ಮೇಷ ರಾಶಿ:
ಇಂದು ನಿಮ್ಮ ಸೇವೆ, ಪ್ರಾರ್ಥನೆ, ಕಲೆಗಳಲ್ಲಿ ಮನಸ್ಸು ಲೀನವಾಗುತ್ತದೆ. ದೇವರ ಸ್ಪರ್ಶ ಅನುಭವಿಸುವ ದಿನ. ಗಟ್ಟಿಯಾದ ನಿಮ್ಮ ಮನಸ್ಸು ಇಂದು ಕರಗುವ ಸಂದರ್ಭವು ಬರುವುದು. ಕಟುವಾಗಿ ತಿರಸ್ಕರಿಸದೆ ಮೆಲ್ಲನೆ ಮಾತನಾಡಿದರು. ಉದ್ಯಮಿಗಳ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆ ಇದೆ. ನಿಮ್ಮ ವ್ಯವಹಾರವನ್ನು ಕಾನೂನಾತ್ಮಕವಾಗಿ ನಡೆಸಿದರೆ ಉತ್ತಮ. ಶಿಕ್ಷಣ ಕ್ಷೇತ್ರದಲ್ಲಿ ಇರುವವರಿಗೆ ವರ್ಗಾವಣೆಯ ಭೀತಿ ಕಾಡಲಿದೆ. ಮನೋರಂಜನೆಯ ಬಗ್ಗೆ ಆಸಕ್ತಿ ಕೆಡುವುದು. ನಿಮ್ಮ ಇತರ ಚಟುವಟಿಕೆಗಳು ಬೆಳಕಿಗೆ ಬರಬಹುದು. ಆಕಸ್ಮಿಕವಾಗಿ ಬರುವ ಅಲ್ಪ ಸಂಪತ್ತು ಕೈಯಲ್ಲಿ ನಿಲ್ಲದು. ದಂಪತಿಗಳ ನಡುವೆ ಪ್ರೀತಿಯು ಹೆಚ್ಚಾಗುವುದು. ಭಾವನೆಗಳು ಕಮಲದಂತೆ ಸೌಂದರ್ಯವನ್ನೂ ಸಹ ಬೀರುತ್ತ ಎಲ್ಲರನ್ನೂ ಆಕರ್ಷಿಸಿ ಅರಳುತ್ತವೆ. ಕೋಪವನ್ನು ಮಾಡುವ ಸಂದರ್ಭವು ಎಡರಾಗಲಿದೆ, ನಿಮ್ಮ ನಿಯಂತ್ರಣದಲ್ಲಿ ಇರಲಿ. ಆದಾಯದ ಮೂಲಗಳನ್ನು ನೀವು ಉಳಿಸಿಕೊಳ್ಳುವುದು ಕಷ್ಟವಾದೀತು.
ವೃಷಭ ರಾಶಿ:
ಹೊಸ ಆಲೋಚನೆಗಳು ಹುಡುಕಾಟ ಮಾರ್ಗಕ್ಕೆ ಪುಷ್ಟಿ ಕೊಡುವ ದಿನ. ಯಾವುದನ್ನೂ ಸರಳವಾಗಿ. ವಿಭಿನ್ನತೆಯೇ ನಿಮ್ಮ ಗುರುತು. ಏನಾದರು ಹೊಸ ನಿರ್ಮಾಣ ನಿರ್ಮಾಣಮಾಡುವ ಆಸೆ ಬರುವುದು. ಯಾರಾದರೂ ನಿಮ್ಮವರ ಬಗ್ಗೆ ಬಂದು ಕಿವಿಕಚ್ಚಬಹುದು. ಸಕಾಲಕ್ಕೆ ಬಂದ ಸ್ನೇಹಿತನ ಸಹಕಾರವನ್ನು ಸದಾ ಸ್ಮರಿಸಿಕೊಳ್ಳುವುದು ಸೂಕ್ತ. ಸಾಲ ಬಾಧೆಯ ಕಾರಣ ಕಣ್ತಪ್ಪಿಸಿ ಗುರುತಿಸಿ. ಉನ್ನತ ಮಟ್ಟದ ವಿದ್ಯಾಭ್ಯಾಸಕ್ಕೆ ತೊಂದರೆ ಎದುರಾಗಬಹುದು. ಮೊದಲು ಪ್ರಯಾಣವು ಸುಖಕರ ಎನಿಸಿದರೂ ದೇಹಪೀಡೆ ಅಧಿಕವಾದೀತು. ಇತರರನ್ನು ಅವಲಂಬಿಸಿರುವುದು ನಿಮಗೆ ಇಷ್ಟವಾಗದು. ಭೂಮಿಯಲ್ಲಿ ನಿಮಗೆ ಅಕಸ್ಮಾತ್ ಅಮೂಲ್ಯ ವಸ್ತು ಸಿಗಬಹುದು. ನೀವು ಇಂದು ಅಪರಿಚಿತ ವ್ಯಕ್ತಿಗಳ ನಡುವೆ ಇರುವ ಕಾರಣ ಮೌನವಾಗಿರುವಿರಿ. ಸ್ನೇಹ ಮತ್ತು ಸಹಕಾರ ಅಚ್ಚರಿಯ ಸಂತೋಷ ತರುತ್ತದೆ. ಸಂಗಾತಿಯ ಮಾತುಗಳಿಗೆ ಸಿಟ್ಟಾಗುವುದು ಬೇಡ.
