ಬಿಗ್ ಬಾಸ್ ಮನೆಯಲ್ಲಿ ಈ ವಾರ ರಾಶಿಕಾ ಶೆಟ್ಟಿ ಅವರು ಕ್ಯಾಪ್ಟನ್ ಆಗಿರುವುದು ಗೊತ್ತೇ ಇದೆ ಮತ್ತು ಅವರು ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಅವರನ್ನೇ ನಗೆಪಾಟಲಿಗೀಡು ಮಾಡುತ್ತಿವೆ ಎಂದರೂ ತಪ್ಪಾಗಲಿಕ್ಕಿಲ್ಲ. ಈ ವಾರ ರಾಶಿಕಾ ಶೆಟ್ಟಿ ಅವರು ಹಲವು ತಪ್ಪು ನಿರ್ಧಾರಗಳನ್ನು ತೆಗೆದುಕೊಂಡರು. ಈ ಬಗ್ಗೆ ಅನೇಕರು ಪ್ರಶ್ನೆ ಮಾಡಿದ್ದನ್ನು ಕಾಣಬಹುದಾಗಿದೆ. ಅದೇ ರೀತಿ ರಾಶಿಕಂಡಿದ್ದನ್ನು ಗಿಲ್ಲಿ ನಟ ಅವರು ನೇರವಾಗಿ ಪ್ರಶ್ನೆ ಮಾಡಿದ್ದೂ ಅಲ್ಲದೆ, ಅವರ ಅಸಲಿ ಮುಖವನ್ನು ತೆರೆದಿಟ್ಟರು. ಡಿಸೆಂಬರ್ 17 ರ ಎಪಿಸೋಡ್ ನಲ್ಲಿ ಈ ವಿಷಯ ಪ್ರಸಾರ ಕಂಡಿದೆ.
ಬಿಗ್ ಬಾಸ್ ಅಲ್ಲಿ ಗಿಲ್ಲಿ ನಟ ಅವರ ರಾಶಿಕಾ ನಾಮಿನೇಟ್ ಮಾಡಿದರು. ಇದಕ್ಕೆ ಅವರು ನೀಡಿದ ಕಾರಣ ಸರಿ ಇಲ್ಲ. ‘ನಾನು ಕ್ಯಾಪ್ಟನ್ ಆಗಿ ಹೇಳಿದ ಮಾತನ್ನು ಗಿಲ್ಲಿ ಕೇಳಿಲ್ಲ. ಈ ಕಾರಣಕ್ಕೆ ನಾಮಿನೇಟ್ ಮಾಡುತ್ತಿದ್ದೇನೆ’ ಎಂದು ರಾಶಿಕಾ ಹೇಳಿದ್ದನ್ನು ಕೆಳಗೆ ಎಂಬೆಡ್ ಮಾಡಿರುವ ವಿಡಿಯೋದಲ್ಲಿ ಕಂಡುಬಂದಿದೆ. ಇದಕ್ಕೆ ಗಿಲ್ಲಿ ನಟ ಅವರು ಕೊಟ್ಟ ಕೌಂಟರ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಅವಳು ಸಿಕ್ಕಿಬಿದ್ದಿದ್ದಾಳೆ ಮತ್ತು ಧೈರ್ಯಶಾಲಿಯಾಗಿದ್ದಾಳೆ. ಈ ವಾರ, ಆಕೆ ವೀಕೆಂಡ್ ಎಪಿಸೋಡ್ಗೆ ವಿಐಪಿ ಟಿಕೆಟ್ ತೆಗೆದುಕೊಂಡಿದ್ದಾಳೆ. ಗಿಲ್ಲಿ ಶನಿವಾರದಂದು ನಡೆಯಲಿರುವ ಮುಖ್ಯ ಪಂದ್ಯಕ್ಕೆ ಅವಳನ್ನು ಸಿದ್ಧಪಡಿಸುತ್ತಿದ್ದಾಳೆ
