Headlines

Viral Video ಭಾರತ ಮಾತ್ರವಲ್ಲ ಮೆಕ್ಸಿಕೋದಲ್ಲೂ ಅದೇ ಕತೆ, ಸದನದಲ್ಲೇ ಜುಟ್ಟು ಹಿಡಿ ಎಳೆದಾಡಿದ ನಾಯಕಿಯರು | Female Legislators Pulls Each Other Hair Congress Of Tmexican Fight Goes Viral

Viral Video ಭಾರತ ಮಾತ್ರವಲ್ಲ ಮೆಕ್ಸಿಕೋದಲ್ಲೂ ಅದೇ ಕತೆ, ಸದನದಲ್ಲೇ ಜುಟ್ಟು ಹಿಡಿ ಎಳೆದಾಡಿದ ನಾಯಕಿಯರು | Female Legislators Pulls Each Other Hair Congress Of Tmexican Fight Goes Viral



Viral Video ಭಾರತ ಮಾತ್ರವಲ್ಲ ಮೆಕ್ಸಿಕೋದಲ್ಲೂ ಅದೇ ಕತೆ, ಸದನದಲ್ಲೇ ಜುಟ್ಟು ಹಿಡಿ ಎಳೆದಾಡಿದ ನಾಯಕಿಯರು | Female Legislators Pulls Each Other Hair Congress Of Tmexican Fight Goes Viral

ಭಾರತ ಮಾತ್ರವಲ್ಲ ಮೆಕ್ಸಿಕೋದಲ್ಲೂ ಅದೇ ಕತೆ, ಸದನದಲ್ಲೇ ಜುಟ್ಟು ಹಿಡಿ ಎಳೆದಾಡಿದ ನಾಯಕಿಯರು, ಎರಡು ಪಕ್ಷದ ಜನಪ್ರತಿನಿಧಿಗಳು ಜುಟ್ಟು ಹಿಡಿದು ಬಡಿದಾಡಿದ್ದಾರೆ. ಈ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ. ದೇಶ ಯಾವುದಾದರೂ ಅಸ್ತ್ರ ಒಂದೆ ಎಂದು ಭರ್ಜರಿ ಕಮೆಂಟ್ ಮಾಡಿದ್ದಾರೆ.

ಮೆಕ್ಸಿಕೋ (ಡಿ.17) ಜಡೆ ಜಗಳ ಭಾರತದಲ್ಲಿ ಎಲ್ಲಾ ಕಡೆ ಕಾಣಸಿಗುತ್ತದೆ. ಇನ್ನು ಸದನದಲ್ಲಿ ಗುದ್ದಾಟ, ಬಡಿದಾಟ ಕೂಡ ಭಾರತದಲ್ಲಿ ಹೊಸದೇನಲ್ಲ. ಆದರೆ ಮೆಕ್ಸಿಕೋದಲ್ಲೂ ಜನಪ್ರತಿನಿಧಿಗಳು ಸದನದಲ್ಲೇ ಬಡಿದಾಡಿಕೊಂಡ ಘಟನೆ ವರದಿಯಾಗಿದೆ. ಮಹಿಳಾ ಜನಪ್ರತಿನಿಧಿಗಳು ಜುಟ್ಟು ಹಿಡಿದು ಎಳೆದಾಡಿದ್ದಾರೆ. ಅಧಿವೇಶನದ ನಡುವೆ ಇವರ ಬಡಿದಾಟ ಜೋರಾಗಿದೆ. ಈ ಮೂಲಕ ಮೆಕ್ಸಿಕೋ ಇದೀಗ ವಿಶ್ವದಲ್ಲೇ ಭಾರಿ ಸದ್ದು ಮಾಡುತ್ತಿದೆ. ಮೆಕ್ಸಿನ್ ಕ್ಯಾಪಿಟಲ್ ಕಾಂಗ್ರೆಸ್ (ಸದನ)‌ನಲ್ಲಿ ಈ ಗುದ್ದಾಟ ನಡೆದಿದೆ. ಈ ವಿಡಿಯೋ ವೈರಲ್ ಆಗಿದ್ದು, ಹಲವರು ಕಮೆಂಟ್ ಮಾಡಿದ್ದಾರೆ.