ಮಿಥುನ ರಾಶಿ:
ಬಹಳ ದಿನ ಶ್ರಮ ಇಂದು ಮೌಲ್ಯ ಪರಿವರ್ತನೆಯಾಗಲಿದೆ. ನಿಧಾನ ಹೆಜ್ಜೆಯೇ ಶಾಶ್ವತ ಸಾಧನೆಗೆ ದಾರಿ. ಪುರುಷರ ಜೊತೆ ಸಹೋದರ ಭಾವವನ್ನು ಇಟ್ಟುಕೊಂಡು ವರ್ತಿಸುವಿರಿ. ಇಂದು ನಿಮ್ಮ ಮನಸ್ಸಿಗೆ ಬೇಕಾದ ವಿಶ್ರಾಂತಿ ಸ್ಥಳದ ಅನ್ವೇಷಣೆ ಮಾಡುವಿರಿ. ಇಷ್ಟಪಟ್ಟಿದ್ದನ್ನು ಪಡೆಯಲು ನೀವು ಏನಾದರೂ ಮಾತನಾಡಬೇಕಾಗುವುದು. ವಿವಾಹದ ಮಾತುಕತೆ ನಿಮಗೆ ಖುಷಿ ತಂದರೂ ಅದನ್ನು ಹೇಳಲು ಸಂಕೋಚಪಡುವಿರಿ. ಹೂಡಿಕೆಯ ವಿಚಾರದಲ್ಲಿ ನಿಮಗೆ ಪೂರ್ಣ ಆಸಕ್ತಿ ಇರದು. ಇಂದು ಪರಿಶ್ರಮವಿದ್ದರೂ ಫಲವು ಅಲ್ಪವಿರಲಿದೆ. ಕುಂಟುವ ಕಾರ್ಯದಿಂದ ಬೇಸರವಾಗಬಹುದು. ನಿಮ್ಮ ಯೋಜನೆಯು ದೂರದೃಷ್ಟಿಯನ್ನು ಇಟ್ಟಕೊಳ್ಳಲಿ. ಇತರ ದೋಷವನ್ನೇ ಗುರುತಿಸುವ ಸ್ವಭಾವವು ಬೇಡ. ಹಿರಿಯರ ಆಶೀರ್ವಾದ ಮನಸ್ಸಿಗೆ ಭರವಸೆ ನೀಡಿದರು. ನಿಮ್ಮ ಉತ್ಸಾಹದ ಕಾರಣ ಜವಾಬ್ದಾರಿಯೂ ಅಧಿಕವಾಗುವುದು. ಆಗಬೇಕಾದ ಕಾರ್ಯವು ಆಗದೇ ಹಣವು ವ್ಯರ್ಥವಾಗುವುದು.
