2026 Yearly Horoscope For Pisces: 2026 ಮೀನ ರಾಶಿಯವರಿಗೆ ಹೇಗಿರಲಿದೆ? ಶುಭ -ಅಶುಭ ಫಲಗಳ ವಿವರ ಇಲ್ಲಿದೆ

2026 Yearly Horoscope For Pisces: 2026 ಮೀನ ರಾಶಿಯವರಿಗೆ ಹೇಗಿರಲಿದೆ? ಶುಭ -ಅಶುಭ ಫಲಗಳ ವಿವರ ಇಲ್ಲಿದೆ


2026ನೇ ಇಸವಿಯಲ್ಲಿ ಇಡೀ ವರ್ಷ ಶನಿ ಗ್ರಹ ನಿಮ್ಮದೇ ರಾಶಿಯಲ್ಲಿ, ಒಂದನೇ ಮನೆಯಲ್ಲಿ ಸಂಚಾರ ಮಾಡುತ್ತಾರೆ. ಇನ್ನು ಗುರು ಗ್ರಹವು ಜನವರಿಯಿಂದ ಜೂನ್ ಒಂದನೇ ತಾರೀಕಿನ ತನಕ 4ನೇ ಮನೆ, ಅಂದರೆ ಮಾತೃ- ಸುಖ ಸ್ಥಾನದಲ್ಲಿ ಇರುತ್ತದೆ. ಆ ನಂತರ ಅಕ್ಟೋಬರ್ 31 ನೇ ತಾರೀಕಿನವರೆಗೆ ಪೂರ್ವ ಪುಣ್ಯ ಸ್ಥಾನ- ಸುತ ಸ್ಥಾನ, ಅಂದರೆ 5 ನೇ ಮನೆಯಲ್ಲಿ ಕರ್ಕಾಟಕ ರಾಶಿಯಲ್ಲಿ ಸಂಚರಿಸುತ್ತದೆ. ನವೆಂಬರ್ ಮತ್ತು ಈ ಡಿಸೆಂಬರ್ ಎರಡೂ ತಿಂಗಳು, ರಿಪು ಸ್ಥಾನ, ಅಂದರೆ 6ನೇ ಮನೆಯಲ್ಲಿ ಗುರು ಗ್ರಹದ ಸಂಚಾರ ಆಗುತ್ತದೆ. ಇಡೀ ವರ್ಷ ರಾಹು ಗ್ರಹವು ನಿಮ್ಮ ರಾಶಿಗೆ ಹನ್ನೆರಡನೇ ಮನೆಯಲ್ಲಿ ಹಾಗೂ ಕೇತು ಗ್ರಹವು 6ನೇ ಮನೆಯಲ್ಲಿ ಸಂಚರಿಸುತ್ತದೆ. 2026ನೇ ಇಸವಿಯ ಡಿಸೆಂಬರ್ 5ನೇ ತಾರೀಕಿಗೆ ರಾಹು ಗ್ರಹವು ಲಾಭದಾಯಕವಾದ 11ನೇ ಮನೆ ಮಕರ ರಾಶಿಗೂ ಕೇತು ಗ್ರಹ ನಿಮ್ಮ ರಾಶಿಗೆ 5ನೇ ಮನೆಯಲ್ಲಿ ಕರ್ಕಾಟಕ ರಾಶಿಗೂ ಪ್ರವೇಶಿಸುತ್ತದೆ.

ಪೂರ್ವಾಭಾದ್ರ ನಕ್ಷತ್ರದ ನಾಲ್ಕನೇ ಪಾದ, ಉತ್ತರಾಭಾದ್ರಾ ನಕ್ಷತ್ರ ನಾಲ್ಕೂ ಪಾದ, ರೇವತಿ ನಕ್ಷತ್ರದ ನಾಲ್ಕೂ ಪಾದ ಸೇರಿ ಮೀನ ರಾಶಿ ಆಗುತ್ತದೆ. ಈ ರಾಶಿಯ ಅಧಿಪತಿ ಗುರು.

ಮೀನ ರಾಶಿಯವರಿಗೆ 2026ರ ವರ್ಷ ಭವಿಷ್ಯ ಹೀಗಿದೆ:

ಶನಿ ಗೋಚಾರ:

ಜನ್ಮ ರಾಶಿಯಲ್ಲಿ ಶನಿ ಗ್ರಹದ ಸಂಚಾರ ಆರೋಗ್ಯದ ದೃಷ್ಟಿಯಿಂದ ಉತ್ತಮವಲ್ಲ. ನಿಮ್ಮ ರಾಶಿಗೆ ಲಾಭ ಹಾಗೂ ವ್ಯಯಾಧಿಪತಿ ಎರಡೂ ಆದಂಥ ಶನಿಯು ನಿಮ್ಮ ರಾಶಿಯಲ್ಲಿ ಸಂಚಾರ ಮಾಡುತ್ತಾರೆ. ಸಾಡೇಸಾತ್ ಮೂರು ವರ್ಷವನ್ನು ಕಳೆದಿದೆ. ಹೃದಯ, ಮೀನಖಂಡ, ಜಠರ, ಕರುಳಿನ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಬೇಕು. ನಿಮ್ಮಲ್ಲಿ ಮೂವತ್ತು ವರ್ಷಕ್ಕೆ ಮೇಲ್ಪಟ್ಟವರು ಇದ್ದಲ್ಲಿ ಕೆಲವು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸುವುದು ಕ್ಷೇಮ. ಮಾಸ್ಟರ್ ಚೆಕ್ ಅಪ್ ಮಾಡಲು ಆದ್ಯತೆಯನ್ನು ನೀಡಿ. ವ್ಯಾಪಾರ- ವ್ಯವಹಾರ ಮಾಡುವವರು ಒಂದು ವೇಳೆ ಲಾಭದ ಆಸೆಗೆ ಬಿದ್ದು, ವಾಸ್ತವವನ್ನು ಮರೆತರೆ ದೊಡ್ಡ ನಷ್ಟವನ್ನು ಅನುಭವಿಸುತ್ತೀರಿ. ಕಾನೂನಿನ ವ್ಯಾಪ್ತಿ ಮೀರಿದ ವಿಚಾರಗಳಲ್ಲಿ ತಲೆಯನ್ನು ಹಾಕುವುದಕ್ಕೆ ಹೋಗಬೇಡಿ. ತೆರಿಗೆ ವಿಚಾರದಲ್ಲಿ ಈ ಹಿಂದೆ ನಿಮ್ಮಿಂದ ಆದ ತಪ್ಪಿಗೆ ಈಗ ನೋಟಿಸ್ ಬರಬಹುದು. ನಿಮ್ಮಲ್ಲಿ ಕೆಲವು ದಂಡ ಪಾವತಿ ಮಾಡಲೇಬೇಕಾದ ಸನ್ನಿವೇಶ ಸಹ ಉದ್ಭವ ಆಗಲಿದೆ. ಈ ಅವಧಿಯಲ್ಲಿ ಉದ್ಯೋಗ ಬಿಡುವ ಆಲೋಚನೆ ಯಾವ ಕಾರಣಕ್ಕೂ ಮಾಡಬಾರದು. ಇನ್ನು ಬ್ಯಾಂಕ್ ನಿಂದಲೋ ಸ್ನೇಹಿತರು/ಸಂಬಂಧಿಕರಿಂದ ಸಾಲ, ವ್ಯಾಪಾರ- ವ್ಯವಹಾರ ಮಾಡುವುದು ಅಪಾಯಕಾರಿ ಹಾಗೂ ಅವಮಾನಕ್ಕೆ ಗುರಿಯಾಗುವಂಥ ಸನ್ನಿವೇಶವನ್ನು ತಂದಿಡಲಿದೆ. ಹೊಸಬರ ಜೊತೆಗೆ ಯಾವುದೇ ಹಣಕಾಸಿನ ವ್ಯವಹಾರ ಮಾಡುವುದಕ್ಕೆ ಹೋಗಬೇಡಿ. ಈ ಹಿಂದೆ ನೀವು ಇದ್ದಂಥ ಹೂಡಿಕೆಗೆ ನಿರೀಕ್ಷಿತ ಮಟ್ಟದಲ್ಲಿ ಲಾಭ ಇದೆ ಎಂದಾದಲ್ಲಿ ಆ ಪ್ರಾಫಿಟ್ ಬುಕ್ಕಿಂಗ್ ಮಾಡಿಕೊಳ್ಳುವುದು ಕ್ಷೇಮ. ಆಸ್ತಿ ವಿಚಾರದಲ್ಲಿ ನಿರ್ಧಾರಗಳನ್ನು ತಕ್ಷಣ ತೆಗೆದುಕೊಳ್ಳುವ ಒಳ್ಳೆಯದು.

