Headlines

NPS: ಶೇ. 80 ವಿತ್​ಡ್ರಾಯಲ್; 15 ವರ್ಷ ಹೂಡಿಕೆ, 5 ವರ್ಷ ಲಾಕಿನ್; ಹೊಸ ಆಕರ್ಷಣೆ ಪಡೆದ ಎನ್​ಪಿಎಸ್

NPS: ಶೇ. 80 ವಿತ್​ಡ್ರಾಯಲ್; 15 ವರ್ಷ ಹೂಡಿಕೆ, 5 ವರ್ಷ ಲಾಕಿನ್; ಹೊಸ ಆಕರ್ಷಣೆ ಪಡೆದ ಎನ್​ಪಿಎಸ್


ಜುಲೈ, ಡಿಸೆಂಬರ್ 17: ಯಾವುದೇ ಪೆನ್ಷನ್ ಸಿಸ್ಟಂ (NPS) ಯೋಜನೆಯಲ್ಲಿ ಕೆಲವು ಗಮನಾರ್ಹ ಬದಲಾವಣೆಗಳನ್ನು ತರಲಾಗಿದೆ. ರಿಟೈರ್ಮೆಂಟ್ ವಯಸ್ಸನ್ನು ವಿಸ್ತರಿಸುವ ಅವಕಾಶ ಸೇರಿದಂತೆ ಹಲವು ಮಹತ್ತರ ಬದಲಾವಣೆಗಳನ್ನು ಮಾಡಲಾಗಿದೆ. ಎನ್ ಪಿಎಸ್ ಸದಸ್ಯರು ತಮ್ಮ ಹಣ ಮತ್ತು ಭವಿಷ್ಯದ ಬಗ್ಗೆ ಹೆಚ್ಚಿನ ನಿಯಂತ್ರಣ ಹೊಂದಬಹುದು. ಎನ್ ಪಿಎಎಸ್ ಅನ್ನು ನಿಯಂತ್ರಿಸುವ ಪೆನ್ಷನ್ ಫಂಡ್ ರೆಗ್ಯುಲೇಟರಿ ಅಂಡ್ ಡೆವಲಪ್ಮೆಂಟ್ ಅಥಾರಿಟಿ (ಪಿಎಫ್ ಆರ್ಡಿಎ) ನಿನ್ನೆ ಮಂಗಳವಾರ (ಡಿ. 16) ಎನ್‌ಪಿಎಎಸ್‌ನಲ್ಲಿ ಕೆಲವು ಮಹತ್ವದ ತಿದ್ದುಪಡಿಗಳನ್ನು ಪ್ರಕಟಿಸಲಾಗಿದೆ. ಅವುಗಳ ಕೆಲವು ಮಹತ್ವದ ಬದಲಾವಣೆಗಳ ವಿವರ ಮುಂದಿದೆ.

ಲ್ಯಾಂಪ್ಸಮ್ ವಿತ್ತರಾಯಲ್ 60:40 ಬದಲಿಗೆ 80:20

ಎನ್ ಪಿಎಸ್ ಸ್ಕೀಮ್ ನಲ್ಲಿ ಹೂಡಿಕೆಗಳನ್ನು ಪೂರ್ತಿಯಾಗಿ ಹಿಂಪಡೆಯಲು ಆಗುವುದಿಲ್ಲ. ರಿಟೈರ್ಮೆಂಟ್ ವಯಸ್ಸಾದಾಗ ಹಿಂದೆ ಇದ್ದ ನಿಯಮದ ಪ್ರಕಾರ ಒಟ್ಟೂ ಕಾರ್ಪಸ್ ನಲ್ಲಿ ಶೇ. 60ರಷ್ಟು ಹಣವನ್ನು ಲ್ಯಾಂಪ್ಸಮ್ ಆಗಿ ವಿತ್ತ್ರಾ ಮಾಡಬಹುದು. ಇನ್ನುಳಿದ ಶೇ. 40ರಷ್ಟನ್ನು ಆಯನುಟಿ ಪ್ಲಾನ್ (ಪಿಂಚಣಿ) ಖರೀದಿಸಲು ಬಳಸಬೇಕು.

ಈಗ ತಿದ್ದುಪಡಿ ಮಾಡಲಾದ ನಿಯಮದ ಪ್ರಕಾರ, ಎನ್‌ಪಿಎಸ್‌ನಲ್ಲಿ ಒಟ್ಟು ಕಾರ್ಪಸ್ 12 ಲಕ್ಷ ರೂಗಿಂತ ಹೆಚ್ಚಿದೆ. 80ರಷ್ಟು ಮೊತ್ತವನ್ನು ಲ್ಯಾಂಪ್ಸಮ್ ಆಗಿ ಹಿಂಪಡೆಯಲು ಅವಕಾಶ ಇರುತ್ತದೆ. ಶೇ. 20 ಮಾತ್ರವೇ ಆಯನುಟಿ ಖರೀದಿಸಲು ಬಳಸಬಹುದು. ಇದರಿಂದ ಎನ್ ಪಿಎಸ್ ಹಣದಲ್ಲಿ ಮುಕ್ಕಾಲು ಪಾಲಿಗಿಂತ ಹೆಚ್ಚಿನ ಮೊತ್ತವನ್ನು ಸದಸ್ಯರು ಹೇಗೆ ಬೇಕಾದರೂ ಉಪಯೋಗಿಸಲು ಸ್ವತಂತ್ರರಾಗಿರಬೇಕು.