ಇದನ್ನೂ ಓದಿ: ಸಂಖ್ಯಾಶಾಸ್ತ್ರದ ಪ್ರಕಾರ ಜನ್ಮಸಂಖ್ಯೆಗೆ ಡಿಸೆಂಬರ್ 14 ರಿಂದ 20 ರ ವಾರಭವಿಷ್ಯ
ಕರ್ಕಾಟಕ ರಾಶಿ:
ದೂರದ ಕನಸು ಸ್ಪಷ್ಟವಾಗುತ್ತಾ ಹತ್ತಿರವಾಗುವುದಿಲ್ಲ. ಜ್ಞಾನ, ಪ್ರವಾಸ ಅಥವಾ ಅಧ್ಯಾತ್ಮದ ಸ್ಪರ್ಶವು ನಿಮ್ಮ ಈ ದಿನವನ್ನು ವಿಶಿಷ್ಟಗೊಳಿಸುತ್ತದೆ. ಆಕಸ್ಮಿಕ ತೊಂದರೆಗಳನ್ನು ಎದುರಿಸುವ ಎದೆಗಾರಿಕೆ ಬೇಕು. ಇಂದು ನಿಮ್ಮ ಅಸತ್ಯದ ಮಾತು ಎಲ್ಲರಿಗೂ ತಿಳಿಯುವುದು. ಧಾರ್ಮಿಕ ಆಸಕ್ತಿಯು ಇಂದು ಅಧಿಕವಾಗಿ ಇದ್ದು ಹೆಚ್ಚಿನ ಸಮಯವನ್ನು ದೇವರ ಸನ್ನಿಧಿಯಲ್ಲಿ ಕಳೆಯಿರಿ. ಮಿತ್ರರ ಕಾರಣದಿಂದ ನಿಮ್ಮ ಸಮಯವು ವ್ಯರ್ಥವಾಗುತ್ತದೆ. ರಾಜಕೀಯದಲ್ಲಿ ಚಾಣಾಕ್ಷತನದಿಂದ ಎಲ್ಲರೂ ನಿಭಾಯಿಸುವಿರಿ. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಸೋಲುವಿರಿ. ಅವಶ್ಯಕತೆ ಇದ್ದರಷ್ಟೇ ನಿಮ್ಮನ್ನು ಬಳಸುತ್ತಾರೆ. ನಿಮ್ಮ ಬಗ್ಗೆ ತಪ್ಪು ಕಲ್ಪನೆ ಬರಬಹುದು. ಇತರರಿಗಾಗಿ ವಾಹನ ಚಲಾಯಿಸಬೇಕಾದೀತು. ತುರ್ತು ಕಾರ್ಯದ ನಿಮಿತ್ತ ಪ್ರಯಾಣ ಮಾಡಬೇಕಾದೀತು. ಮನಸೋ ಇಚ್ಛೆ ನಗುವುದು ಇಂದಿನ ನಿಮ್ಮ ಭಾಗ್ಯ. ನಿಮ್ಮ ಮಾತಿನ ಮೇಲೆ ಪೂರ್ಣ ವಿಶ್ವಾಸವನ್ನು ಇಡುವುದು ಕಷ್ಟವಾಗುತ್ತದೆ.
ಸಿಂಹ ರಾಶಿ:
ಆಂತರಿಕ ಶಕ್ತಿ ಜಾಗೃತವಾಗುತ್ತದೆ. ನೀವು ನಂಬಿದ ದಾರಿಯೇ ಬೆಳಕು. ಇಂದಿನ ದಿನವನ್ನು ಒಳ್ಳೆಯ ದಿನವನ್ನಾಗಿ ಮಾಡಿಕೊಳ್ಳಬಹುದು. ಇಂದು ಮಾಡಬೇಕಾದುದನ್ನು ಮಾಡಿ. ಅನಂತರ ಕೊರಗುವುದು ಬೇಡ. ಹೊಸ ಉದ್ಯೋಗವನ್ನು ಹುಡುಕುವವರಿಗೆ ಹೆಚ್ಚು ಗೊಂದಲವಾಗುತ್ತದೆ. ಇಂದು ಒಂದು ಮಿತಿಯಲ್ಲಿ ನಿಮ್ಮ ಮಾತಿರಲಿ. ತಾಯಿಯ ಸಣ್ಣ ವಿಚಾರಕ್ಕೆ ಕೋಪಗೊಳ್ಳುವಿರಿ. ವೈವಾಹಿಕ ಜೀವನವನ್ನು ಆನಂದಿಸುವಿರಿ. ಸಹೋದರರ ಸಹಕಾರವು ನಿಮಗೆ ಬಲವನ್ನು ಕೊಡಬಹುದು. ನಿಮ್ಮ ಸ್ವಭಾವವನ್ನು ಬಿಟ್ಟು ಎಲ್ಲರ ಜೊತೆ ಹೊಂದಾಣಿಕೆಯಿಂದ ಇರುವಿರಿ. ರಹಸ್ಯವಾಗಿ ಮಾಡಿದ ಸತ್ಕರ್ಮ ಫಲ ನೀಡುತ್ತದೆ. ಯಾರ ಸಹಾಯವನ್ನೂ ಪಡೆಯದೆ ಕಾರ್ಯವು ನಿಧಾನವಾಗುವುದು. ಉದ್ಯೋಗಕ್ಕಾಗಿ ಖಾಸಗಿ ಸಂಸ್ಥೆಯನ್ನು ಅಲೆಯಬೇಕಾಗುವುದು. ನಿಮ್ಮ ಇಂದಿನ ವರ್ತನೆಯು ಅಸಹಜದಂತೆ ತೋರುವುದು. ಸಕಾರಾತ್ಮಕ ಚಿಂತನೆಯನ್ನು ತೆಗೆದುಕೊಳ್ಳುವುದು ಉತ್ತಮ.