ಗುರು ಗ್ರಹ ಗೋಚಾರ:

ಜನವರಿಯಿಂದ ಮೇ ತನಕ ನಾಲ್ಕನೇ ಮನೆಯಲ್ಲಿ ಗುರು ಗ್ರಹದ ಸಂಚಾರ ಇರುತ್ತದೆ. ಸ್ನೇಹಿತರ ಜೊತೆಗೆ ಅಭಿಪ್ರಾಯ ಭೇದ, ಮನಸ್ತಾಪ, ಜಗಳ- ಕಲಹ ಏರ್ಪಡುವಂಥ ಸಾಧ್ಯತೆ ಇದೆ. ನಿಮಗೆ ಗೊತ್ತಿಲ್ಲದ ವಿಚಾರಗಳ ಬಗ್ಗೆ ವಿಪರೀತ ವಾದ ಮಾಡುವುದಕ್ಕೆ ಹೋಗಬೇಡಿ. ಸಣ್ಣ- ಪುಟ್ಟದಾದರೂ ಶಸ್ತ್ರಚಿಕಿತ್ಸೆ ಆಗುವ ಸಾಧ್ಯತೆ ಇದೆ. ದೇಹದ ತೂಕದ ಕಡೆಗೆ ಗಮನವಿರಲಿ. ಕೊಲೆಸ್ಟ್ರಾಲ್, ಕಿವಿಗೆ ಸಂಬಂಧಿಸಿದ ತೊಂದರೆಗಳು ಆಗಬಹುದು. ಈ ಅವಧಿಯಲ್ಲಿ ಹೂಡಿಕೆಗಾಗಿ ಆಸ್ತಿ ಖರೀದಿ ಮಾಡುವ ಸಾಧ್ಯತೆಗಳು ಇರುತ್ತವೆ. ಆದರೆ ಕಾಗದ- ಪತ್ರ, ಕಾನೂನು ವಿಚಾರಗಳಿಗೆ ಹೆಚ್ಚಿನ ಗಮನ ನೀಡಲಾಗಿದೆ. ತಾಯಿ- ತಾಯಿ ಸಮಾನರಾದವರ ಆರೋಗ್ಯದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು, ಹಣಕಾಸಿನ ವಿಚಾರಕ್ಕೋ ಅಥವಾ ಆಸ್ತಿ ವಿಚಾರಕ್ಕೋ ಅಭಿಪ್ರಾಯ ಭೇದಗಳು ಸಹ ಉದ್ಭವಿಸುತ್ತವೆ. ಜೂನ್ ಒಂದನೇ ತಾರೀಕಿನಿಂದ ಐದನೇ ಮನೆಯಲ್ಲಿ ಗುರು ಗ್ರಹ ಸಂಚಾರ ಆಗುವಾಗ ಸಂತಾನ ಅಪೇಕ್ಷಿತರಿಗೆ ಶುಭವಾದ ಬೆಳವಣಿಗೆಗಳು ಆಗಲಿವೆ. ವಿವಾಹ ವಯಸ್ಜರು ಮದುವೆಗಾಗಿ ಪ್ರಯತ್ನ ಮಾಡುತ್ತಾ ಇದ್ದಲ್ಲಿ ಸೂಕ್ತ ಸಂಬಂಧ ದೊರೆಯಲಿದೆ. ಯಾರು ಉದ್ಯೋಗ ಬದಲಾವಣೆ ಮಾಡಬೇಕು, ಅದೇ ರೀತಿ ಉದ್ಯೋಗ ಜೀವನದ ಆರಂಭದ ಘಟ್ಟದಲ್ಲಿ ಇದ್ದೀರಿ ಅಂಥವರಿಗೆ ಪ್ರತಿಷ್ಠಿತ ಸಂಸ್ಥೆಗಳಿಂದ ಆಫರ್ ದೊರೆಯಲಿದೆ. ನವೆಂಬರ್- ಡಿಸೆಂಬರ್ ತಿಂಗಳಿನಲ್ಲಿ ಉದ್ಯೋಗ ಸ್ಥಳದಲ್ಲಿ ಮೇಲಧಿಕಾರಿಗಳೊಂದಿಗೆ ಭಿನ್ನಾಭಿಪ್ರಾಯ ಉದ್ಭವಿಸದಂತೆ ನೋಡಿಕೊಳ್ಳಿ. ಆರೋಗ್ಯ ವಿಚಾರ- ಕಾನೂನು ಸಂಗತಿಗಳ ಕಡೆಗೆ ಗಮನವನ್ನು ನೀಡಲಾಯಿತು. ನಿಮಗಿಂತ ಬಲಿಷ್ಠರಾದವರನ್ನು ಎದುರು ಹಾಕಿಕೊಳ್ಳಲಿದೆ, ಆ ನಂತರ ಪಶ್ಚಾತಾ ಪಡುವಂತೆ ಆಗಲಿದೆ.

ಇದನ್ನೂ ಓದಿ: 2026ರ ಹೊಸ ವರ್ಷ ಮಕರ ರಾಶಿಯವರಿಗೆ ಹೇಗಿರಲಿದೆ? ಶುಭ -ಅಶುಭ ಫಲಗಳ ವಿವರ ಇಲ್ಲಿದೆ

ರಾಹು-ಕೇತು ಗೋಚಾರ:

ನಿಮ್ಮ ರಾಶಿಗೆ ಹನ್ನೆರಡನೇ ಮನೆಯಲ್ಲಿ ರಾಹು ಗ್ರಹದ ಸಂಚಾರ ಇರಲಿದೆ, ಹೇಗಾದರೂ ಹಣ ಮಾಡಬೇಕು ಎಂಬ ಉಮೇದಿಗೆ ಬಿದ್ದು, ವಂಚಕರ ಮೋಸಕ್ಕೆ ಸಿಲುಕಿ ಹಣ ಕಳೆದುಕೊಳ್ಳುವಂತೆ ಆಗಲಿದೆ. ಭೂಮಿ ಮೇಲೆ ಇರಿಸಿದೆ ಅಂತಾ ಅದಕ್ಕೆ ಸಂಬಂಧಿಸಿದ ದಾಖಲೆ- ಮಾಹಿತಿಗಳನ್ನು ಒಗ್ಗೂಡಿಸಿಕೊಂಡು, ಸರಿಯಾಗಿ ಇರಿಸಿಕೊಳ್ಳಲು ಆದ್ಯತೆ ನೀಡಿ. ನಿಮಗೆ ಏನೇನೋ ಕಲ್ಪನೆಗಳು ಸುಳಿದಾಡಿ, ಆಪ್ತರ ಜೊತೆಗೆ ಬಾಂಧವ್ಯವನ್ನು ಕಡಿದುಕೊಳ್ಳುವಂತೆ ಆಗಲಿದೆ. ಇತರರ ಪರವಾಗಿ ಜಾಮೀನು ನಿಂತು, ಹಣ ಕೊಡುವುದು ಬಹಳ ಅಪಾಯಕಾರಿ ಆಗಲಿದೆ. ಇನ್ನು ಸಾಲ ತಂದು, ಹೂಡಿಕೆ ಮಾಡುವುದಕ್ಕೆ ಹೋಗಬೇಡಿ. ಆರನೇ ಮನೆಯಲ್ಲಿ ಕೇತು ಗ್ರಹ ಸಂಚಾರ ಮಾಡುವುದರಿಂದ ತೀರ್ಥಯಾತ್ರೆ, ದೇವರ ದರ್ಶನ, ಮನೆಯಲ್ಲಿ ದೇವತಾ ಕಾರ್ಯಗಳ ಆಯೋಜನೆ ಮಾಡುವ ಯೋಗ ಇದೆ. ಹಿರಿಯರು ನೀಡಿದ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ. ಇರುವಂಥ ವ್ಯಾಜ್ಯಗಳನ್ನು ನಿಮಗೆ ಹಿರಿಯರು ಎನಿಸಿಕೊಂಡವರು ತಾವೇ ಮುಂದೆ ನಿಂತು ಬಗೆಹರಿಸಲಿದ್ದಾರೆ. ಧಾರ್ಮಿಕ ವೃತ್ತಿಯಲ್ಲಿ ಇರುವವರಿಗೆ ಗೌರವ, ಮಾನ- ಸಮ್ಮಾನಗಳು ದೊರೆಯುವ ಯೋಗ ಇದ್ದು, ಜನಪ್ರಿಯತೆಯನ್ನು ಪಡೆದುಕೊಳ್ಳಿ.

ಪರಿಹಾರ: ಶನೈಶ್ಚರ ಆರಾಧನೆ ಹಾಗೂ ದುರ್ಗಾದೇವಿಯ ಸ್ಮರಣೆಯನ್ನು ಮಾಡಿ.

ಲೇಖನ- ಸ್ವಾತಿ ಎನ್.ಕೆ.



Source link

Leave a Reply

Your email address will not be published. Required fields are marked *