ಲೈವ್ ಅಧಿವೇಶನದಲ್ಲಿ ಜಟಾಪಟಿ

ಮೆಕ್ಸಿಕೋದ ನ್ಯಾಷನಲ್ ಆ್ಯಕ್ಷನ್ ಪಾರ್ಟಿ (PAN) ಹಾಗೂ ಲೆಫ್ಟಿಸ್ಟ್ ಮೊರೇನಾ ಪಾರ್ಟಿ (LMP)ನಡುವೆ ಜಟಾಪಟಿ ನಡೆದಿದೆ. ಮೆಕ್ಸಿಕೋ ಸಿಟಿ ಕಾಂಗ್ರೆಸ್‌ನಲ್ಲಿ ನಡೆಯುತ್ತಿದ್ದ ಸದನದಲ್ಲಿ ಈ ಜಡೆ ಜಗಳ, ತಳ್ಳಾಟ, ನೂಕಾಟ, ಬಡಿದಾಟ ನಡೆದಿದೆ. ಈ ದೃಶ್ಯ ನೇರಪ್ರಸಾರಗೊಂಡಿದೆ. ಈ ಜಟಾಪಟಿಯಲ್ಲಿ ಎರಡು ಪಕ್ಷದ ಹಲವು ನಾಯಕರು ಸೇರಿಕೊಂಡಿದ್ದಾರೆ. ಬಹುತೇಕ ನಾಯಕರು ನಿಯಮ ಉಲ್ಲಂಘಿಸಿದ್ದಾರೆ. ಮಹಿಳಾ ನಾಯಕಿಯರು ಅಧಿವೇಶನದಲ್ಲಿ ಜಡೆ ಹಿಡಿದು ಏಳೆದಾಡಿದ್ದಾರೆ. ಭಾರಿ ಕೋಲಾಹಲ ಸೃಷ್ಟಿಯಾಗಿದೆ. ನಾಯಕಿಯರು ಒಬ್ಬರನ್ನೊಬ್ಬರು ಏಳೆದಾಡಿದ್ದಾರೆ. ಜಡೆ ಹಿಡಿದು ತಳ್ಳಾಡಿದ್ದಾರೆ. ಮಹಿಳಾ ನಾಯಕಿಯರ ಬಡಿದಾಟಕ್ಕೆ ಇತರ ನಾಯಕರು ಸೇರಿಕೊಂಡಿದ್ದಾರೆ. ಇದರಿಂದ ಅಧಿವೇಶನ ರಣಾಂಗಣವಾಗಿದೆ.

ಸರ್ಕಾರದ ವಿರುದ್ಧದ ಪ್ರತಿಭಟನೆ ವೇಳೆ ಜಗಳ

ಸಿಟಿ ಸರ್ಕಾರದ ಎಜೆನ್ಸಿ ಹಾಗೂ ಯೋಜನೆಗಳಲ್ಲಿನ ಪಾರದರ್ಶಕತೆ ಕೊರತೆ ಕುರಿತು ಭಾರಿ ಪ್ರತಿಭಟನೆ ನಡೆದಿದೆ. ಈ ಪ್ರತಿಭಟನೆಯಲ್ಲಿ ಜಡೆ ಜಗಳ ತಾರಕಕ್ಕೇರಿದೆ. ಎರಡು ಪಕ್ಷಗಳ ಐವರು ಜನಪ್ರತಿನಿಧಿಗಳು ನಡೆಸುತ್ತಿರುವ ಹೋರಾಟ, ಜಗಳ ವೈರಲ್ ಆಗಿದೆ. ಕಪಾಳಮೋಕ್ಷ, ಗುದ್ದಾಟವೂ ನಡೆದಿದೆ. ಉಭಯ ಪಕ್ಷದ ನಾಯಕರು ಹೋರಾಟ ನಿಲ್ಲಿಸಿಲ್ಲ. ಹೀಗಾಗಿ ತೀವ್ರ ಸ್ವರೂಪ ಪಡೆದುಕೊಂಡಿದೆ. ವಿಡಿಯೋ ವೈರಲ್ ಆದ ಬಳಿಕ ಇದೀಗ ಜನಪ್ರತನಿಧಿಗಳು ಆರೋಪ ಪ್ರತ್ಯಾರೋಪ ಆರಂಭಿಸಿದ್ದಾರೆ. ನಾವು ಶಾಂತಿಯುತ ಪ್ರತಿಭಟನೆ ಮಾಡುತ್ತಿದ್ದೇವು. ಬೋರ್ಡ್ ಬಳಿ ನಮ್ಮ ಹೋರಾಟ,ಪ್ರತಿಭಟನೆ ವ್ಯಕ್ತಪಡಿಸಿದ್ದೇವು. ಆದರೆ ಲೆಫ್ಟಿಸ್ಟ್ ಮೊರೇನಾ ಪಾರ್ಟಿ ನಾಯಕರು ಅಡ್ಡಿಪಡಿಸಿದ್ದಾರೆ. ಹೀಗಾಗಿ ಘರ್ಷಣೆಯಾಗಿದೆ ಎಂದು ನ್ಯಾಷನಲ್ ಆ್ಯಕ್ಷನ್ ಪಾರ್ಟಿ ಹೇಳಿದೆ.

Scroll to load tweet…

ಲೆಫ್ಟಿಸ್ಟ್ ಮೊರೇನಾ ಪಾರ್ಟಿ ನಾಯಕರ ಧೋರಣೆ, ಈ ಸರ್ಕಾರದ ಧೋರಣೆ ಖಂಡಿಸಿ ಪ್ರತಿಭಟನೆ ಮಾಡುತ್ತೇವೆ. ಗುದ್ದಾಟ ತೀವ್ರಗೊಳ್ಳುತ್ತಿದ್ದಂತೆ ನ್ಯಾಷನಲ್ ಆ್ಯಕ್ಷನ್ ಪಾರ್ಟಿ ನಾಯಕರು ಪೋಡಿಯಂನಿಂದ ತೆರಳಿದ್ದಾರೆ. ಬಳಿಕ ಸದನದಿಂದ ಹೊರನಡೆದಿದ್ದಾರೆ. ಇತ್ತ ಯಾವುದೇ ವಿರೋಧ ಪಕ್ಷ ಹಾಗೂ ನಾಯಕರಿಲ್ಲದೆ ಆಡಳಿತ ಪಾರ್ಟಿ ಲೆಫ್ಟಿಸ್ಟ್ ಮೊರೆನಾ ಪಾರ್ಟಿ ಸದನ ನಡೆಸಿದೆ.



Source link

Leave a Reply

Your email address will not be published. Required fields are marked *