ಕನ್ಯಾ ರಾಶಿ:
ಸಂಬಂಧಗಳು ಹೂವಿನಂತೆ ಸಹಜವಾಗಿ ಅರಳುವುದು ಉತ್ತಮ. ಹಸ್ತಕ್ಷೇಪ ಮಾಡಿ ಅರಳಿಸಲಾರಿರಿ. ಸತ್ಯ ಮತ್ತು ಸೌಮ್ಯತೆ ನಿಮ್ಮ ಆಯುಧ. ಸಕಾರಾತ್ಮಕ ಯೋಚನೆಯೇ ಬಂಧನವನ್ನು ಗಟ್ಟಿಯಾಗಿಸುವುದು. ದಾಂಪತ್ಯದಲ್ಲಿ ಶಾಂತಿಯು ಬೇಕಾದರೆ ಸುಮ್ಮನಿರುವುದು ಉತ್ತಮ. ಕೋಪವನ್ನು ನಿರಂತರವಾಗಿ ಮುಂದುವರಿಸುವುದು ಬೇಡ. ಅಭಿಮಾನಿಗಳ ಬಗ್ಗೆ ಸದಾಭಿಪ್ರಾಯವಿದ್ದರೂ ಪ್ರಕಟಿಸಲಾರಿರಿ. ಕಚೇರಿಯಲ್ಲಿ ಕೆಲಸವು ತುರ್ತು ಸಭೆಗಳ ಕಾರಣ ಹಿಂದುಳಿಯುವುದು. ಸ್ವಾಭಿಮಾನ ಬಂಧುಗಳ ಎದುರು ಕಾಣಿಸಬಹುದು. ಎಲ್ಲ ವಿಚಾರದಲ್ಲಿ ಹಿನ್ನಡೆ ಇರಲಿದೆ. ಸ್ವಂತ ಉದ್ಯಮವನ್ನು ಮಾಡುತ್ತಿದ್ದರೆ ನಿರೀಕ್ಷಿತ ಲಾಭವನ್ನು ತಲುಪುವುದು ಕಷ್ಟವಾದೀತು. ಸ್ತ್ರೀಯರ ಜೊತೆ ಇಂದು ನಿಮ್ಮ ವ್ಯವಹಾರವು ಬೇಡ. ಮೇಲಧಿಕಾರಿಗಳಿಂದ ನಿಮಗೆ ಕಿರಿಕಿರಿ ಆಗುವ ಸಾಧ್ಯತೆ ಇದೆ. ಕಲಾತ್ಮಕ ಆಸಕ್ತಿ ಮನಸ್ಸಿಗೆ ಮಧುರ ಸ್ಪರ್ಶ ನೀಡಿದೆ. ಸರ್ಕಾರದ ಕಾರ್ಯದಲ್ಲಿ ಹಿನ್ನಡೆ ಅಧಿಕವಾಗಿ ಕಾಣಿಸುತ್ತದೆ.
ತುಲಾ ರಾಶಿ:
ಸೂಕ್ಷ್ಮತೆಯಲ್ಲಿ ಸುಂದರತೆ ಕಾಣುವ ದಿನ. ನಿಮ್ಮ ಸರಳ ಪ್ರಯತ್ನವೂ ದೊಡ್ಡ ಫಲ ನೀಡುತ್ತದೆ. ನಿಮ್ಮ ಸಹಾಯವು ಕೆಲವರ’ ಸಂತೋಷಕ್ಕೆ ಕಾರಣವಾಗುವುದು. ಅಮೂಲ್ಯವಾದ ವಸ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಆರೋಗ್ಯದಲ್ಲಿ ವ್ಯತ್ಯಾಸ ಆಗಿದ್ದರೆ ಭೇಟಿಯಾಗುವುದು ಸೂಕ್ತ. ಮನೆಯಲ್ಲಿ ನಿಮ್ಮ ಮಾತಿಗೆ ಯಾವ ಉತ್ತರವೂ ಕೊಡದೇ ಇರುವುದು ನಿಮಗೆ ನೋವಾಗುವುದು. ಸಂಗಾತಿಯಿಂದ ಪ್ರತಿಜ್ಞೆ ಭಂಗವಾಗಬಹುದು. ದುರಭ್ಯಾಸವನ್ನು ಹಿಡಿಸಿಕೊಳ್ಳುವ ಸಂದರ್ಭ ಬರಬಹುದು. ಆಸ್ತಿಯ ವಿಚಾರದಲ್ಲಿ ಜಗಳವು ತಾರಕಕ್ಕೆ ಹೋಗಬಹುದು. ನಿಮಗೆ ಗೊತ್ತಿಲ್ಲದ ಕಾರ್ಯವನ್ನು ಕಾರ್ಯದಲ್ಲಿ ನಿಭಾಯಿಸಬೇಕಾಗುವುದು. ಆರೋಗ್ಯ ಮತ್ತು ಮನಸ್ಸಿಗೆ ಸರಿಯಾಗಿ ಸಾಕಾಗುತ್ತದೆ. ಮನೋರಂಜನೆಯ ಕೊರತೆಯು ಅಧಿಕವಾಗಿ ಕಾಡುವುದು. ವಿರಾಮವನ್ನು ತೆಗದುಕೊಳ್ಳುವ ಮನಸ್ಸಾದೀತು. ಪ್ರೇಮವನ್ನು ನಿಭಾಯಿಸುವುದು ಕಷ್ಟವಾಗುವುದು. ಪ್ರಿಯವಾದ ವಸ್ತುವನ್ನು ಪಡೆಯಲು ಹಣದ ಅಭಾವವಿದೆ.
ವೃಶ್ಚಿಕ ರಾಶಿ:
ಯಾರಾದರೂ ನಿಮ್ಮನ್ನು ತಪ್ಪಾಗಿ ಗ್ರಹಿಸಿ ಅಪವಾದ ಹೇಳಬಹುದು. ಒಳ್ಳೆಯ ಕಾರ್ಯಗಳು ನಿಮ್ಮನ್ನು ಕಾಪಾಡಬಹುದು. ಇಂದು ಸಾಮಾಜಿಕ ಕಾರ್ಯಗಳಿಂದ ಸಂತೋಷವೂ ಹೊಸತನವೂ ನಿಮಗೆ ಸಿಗಲಿದೆ. ಕಛೇರಿಯ ಕಿರಿಕಿರಿಯಿಂದ ಮನೆಯೂ ನಿಮಗೆ ನೆಮ್ಮದಿ ಸಿಗದು. ಖುಷಿಯ ವಾತಾವರಣವಿದ್ದರೂ ನಿಮಗೆ ನಿಮ್ಮದೇ ಚಿಂತೆ ಕಾಡಬಹುದು. ಉತ್ಸಾಹವನ್ನು ಕಳೆದುಕೊಳ್ಳುವ ಸಂದರ್ಭ ಬರಬಹುದು. ಹಳೆಯ ಸ್ನೇಹಿತರನ್ನು ಭೇಟಿಯಾಗಿ ಸ್ವಲ್ಪ ಹೊಸ ವಾತಾವರಣವನ್ನು ಕಾಣುವಿರಿ. ಜವಾಬ್ದಾರಿಯ ಕಾರಣಕ್ಕೆ ನಿಮ್ಮ ವರ್ತನೆಯಲ್ಲಿ ಭಿನ್ನತೆ ಕಾಣುವುದು. ನಿಮಗೆ ಬರಬೇಕಾದ ಹಣವನ್ನು ಬೇರೆಯವರ ಮೂಲಕ ತೀರಿಸಿಕೊಳ್ಳುವಿರಿ. ನಿಮ್ಮ ನೌಕರರ ಬಗ್ಗೆ ನಿಮಗೆ ಸಮಾಧಾನ ಇರಲಿದೆ. ಕಾರ್ಯಗಳಿಗೆ ನಿಗದಿತ ಸಮಯವನ್ನು ಇಟ್ಟುಕೊಳ್ಳುವುದು ಮುಖ್ಯ. ನಿಮ್ಮ ಕೊಡುವ ಮನಸ್ಸು ಗೌರವವನ್ನು ಉಳಿಸುತ್ತದೆ. ಸಂಗಾತಿಗೆ ಅನಿರೀಕ್ಷಿತ ಉಡುಗೊರೆಯನ್ನು ಕೊಡಲಾಗಿದೆ. ನಿಮ್ಮ ಸ್ವಭಾವವನ್ನು ಬಿಟ್ಟು ಎಲ್ಲರ ಜೊತೆ ಹೊಂದಾಣಿಕೆಯಿಂದ ಇರಬೇಕಾಗುವುದು.
ಧನು ರಾಶಿ:
ಭಾವವೇ ಇಂದು ಹೆಚ್ಚು ಕಾಣಿಸಲಿದೆ. ಹಳೆಯ ನೋವು ಮೃದುವಾಗಿ ಕರಗುವ ಕ್ಷಣ. ಹೇಗಾದರೂ ಖರ್ಚಾಗಬಹುದು. ಹಿರಿತನವನ್ನು ಉಳಿಸಿಕೊಳ್ಳುವಂತೆ ನಡೆದುಕೊಳ್ಳಬೇಕು. ಇಂದು ಸಹಾಯ ಮಾಡುವ ನಿಮ್ಮ ನಿರಂತರ ಅಭ್ಯಾಸಕ್ಕೆ ನಿಮಗೆ ದಣಿಯಾಗಿದೆ. ಸಂಗಾತಿಗೆ ಉದ್ಯೋಗವನ್ನು ಕೊಡಿಸಲು ಓಡಾಟ ಮಾಡುವಿರಿ. ಪ್ರಭಾವೀ ವ್ಯಕ್ತಿಗಳ ಸಂಪರ್ಕವನ್ನೂ ಮಾಡುವಿರಿ. ನಿಮ್ಮ ವ್ಯವಹಾರದಲ್ಲಿ ಲೆಕ್ಕವು ತಪ್ಪಾಗಿ ನೀವು ಹಣವನ್ನು ಕಳೆದುಕೊಳ್ಳಬಹುದು. ಸ್ನೇಹಿತರ ಜೊತೆ ಎಲ್ಲಾದರೂ ಹೋಗಬೇಕು ಎನಿಸುತ್ತದೆ. ಉದ್ಯೋಗದಲ್ಲಿ ನೀವು ಜಾಣತನವನ್ನು ತೋರಿಸುವ ಅವಶ್ಯಕತೆ ಇಲ್ಲ. ಪ್ರಯಾಣದಲ್ಲಿ ಜಾಗರೂಕತೆ ಮುಖ್ಯವಾಗಿರಲಿ. ಕುಟುಂಬದ ಸ್ಪರ್ಶ ಶಕ್ತಿ ತುಂಬುತ್ತದೆ. ಮೌನದಲ್ಲೂ ಉತ್ತರ ಸಿಗುತ್ತದೆ. ಮನೆಯಲ್ಲಿ ಬದಲಾಯಿಸುವ ಸಂದರ್ಭವು ಬರಬಹುದು. ದೈಹಿಕ ಶ್ರಮವನ್ನು ನೀವು ಹೆಚ್ಚು ಮಾಡಬೇಕಾದೀತು. ಮಾರ್ಗದರ್ಶನ ಅಭಾವವು ತೋರುವುದು.