ಇದನ್ನೂ ಓದಿ: ತ್ಯೇಕ ಐಪಿಎಫ್ ಅಕೌಂಟ್‌ಗಳಿವೆಯಾ? ಎಲ್ಲವನ್ನೂ ಒಂದಕ್ಕೇ ವಿಲೀನ ಮಾಡದಿದ್ದರೆ ಏನಾಗುತ್ತೆ?

ಹೂಡಿಕೆ ಅವಧಿ 60 ವರ್ಷ ದಾಟಿ 85 ವರ್ಷದವರೆಗೂ ವಿಸ್ತರಿಸಲು ಅವಕಾಶ

ಹಿಂದೆ ಇದ್ದ ಎನ್‌ಪಿಎಸ್ ನಿಯಮದ ಪ್ರಕಾರ 60 ವರ್ಷಕ್ಕೆ ರಿಟೈರ್ಮೆಂಟ್ ಏಜ್. ಅಂದರೆ ಎನ್‌ಪಿಎಸ್ ಸ್ಕೀಮ್‌ನಲ್ಲಿ ನೀವು 60 ವರ್ಷ ವಯಸ್ಸಾಗುವವರೆಗೂ ಹೂಡಿಕೆಗೆ ಅವಕಾಶವಿತ್ತು. ಈಗ ಅದನ್ನು 85 ವರ್ಷಕ್ಕೆ ವಿಸ್ತರಿಸುವ ಅವಕಾಶವನ್ನು ಕೊಡಲಾಗಿದೆ. ನೀವು 60 ವರ್ಷಕ್ಕೆ ಹೂಡಿಕೆಯನ್ನು ನಿಲ್ಲಿಸಬಹುದು. ಇಲ್ಲವಾದರೆ 85 ವರ್ಷದವರೆಗೂ ಹೂಡಿಕೆ ಮುಂದುವರಿಸಬಹುದು.

ಲಾಕ್ ಇನ್ ಪಿರಿಯಡ್ ಇಲ್ಲ…

ಸರ್ಕಾರಿ ನೌಕರರು ಎನ್‌ಪಿಎಸ್‌ನಲ್ಲಿ ಕನಿಷ್ಠ 5 ವರ್ಷ ಹೂಡಿಕೆ ಹೊಂದಿರಬೇಕು ಎಂಬ ನಿಯಮವಿದೆ. ಆದರೆ, ಸರ್ಕಾರಿ ನೌಕರರಲ್ಲದ ಇತರರಿಗೆ ಈ ಲಾಕ್ ಇನ್ ಪೀರಿಯಡ್ ನಿಯಮವನ್ನು ತೆಗೆದುಹಾಕಲಾಗಿದೆ. ನೀವು 57 ನೇ ವಯಸ್ಸಿನಲ್ಲಿ ಎನ್ ವಯಸ್ಸಿನ ಪಿಪಿಎಸ್ ಸ್ಕೀಮ್ ಆರಂಭಿಸಿ, 60 ನೇ ವಯಸ್ಸಿನಲ್ಲಿ ಹಣ ವಿತ್ಡ್ರಾ ಮಾಡಬಹುದು.

ಇದನ್ನೂ ಓದಿ: ಪೋಸ್ಟ್ ಆಫೀಸ್ ಟಿಡಿ ಸ್ಕೀಮ್‌ನಲ್ಲಿ 1 ಲಕ್ಷ ರೂ ಹೂಡಿಕೆಗೆ 5 ವರ್ಷ ಸಿಗುವ ರಿಟರ್ನ್ಸ್ ಇಷ್ಟು…

15 ವರ್ಷಕ್ಕೆ ಎನ್‌ಪಿಎಸ್‌ನಿಂದ ಎಕ್ಸಿಟ್

ಎನ್ ಪಿಎಸ್ ಹಣವನ್ನು ಪ್ರೀಮೆಚ್ಯೂರ್ ಆಗಿ ವಿತ್ತ್ರಾ ಮಾಡಲು ಅವಕಾಶ ಇರುತ್ತದೆ. 15 ವರ್ಷ ಎನ್‌ಪಿಎಸ್‌ನಲ್ಲಿ ಹೂಡಿಕೆ ಮಾಡಿ ನಿಲ್ಲಿಸಬಹುದು. ಒಟ್ಟು ಕಾರ್ಪಸ್ 8 ಲಕ್ಷ ರೂಗಿಂತ ಕಡಿಮೆ ಇದ್ದಲ್ಲಿ ಎಲ್ಲಾ ಹಣವನ್ನೂ ಬೇಕೆಂದರೆ ವಿತ್ತ್ರಾ ಮಾಡಬಹುದು.

ಎಂಟು ಲಕ್ಷ ರೂಗಿಂತ ಹೆಚ್ಚಿದ್ದರೆ ಶೇ. 80ರಷ್ಟು ಹಣವನ್ನು ಲ್ಯಾಂಪ್ಸಮ್ ಆಗಿ ಹಿಂಪಡೆಯಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *