‘ಬಿಗ್ ಬಾಸ್ ಕನ್ನಡ ಸೀಸನ್ 12’ (ಬಿಗ್ ಬಾಸ್ ಕನ್ನಡ 12) ಶೋ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬಹಳ ಚರ್ಚೆ ಆಗುತ್ತಿದೆ. ಮಾಜಿ ಬಿಗ್ ಬಾಸ್ ಸ್ಪರ್ಧಿ ವಿನಯ್ ಗೌಡ ಅವರು ಈ ಕುರಿತು ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವು ಕಿಚ್ಚ ಸುದೀಪ್ (ಕಿಚ್ಚ ಸುದೀಪ್) ಅವರ ನಿರೂಪಣೆ ಬಗ್ಗೆ ಪ್ರಶ್ನೆ ಮಾಡಲಾಗಿದೆ. ಅಂಥವರಿಗೆ ವಿನಯ್ ಗೌಡ ಅವರು ಖಡಕ್ ತಿರುಗೇಟು ನೀಡಿದ್ದಾರೆ. ‘ಶೋನಲ್ಲಿ ಯಾರಿಗೆ ಬೈಯ್ಯಬೇಕು, ಯಾರಿಗೆ ಬೈಯ್ಯಬಾರದು ಎಂದು ಸುದೀಪ್ ಅವರಿಗೆ ಯಾರೂ ಹೇಳಿಕೊಟ್ಟಿಲ್ಲ. ಪ್ರತಿಯೊಂದನ್ನೂ ಸುದೀಪ್ ಸರ್ ನೋಡುತ್ತಾರೆ. ಅವರಿಗೆ ಅರಿವು ಇದೆ. ಇಷ್ಟು ವರ್ಷ ಸುಮ್ಮನೇ ಬಿಗ್ ಬಾಸ್ ನಡೆಸಿಕೊಂಡು ಬಂದಿಲ್ಲ. ಯಾವ ಪ್ರಶ್ನೆ ಕೇಳಬೇಕು, ಯಾವ ಪ್ರಶ್ನೆ ಕೇಳಬಾರದು ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ’ ಎಂದು ವಿನಯ್ ಗೌಡ (ವಿನಯ್ ಗೌಡ) ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.