ಮಕರ ರಾಶಿ:
ನಿಮ್ಮ ಮಾತುಗಳು ಇಂದು ಮಂತ್ರವಾಗುವ ಸಾಧ್ಯತೆಯಿದೆ. ನಿಮ್ಮ ಒಂದು ವಾಕ್ಯದ ದಾರಿಯನ್ನು ಬದಲಾಯಿಸಬಹುದು. ಇಂದಿನ ನಿಮ್ಮ ತೀರ್ಮಾನವು ಯೋಗ್ಯವಾಗಿ ಇರುವುದು. ನೀವು ಇಂದು ಅನಗತ್ಯವಾದ ವಾದಗಳಿಗೆ ನಿಮ್ಮ ಶಕ್ತಿಯನ್ನು ವ್ಯರ್ಥ ಮಾಡಿಕೊಳ್ಳುವದರ ಜೊತೆ ಹೆಸರೂ ಹಾಳಾಗುತ್ತದೆ. ಸಂಗಾತಿಯ ಜೊತೆಗಿನ ವೈಮನಸ್ಯವು ದೂರಾಗಿ ಸಂತೋಷವು ಇಂದು ನೆಲೆಸುವುದು. ನಿಮಗೆ ಮನೆಯಲ್ಲಿ ಪೂರಕವಾದ ವಾತಾವರಣ ಇರಲಿದೆ. ಸಮಾರಂಭಗಳಿಗೆ ಆಹ್ವಾನ ಬರಬಹುದು. ಹೊಸ ಕಾರ್ಯಗಳ ಆರಂಭಕ್ಕೆ ಅನೇಕರ ಸಲಹೆ ಪಡೆಯಿರಿ. ಅಸಾಧ್ಯವಾದ ಕಾರ್ಯವನ್ನು ಮಾಡಿ ವ್ಯರ್ಥ ಮಾಡುವುದು ಬೇಡ. ಸಂಗಾತಿಯ ಸ್ವಭಾವವು ಇಂದು ಸ್ಪಷ್ಟವಾಗಿ ತಿಳಿಯಿತು ಎಂದು ಅಂದುಕೊಂಡಿರುವಿರಿ. ಹೊಸ ಸಂಪರ್ಕಗಳು ಭವಿಷ್ಯದ ಬಾಗಿಲು ತೆರೆಯುತ್ತವೆ. ಹಗುರ ಮನಸ್ಸಿನಿಂದ ನಡೆಯಿರಿ. ನಿಮ್ಮ ಗುರಿಯನ್ನು ಬದಲಿಸುವುದು ಬೇಡ. ಸಮಯವನ್ನು ಹೆಚ್ಚು ಮಾಡಲಾಗಿದೆ. ಪ್ರಾಮಾಣಿಕತೆಗೆ ಪ್ರಶಂಸೆಯು ಎಲ್ಲರಿಂದ ಸಿಗುವುದು.
ಕುಂಭ ರಾಶಿ:
ನಿಮ್ಮ ಸ್ಥಿರ ಮನಸ್ಸಿಗೆ ಸೌಂದರ್ಯ ಸೇರ್ಪಡೆಯಾಗಿದೆ. ಮನೆ, ಸಂಭಾವನೆ, ಹಣ ಮೂರು ಕ್ಷೇತ್ರಗಳಲ್ಲೂ ಸಮತೋಲನ ಸಾಧ್ಯ ಮಾಡಿಕೊಳ್ಳಬೇಕು. ಇಂದು ನಿಮ್ಮ ಉದಾರತೆಯು ಖರ್ಚಿನಿಂದ ಪ್ರಾರಂಭವಾಗುವುದು. ಇಂದು ಖರೀದಿಸಬೇಕಾದ ವಸ್ತುಗಳು ಬಹಳ ಇರಲಿ. ನಿಮಗೆ ವಹಿಸಿದ ಕಾರ್ಯದಲ್ಲಿ ಪ್ರಯತ್ನವು ಪೂರ್ಣವಾಗಿರಲಿ. ಸುಲಭದ ಕಾರ್ಯವನ್ನು ಸಂಕೀರ್ಣ ಮಾಡಿಕೊಂಡು ಚಿಂತೆ ಪಡುವುದು ಬೇಡ. ಖರೀದಿಯ ವಸ್ತುಗಳು ಕಳೆದುಹೋಗುವ ಸಂಭವವಿದೆ. ಕಾರಣಾಂತರಗಳಿಂದ ಬೇರೆ ಕಡೆ ವಾಸ ಮಾಡುವ ಸಂದರ್ಭ ಬರಬಹುದು. ಮಾತಿನಲ್ಲಿ ಅಂತಸ್ಸಾರವಿರದು. ಒತ್ತಡವನ್ನು ನೀವಾಗಿಯೇ ತಂದುಕೊಳ್ಳುವ ಸಾಧ್ಯತೆ ಇದೆ. ಎಲ್ಲರ ಜೊತೆ ಬೆರೆಯುವ ಅವಕಾಶಗಳು ಇಂದು ಕಡಿಮೆ ಇರಲಿದೆ. ನಿಮ್ಮ ಸಹನೆ ಇಂದು ದೇವರ ಆಶೀರ್ವಾದವಾಗಿ ಮರಳುತ್ತದೆ. ಸ್ವತಂತ್ರವಾಗಿ ಬದುಕಬೇಕು ಎಂಬ ಆಯ್ಕೆಯು ಜಾಗರೂಕ ವಸ್ತು. ನಿಮ್ಮ ಬಗ್ಗೆ ಮಾತನಾಡುವವರನ್ನು ನೀವು ಲಕ್ಷ್ಯಕ್ಕೆ ತೆಗೆದುಕೊಳ್ಳುವುದಿಲ್ಲ.