ಪ್ರಾಮಾಣಿಕವಾಗಿ ಹೇಳಬೇಕೆಂದರೆ ಇದು ಇತರರ ತಪ್ಪಿನಿಂದಾಗಿ ನಾಯಕತ್ವವನ್ನು ಮಧ್ಯದಲ್ಲಿ ಕಳೆದುಕೊಳ್ಳುವುದಕ್ಕಿಂತ ಕೆಟ್ಟದಾಗಿದೆ#BBK12
pic.twitter.com/dzA5gYl8Es— ಅಲ್ಪಸಂಖ್ಯಾತ (@alpasankhyata) ಡಿಸೆಂಬರ್ 17, 2025
ಏಕೆಂದರೆ ಈ ಮೊದಲು ಕೂಡ ರಾಶಿಕಾ ಅವರು ಇತರ ಕ್ಯಾಪ್ಟನ್ ಮಾತನ್ನು ಧಿಕ್ಕರಿಸಿದ್ದರು. ಈ ವಿಷಯವು ಚರ್ಚೆಗೆ ಕಾರಣವಾಗಿದೆ. ಮಾಳು ಅವರು ‘ರಾಶಿಕಾ ಕಸ’ ಎಂದು ಕೊಟ್ಟಾಗ ಮರ್ಯಾದೆ ಕೊಡದೆ ಮಾತನಾಡಿದ್ದು ರಾಶಿಕಾ. ರಘು ಕ್ಯಾಪ್ಟನ್ ಆದಾಗಲೂ ಇದೇ ರೀತಿ ಇತ್ತು. ಇದನ್ನು ಗಿಲ್ಲಿ ನಟ ಅವರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ. ಗಿಲ್ಲಿ ನಟನ ಮಾತಿಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.
ಇದನ್ನೂ ಓದಿ: ಅಕ್ಕ-ತಂಗಿ ಬಳಿ ಹೀಗೆ ಮಾತಾಡ್ತಿದ್ರಾ? ಸೂರಜ್ ಮಾತು ರಾಶಿಕಾ ಎದೆಗೆ ಚುಚ್ಚು
ಈ ವಾರ ರಾಶಿಕಾ ಅವರ ಉಸ್ತುವಾರಿ ಕೆಟ್ಟದಾಗಿತ್ತು. ವೀಕೆಂಡ್‌ನಲ್ಲಿ ಇದಕ್ಕೆ ರಾಶಿಕಾ ಅವರು ಕ್ಲಾಸ್ ತೆಗೆದುಕೊಳ್ಳೋದು ಪಕ್ಕಾ ಎನ್ನುತ್ತಿದ್ದಾರೆ. ಅವರು ಯಾವ ವಿಷಯವನ್ನು ಧೈರ್ಯದಿಂದ ಹೇಳಿಲ್ಲ. ‘ನಾನು ನ್ಯಾಯಯುತವಾಗಿ ಕ್ಯಾಪ್ಟನ್ ಆಗಿದ್ದು’ ಎಂದು ರಾಶಿಕಾ ಹೇಳಿದ್ದರು. ಆ ಬಳಿಕ ಸೂರಜ್ನ ಕ್ಯಾಪ್ಟನ್ಸಿ ಟಾಸ್ಕ್ ಗೆ ಆಯ್ಕೆ ಎಂಬ ವಿಷಯ ಬಂದಾಗ, ‘ಚೈತ್ರಾ ನಿರ್ಧಾರದಿಂದ ಸೂರಜ್ ಗೆ ಕ್ಯಾಪ್ಟನ್ಸಿ ತಪ್ಪಿದೆ. ಹೀಗಾಗಿ, ಅವರನ್ನು ಕ್ಯಾಪ್ಟನ್ಸಿ ಆಯ್ಕೆ ಮಾಡುತ್ತಿದ್ದೇನೆ’ ಎಂದಿದ್ದರು ರಾಶಿಕಾ. ಇದು ಕೂಡ ಚರ್ಚೆಗೆ ಕಾರಣವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.