಕೇಂದ್ರ ಸರ್ಕಾರದ ವಾಹನ ಗುಜರಿ ನೀತಿ ಜಾರಿಗೆ ಬಂದಿದೆ. 15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನಗಳನ್ನು ಗುಜರಿಗೆ ಹಾಕೋದು ಕಡ್ಡಾಯವಾಗಿದೆ. ಆದರೆ 20 ವರ್ಷಗಳ ಹಿಂದೆ ಖಾಸಗಿ ವಾಹನಗಳಿಗೆ ಫಿಟ್ನೆಸ್ ಪರೀಕ್ಷೆ ಕಡ್ಡಾಯವಾಗಿದೆ, ಅದರಲ್ಲಿ ಉತ್ತೀರ್ಣವಾಗದ ವಾಹನಗಳನ್ನು ಗುಜರಿಗೆ ಹಾಕಬೇಕು ಎಂಬ ನಿಯಮವಿದೆ. ಗುಜರಿ ಹಾಕಿದವರಿಗೆ ಹೊಸ ವಾಹನ ಖರೀದಿಯಲ್ಲಿ ತೆರಿಗೆ ವಿನಾಯಿತಿ ಮತ್ತು ಪ್ರೋತ್ಸಾಹ ಧನ ಕೂಡ ಸಿಗಲಿದೆ.

ಇನ್ನು ಮಾಹಿತಿಯ ಪ್ರಕಾರ ಕರ್ನಾಟಕದ ಬೆಂಗಳೂರಿನಲ್ಲಿ 15 ವರ್ಷ ಮೀರಿದ 37,45,339 ವಾಹನಗಳು ಇವೆ. ಆ ಮೇಲಿನ ಬೈಕ್‌ಗಳ ಸಂಖ್ಯೆ 24,46,372 ಇದ್ದರೆ, ಕಾರುಗಳ ಸಂಖ್ಯೆ 7,059,39, ಲಾರಿ, ಬಸ್ ಸೇರಿದಂತೆ ಇತರೆ ವಾಹನಗಳ ಸಂಖ್ಯೆ 5,93,028ರಷ್ಟಿವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 3:07 pm, ಬುಧವಾರ, 17 ಡಿಸೆಂಬರ್ 25



Source link

Leave a Reply

Your email address will not be published. Required fields are marked *