ಮೀನ ರಾಶಿ:
ಇಂದು ನಿಮ್ಮ ವಿಶ್ವಾಸ ಮೌನವಾಗಿ ಪ್ರಕಾಶಿಸುತ್ತದೆ. ಯಾರನ್ನೂ ಮೀರಿಸಬೇಕೆಂಬ ಆಸೆಗಿಂತ, ನಿಮ್ಮೊಳಗಿನ ಶ್ರೇಷ್ಠತೆಯನ್ನು ಅರಿಯುವ ದಿನ. ನಿಮ್ಮ ದಕ್ಷತೆಗೆ ಗೌರವ ಸಿಗಲಿದೆ. ಇಂದು ನಿಮ್ಮ ಸಂತೋಷದ ಕ್ಷಣಗಳನ್ನು ನೀವೇ ಸೃಷ್ಟಿಸಿಕೊಳ್ಳಿ. ಮೋಹದ ಕಾರಣದಿಂದ ನಿಮ್ಮವರ ತಪ್ಪನ್ನು ಹೇಳಲು ನೀವು ತಯಾರಾಗುವುದಿಲ್ಲ. ನಿಮ್ಮ ಪ್ರಾಮುಖ್ಯತೆ ಕಡಿಮೆ ಅರಿಯಬಹುದು. ಬರಬೇಕಾದ ಹಣದ ಚಿಂತೆ ಬಹಳ ಕಾಡಬಹುದು. ದೊಡ್ಡ ವಿಚಾರವನ್ನು ಸಣ್ಣದಾಗಿ ಮಾಡಿ, ಯಾರಿಗೂ ಗೊತ್ತಾಗದಂತೆ ಮಾಡುವಿರಿ. ಗೌಪ್ಯತೆಯ ವಿಚಾರದಲ್ಲಿ ವರ್ತನೆಯು ಎಲ್ಲರೂ ಮೆಚ್ಚುವಂಥದ್ದಾಗಿರಲಿದೆ. ಸಣ್ಣ ಸಹಾಯ ದೊಡ್ಡ ಕೃತತೆಯನ್ನು ತಂದೀತು. ಹಳೆಯ ಘಟನೆಗಳು ನಿಮಗೆ ಮತ್ತೆ ಮತ್ತೆ ಪ್ರಚೋದನೆಯನ್ನು ಕೊಡುವವು. ನಿಮ್ಮ ಮನೋಬಲವನ್ನು ಕುಗ್ಗಿಸಲು ಸಹೋದ್ಯೋಗಿಗಳ ಪ್ರಯತ್ನ ಇರಲಿದೆ. ನಿಮ್ಮ ಬಗ್ಗೆ ನಿಮಗೇನಾದರೂ ಹೇಳಬೇಕು. ಉನ್ನತ ಹುದ್ದೆಗೆ ಅವಕಾಶ ಸಿಗುವ ಸ್ಥಳ ಬದಲಾವಣೆಯ ಚಿಂತೆ ಕಾಡಬಹುದು.
18 ಡಿಸೆಂಬರ್ 2025 ರ ಗುರುವಾರದ ಪಂಚಾಂಗ:
ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಕಾರ್ಯಕ್ರಮ : ಹೇಮಂತ, ಚಾಂದ್ರ ಮಾಸ : ಮಾರ್ಗಶೀರ್ಷ, ಸೌರ ಮಾಸ : ಧನು, ಮಹಾನಕ್ಷತ್ರ : ಮೂಲ, ವಾರ : ಗುರು, ಪಕ್ಷ : ಕೃಷ್ಣ, ತಿಥಿ : ಚತುರ್ದಶೀ, ನಿತ್ಯ ಸೂರ್ಯನಕ್ಷತ್ರ : ವಿಶಾಖಾ / ಅನುರಾಧಾ, ಯೋಗ : ಶೋಭನ, ಕರಣ : ಶೋಭನ, 06. – 05 – 58 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 13:45 – 15:10, ಯಮಗಂಡ ಕಾಲ 06:44 – 08:08, ಗುಳಿಕ ಕಾಲ 09:32 – 10:57
-ಲೋಹಿತ ಹೆಬ್ಬಾರ್ – 8762924271 (What’s app ಮಾತ್ರ)